ನಿಮ್ಮ ಐಫೋನ್‌ ಕಳೆದಿದೆಯಾ..? ಹಾಗಾದ್ರೆ, ನಿಮ್ಮ ಫೋನ್‌ ಹುಡುಕೋದು ಹೇಗೆ..? ಡೇಟಾ ಅಳಿಸೋದು ಹೇಗೆ..?

By Gizbot Bureau
|

ನಿಮ್ಮ ಐಫೋನ್ ಕಳೆದು ಹೋಗಿದೆಯೇ? ಅದು ದುಷ್ಟರ ಕೈಯಲ್ಲಿ ಸಿಗುವ ಮುನ್ನ ಕಂಡುಹಿಡಿಯುವುದು ಅಥವಾ ಅದರಲ್ಲಿನ ಮಾಹಿತಿ ಅಳಿಸುವುದು ಹೇಗೆ ಎಂಬುದು ಗೊತ್ತಿಲ್ಲವೇ..? ಹಾಗಿದ್ದರೆ, ನಿಮಗಾಗಿ ಆಪಲ್‌ನ ಫೈಂಡ್ ಮೈ ಐಫೋನ್ ವೈಶಿಷ್ಟ್ಯವಿದ್ದು, ಬಳಸಲು ಕೂಡ ಸರಳವಾಗಿದೆ. ಈ ಫೀಚರ್‌ನಿಂದ ನೀವು ನಿಮ್ಮ ಕಳೆದಿರುವ ಐಫೋನ್‌ನ ಲೋಕೆಷನ್‌ ನೋಡಬಹುದು. ಫೋನ್‌ ಹುಡುಕುವುದಕ್ಕೆ ಸಹಾಯವಾಗುವಂತೆ ಸೌಂಡ್‌ ಕೂಡ ಪ್ಲೇ ಮಾಡಬಹುದು. ಜೊತೆಗೆ ಫೋನ್‌ನಲ್ಲಿನ ಡೇಟಾ ರಕ್ಷಿಸಲು ದೂರದಿಂದಲೇ ಲಾಕ್ ಮಾಡಲು ಹಾಗೂ ಎಲ್ಲ ಡೇಟಾವನ್ನು ಅಳಿಸಲು ಇದು ನಿಮ್ಮನ್ನು ಅನುಮತಿಸುತ್ತದೆ.

ನಿಮ್ಮ ಐಫೋನ್‌ ಕಳೆದಿದೆಯಾ.?ಹಾಗಾದ್ರೆ, ನಿಮ್ಮ ಫೋನ್‌ ಹುಡುಕೋದು ಹೇಗೆ.?

ಈ ಮೇಲೆ ತಿಳಿಸಿರುವ ಎಲ್ಲ ಕಾರ್ಯಗಳನ್ನು ಸಕ್ರಿಯಗೊಳಿಸಲು ನಿಮ್ಮ ಐಫೋನ್‌ನಲ್ಲಿ ನೀವು ಮೊದಲು ಫೈಂಡ್ ಮೈ ಅನ್ನು ಸಕ್ರಿಯಗೊಳಿಸಬೇಕು.

ಫೈಂಡ್‌ ಮೈ ಐಫೋನ್ ಹುಡುಕಿ ಸಕ್ರಿಯಗೊಳಿಸುವುದು ಹೇಗೆ..?

1. ಮೊದಲು ನಿಮ್ಮ ಐಫೋನ್‌ನಲ್ಲಿ ಸೆಟ್ಟಿಂಗ್ಸ್‌ ಒಪನ್‌ ಮಾಡಿ.

2. ಬಳಿಕ ಆಪಲ್ ಐಡಿ ಮೆನು ಕ್ಲಿಕ್ ಮಾಡಿ. ಸೆಟ್ಟಿಂಗ್ಸ್‌ ಸ್ಕ್ರೀನ್‌ನಲ್ಲಿ ನಿಮಗೆ ಮೊದಲು ಕಾಖುವ ಟ್ಯಾಬ್‌.

3. ನಂತರ ಫೈಂಡ್ ಮೈ ಆಯ್ಕೆಯನ್ನು ಕ್ಲಿಕ್ ಮಾಡಿ. ಐಕ್ಲೌಡ್ ಮತ್ತು ಮೀಡಿಯಾ ಮತ್ತು ಖರೀದಿಗಳ ನಂತರ ಇದು ಮೂರನೇ ಆಯ್ಕೆಯಾಗಿರಬೇಕು.

4. ಫೈಂಡ್ ಮೈ ಐಫೋನ್ ಆಯ್ಕೆಯನ್ನು ಕ್ಲಿಕ್ ಮಾಡಿ. ನನ್ನ ಐಫೋನ್ ಹುಡುಕಿ, ನನ್ನ ನೆಟ್‌ವರ್ಕ್ ಹುಡುಕಿ (ಇದರಿಂದ ಐಫೋನ್ ಆಫ್‌ಲೈನ್‌ನಲ್ಲಿದ್ದರೂ ಕಂಡುಹಿಡಿಯಬಹುದು), ಮತ್ತು ಸೆಂಡ್‌ ಲಾಸ್ಟ್‌ ಲೋಕೆಷನ್‌ (ಬ್ಯಾಟರಿ ಕಡಿಮೆಯಾದಾಗ ಸ್ವಯಂಚಾಲಿತವಾಗಿ ನಿಮ್ಮ ಐಫೋನ್‌ನ ಸ್ಥಳವನ್ನು ಆಪಲ್‌ಗೆ ಕಳುಹಿಸುತ್ತದೆ) ಆಯ್ಕೆಗಳನ್ನು ಕ್ಲಿಕ್‌ ಮಾಡಿ.

ಈ ಆಯ್ಕೆಗಳು ಮುಗಿಸಿದರೆ ನಿಮ್ಮ ಐಫೋನ್ ಕಾಣೆಯಾದಾಗ ಅದನ್ನು ಕಂಡುಹಿಡಿಯಲು ನೀವು ಸಿದ್ಧರಾಗಿರುವಿರಿ. ನಿಮ್ಮ ಕಳೆದುಹೋದ ಐಫೋನ್‌ನ ಸ್ಥಳವನ್ನು ಕಂಡುಹಿಡಿಯಲು ಅಥವಾ ಡೇಟಾವನ್ನು ಅಳಿಸಲು, icloud.com/find ಗೆ ಸೈನ್ ಇನ್ ಮಾಡಿ.

ಕಳೆದುಹೋದ ಐಫೋನ್‌ ಅನ್ನು ಮ್ಯಾಪ್‌ನಲ್ಲಿ ಹೇಗೆ ನೋಡುವುದು..?

1. ಮೇಲಿನ ಲಿಂಕ್‌ ಮೂಲಕ ನಿಮ್ಮ ಆಪಲ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಸೈನ್‌ಇನ್ ಮಾಡಿದರೆ, ಅದು ನಿಮ್ಮ ಐಫೋನ್ ಅನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡಲು ಪ್ರಾರಂಭಿಸುತ್ತದೆ.

2. ಇದಾದ ಕೆಲವೇ ಸೆಕೆಂಡುಗಳಲ್ಲಿ, ನಿಮ್ಮ ಐಫೋನ್‌ನ ಸ್ಥಳವು ಪರದೆಯ ಮೇಲಿನ ಮ್ಯಾಪ್‌ನಲ್ಲಿ ಗೋಚರಿಸುತ್ತದೆ.

3. ನಿಮ್ಮ ಐಫೋನ್‌ ಅಜ್ಞಾತ ಸ್ಥಳದಲ್ಲಿದ್ದರೆ ನೀವಾಗಿಯೇ ತೆಗೆದುಕೊಳ್ಳಲು ಹೋಗಬೇಡಿ. ಬದಲಿಗೆ ಕಾನೂನು-ಸುವ್ಯವಸ್ಥೆ ವಿಭಾಗಗಳನ್ನು ಸಂಪರ್ಕಿಸಿ. ಇದಕ್ಕಾಗಿ ನೀವು ನಿಮ್ಮ ಐಫೋನ್‌ನ ಸೀರಿಯಲ್‌ ನಂಬರ್‌ ಅಥವಾ IMEI ಕೋಡ್ ಅನ್ನು ವಿನಂತಿಸಬಹುದು.

ನಿಮ್ಮ ಕಳೆದುಹೋದ ಐಫೋನ್‌ನಲ್ಲಿ ಸೌಂಡ್‌ ಪ್ಲೇ ಮಾಡುವುದು ಹೇಗೆ..?

1. ನಿಮ್ಮ ಫೋನ್ ಪತ್ತೆಯಾದ ಬಳಿಕ, ಮ್ಯಾಪ್‌ನ ಮೇಲ್ಭಾಗದಲ್ಲಿ ನೀವು ಎಲ್ಲಾ ಸಾಧನಗಳನ್ನು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ.

2. ಡ್ರಾಪ್-ಡೌನ್ ಮೆನುವಿನಿಂದ, ನಿಮ್ಮ ಕಳೆದುಹೋದ ಐಫೋನ್ ಮಾದರಿಯನ್ನು ಆಯ್ಕೆಮಾಡಿ. (ನಿಮ್ಮ ನಿಯೋಜಿತ ಫೋನ್ ಹೆಸರು ಇಲ್ಲಿ ಗೋಚರಿಸುತ್ತದೆ).

3. ಈಗ ಸ್ಕ್ರೀನ್‌ ಮೇಲಿನ ಬಲ ಮೂಲೆಯಲ್ಲಿ ಕಾಣುವ ಪಟ್ಟಿಯಲ್ಲಿ ನಿಮ್ಮ ಐಫೋನ್, ಫೋನ್ ಹೆಸರು, ಉಳಿದ ಬ್ಯಾಟರಿ ಇತ್ಯಾದಿಗಳ ಫೋಟೋವನ್ನು ತೋರಿಸುತ್ತದೆ.

4. ಅಲ್ಲಿ ಪ್ಲೇ ಸೌಂಡ್ ಬಟನ್ ಕ್ಲಿಕ್ ಮಾಡಿ. ಇದು ನಿಮ್ಮ ಫೋನ್ ಬೀಪ್‌ ಮೋಡ್‌ನಲ್ಲಿರಲಿ ಅಥವಾ ಇಲ್ಲದಿರಲಿ, ನಿಮ್ಮ ಐಫೋನ್ ಕಂಪಿಸುವಂತೆ ಮಾಡುತ್ತದೆ ಮತ್ತು ಬೀಪಿಂಗ್ ಶಬ್ದವನ್ನು ಕ್ರಮೇಣ ಜೋರಾಗಿ ಮಾಡುತ್ತದೆ. ನಿಮ್ಮ ಐಫೋನ್ ಅನ್ನು ಮಿಸ್‌ ಆಗಿ ಇಟ್ಟಾಗ ಈ ಫೀಚರ್‌ ವಿಶೇಷವಾಗಿ ಸೂಕ್ತವಾಗುತ್ತದೆ. ನೀವು ಬೀಪಿಂಗ್ ಧ್ವನಿಯನ್ನು ಅನುಸರಿಸಿ ಕಂಡುಹಿಡಿಯಬಹುದು. ಧ್ವನಿ ನಿಲ್ಲಿಸಲು ನಿಮ್ಮ ಫೋನ್ ಅನ್ನು ನೀವು ಅನ್‌ಲಾಕ್ ಮಾಡಬೇಕಾಗುತ್ತದೆ.

ನಿಮ್ಮ ಐಫೋನ್ ಕಳೆದುಹೋಗಿರುವಂತೆ ಹೇಗೆ ಗುರುತಿಸಬಹುದು..?

1. ಪಾಪ್‌ ಅಪ್‌ ವಿಂಡೋದಿಂದ ಲಾಸ್ಟ್ ಮೋಡ್ ಬಟನ್ ಕ್ಲಿಕ್ ಮಾಡಿ.

2. ನಿಮ್ಮನ್ನು ತಲುಪಬಹುದಾದ ಐಚ್ಛಿಕ ಫೋನ್ ಸಂಖ್ಯೆಯನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. ನಿಮ್ಮ ಕಳೆದುಹೋದ ಐಫೋನ್‌ನಲ್ಲಿ ಈ ಸಂಖ್ಯೆಯನ್ನು ತೋರಿಸಲಾಗುತ್ತದೆ. ನಿಮ್ಮ ಐಫೋನ್‌ನಲ್ಲಿ ತೋರಿಸಲಾಗುವ ಕಸ್ಟಮ್ ಸಂದೇಶವನ್ನು ನಮೂದಿಸಲು ಸಹ ನಿಮ್ಮನ್ನು ಕೇಳಲಾಗುತ್ತದೆ. ಈ ಹಂತಗಳು ಐಚ್ಛಿಕವಾಗಿವೆ ಎಂಬುದನ್ನು ಗಮನಿಸಿ. ಲಾಸ್ಟ್ ಮೋಡ್ ನಿಮ್ಮ ಐಫೋನ್ ಅನ್ನು ಪಾಸ್‌ಕೋಡ್‌ನೊಂದಿಗೆ ಸ್ವಯಂಚಾಲಿತವಾಗಿ ಲಾಕ್ ಮಾಡುತ್ತದೆ.

3. ಡೊನ್‌ ಆಯ್ಕೆಯನ್ನು ಕ್ಲಿಕ್ ಮಾಡಿ.

ನಿಮ್ಮ ಕಳೆದುಹೋದ ಐಫೋನ್‌ನಲ್ಲಿ ಡೇಟಾವನ್ನು ಹೇಗೆ ಅಳಿಸುವುದು..?

1. ಪಾಪ್‌ ಅಪ್‌ ವಿಂಡೋದಿಂದ, ಅಳಿಸು ಐಫೋನ್ ಬಟನ್ ಕ್ಲಿಕ್ ಮಾಡಿ.

2. ಪಾಪ್-ಅಪ್ ಸಂದೇಶವು ನಿಮ್ಮ ದೃಢೀಕರಣವನ್ನು ಕೇಳುತ್ತದೆ. ಇದನ್ನು ಅನುಮತಿಸುವುದರಿಂದ ನಿಮ್ಮ ಐಫೋನ್‌ನಿಂದ ಎಲ್ಲಾ ವಿಷಯ ಮತ್ತು ಸೆಟ್ಟಿಂಗ್‌ಗಳನ್ನು ತೆಗೆದುಹಾಕುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಅಳಿಸಿದ ಐಫೋನ್ ಅನ್ನು ಟ್ರ್ಯಾಕ್ ಮಾಡಲು ಅಥವಾ ಕಂಡುಹಿಡಿಯಲು ಸಾಧ್ಯವಿಲ್ಲ.

3. ಅಳಿಸು ಆಯ್ಕೆಯನ್ನು ಕ್ಲಿಕ್ ಮಾಡಿ.

Best Mobiles in India

Read more about:
English summary
Find Your Lost iPhone, Remove Data Remotely With These Simple Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X