ಕಳೆದುಕೊಂಡ ಮೊಬೈಲ್‌ ಪತ್ತೆಗಾಗಿ ‘I lost my phone’ ಗೂಗಲ್‌ ಟೂಲ್

By Suneel
|

ಸ್ಮಾರ್ಟ್‌ಫೋನ್‌ ಅನ್ನು ಎಲ್ಲೋ ಮರೆತು ನಾವೇ ಬಿಟ್ಟು ಬಿಡುತ್ತೇವೆ, ದುಷ್ಕರ್ಮಿಗಳು ಮೊಬೈಲ್‌ ಅನ್ನು ನಮ್ಮಿಂದ ಹೇಗಾದರೂ ಕಳ್ಳತನ ಮಾಡುತ್ತಾರೆ, ನಾವೇ ಎಲ್ಲೋ ಕಳೆದುಕೊಳ್ಳುತ್ತೇವೆ. ಇಂತಹ ಹಲವು ಸಮಸ್ಯೆಗಳು ಎದುರಾದಾಗ ಡೇಟಾ ಸುರಕ್ಷತೆಗಾಗಿ ಮೊಬೈಲ್ ಅನ್ನು ಲಾಕ್‌ ಮಾಡುವುದು ಹೇಗೆ, ಮೊಬೈಲ್‌ ಹುಡುಕುವುದು ಹೇಗೆ ಎಂಬುದನ್ನು ಗಿಜ್‌ಬಾಟ್‌ನಲ್ಲಿ ಈ ಹಿಂದೆ ಓದಿರಬಹುದು.

ಓದಿರಿ: ಕಳೆದುಹೋದ ಸ್ಮಾರ್ಟ್‌ಫೋನ್‌ ಹುಡುಕುವುದು ಹೇಗೆ?

ಕಳೆದುಹೋದ ಮೊಬೈಲ್‌ ಹುಡುಕುವ ವಿಧಾನವನ್ನು ಗೂಗಲ್‌ ಇನ್ನೂ ಸರಳಗೊಳಿಸಿದೆ. ಗೂಗಲ್‌ ಪ್ರಸ್ತುತದಲ್ಲಿ ಕಳೆದುಹೋದ ಮೊಬೈಲ್‌ ಹುಡುಕಲು ನೀಡಿರುವ ಹೊಸ ಫೀಚರ್‌ನಿಂದ ನಿಮ್ಮ ಮೊಬೈಲ್‌ ಎಲ್ಲಿದೆ ಎಂದು ನೋಡಬಹುದು ಅಥವಾ ಕಳ್ಳತನವಾಗಿದೆ ಎಂದು ತಿಳಿದಲ್ಲಿ ನಿಮ್ಮ ಗೂಗಲ್‌ ಖಾತೆಯನ್ನು ಡಿವೈಸ್‌ನಿಂದ ರಿಮೂವ್‌(remove) ಮಾಡಬಹುದು. ಗೂಗಲ್‌ ಪರಿಚಯಿಸಿರುವ ಹೊಸ ಫೀಚರ್‌ ಅನ್ನು ಲೇಖನದ ಸ್ಲೈಡರ್‌ಗಳನ್ನು ಕ್ಲಿಕ್ಕಿಸಿ ತಿಳಿಯಿರಿ.

1

1

ಗೂಗಲ್‌ನಲ್ಲಿ ಸರಳವಾಗಿ "I lost my phone" ಎಂದು ಸರ್ಚ್‌ ಮಾಡುವ ಮೂಲಕ ಕಳೆದುಹೋದ ಮೊಬೈಲ್ ಅನ್ನು ಪತ್ತೆಹಚ್ಚಬಹುದಾಗಿದೆ. ಗೂಗಲ್‌, ಕಳೆದುಕೊಂಡ ಡಿವೈಸ್‌ಗಳನ್ನು ಜನರು ಪತ್ತೆಹಚ್ಚಲು ಪರಿಚಯಿಸಿರುವ ಹೊಸ ಟೂಲ್‌ ಇದಾಗಿದೆ.

2

2

"I lost my phone" ಎಂದು ಸರ್ಚ್‌ ಮಾಡಿದರೆ, ಗೂಗಲ್ ನಿಮ್ಮ ಡಿವೈಸ್‌ಗಳ ಬಗ್ಗೆ ಹೊಂದಿರುವ ದಾಖಲೆಯ ಪ್ರಕಾರ ನಿಮ್ಮ ಡಿವೈಸ್‌ಗಳ ವಿಶೇಷ ಪೇಜ್‌ ಅನ್ನು ನೀಡುತ್ತದೆ. ಆ ಪೇಜ್‌ನಲ್ಲಿ ನೀವು ಕಳೆದುಕೊಂಡಿರುವ ಡಿವೈಸ್‌ ಮೇಲೆ ಕ್ಲಿಕ್ ಮಾಡಬೇಕು.

3

3

ಗೂಗಲ್‌ ನೀಡಿದ ಪೇಜ್‌ನಿಂದ ಕೆಲವು ಸ್ಟೆಪ್‌ಗಳನ್ನು ಪಾಲಿಸಬೇಕು. ಉದಾಹರಣೆಗೆ (Showing its location on map, Locking the screen)

4

4

ಮೇಲೆ ತಿಳಿಸಿದ ಸ್ಟೆಪ್‌ಗಳನ್ನು ಫಾಲೋ ಮಾಡಲು ಫೀಚರ್‌ಗಳನ್ನು ಕೆಲವು ಆಂಡ್ರಾಯ್ಡ್ ಡಿವೈಸ್‌ಗಳು ಮಾತ್ರ ಹೊಂದಿದೆ. ನಿಮ್ಮ ಹ್ಯಾಂಡ್‌ಸೆಟ್‌ ಐಫೋನ್‌ ಆಗಿದ್ದಲ್ಲಿ ಕಳೆದು ಹೋದ ಐಫೋನ್‌ ಹುಡುಕಲು iCloud'ನಲ್ಲಿ 'Find My iPhone' ಎಂದು ಟೈಪಿಸಬೇಕು.

5

5

ಆಪಲ್‌, ಐಫೋನ್‌ ಹುಡುಕಲು "iCloud'ನಲ್ಲಿ 'Find My iPhone' ಎಂದು ಟೈಪಿಸುವ ಫೀಚರ್ ನೀಡಿದ್ದು, ಇದು ಸಹ ಗೂಗಲ್‌ ಟೂಲ್‌ ರೀತಿಯೇ ಇದೆ. ಐಫೋನ್ ಅನ್ನು ಈ ಫೀಚರ್‌ ಮ್ಯಾಪ್‌ನಲ್ಲಿ ಡಿಸ್‌ಪ್ಲೇ ಮಾಡಲಿದ್ದು, ಬಳಕೆದಾರನಿಗೆ "tell it to play a sound" "lost mode" ಆಯ್ಕೆಗಳನ್ನು ನೀಡುತ್ತದೆ. ಇವುಗಳಿಂದ ಕಳೆದು ಹೋದ ಐಫೋನ್‌ ಯಾರಿಗಾದರೂ ಸಿಕ್ಕರೆ ಅದನ್ನು ಎಲ್ಲಿ ವಾಪಸ್ಸು ತಲುಪಿಸಬೇಕು ಎಂದು ಐಫೋನ್‌ ತಿಳಿಸುತ್ತದೆ.

6

6

ಗೂಗಲ್‌ ಸೈಟ್‌ ತನ್ನ ಖಾತೆ ಬಳಕೆದಾರರಿಗೆ "account hub' ಎಂಬ ಸೇವೆಯನ್ನು ಪ್ರಾರಂಭಿಸಿದ್ದು, ಬಳಕೆದಾರರ ಖಾತೆಯಲ್ಲಿನ ಡೇಟಾವನ್ನು ವ್ಯಕ್ತಿಗೆ ತೋರಿಸಲಿದೆ. ಆದ್ರೆ ಖಾತೆ ಬಳಕೆದಾರರು "OK Google, show me my account", ಎಂದು ಹೇಳಬೇಕು. ನಂತರ ಗೂಗಲ್‌ ಖಾತೆಯಲ್ಲಿನ ಮಾಹಿತಿಯನ್ನು ಪ್ರದರ್ಶನ ಮಾಡುತ್ತದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಮೊಬೈಲ್‌ನಿಂದಲೇ ದೂರು ಸಲ್ಲಿಸಲು ಅಪ್ಲಿಕೇಶನ್‌ <br /></a><a href=ಕ್ಯಾನ್ಸರ್‌ ಸಂಶೋಧನೆಗೆ ವೋಡಾಫೋನ್‌ ಡ್ರೀಮ್‌ಲ್ಯಾಬ್ ಅಪ್ಲಿಕೇಶನ್‌" title="ಮೊಬೈಲ್‌ನಿಂದಲೇ ದೂರು ಸಲ್ಲಿಸಲು ಅಪ್ಲಿಕೇಶನ್‌
ಕ್ಯಾನ್ಸರ್‌ ಸಂಶೋಧನೆಗೆ ವೋಡಾಫೋನ್‌ ಡ್ರೀಮ್‌ಲ್ಯಾಬ್ ಅಪ್ಲಿಕೇಶನ್‌" />ಮೊಬೈಲ್‌ನಿಂದಲೇ ದೂರು ಸಲ್ಲಿಸಲು ಅಪ್ಲಿಕೇಶನ್‌
ಕ್ಯಾನ್ಸರ್‌ ಸಂಶೋಧನೆಗೆ ವೋಡಾಫೋನ್‌ ಡ್ರೀಮ್‌ಲ್ಯಾಬ್ ಅಪ್ಲಿಕೇಶನ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Google searching ‘I lost my phone’ will let people find their lost handset. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X