ಕಾರು ಪಾರ್ಕ್ ಮಾಡಿರುವ ಜಾಗ ಮರೆತು ಹೋಯ್ತಾ? ಹೀಗೆ ಹುಡುಕಿ.

By Gizbot Bureau
|

ಶಾಪಿಂಗ್ ಕಾಂಪ್ಲೆಕ್ಸ್ ಒಳಗಡೆ ಗಾಡಿ ನಿಲ್ಲಿಸಿ ಬಂದರೆ ಪುನಃ ಗಾಡಿ ಹುಡುಕುವುದು ಬಹಳ ಕಷ್ಟದ ಕೆಲಸ. ಯಾವ ಮೂಲೆಯಲ್ಲಿ ಗಾಡಿ ನಿಲ್ಲಿಸಿದೆ ಎಂದು ತಲೆಕೆರೆದುಕೊಂಡು ಅಡ್ಡಿದರೂ ಕೂಡ ನಿಮ್ಮ ಗಾಡಿ ಎಲ್ಲಿದೆ ಎಂದು ಹುಡುಕುವುದಕ್ಕೆ ಒಮ್ಮೊಮ್ಮೆ ಶಾಪಿಂಗ್ ಗೆ ತೆಗೆದುಕೊಂಡ ಸಮಯಕ್ಕಿಂತಲೂ ಅಧಿಕ ಸಮಯವೇ ಹಿಡಿದು ಬಿಡುತ್ತದೆ. ಯಾಕೆಂದರೆ ಈಗಿನ ಶಾಪಿಂಗ್ ಕಾಂಪ್ಲೆಕ್ಸ್ ಗಳ ವ್ಯವಸ್ಥೆಯೇ ಹಾಗಿದೆ. ಆದರೆ ಇದಕ್ಕೆ ಗೂಗಲ್ ಮ್ಯಾಪ್ ನಿಮಗೆ ಸಹಾಯ ಮಾಡುತ್ತದೆ. ಹೌದು ನೀವು ಪಾರ್ಕ್ ಮಾಡಿರುವ ಕಾರು ಅಥವಾ ಯಾವುದೇ ವೆಹಿಕಲ್ ಎಲ್ಲಿದೆ ಎಂಬುದನ್ನು ಗೂಗಲ್ ಮ್ಯಾಪ್ ಸಹಾಯದಿಂದ ನೀವು ಹುಡುಕಬಹುದು.

ಗೂಗಲ್ ಮ್ಯಾಪ್

ಗೂಗಲ್ ಮ್ಯಾಪ್ ಬಳಸಿ ನೀವು ಪಾರ್ಕ್ ಮಾಡಿದ ಕಾರಿನ ಲೊಕೇಷನ್ ನ್ನು ಪಿನ್ ಮಾಡಬಹುದು ಮತ್ತು ಗೂಗಲ್ ಅಸಿಸ್ಟೆಂಟ್ ಬಳಸಿ ನಿಮ್ಮ ಕಾರನ್ನು ಹುಡುಕಬಹುದು. ನೇವಿಗೇಷನ್ ನ್ನು ಪ್ರಾರಂಭಿಸುವುದಕ್ಕಾಗಿ ನೀವು ಪಿನ್ ಮಾಡಿರುವ ಲೊಕೇಷನ್ ನ್ನು ಟ್ಯಾಪ್ ಮಾಡಿದರೆ ಆಯ್ತು. ಐಓಎಸ್ ಬಳಕೆದಾರರು ಆಪಲ್ ಮ್ಯಾಪ್ಸ್ ಬಳಸಿ ಇದನ್ನು ಸಾಧಿಸಬಹುದು. ಹೇಗೆ ಎಂಬ ಬಗ್ಗೆ ಸಂಪೂರ್ಣ ವಿವರವನ್ನು ನಾವಿಲ್ಲಿ ನಿಮಗೆ ಒದಗಿಸುತ್ತೇವೆ.

ಪ್ರಮುಖ ಅಗತ್ಯತೆಗಳು:

ಪ್ರಮುಖ ಅಗತ್ಯತೆಗಳು:

• ಗೂಗಲ್ ಮ್ಯಾಪ್ ನ ನೂತನ ವರ್ಷನ್ ಮತ್ತು ಗೂಗಲ್ ಆಪ್

• ಆಂಡ್ರಾಯ್ಡ್ ಮಾರ್ಷ್ಮಾಲೋ ಅಥವಾ ಅದಕ್ಕಿಂತ ಮೇಲಿನ ವರ್ಷನ್/ ಐಓಎಸ್ 10 ಅಥವಾ ಮೇಲಿನದ್ದರಲ್ಲಿ ರನ್ ಆಗುವ ಸ್ಮಾರ್ಟ್ ಫೋನ್

• ಲೊಕೇಷನ್ ಸೇವೆಯನ್ನು ಅನೇಬಲ್ ಮಾಡಬೇಕು

• ಗೂಗಲ್ ಅಸಿಸ್ಟೆಂಟ್ ಗೆ ಬೇಕಾಗಿರುವ ಅಗತ್ಯವಾದ ಎಲ್ಲಾ ಪರ್ಮಿಷನ್ ಗಳನ್ನು ಒದಗಿಸಬೇಕಾಗುತ್ತದೆ.

1.ಪಾರ್ಕಿಂಗ್ ಲೊಕೇಷನ್ ನ್ನು ಸೇವ್ ಮಾಡಿ

1.ಪಾರ್ಕಿಂಗ್ ಲೊಕೇಷನ್ ನ್ನು ಸೇವ್ ಮಾಡಿ

ಮೊದಲಿಗೆ ನೀವು ಗಾಡಿ ಪಾರ್ಕ್ ಮಾಡಿರುವ ಲೊಕೇಷನ್ ನ್ನು ಸೇವ್ ಮಾಡಬೇಕು. ನೀವು ಗಾಡಿ ಪಾರ್ಕ್ ಮಾಡಿದ ನಂತರ ನಿಮ್ಮ ಫೋನಿನಲ್ಲಿ ಗೂಗಲ್ ಮ್ಯಾಪ್ ತೆರೆಯಿರಿ ಮತ್ತು ಮ್ಯಾಪ್ ನಲ್ಲಿ ನೀಲಿ ಪಿನ್ ನಂತೆ ಗುರುತಿಸಲ್ಪಡುತ್ತಿರುವ ನಿಮ್ಮ ಸದ್ಯದ ಲೊಕೇಷನ್ ನ್ನು ಟ್ಯಾಪ್ ಮಾಡಿ. ಟ್ಯಾಪ್ ಮಾಡಿದಾಗ ನಿಮಗೆ ಮೂರು ಆಯ್ಕೆ ಬರುತ್ತದೆ. ಅದರಲ್ಲಿ ನೀವು ಸೇವ್ ಯುವರ್ ಪಾರ್ಕಿಂಗ್ ಲೊಕೇಷನ್ ಎಂಬುದನ್ನು ಆಯ್ಕೆ ಮಾಡಿ. ಇಲ್ಲಿ ನಿಮಗೆ ಪಾರ್ಕಿಂಗ್ ನಂಬರ್,ಪಾರ್ಕ್ ಮಾಡಿರುವ ಜಾಗದ ಫೋಟೋ ಇತ್ಯಾದಿಗಳನ್ನು ಕೂಡ ಸೇರಿಸುವುದಕ್ಕೆ ಅವಕಾಶವಿರುತ್ತದೆ.

ಇದರ ಜೊತೆಗೆ ಗೂಗಲ್ ಅಸಿಸ್ಟೆಂಟ್ ಬಳಿ ಕೂಡ ನೀವು ನಾನೆಲ್ಲಿ ಗಾಡಿ ಪಾರ್ಕ್ ಮಾಡಿದ್ದೆನೆ ಎಂಬುದನ್ನು ನೆನಪಿಡು ಎಂದು ಇಂಗ್ಲೀಷಿನಲ್ಲಿ ಹೇಳುವ ಮೂಲಕ ಕೂಡ ಇದನ್ನು ಸಾಧಿಸಬಹುದು.

2.ಪಾರ್ಕಿಂಗ್ ಲೊಕೇಷನ್ ನ್ನು ನೇವಿಗೇಟ್ ಮಾಡಿ

2.ಪಾರ್ಕಿಂಗ್ ಲೊಕೇಷನ್ ನ್ನು ನೇವಿಗೇಟ್ ಮಾಡಿ

ಗೂಗಲ್ ಮ್ಯಾಪ್ ನ್ನು ತೆರೆಯಿರಿ ಮತ್ತು ಸೇವ್ ಮಾಡಿರುವ ಪಾರ್ಕಿಂಗ್ ಕಾರ್ಡ್ ನ್ನು ಟ್ಯಾಪ್ ಮಾಡಿ. ಡೈರೆಕ್ಷನ್ ಬಟನ್ ನ್ನು ಟ್ಯಾಪ್ ಮಾಡಿ ಮತ್ತು ನಂತರ ನೇವಿಗೇಷನ್ ಗಾಗಿ ಸ್ಟಾರ್ಟ್ ಬಟನ್ ನ್ನು ಟ್ಯಾಪ್ ಮಾಡಿ.

ಗೂಗಲ್ ಅಸಿಸ್ಟೆಂಟ್ ಬಳಿ ಕೂಡ ನೀವು ನಿಮ್ಮ ಕಾರಿನ ಪಾರ್ಕಿಂಗ್ ಲೊಕೇಷನ್ ಎಲ್ಲಿದೆ ಎಂದು ಇಂಗ್ಲೀಷಿನಲ್ಲಿ ಕೇಳುವ ಮೂಲಕ ಕೂಡ ಹುಡುಕಬಹುದು.

Best Mobiles in India

Read more about:
English summary
Forgot Where You Parked Your Car? Use Your Smartphone To Find It

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X