ಗೂಗಲ್‌ ಕ್ರೋಮ್‌ನಲ್ಲಿ ಆಟೋಮೆಟಿಕ್‌ ಲಾಗಿನ್‌ ಆಗ್ತಿದಿಯಾ..? ಇನ್ಮುಂದೆ ಆ ಚಿಂತೆ ಬೇಡ..!

|

ವಿಶ್ವದಾದ್ಯಂತ ಅತೀ ಹೆಚ್ಚು ಬಳಕೆಯಲ್ಲಿರುವ ವೆಬ್ ಬ್ರೌಸರ್ ಎಂದರೆ ಅದು ಗೂಗಲ್ ಕ್ರೋಮ್. ಡೆಸ್ಕ್ ಟಾಪ್, ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ಯಾವುದೇ ಆಗಿರಲಿ ಗೂಗಲ್ ಕ್ರೋಮ್ ಬಳಕೆಯೇ ಹೆಚ್ಚು. ವೆಬ್ ಬ್ರೌಸರ್ ಗಳ ಬಳಕೆಯ ಶೇಕಡಾ 59 ರಿಂದ 67 ಬಳಕೆಯು ಗೂಗಲ್ ಕ್ರೋಮ್ ಆಗಿದೆ ಎಂಬುದನ್ನು ಅಂಕಿಅಂಶಗಳಿಂದ ತಿಳಿದು ಬಂದಿದೆ.

ಕ್ರೋಮ್‌ನಲ್ಲಿ ಆಟೋಮೆಟಿಕ್‌ ಲಾಗಿನ್‌ ಆಗ್ತಿದಿಯಾ..? ಇನ್ಮುಂದೆ ಆ ಚಿಂತೆ ಬೇಡ..!

ಗೂಗಲ್ ಕ್ರೋಮ್ ಗೆ ಅಲ್ಪಸ್ವಲ್ಪ ಸ್ಪರ್ಧೆ ನೀಡುವುದು ಸಫಾರಿ ಮತ್ತು ಇಂಟರ್ನೆಟ್ ಎಕ್ಸ್ ಪ್ಲೋರರ್. ಇದು ಶೇಕಡಾ 11 ರಿಂದ 15 ಶೇಕಡಾದಷ್ಟಿದೆ ಮತ್ತು ಕ್ರೋಮ್ ನ ಕಾಲು ಭಾಗ ಎಂದೇ ಹೇಳಬಹುದು. ಗೂಗಲ್ ಕ್ರೋಮ್ ಬಳಸುವ ಪ್ರತಿಯೊಬ್ಬ ವ್ಯಕ್ತಿಯೂ ಗೂಗಲ್ ಕ್ರೋಮ್ ನ ಮೇಲೆ ನಂಬಿಕೆ ಇಟ್ಟಿರಬೇಕು, ಇಟ್ಟಿರುತ್ತಾನೆ ಕೂಡ.

ವರ್ಷನ್ 69 ಬಿಡುಗಡೆ

ವರ್ಷನ್ 69 ಬಿಡುಗಡೆ

ವರ್ಷನ್ 69 ಈ ತಿಂಗಳು ಬಿಡುಗಡೆಗೊಂಡಿದೆ. ಕೆಲವೊಂದು ಪ್ರಮುಖ ಡಿಸೈನ್ ಗಳಲ್ಲಿ ಬದಲಾವಣೆ ಇದ್ದು ಬಳಕೆದಾರರ ಕ್ರಿಡೆನ್ಶಿಯಲ್ ನ್ನು ನಿರ್ವಹಿಸುವ ವಿಧಾನದಲ್ಲೂ ಕೂಡ ಕೆಲವು ಸಣ್ಣಪುಟ್ಟ ಬದಲಾವಣೆಗಳಾಗಿದೆ. ಈ ಹಿಂದಿನ ವರ್ಷನ್ ನಲ್ಲಿ ಲಾಗಿನ್ ಕ್ರಿಡೆನ್ಶಿಯಲ್ಸ್ ಗಳು ಪ್ರತಿ ಬ್ರೌಸರ್ ಗೂ ಉದಾಹರಣೆಗೆ ಜಿಮೇಲ್, ಯುಟ್ಯೂಬ್, ಗೂಗಲ್ ಡ್ರೈವ್, ಗೂಗಲ್ ಮ್ಯಾಪ್ ಪ್ರತಿಯೊಂದನ್ನು ಕೂಡ ಸ್ವತಂತ್ರ್ಯವಾಗಿ ನಿಭಾಯಿಸಲಾಗುತ್ತಿತ್ತು. ಅನೇಕ ಪಿಸಿಗಳಲ್ಲಿ ಮತ್ತು ಡಿವೈಸ್ ಗಳಲ್ಲಿ ನಿಮ್ಮ ಬ್ರೌಸರ್ ಹಿಸ್ಟರಿ, ಪಾಸ್ ವರ್ಡ್ ಗಳು, ಸೆಟ್ಟಿಂಗ್ಸ್ ಪೇಮೆಂಟ್ ವಿವರಗಳು ಇತ್ಯಾದಿಗಳನ್ನು ಸೈನ್ ಕ್ರನೈಸ್ ಮಾಡಿ ಸೇವ್ ಮಾಡಿ ಇಡಲು ಅವಕಾಶವಿರುತ್ತಿತ್ತು.

ಎರಡು ಅಕೌಂಟ್‌ ನಿರ್ವಹಿಸಬಹುದಿತ್ತು

ಎರಡು ಅಕೌಂಟ್‌ ನಿರ್ವಹಿಸಬಹುದಿತ್ತು

ಇದುವರೆಗೂ ಒಂದೇ ಗೂಗಲ್ ಖಾತೆಯನ್ನು ಜಿಮೇಲ್ , ಯುಟ್ಯೂಬ್ ಗೆ ಬಳಕೆ ಮಾಡುತ್ತಿದ್ದರೂ ಕೂಡ ಎರಡೂ ಅಕೌಂಟ್ ಗಳು ಬೇರೆಬೇರೆಯಾಗಿಯೇ ಕ್ರೋಮ್ ನಲ್ಲಿ ನಿಭಾಯಿಸಲ್ಪಡುತ್ತಿತ್ತು. ಎಲ್ಲರಿಗೂ ತಿಳಿದಿರುವ ವಿಚಾರವೇನೆಂದರೆ ಕ್ರೋಮ್ ಬೇರೆಬೇರೆ ವಿಷಯಗಳನ್ನು ವೆಬ್ ನಲ್ಲಿ ಕಾಣಲು ಇರುವ ಒಂದು ಮಾರ್ಗ ಅಥವಾ ಸಾಧನದಂತೆ ಕೆಲಸ ಮಾಡುವ ಜಾಗ. ಬಳಕೆದಾರರು ತಮ್ಮ ಬ್ರೌಸರ್ ಹಿಸ್ಟರಿ ಮತ್ತು ಇತರೆ ಸೂಕ್ಷ್ಮ ಮಾಹಿತಿಗಳನ್ನು ವೆಬ್ ನಲ್ಲಿ ಆಗಾಗ ಸ್ವಚ್ಛಗೊಳಿಸದೇ ಇದ್ದಲ್ಲಿ ಅದು ಜಾಹಿರಾತು ಕಂಪೆನಿಗಳಿಗೆ ಲಾಭವನ್ನು ಮಾಡುತ್ತದೆ ಮತ್ತು ಈ ಮಾಹಿತಿಯನ್ನು ಆಧರಿಸಿ ಬಳಕೆದಾರರನ್ನು ಟ್ರ್ಯಾಕ್ ಮಾಡಿ ಜಾಹಿರಾತುಗಳು ಕಿರಿಕಿರಿಯನ್ನುಂಟು ಮಾಡುತ್ತದೆ ಎಂಬ ದೂರು ಹಲವು ವರ್ಷಗಳಿಂದ ಕೇಳಿಬರುತ್ತಿರುವುದೇ ಆಗಿದೆ.

ಹೊಸ ಫೀಚರ್‌

ಹೊಸ ಫೀಚರ್‌

ಗೂಗಲ್ ತನ್ನ 69 ವರ್ಷನ್ ನಲ್ಲಿ ಸ್ವಯಂಚಾಲಿತವಾಗಿ ಗೂಗಲ್ ಅಕೌಂಟಿಗೆ ನೀವು ಸೈನ್ ಇನ್ ಆದ ಕೂಡಲೇ ಕ್ರೋಮ್ ಗೂ ಸೈನ್ ಇನ್ ಆಗುವಂತಹ ಅವಕಾಶವನ್ನು ಕಲ್ಪಿಸಿದೆ. ಕ್ರೋಮ್ ನ ಟೂಲ್ ಬಾರ್ ನಲ್ಲಿರುವ ಯ್ಯೂಸರ್ ಪ್ರೊಫೈಲ್ ಐಕಾನ್ ನೀವು ಸೈನ್ ಇನ್ ಆದ ಕೂಕಲೇ ಗೂಗಲ್ ಅಕೌಂಟ್ ಪ್ರೊಫೈಲ್ ಪಿಕ್ಚರ್ ಆಗಿ ಬದಲಾಗುತ್ತದೆ ಮತ್ತು ಸೈನ್ ಔಟ್ ಆದ ತಕ್ಷಣವೇ ಎಲ್ಲಾ ಗೂಗಲ್ ಸೇವೆಗಳಿಂದ ನೀವು ಲಾಗ್ ಔಟ್ ಆಗಿರುತ್ತೀರಿ.

ಗೂಗಲ್ ಹೇಳುವ ಪ್ರಕಾರ ಇದು ಹಲವು ಕಾರಣಗಳಿಂದ ಉತ್ತಮ ಸಂಗತಿಯಾಗಿದೆ.

ಗೂಗಲ್ ಹೇಳುವ ಪ್ರಕಾರ ಇದು ಹಲವು ಕಾರಣಗಳಿಂದ ಉತ್ತಮ ಸಂಗತಿಯಾಗಿದೆ.

1. ಜನರಿಗೆ ಗೊಂದಲ ಸೃಷ್ಟಿ ಮಾಡುವುದಿಲ್ಲ. ಯಾರು ಸೈನ್, ಯಾವ ಅಕೌಂಟಿನಲ್ಲಿ ಲಾಗಿನ್ ಆಗಿರುವುದು ಎಂಬುದು ಸ್ಪಷ್ಟವಾಗಿರುತ್ತದೆ.

2. ಅವರ ಅಕೌಂಟನ್ನು ರಕ್ಷಸಿಕೊಳ್ಳಲು ಇದು ನೆರವಾಗುತ್ತದೆ.

3. ಒಂದೇ ಲಾಗಿನ್ ನಲ್ಲಿ ತಮ್ಮೆಲ್ಲಾ ಗೂಗಲ್ ಖಾತೆಗಳನ್ನು ನಿಭಾಯಿಸುವುದಕ್ಕೆ ಬಳಕೆದಾರರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ.

4. ಬ್ರೌಸರ್ ನಲ್ಲಿ ಗೂಗಲ್ ಅಕೌಂಟ್ ಸೈನ್ ಇನ್ ಆಗಿರುತ್ತದೆ. ಮತ್ತು ಒಂದು ಟ್ಯಾಬ್ ನಲ್ಲಿ ನೀವು ಜಿಮೇಲ್ ತೆರೆದು ಮತ್ತೊಂದು ಟ್ಯಾಬ್ ನಲ್ಲಿ ಯುಟ್ಯೂಬ್ ತೆರೆದರೆ ಆಗ ಎರಡರಲ್ಲೂ ನೀವು ಸೈನ್ ಇನ್ ಆಗಿಯೇ ಇರುತ್ತೀರಿ. ಪದೇ ಪದೇ ಸೈನ್ ಇನ್, ಸೌನ್ ಔಟ್ ಮಾಡುತ್ತಲೇ ಇರಬೇಕಾದ ಗೋಜಲು ಇರುವುದಿಲ್ಲ.

ಸಮಸ್ಯೆಗಳು

ಸಮಸ್ಯೆಗಳು

ಆದರೆ, ಕೆಲವು ಬಳಕೆದಾರರಿಗೆ ಈ ಸೇವೆಯು ಅಷ್ಟೇನು ಖುಷಿ ನೀಡಿಲ್ಲ. ಯಾಕೆಂದರೆ ಇದರಲ್ಲಿ ಕೆಲವು ಸಮಸ್ಯೆಗಳನ್ನು ಅವರು ಗುರುತಿಸಿದ್ದಾರೆ. ಹಾಗಾದ್ರೆ ಗೂಗಲ್ ಅಕೌಂಟಿಗೆ ಕ್ರೋಮ್ ನ ಏಕೈಕ ಸೈನ್ ನ ದುರುಪಯೋಗಗಳೇನು ಎಂದು ಪಟ್ಟಿ ಮಾಡುವುದಾದರೆ ಈ ಕೆಳಕಂಡಂತೆ ಇದೆ.

1. ಕೆಲವು ಬಳಕೆದಾರರು ಮಲ್ಟಿಪಲ್ ಅಕೌಂಟ್ ಗಳನ್ನು ಹೊಂದಿರುತ್ತಾರೆ. ಒಂದು ಅವರ ವಯಕ್ತಿಕ ಖಾತೆ ಮತ್ತು ಇನ್ನೊಂದು ಕೆಲಸದ ಕ್ರಿಡೆನ್ಶಿಯಲ್ಸ್ ಆಗಿರುತ್ತದೆ. ಇವುಗಳನ್ನು ಗೂಗಲ್ ಕ್ರೋಮ್ ನಲ್ಲಿ ಈ ವೈಶಿಷ್ಟ್ಯತೆಯೊಂದಿಗೆ ನಿಭಾಯಿಸುವುದು ಮತ್ತಷ್ಟು ಕ್ಲಿಷ್ಟಕರವಾಗುತ್ತದೆ.

2. ಒಮ್ಮೆ ಯಾವುದಾದರೂ ಒಂದು ಗೂಗಲೇ ಸೇವೆಯಿಂದ ಗೂಗಲ್ ಕ್ರೋಮ್ ನಲ್ಲಿ ಸೈನ್ ಔಟ್ ಆದರೆ ಎಲ್ಲಾ ಸೇವೆಯಲ್ಲೂ ಸೈನ್ ಔಟ್ ಆಗಬೇಕಾಗುತ್ತದೆ. ಈ ಒತ್ತಾಯದ ಸೈನ್ ಔಟ್ ಮತ್ತು ಸೈನ್ ಇನ್ ಪ್ರಕ್ರಿಯೆಯು ಬಳಕೆದಾರರಿಗೆ ಕಿರಿಕಿರಿಯಾಗಬಹುದು.

3. ಮಲ್ಟಿಪಲ್ ಅಕೌಂಟ್ ನಲ್ಲಿ ಸೈನ್ ಇನ್ ಆದರೆ ನಿಮ್ಮ ಡಾಟಾಗಳು ಮರ್ಜ್ ಆಗಲಿವೆಯೇ ಅಥವಾ ಇಲ್ಲವೇ ಎಂಬ ಬಗೆಗಿನ ಕ್ಲಾರಿಟಿಯನ್ನು ಇನ್ನೂ ಗೂಗಲ್ ನೀಡಿಲ್ಲ.

4. ಮಲ್ಟಿಪಲ್ ಅಕೌಂಟ್ ಗಳ ಪ್ರೈವೆಸಿ ಬಗ್ಗೆ ಅನುಮಾನ

5. 'Sync as' ಬಟನ್ ಈಗಾಗಲೇ ಸಿನ್ ಕ್ರನೈಸೇಷನ್ ಆನ್ ಆಗಿದೆ ಎಂಬಂತೆ ಸೂಚಿಸುತ್ತದೆ ಮತ್ತು ಇದು ಬಳಕೆದಾರರಿಗೆ ಸರಿಯಾಗಿ ಸ್ಪಷ್ಟವಾಗಿಲ್ಲ ಎಂಬುದಾಗಿ ಹೇಳುತ್ತಾರೆ ಕೆಲವರು ಕ್ರಿಟಿಕ್ಸ್ ಗಳು. ಇದರ ಡೈಲಾಗ್ ಬಾಕ್ಸ್ ನಲ್ಲಿ ಹಿಸ್ಟರಿ, ಪಾಸ್ ವರ್ಡ್ ಮತ್ತು ಸೆಟ್ಟಿಂಗ್ಸ್ ಗಳು ಸಿನ್ ಕ್ರನೈಜ್ ಆಗುತ್ತಿವೆ ಎಂದು ಸೂಚಿಸುತ್ತದೆ. ಯಾವುದೇ ಕನ್ಫರ್ಮೇಷನ್ ಇಲ್ಲದೆಯೇ ಆಡ್ಸ್ ಗಳು ಪರ್ಸನಲೈಜ್ ಆಗಿರುವಂತೆ ಕಾಣುತ್ತದೆ.

ದುರ್ಬಳಕೆಗೆ ಕಡಿವಾಣ

ದುರ್ಬಳಕೆಗೆ ಕಡಿವಾಣ

ಆದರೆ ಒಂದು ಪ್ರಮುಖ ಉಪಯೋಗವಂತೂ ಈ ವೈಶಿಷ್ಟ್ಯತೆಯಿಂದ ಆಗಲಿದೆ. ಒಂದು ವೇಳೆ ಬಳಕೆದಾರರು ಗೂಗಲ್ ಸೇವೆಗಳನ್ನು ಮಲ್ಟಿಪಲ್ ವಿಂಡೋಗಳಲ್ಲಿ ಬಳಸುತ್ತಿದ್ದು ಅಚಾನಕ್ ಆಗಿ ಎಲ್ಲಾ ವಿಂಡೋಗಳನ್ನು ಒನ್ ಶಾಟ್ ನಲ್ಲಿ ಕ್ಲೋಸ್ ಮಾಡಿ ತೆರಳಿದ್ದರೆ ಆಗ ನೀವಿನ್ನೂ ಸೈನ್ ಇನ್ ಆಗಿಯೇ ಇರುತ್ತೀರಿ ಮತ್ತು ಬೇರೊಬ್ಬ ಬಳಕೆದಾರ ಅದೇ ಪಿಸಿಯನ್ನು ಬಳಸಿದರೆ ನಿಮ್ಮ ವಯಕ್ತಿಕ ಡಾಟಾಗಳು ಕದಿಯಲ್ಪಡುವ ಸಾಧ್ಯತೆ ಇರುತ್ತದೆ. ಈ ಸಾಧ್ಯತೆಯನ್ನು ಗೂಗಲ್ ಈ ಮೂಲಕ ನಿಯಂತ್ರಿಸುತ್ತದೆ. ಆದರೆ ಕೆಲವು ಪ್ರಶ್ನೆಗಳನ್ನು ಈ ವೈಶಿಷ್ಟ್ಯತೆಯ ಕುರಿತಂತೆ ಗೂಗಲ್ ಗೆ ಕೇಳಲಾಗಿದೆ.

ಗೂಗಲ್ ಕ್ರೋಮ್ ಗೆ ಕೇಳಲಾಗಿರುವ ಪ್ರಶ್ನೆಗಳು:

ಗೂಗಲ್ ಕ್ರೋಮ್ ಗೆ ಕೇಳಲಾಗಿರುವ ಪ್ರಶ್ನೆಗಳು:

1. ಇಂಡಿಕೇಟರ್ ಫಂಕ್ಷನ್ ಗಾಗಿ ಗೂಗಲ್ ಕ್ರೋಮ್ ಗೆ ಸೈನ್ ಇನ್ ಆಗುವ ಅಗತ್ಯವೇನು?

2. ಸೈನ್ ಇನ್ ಮಾಡುವ ಮೂಲಕ ಸಿಂಕ್ರೊನೈಸೇಶನ್ ಮತ್ತು ವೈಯಕ್ತೀಕರಣವನ್ನು ತಕ್ಷಣವೇ ಸಕ್ರಿಯಗೊಳಿಸದಿದ್ದರೆ, ಅದು ಯಾವ ಇತರ ಉದ್ದೇಶವನ್ನು ಒದಗಿಸುತ್ತದೆ?

3. ನೀವು ಸೈನ್ ಇನ್ ಮಾಡಿದಾಗ ಏನು ನಡೆಯುತ್ತದೆ ಮತ್ತು ಆ ಸಿಂಕ್ರೊನೈಸೇಶನ್ ಅನ್ನು ಸಕ್ರಿಯಗೊಳಿಸಿಲ್ಲವೆ?

ಈ ಪ್ರಶ್ನೆಗಳಿಗೆ ಸದ್ಯದಲ್ಲೇ ಉತ್ತರ ಸಿಗುವ ನಿರೀಕ್ಷೆ ಇದೆ.ಒಟ್ಟಾರೆ ಗೂಗಲ್ ಕ್ರೋಮ್ ನ ಹೊಸ ಸೈನ್ ಇನ್ ವೈಶಿಷ್ಟ್ಯತೆಯು ಉಪಯೋಗ, ದುರುಪಯೋಗ ಎರಡನ್ನೂ ಒಳಗೊಂಡಿದ್ದು ಸದ್ಯ ಒಂದಷ್ಟು ಪರ-ವಿರೋಧ ಅಭಿಪ್ರಾಯಗಳಿಗೆ ಕಾರಣವಾಗಿದೆ. ಈ ಸೈನ್ ಇನ್ ವೈಶಿಷ್ಟ್ಯತೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಮಾಡಿ ತಿಳಿಸುವುದನ್ನು ಮರೆಯಬೇಡಿ.

Most Read Articles
Best Mobiles in India

English summary
Google Chrome Automatically Signs You in When You Log in to Gmail or YouTube - Should You Be Worried? To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more