ಇಂದಿನಿಂದ ಗೂಗಲ್‌ ಸರ್ಚ್‌ನಲ್ಲಿ ನಿಖರ ಮಾಹಿತಿಗಾಗಿ ಈ ಟ್ರಿಕ್ಸ್‌ಗಳನ್ನು ಫಾಲೋ ಮಾಡಲೇಬೇಕು!

By Suneel
|

ಅಂಗೈಯಲ್ಲಿ ಎಲ್ಲಾ ಮಾಹಿತಿಗಳನ್ನು ಕೆಲವೇ ನಿಮಿಷಗಳಲ್ಲಿ ತಿಳಿಯುವುದು ಅತೀ ಸುಲಭವಾಗಿದೆ. ಸ್ಮಾರ್ಟ್‌ಫೋನ್'ಗಳ ಬಳಕೆಯಿಂದಾಗಿ ಇಂದು ಶೀಘ್ರವಾಗಿ ಯಾವುದೇ ಮಾಹಿತಿ ತಿಳಿಯಲು ಹೆಚ್ಚು ಅನುಕೂಲವು ಆಗಿದೆ. ಗೂಗಲ್‌ ಸರ್ಚ್‌ ಇಂಜಿನ್‌ ಬಾರ್‌ನಲ್ಲಿ ಜಸ್ಟ್ ಕೀವರ್ಡ್‌ ಟೈಪಿಸುತ್ತಿದಂತೆಯೇ ಮಾಹಿತಿ ಲಿಂಕ್‌ಗಳು ತೆರೆದುಕೊಳ್ಳುತ್ತವೆ. ಆದರೆ ಇದಕ್ಕಿಂತ ಹೆಚ್ಚಿನದಾಗಿ ಗೂಗಲ್‌ ಬಳಕೆದಾರರು ಉತ್ತರ ನಿರೀಕ್ಷಿಸುತ್ತಾರೆ. ಕಾರಣ ಗೂಗಲ್ ಹಲವು ಮಾಹಿತಿ ಲಿಂಕ್‌ಗಳನ್ನು ನೀಡುತ್ತದೆ. ನಿಖರ ಮಾಹಿತಿ ಪಡೆಯುವುದು ಈ ಕಾರಣದಿಂದ ಸ್ವಲ್ಪ ಕಷ್ಟವೇ.

ವಾಟ್ಸಾಪ್ ಬಳಕೆದಾರರು ತಪ್ಪದೇ ಓದಿಕೊಳ್ಳಬೇಕಾದ 5 ವಂಚನೆಗಳು

ಅಂದಹಾಗೆ ಇಂದಿನ ಲೇಖನದಲ್ಲಿ ಗೂಗಲ್‌ನಲ್ಲಿ(Google) ನಿಖರ ಮಾಹಿತಿಯನ್ನು ಪಡೆಯಲು ಕೆಲವು ಪರಿಣಾಮಕಾರಿ ತಂತ್ರಗಳನ್ನು ತಿಳಿಸುತ್ತಿದ್ದೇವೆ. ಮಾಹಿತಿಗಾಗಿ ಲೇಖನ ಓದಿರಿ.

ಕೀವರ್ಡ್‌ ಸಮನಾರ್ಥಕ ಪದಗಳನ್ನು ಬಳಸಿ

ಕೀವರ್ಡ್‌ ಸಮನಾರ್ಥಕ ಪದಗಳನ್ನು ಬಳಸಿ

ಮಾಹಿತಿ ಸರ್ಚ್‌ ಮಾಡುವಾಗ ಕೀವರ್ಡ್‌ಗೆ ಸಂಬಂಧಿಸಿದ ಸಮನಾರ್ಥಕ ಪದಗಳನ್ನು ಟೈಪಿಸಿ ಸರ್ಚ್‌ ಮಾಡಿ. ಗೂಗಲ್ ಸರ್ಚ್‌ ಬಾರ್‌ನಲ್ಲಿ ಕೀವರ್ಡ್‌ ಟೈಪಿಸಿದ ನಂತರ "~" ಸಿಂಬಲ್ ಎಂಟರ್‌ ಮಾಡಿ ನಂತರ ಸಮನಾರ್ಥಕ ಪದಗಳನ್ನು ಟೈಪಿಸಿ.
ಉದಾಹರಣೆಗೆ: Healthy~Food ಎಂದು ಟೈಪಿಸಿದರೆ ಉತ್ತಮ ರಿಸಲ್ಟ್ ಪಡೆಯಬಹುದು.

ನಕ್ಷತ್ರ ಚಿಹ್ನೆ ಬಳಸಿ

ನಕ್ಷತ್ರ ಚಿಹ್ನೆ ಬಳಸಿ

ಒಂದು ವೇಳೆ ಸಮನಾರ್ಥಕ ಪದ ನೆನಪಿಗೆ ಬರದಲ್ಲಿ, "*" ಸಿಂಬಲ್‌ ಬಳಸಿ. ನೆನಪಿಗೆ ಬರದ ಪದದ ಬದಲು ನಕ್ಷತ್ರ ಚಿಹ್ನೆ ಬಳಸಿ ಎಂಟರ್ ಮಾಡಿ, ನಂತರ ಗೂಗಲ್‌ ಸಂಬಂಧಿಸಿದ ಮಾಹಿತಿ ಪ್ರದರ್ಶಿಸುತ್ತದೆ.

This ಅಥವಾ That ಬಳಸಿ

This ಅಥವಾ That ಬಳಸಿ

ಕೆಲವೊಮ್ಮೆ ನಿಖರ ಕೀವರ್ಡ್‌ಗಳನ್ನೇ ಟೈಪಿಸಲು ಮರೆಯಬಹುದು. ಅಂತಹ ಸಮಯದಲ್ಲಿ ಎರಡು ಪದಗಳನ್ನು ಟೈಪಿಸಿ ಅವುಗಳ ನಡುವೆ or ಎಂದು ಬಳಸಿ. ಗೂಗಲ್ ನಂತರದಲ್ಲಿ ನಿಖರ ಮಾಹಿತಿ ನೀಡುತ್ತದೆ.

ಟೈಟಲ್ ಅಥವಾ ಯುಆರ್‌ಎಲ್‌ಗೆ ಸರ್ಚ್‌ ಮಾಡುತ್ತಿದ್ದಲ್ಲಿ..

ಟೈಟಲ್ ಅಥವಾ ಯುಆರ್‌ಎಲ್‌ಗೆ ಸರ್ಚ್‌ ಮಾಡುತ್ತಿದ್ದಲ್ಲಿ..

ಕೆಲವೊಮ್ಮೆ ಕೀವರ್ಡ್‌ ಮತ್ತು ಲೇಖನಗಳನ್ನು ಗೂಗಲ್‌ ಸರ್ಚ್‌ನಲ್ಲಿ ಹುಡುಕಲು ಪ್ರಯತ್ನಿಸಬಹುದು. ಇಂತಹ ಸಮಯದಲ್ಲಿ ನಿಖರ ಮಾಹಿತಿ ಅಥವಾ ಲೇಖನ ಹುಡುಕಲು ಕೀವರ್ಡ್‌ ಹಿಂದೆ "intitle:" ಎಂದು ಟೈಪಿಸಿ ನಂತರ ಎಂಟರ್ ಮಾಡಿ. ಯುಆರ್‌ಎಲ್‌ನಲ್ಲಿ ಕೀವರ್ಡ್‌ ಹುಡುಕುತ್ತಿದ್ದಲ್ಲಿ, "inurl:" ಎಂದು ಟೈಪಿಸಿ ಎಂಟರ್ ಮಾಡಿ.

ಟೈಪ್ ಫ್ರೇಮ್ ಬಳಸಿ

ಟೈಪ್ ಫ್ರೇಮ್ ಬಳಸಿ

ಕೆಲವು ಘಟನೆಗಳು ನಡೆದಿದ್ದು ಯಾವಾಗ ಎಂಬುದನ್ನು ಕೆಲವು ವೇಳೆ ಮರೆಯಬಹುದು. ಇಂತಹ ಮಾಹಿತಿಗಾಗಿ, ಸರ್ಚ್‌ನಲ್ಲಿ ಸುಲಭವಾಗಿ ಟೈಪ್‌ ಫ್ರೇಮ್ ಅನ್ನು ಮೂರು ಡಾಟಾಗಳ ಮೂಲಕ "1900...2000" ಎಂದು ಟೈಪಿಸಿ ಎಂಟರ್‌ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here are 5 Tricks To Get Better Google Search Results. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X