ಏರ್‌ಟೆಲ್‌ನಲ್ಲಿ 33 ರೂಗೆ 1 ತಿಂಗಳು ಡಾಟಾ ಪಡೆಯುವುದು ಹೇಗೆ?

By Suneel
|

ರಿಲಾಯನ್ಸ್ ಜಿಯೋ 4G ಅನ್‌ಲಿಮಿಟೆಡ್‌ ಇಂಟರ್ನೆಟ್‌ ಆಫರ್ ನೀಡಿದ ಮೇಲೆ, ಇತರೆ ಟೆಲಿಕಾಂ ದೈತ್ಯಗಳು ಸಹ ಜಿಯೋ ಮಾರ್ಗದ ರೇಸ್‌ಗೆ ಇಳಿದಿವೆ. ಪ್ರಸ್ತುತದಲ್ಲಿ ಜಿಯೋಗೆ ದೊಡ್ಡ ಸ್ಪರ್ಧಿ ಎಂದರೆ ಭಾರತಿ ಏರ್‌ಟೆಲ್‌.

ರಿಲಾಯನ್ಸ್ ಜಿಯೋ ಅತ್ಯಾಕರ್ಷಕ ಅನ್‌ಲಿಮಿಟೆಡ್‌ ಡಾಟಾ ಆಫರ್‌ ಅನ್ನು ವರ್ಲ್ಡ್‌ವೈಡ್‌ ನೀಡಿದ ಮೇಲೆ, ಇತರೆ ಟೆಲಿಕಾಂಗಳು ಸಹ ತನ್ನ ಬಳಕೆದಾರರಿಗೆ ಹಲವು ರೀತಿಯ ಡಾಟಾ, ಟ್ಯಾರಿಫ್ ಆಫರ್‌ಗಳನ್ನು ನೀಡುತ್ತಿವೆ. ಅಂದಹಾಗೆ ಭಾರತಿ ಏರ್‌ಟೆಲ್‌(Airtel) ಈಗಾಗಲೇ ರೂ.29 ಕ್ಕೆ ಆರಂಭಿಕ ಹಂತದ ಡಾಟಾ ಆಫರ್‌ ಅನ್ನು ತಿಂಗಳ ಪೂರ್ಣ ನೀಡಿದೆ. ಏರ್‌ಟೆಲ್ ಕೇವಲ ಈ ಒಂದು ಸೇವೆ ಮಾತ್ರವಲ್ಲದೇ, ಹಲವು ಹೊಸ ಆಕರ್ಷಕ ಟ್ಯಾರಿಫ್‌ ಪ್ಲಾನ್‌ಗಳನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ. ರೂ.33 ರ ಪ್ಲಾನ್‌ನಿಂದ ಬಳಕೆದಾರರು 85MB ಡಾಟಾವನ್ನು ತಿಂಗಳ ಪೂರ್ಣ ಬಳಸಬಹುದಾಗಿದೆ.

ರಿಲಾಯನ್ಸ್ ಜಿಯೋಗೆ ಮೊಬೈಲ್‌ ನಂಬರ್‌ ಪೋರ್ಟ್‌ ಮಾಡುವುದು ಹೇಗೆ?

ಏರ್‌ಟೆಲ್ ಬಳಕೆದಾರರಿಗೆ

ಏರ್‌ಟೆಲ್ ಬಳಕೆದಾರರಿಗೆ

ನೀವು ಏರ್‌ಟೆಲ್‌ ಬಳಕೆದಾರರೇ ಆಗಿದ್ದಲ್ಲಿ, ಈಗಾಗಲೇ ರೂ.33 ಕ್ಕೆ ಪೂರ್ಣ ತಿಂಗಳು 2G/3G/4G ಇಂಟರ್ನೆಟ್ ಪಡೆಯುವ ಮೆಸೇಜ್‌ ಅನ್ನು ಸ್ವೀಕರಿಸಿರುತ್ತೀರಿ. ಹೌದು. ಇತ್ತೀಚೆಗೆ ಏರ್‌ಟೆಲ್‌ ಈ ಪ್ಲಾನ್‌ ಅನ್ನು ಆರಂಭಿಸಿದೆ.

ರೂ.33 ರ ಪ್ಲಾನ್‌ನಿಂದ ಬಳಕೆದಾರರು 85MB ಡಾಟಾವನ್ನು ತಿಂಗಳ ಪೂರ್ಣ ಬಳಸಬಹುದಾಗಿದೆ.

ರೂ.33/ ತಿಂಗಳ ಡಾಟಾ ಪ್ಲಾನ್ ಬಗ್ಗೆ

ರೂ.33/ ತಿಂಗಳ ಡಾಟಾ ಪ್ಲಾನ್ ಬಗ್ಗೆ

ಏರ್‌ಟೆಲ್‌ ಇತ್ತೀಚೆಗಷ್ಟೆ ರೂ.29/ಒಂದು ತಿಂಗಳ ಡಾಟಾ ಪ್ಲಾನ್‌ ಅನ್ನು 3G/4G ಬಳಕೆದಾರರಿಗೆ ತಂದಿತ್ತು. ಈಗ ಮೊತ್ತೊಂದು ಹೆಜ್ಜೆ ಮುಂದೆ ಹೋಗಿ ಏರ್‌ಟೆಲ್‌ ತನ್ನ ಗ್ರಾಹಕರಿಗೆ ರೂ.33 ರ ಪ್ಲಾನ್‌ ಅನ್ನು ತಂದಿದ್ದು, ಇಂದು ಪೂರ್ಣ ತಿಂಗಳು ಡಾಟಾ ಆಕ್ಸೆಸ್‌ ಪಡೆಯಲು ಸಹಾಯಕವಾಗಿದೆ.

ರೂ.33 ಡಾಟಾ ಪ್ಲಾನ್‌ ಪಡೆಯುವುದು ಹೇಗೆ?

ರೂ.33 ಡಾಟಾ ಪ್ಲಾನ್‌ ಪಡೆಯುವುದು ಹೇಗೆ?

ಎಲ್ಲಾ ಟೆಲಿಕಾಂಗಳು ಸಹ ಇಂದು ಟ್ಯಾರಿಫ್ ಯುದ್ಧದಲ್ಲಿ ತೊಡಗಿವೆ. ಆದ್ದರಿಂದ ಏರ್‌ಟೆಲ್‌ ಈಗ ರೂ.29 ಕ್ಕೆ ಹೋಲಿಕೆಯಾಗುವ ಇತರೆ ಪ್ಲಾನ್‌ ಅನ್ನು ಹೊರತಂದಿದೆ.

ಈ ಕೆಳಗಿನ ಎರಡು ಹಂತಗಳನ್ನು ಪಾಲಿಸಿ ರೂ.33 ರ ಡಾಟಾ ಪ್ಲಾನ್‌ ಅನ್ನು ನಿಮ್ಮ ಏರ್‌ಟೆಲ್‌ ನಂಬರ್‌ಗೆ ಪಡೆಯಿರಿ.

ಡಯಲ್‌ ಮಾಡಿ,

ಡಯಲ್‌ ಮಾಡಿ,

ನೀವು ಏರ್‌ಟೆಲ್‌ ಬಳಕೆದಾರರಾಗಿದ್ದಲ್ಲಿ, *567*33# ಡಯಲ್‌ ಮಾಡಿ. ನಂತರ ಪ್ರದರ್ಶನವಾದ ಲೀಸ್ಟ್‌ನಲ್ಲಿ Rs. 33/month Data Plan ಕ್ಲಿಕ್ ಮಾಡಿ ಆಯ್ಕೆ ಮಾಡಿ.

ರೀಚಾರ್ಜ್‌ ಯಶಸ್ವಿ ಮೆಸೇಜ್‌

ರೀಚಾರ್ಜ್‌ ಯಶಸ್ವಿ ಮೆಸೇಜ್‌

ಮೇಲಿನ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ, 'Recharge successful' ಎಂಬ ಮೆಸೇಜ್‌ ಅನ್ನು ಏರ್‌ಟೆಲ್ ಬಳಕೆದಾರರು ಪಡೆಯುತ್ತೀರಿ. ನಂತರ ಡಾಟಾ ಟಾಗಲ್‌ ಅನ್ನು ಕ್ಲಿಕ್ ಮಾಡಿ, ಬ್ರೌಸಿಂಗ್‌ ಎಂಜಾಯ್‌ ಮಾಡಬಹುದು. ಕೇವಲ ರೂ. 33 ಕ್ಕೆ.

Best Mobiles in India

English summary
Here's How to Get Data for One Month at Just Rs. 33 from Airtel. To know more about this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X