Just In
Don't Miss
- Education
International Labour Day 2021: ಮೇ 1ರಂದು ಕಾರ್ಮಿಕರ ದಿನವನ್ನಾಗಿ ಏಕೆ ಆಚರಿಸಲಾಗುತ್ತೆ ?
- News
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಕೊರೊನಾ ಸೋಂಕಿತೆ ಸಾವು
- Sports
ಐಪಿಎಲ್ 2021: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್
- Movies
ಸಿನಿಮಾಕ್ಕಾಗಿ ಪ್ರಭಾಸ್-ಸೈಪ್ ಅಲಿ ಖಾನ್ ತೆಗೆದುಕೊಳ್ಳುತ್ತಿದ್ದಾರೆ ದೊಡ್ಡ ರಿಸ್ಕ್
- Finance
ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್ನ ಏಪ್ರಿಲ್ 19ರ ಮಾರುಕಟ್ಟೆ ದರ ಇಲ್ಲಿದೆ
- Automobiles
ಪವರ್ಫುಲ್ ಎಂಜಿನ್ ಹೊಂದಿರುವ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್ಯುವಿ ಕಾರಿನ ವಿಡಿಯೋ
- Lifestyle
ಪ್ರತಿದಿನ ಒಂದು ಕಪ್ ಅನಾನಸ್ ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳಿವು
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆನ್‌ಲೈನ್‌ನಲ್ಲಿ ಎಲ್‌ಪಿಜಿ ಸಬ್ಸಿಡಿ ಸ್ಟೇಟಸ್ ನೋಡೋದು ಹೇಗೆ..?
ಭಾರತದಲ್ಲಿ ಪ್ರತಿ ಮನೆಗೂ ಸಬ್ಸಿಡಿ ದರದಲ್ಲಿ ವರ್ಷಕ್ಕೆ ಗರಿಷ್ಠ 12 ಎಲ್‌ಪಿಜಿ ಸಿಲಿಂಡರ್‌ಗಳ ಖರೀದಿಗೆ ಅವಕಾಶವಿದೆ. ಈಗಿದ್ದರೂ, ಸಿಲಿಂಡರ್‌ಗಳನ್ನು ಖರೀದಿಸುವ ಸಮಯದಲ್ಲಿ ನೀವು ಪೂರ್ಣ ಬೆಲೆಯನ್ನು ನೀಡಬೇಕಾಗಿದ್ದು, ಬಳಿಕ ಸಬ್ಸಿಡಿ ಹಣ ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತದೆ. ಕೇಂದ್ರ ಸರ್ಕಾರ 2015ರಲ್ಲಿ ಪರಿಚಯಿಸಿದ ಪಹಲ್ ಯೋಜನೆಯಡಿ ಬ್ಯಾಂಕ್ ಖಾತೆಗೆ ನೇರವಾಗಿ ಸಬ್ಸಿಡಿ ಜಮೆ ಮಾಡಲಾಗುತ್ತಿದೆ.
ಇತರ ಅಂಶಗಳ ನಡುವೆ ಅಂತರಾಷ್ಟ್ರೀಯ ತೈಲ ಬೆಲೆಗಳ ಆಧಾರದ ಮೇಲೆ ಪ್ರತಿ ತಿಂಗಳಿಗೊಮ್ಮೆ ಎಲ್‌ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆಯಾಗುತ್ತದೆ. ಆದಾಗ್ಯೂ, ಕಳೆದ ಎರಡು ತಿಂಗಳಲ್ಲಿ ಅನೇಕ ಗ್ರಾಹಕರು ತಮ್ಮ ಸಬ್ಸಿಡಿಯನ್ನು ಸ್ವೀಕರಿಸಿರುವುದಿಲ್ಲ. ಗ್ಯಾಸ್ ರಿಫಿಲ್‌ಗಾಗಿ ಬುಕ್ ಮಾಡಿದ ಬಳಿಕ ಸಬ್ಸಿಡಿ ಹಣವನ್ನು ನಿಮಗೆ ವರ್ಗಾಯಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬಹುದು.
ಐಒಸಿಎಲ್, ಎಚ್‌ಪಿ ಮತ್ತು ಬಿಪಿಸಿಎಲ್ ಎಂಬ ಮೂರು ಸರ್ಕಾರಿ ಸ್ವಾಮ್ಯದ ಕಂಪನಿಗಳ ಏಕೀಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಸಬ್ಸಿಡಿ ಸ್ಟೇಟಸ್‌ನ್ನು ಪರಿಶೀಲಿಸಬಹುದು. ಆನ್‌ಲೈನ್‌ನಲ್ಲಿ ಎಲ್‌ಪಿಜಿ ಸಬ್ಸಿಡಿ ಸ್ಟೇಟಸ್ ಹೇಗೆ ಪರಿಶೀಲಿಸುವುದು ಎಂಬುದರ ಕುರಿತು ಹಂತ-ಹಂತದ ಮಾಹಿತಿ ಇಲ್ಲಿದೆ.
1. ಮೊದಲು ಕಂಪನಿಯ ವೆಬ್‌ಸೈಟ್ http://mylpg.in/ ಗೆ ಭೇಟಿ ನೀಡಿ.
2. ಬಳಿಕ ನಿಗದಿತ ಜಾಗದಲ್ಲಿ ನಿಮ್ಮ ಎಲ್‌ಪಿಜಿ ಐಡಿಯನ್ನು ನಮೂದಿಸಿ.
ನಿಮಗೆ ಎಲ್‌ಪಿಜಿ ಐಡಿ ಗೊತ್ತಿಲ್ಲ ಎಂದರೆ..?
1. ವೆಬ್‌ಸೈಟ್‌ನಲ್ಲಿ ಕಾಣುವ ನಿಮ್ಮ ಎಲ್‌ಪಿಜಿ ಐಡಿಯನ್ನು ತಿಳಿದುಕೊಳ್ಳುವ ಆಯ್ಕೆಯನ್ನು ಕ್ಲಿಕ್ ಮಾಡಿ.
2. ಅದಾದ ಬಳಿಕ ಸ್ಕ್ರೀನ್ ಮೇಲೆ ನಿಮಗೆ ಒಂದು ಪಾಪ್‌ಅಪ್ ಕಾಣುತ್ತದೆ. ಅಲ್ಲಿ ನೀವು ನಿಮ್ಮ ಗ್ಯಾಸ್ ವಿತರಕ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಭಾರತ್ ಗ್ಯಾಸ್/ಎಚ್‌ಪಿ ಗ್ಯಾಸ್/ಇಂಡೇನ್‌ನಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು.
3. ನಂತರ ಲ್ಯಾಂಡಿಂಗ್ ಪೇಜ್‌ನಲ್ಲಿ ಗ್ರಾಹಕರ ವಿವರಗಳನ್ನು ನಮೂದಿಸಲು ವೆಬ್‌ಸೈಟ್ ಕೇಳುತ್ತದೆ. ಅಲ್ಲಿ ಕ್ವಿಕ್ ಸರ್ಚ್ ಮತ್ತು ನಾರ್ಮಲ್ ಸರ್ಚ್ ಎಂಬ ಎರಡು ಆಯ್ಕೆಗಳು ಇವೆ. ಅಲ್ಲಿ ನೀವು ಗ್ರಾಹಕರ ಐಡಿ, ವಿತರಕರ ಹೆಸರು ಕಾಣಸಿಗುತ್ತದೆ.
4. ಬಳಿಕ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮುಂದುವರೆಯಿರಿ ಆಯ್ಕೆಯನ್ನು ಕ್ಲಿಕ್ ಮಾಡಿ.
5. ಆಗ ನಿಮ್ಮ ಎಲ್‌ಪಿಜಿ ಐಡಿ ವೆಬ್‌ಪುಟದ ಕೊನೆಯಲ್ಲಿ ಕಾಣಸಿಗುತ್ತದೆ. ಅದನ್ನು ಬರೆದಿಟ್ಟುಕೊಳ್ಳಿ, ಏಕೆಂದರೆ, ಅದನ್ನು ಕಾಪಿ, ಪೇಸ್ಟ್ ಮಾಡುವ ಆಯ್ಕೆ ವೆಬ್‌ಸೈಟ್ ನೀಡಿಲ್ಲ.
ನೀವು ಮೊದಲ ಬಾರಿಗೆ mylpg.in ವೆಬ್‌ಸೈಟ್‌ಗೆ ಭೇಟಿ ನೀಡುತ್ತಿದ್ದರೆ..!
1. Mylpg.in ವೆಬ್‌ಸೈಟ್‌ನಲ್ಲಿ ಹೊಸ ಬಳಕೆದಾರರು ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ 17 ಅಂಕಿಯ ಎಲ್‌ಪಿಜಿ ಐಡಿ ಹುಡುಕಿ ಎಂಬ ಆಯ್ಕೆ ಮೇಲೆ ನಿಮಗೆ ಈ ಆಯ್ಕೆ ಕಾಣಸಿಗುತ್ತದೆ.
2. 17 ಅಂಕಿಯ ಎಲ್‌ಪಿಜಿ ಐಡಿಯನ್ನು ನಮೂದಿಸಿದ ಬಳಿಕ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಕೂಡ ನಮೂದಿಸಿ. ಬಳಿಕ ಕ್ಯಾಪ್ಚಾ ಕೋಡ್ ಹಾಕಿ ಮುಂದುವರೆಯಿರಿ ಆಯ್ಕೆ ಕ್ಲಿಕ್ ಮಾಡಿ.
3. ಪ್ರೋಷಿಡ್ ಆಯ್ಕೆ ಕ್ಲಿಕ್ ಮಾಡಿದ ಬಳಿಕ ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ ಬರುತ್ತದೆ. ಅಲ್ಲಿ ಒಟಿಪಿಯನ್ನು ನಮೂದಿಸಿ.
4. ನಿಮ್ಮ ಇಮೇಲ್ ಐಡಿ ನಮೂದಿಸಿ, ನಿಮ್ಮ ಹೊಸ ಅಕೌಂಟ್‌ಗೆ ಪಾಸ್‌ವರ್ಡ್ ಅನ್ನು ಸೆಟ್ ಮಾಡಿ.
5. ನಿಮ್ಮ ಇಮೇಲ್‌ಗೆ ಸಕ್ರಿಯಗೊಳಿಸುವ ಲಿಂಕ್ ಬರುತ್ತದೆ. ಇನ್‌ಬಾಕ್ಸ್‌ಗೆ ಬಂದಿರುವ ಲಿಂಕ್ ಕ್ಲಿಕ್ ಮಾಡಿ.
6. ಅದು ನಿಮ್ಮನ್ನು ಎಲ್‌ಪಿಜಿ ಕಂಪನಿಯ ವೆಬ್‌ಸೈಟ್‌ಗೆ ಕರೆದುಕೊಂಡು ಹೋಗುತ್ತದೆ. ಹಾಗೂ ನಿಮ್ಮ ಅಕೌಂಟ್ ಯಶಸ್ವಿಯಾಗಿ ಸಕ್ರಿಯವಾಗಿರುತ್ತದೆ. ಅದಾದ ಬಳಿಕ ಲಾಗಿನ್ ಆಗಿದೆ.
ಸಬ್ಸಿಡಿ ಸ್ಟೇಟಸ್ ನೋಡುವುದು ಹೇಗೆ..?
1. ನಿಮ್ಮ mylpg.in ಅಕೌಂಟ್‌ಗೆ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ಮೂಲಕ ಲಾಗಿನ್ ಆಗಿ. ಜೊತೆಗೆ ಅಲ್ಲಿ ನೀಡಿರುವ ಕ್ಯಾಪ್ಚ್ಯಾ ಕೋಡ್‌ನ್ನು ನಮೂದಿಸುವುದನ್ನು ಮರೆಯಬೇಡಿ.
2. ಅದಾದ ಬಳಿಕ ಸ್ಕ್ರೀನ್ ಮೇಲೆ ಪಾಪ್-ಅಪ್ ಕಾಣಸಿಗುತ್ತದೆ. ಅಲ್ಲಿ ನಿಮ್ಮ ಖಾತೆಯ ವಿವರಗಳನ್ನು ಪ್ರದರ್ಶಿಸಬೇಕು, ನಿಮ್ಮ ಬ್ಯಾಂಕ್ ಖಾತೆ ಮತ್ತು ಆಧಾರ್ ನಿಮ್ಮ ಎಲ್‌ಪಿಜಿ ಖಾತೆಗೆ ಲಿಂಕ್ ಆಗಿದೆಯೇ ಎಂಬುದನ್ನು ನಮೂದಿಸಬೇಕು. ನೀವು ಸಬ್ಸಿಡಿಯಿಂದ ಹೊರಗುಳಿದಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಸಹ ಇಲ್ಲಿ ನಮೂದಿಸಬೇಕು.
3. ವೆಬ್‌ಪುಟದ ಎಡಭಾಗದಲ್ಲಿ "ಸಿಲಿಂಡರ್ ಬುಕಿಂಗ್ ಇತಿಹಾಸ ವೀಕ್ಷಿಸಿ / ಸಬ್ಸಿಡಿ ವರ್ಗಾಯಿಸಲಾಗಿದೆ" ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ಇದು ಎಚ್‌ಪಿ ಗ್ಯಾಸ್ ಗ್ರಾಹಕರಿಗೆ ಮಾತ್ರ ಎಂಬುದನ್ನು ಗಮನಿಸಿ, ನೀವು ಇಂಡೇನ್ ಅಥವಾ ಭಾರತ್ ಗ್ಯಾಸ್ ಗ್ರಾಹಕರಾಗಿದ್ದರೆ. ಆ ಆಯ್ಕೆ ಬೇರೆ ಕಡೆ ಕಾಣಬಹುದು.
4. ಅದಾದ ಬಳಿಕ ಸಬ್ಸಿಡಿ ಮೊತ್ತ ಹಾಗೂ ಹಣ ವರ್ಗಾವಣೆ ಸ್ಟೇಟಸ್‌ನ್ನು ನೋಡಬಹುದು.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999