ಆಪಲ್‌ ಏರ್‌ಪಾಡ್ಸ್‌ ಅನ್ನು ಆಂಡ್ರಾಯ್ಡ್‌ ಫೋನ್‌ಗೆ ಕನೆಕ್ಟ್‌ ಮಾಡೋದು ಹೇಗೆ?

|

ಸಾಮಾನ್ಯವಾಗಿ ಆಪಲ್‌ ಕಂಪೆನಿಯ ಪ್ರಾಡಕ್ಟ್‌ಗಳು ಐಒಎಸ್‌ ಡಿವೈಸ್‌ಗಳಿಗೆ ಮಾತ್ರ ಕನೆಕ್ಟ್‌ ಆಗಲಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಆಪಲ್‌ ಕಂಪೆನಿ ತನ್ನ ಕೆಲವು ಡಿವೈಸ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ್ದು, ಇವುಗಳನ್ನು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಯಾವುದೇ ಬ್ಲೂಟೂತ್‌ ಡಿವೈಸ್‌ಗೆ ಕನೆಕ್ಟ್‌ ಮಾಡುವ ಅವಕಾಶ ನೀಡಿದೆ. ಇದರಲ್ಲಿ ಆಫಲ್‌ ಏರ್‌ಪಾಡ್ಸ್‌ ಕೂಡ ಒಂದಾಗಿದೆ. ಆಫಲ್‌ ಏರ್‌ಪಾಡ್ಸ್‌ ಅನ್ನು ನೀವು ಆಂಡ್ರಾಯ್ಡ್‌ ಡಿವೈಸ್‌ಗಳಿಗೆ ಕನೆಕ್ಟ್‌ ಮಾಡಬಹುದಾಗಿದೆ.

ಆಪಲ್‌

ಹೌದು, ಆಪಲ್‌ ಏರ್‌ಪಾಡ್ಸ್‌ ಅನ್ನು ಆಂಡ್ರಯ್ಡ್‌ ಡಿವೈಸ್‌ಗಳಿಗೆ ಕೂಡ ಕನೆಕ್ಟ್‌ ಮಾಡಬಹುದಾಗಿದೆ. ಯಾವುದೇ ಬ್ಲೂಟೂತ್‌ ಡಿವೈಸ್‌ ಇಲ್ಲವೇ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗೆ ಆಪಲ್‌ ಏರ್‌ಪಾಡ್ಸ್‌ ಕನೆಕ್ಟ್‌ ಆಗಲಿದೆ. ಇದಕ್ಕಾಗಿ ನೀವು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ಆಪಲ್‌ ಏರ್‌ಪಾಡ್ಸ್‌ ಅನ್ನು ಆಂಡ್ರಾಯ್ಡ್‌ ಡಿವೈಸ್‌ಗಳಿಗೆ ಕನೆಕ್ಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್‌ ಏರ್‌ಪಾಡ್ಸ್‌ ಅನ್ನು ಆಂಡ್ರಾಯ್ಡ್‌ ಡಿವೈಸ್‌ಗೆ ಕನೆಕ್ಟ್‌ ಮಾಡಲು ಹೀಗೆ ಮಾಡಿ?

ಆಪಲ್‌ ಏರ್‌ಪಾಡ್ಸ್‌ ಅನ್ನು ಆಂಡ್ರಾಯ್ಡ್‌ ಡಿವೈಸ್‌ಗೆ ಕನೆಕ್ಟ್‌ ಮಾಡಲು ಹೀಗೆ ಮಾಡಿ?

ಹಂತ:1 ಮೊದಲಿಗೆ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಬ್ಲೂಟೂರ್‌ ಸೆಟ್ಟಿಂಗ್ಸ್‌ ಆಯ್ಕೆಯನ್ನು ತೆರೆಯಿರಿ
ಹಂತ:2 ಬ್ಲೂಟೂತ್ ಆಕ್ಟಿವೇಟ್‌ ಮಾಡಿ ಮತ್ತು 'ಪೇರ್‌ ಎ ನ್ಯೂ ಡಿವೈಸ್‌ ' ಆಯ್ಕೆಮಾಡಿ.
ಹಂತ:3 ಇದೀಗ ಏರ್‌ಪಾಡ್ಸ್‌ ಕೇಸ್‌ನ ಹಿಂಭಾಗದಲ್ಲಿರುವ ಸೆಟಪ್ ಬಟನ್ ಪ್ರೆಟ್‌ ಮಾಡಿ ಹಿಡಿದುಕೊಳ್ಳಿ.
ಹಂತ:4 ಸ್ಟೇಟಸ್ ಲೈಟ್ ಬಿಳಿಯಾಗಿ ಫ್ಲ್ಯಾಷ್ ಆಗುವವರೆಗೆ ನೀವು ಸುಮಾರು ಐದು ಸೆಕೆಂಡುಗಳ ಕಾಲ ಕಾಯಬೇಕಾಗುತ್ತದೆ.
ಹಂತ:5 ಇದೀಗ ಬ್ಲೂಟೂತ್‌ ಪೇರಿಂಗ್‌ನಲ್ಲಿ ಲಬ್ಯವಿರುವ ಡಿವೈಸ್‌ಗಳ ಸಾಲಿನಲ್ಲಿಏರ್‌ಪಾಡ್ಸ್‌ ಹೆಸರು ಕಾಣಲಿದೆ
ಹಂತ:6 ಆ ಹೆಸರಿನ ಮೇಲೆ ಟ್ಯಾಪ್ ಮಾಡಿ ಮತ್ತು ಮೆನುವಿನಿಂದ ಪೇರ್‌ ಆಯ್ಕೆಯನ್ನು ಆರಿಸಿ.

ಹೀಗೆ ಮಾಡುವ ಮೂಲಕ ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಸುಲಭವಾಗಿ ಆಪಲ್‌ ಏರ್‌ಪಾಡ್ಸ್‌ ಅನ್ನು ಕನೆಕ್ಟ್‌ ಮಾಡಬಹುದಾಗಿದೆ.

ಆಪಲ್‌

ಇದರ ನಡುವೆ ಆಪಲ್‌ ಕಂಪೆನಿ ಮುಂದಿನ ವರ್ಷದ ಕೊನೆಯಲ್ಲಿ ಆಪ್‌ ಸ್ಟೋರ್‌ ಜೊತೆಗೆ ಪ್ಲೇ ಸ್ಟೋರ್‌ ಅನ್ನು ಕೂಡ ಬೆಂಬಲಿಸಲಿದೆ ಎನ್ನವ ಮಾತುಗಳಿದೆ. ಇದು ಯುರೋಪಿಯನ್‌ ಯೂನಿಯನ್‌ಗಳಲ್ಲಿ ಜಾರಿಗೆ ಬರುವ ಸಾದ್ಯತೆಯಿದೆ. ಇದು ಆಂಡ್ರಾಯ್ಡ್‌ ಅಪ್ಲಿಕೇಶನ್‌ ಪ್ರಿಯರಿಗೆ ಗುಡ್‌ ನ್ಯೂಸ್‌ ಆಗಬಹುದು. ಆದರೆ ಆಪ್‌ ಸ್ಟೋರ್‌ ಗ್ರಾಹಕರು ಪ್ಲೇ ಸ್ಟೋರ್‌ಗೆ ಬದಲಾಗುವ ಸಾಧ್ಯತೆಯ ಪರಿಣಾಮ ಕೂಡ ಇದೆ. ಇದರಿಂದ ಆಪಲ್‌ಗೆ ತೊಂದರೆಯಾಗುವ ನಿರೀಕ್ಷೆ ಕೂಡ ಇಡಲಾಗಿದೆ.

ಆಪಲ್‌

ಇನ್ನು ಆಪಲ್‌ ಕಂಪೆನಿಯ ಈ ಹೊಸ ಬದಲಾವಣೆಯು ಮುಂದಿನ ದಿನಗಳಲ್ಲಿ ಮೈಕ್ರೋಸಾಫ್ಟ್, ಮೆಟಾ, ಅಮೆಜಾನ್ ಮತ್ತು ಇತರ ಪ್ರತಿಸ್ಪರ್ಧಿಗಳನ್ನು ಹೆಚ್ಚಿಸುವ ಸಾದ್ಯತೆ ಕೂಡ ಇದೆ. ಜೊತೆಗೆ ಆಪಲ್ ಬಳಕೆದಾರರು ಆಪ್‌ ಸ್ಟೋರ್‌ ಬಲಸದೆ ಪ್ಲೇ ಸ್ಟೋರ್‌ ಆಪ್‌ಗಳನ್ನು ಬಳಸುವುದಕ್ಕೆ ಮುಂದಾಗಬಹುದು. ಇದರಿಂದ ಶತಕೋಟಿ ಡಾಲರ್ ಆದಾಯಕ್ಕೆ ಧಕ್ಕೆ ತರುವು ಸಾದ್ಯತೆಯಿದೆ ಎಂದು ಹೇಳಲಾಗಿದೆ. ಆದರೆ ವರದಿಯ ಪ್ರಕಾರ, ಯುರೋಪಿಯನ್ ಒಕ್ಕೂಟದ ಡಿಜಿಟಲ್ ಮಾರ್ಕೆಟಿಂಗ್ ಆಕ್ಟ್ ಅನ್ನು 2024 ರ ಮಧ್ಯದಲ್ಲಿ ಜಾರಿಗೊಳಿಸುವ ನಿರೀಕ್ಷೆಯಿದೆ.

ಬಂದರೆ

ಈ ಆಕ್ಟ್‌ ಜಾರಿಗೆ ಬಂದರೆ ಗ್ರಾಹಕರ ಆಯ್ಕೆಗಳನ್ನು ಹೆಚ್ಚಿಸುವುದಕ್ಕಾಗಿ ತಮ್ಮ ಸಿಸ್ಟಂಗಳನ್ನು ತೆರೆಯಬೇಕಾದ ಅಗತ್ಯವಿದೆ. ಇದರಿಂದ ಎಲ್ಲಾ ರೀತಿಯ ಪ್ಲೇ ಸ್ಟೋರ್‌ಗಳ ಆಯ್ಕೆ ಕೂಡ ಸಿಗಲಿದೆ. ಒಂದು ವೇಳೆ ಗ್ರಾಹಕರ ಅಗತ್ಯಗಳನ್ನು ಈ ಡೇರಿಸುವಲ್ಲಿ ದೊಡ್ಡ ಟೆಕ್‌ ಸಂಸ್ಥೆಗಳು ವಿಫಲವಾದರೆ ದಂಡ ತೆರಬೇಕಾದ ಅನಿವಾರ್ಯತೆ ಎದುರಿಸಬೇಕಾಗುತ್ತದೆ. ಅಂದರೆ 10% ವಾರ್ಷಿಕ ಜಾಗತಿಕ ಆದಾಯದ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಕಾನೂನು ಹೇಳುತ್ತದೆ.

Best Mobiles in India

English summary
Here's How to connect your Apple AirPods to Android phones?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X