ಆಂಡ್ರಾಯ್ಡ್‌ ಫೋನ್‌ನಲ್ಲಿ ಗೂಗಲ್‌ ಪ್ಲೇ ಪಾಸ್‌ ಪಡೆಯುವುದು ಹೇಗೆ?

|

ಗೂಗಲ್‌ ಸಂಸ್ಥೆ ಕೆಲ ದಿನಗಳ ಹಿಂದೆ ಭಾರತದಲ್ಲಿ ಆಂಡ್ರಾಯ್ಡ್‌ ಬಳಕೆದಾರರಿಗೆ ಗೂಗಲ್‌ ಪ್ಲೇ ಪಾಸ್‌ ಸೇವೆಯನ್ನು ಪರಿಚಯಿಸಿದೆ. ಈ ಸೇವೆಯು ಚಂದಾದಾರಿಕೆ ಪ್ಲಾನ್‌ಗಳನ್ನು ಒಳಗೊಂಡಿದ್ದು, ಇದರ ಮೂಲಕ ಜಾಹಿರಾತು ಮುಕ್ತವಾಗಿ ಅಪ್ಲಿಕೇಶನ್‌ಗಳನ್ನು ಪ್ರವೇಶಿಸಲು ಸಾಧ್ಯವಾಗಲಿದೆ. ಅಲ್ಲದೆ ಯಾವುದೇ ಮುಂಗಡ ಪಾವತಿಗಳಿಲ್ಲದೆ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳನ್ನು ಪ್ರವೇಶಿಸಲು ಅನುಮತಿಸುತ್ತದೆ. ಇನ್ನು ಪ್ಲೇ ಪಾಸ್‌ನ ಚಂದಾದಾರಿಕೆ ತಿಂಗಳಿಗೆ ಕೇವಲ 99ರೂ.ಬೆಲೆಯನ್ನು ಹೊಂದಿದೆ.

ಗೂಗಲ್‌

ಹೌದು, ಗೂಗಲ್‌ ಭಾರತದಲ್ಲಿ ಪ್ಲೇ ಪಾಸ್‌ ಸೇವೆಯನ್ನು ಪರಿಚಯಿಸಿದೆ. ಇದರಿಂದ ಬಳಕೆದಾರರು ತಮ್ಮ ಡಿವೈಸ್‌ಗಳಲ್ಲಿ ಇನ್‌ಸ್ಟಾಲ್ ಮಾಡಬಹುದಾದ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳ ಕ್ಯುರೇಟೆಡ್ ಸ್ಟೋರೇಜ್‌ಗೆ ಪ್ರವೇಶ ಮಾಡಬಹುದು. ಇದಲ್ಲದೆ ಈ ಸೇವೆಯ ಚಂದಾದಾರರು ಗೂಗಲ್‌ ಫ್ಯಾಮಿಲಿ ಗ್ರೂಪ್‌ ಹೊಂದಿದ್ದರೆ ತಮ್ಮ ಪ್ಲೇ ಪಾಸ್‌ ಚಂದಾದಾರಿಕೆಯನ್ನು ಇತರ ಐದು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳುವ ಸಾಮರ್ಥ್ಯವನ್ನು ಸಹ ನೀಡಲಾಗಿದೆ. ಹಾಗಾದ್ರೆ ಗೂಗಲ್‌ ಪ್ಲೇ ಪಾಸ್‌ ಅನ್ನು ಪಡೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಭಾರತದಲ್ಲಿ ಗೂಗಲ್‌ ಪ್ಲೇ ಪಾಸ್ ಮೂರು ರೀತಿಯ ಚಂದಾದಾರಿಕೆಯಲ್ಲಿ ಲಭ್ಯವಾಗಲಿದೆ. ಇದರಲ್ಲಿ ಮಾಸಿಕ ಯೋಜನೆ 99ರೂ.ಗಳಿಂದ ಪ್ರಾರಂಭವಾಗಲಿದೆ. ಎರಡನೇ ಚಂದಾದಾರಿಕೆ ಯೋಜನೆ ವಾರ್ಷಿಕ ಯೋಜನೆಯಾಗಿದ್ದು, ಇದು 889ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ 109ರೂ.ಒಂದು ತಿಂಗಳ ಪ್ರಿಪೇಯ್ಡ್‌ ಪ್ಲಾನ್‌ ಕೂಡ ಪರಿಚಯಿಸಿದೆ. ಇದಲ್ಲದೆ ಮಾಸಿಕ ಅಥವಾ ವಾರ್ಷಿಕ ಶುಲ್ಕಕ್ಕೆ ಬದಲಾಗಿ ಗೂಗಲ್‌ ಪ್ಲೆ ಪಾಸ್‌ ಹಲವಾರು ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ಸದ್ಯ ಆಂಡ್ರಾಯ್ಡ್‌ ಫೋನ್‌ನಲ್ಲಿ ಗೂಗಲ್‌ ಪ್ಲೇ ಪಾಸ್‌ ಪಡೆಯುವುದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಆಂಡ್ರಾಯ್ಡ್‌ ಫೋನ್‌ನಲ್ಲಿ ಗೂಗಲ್‌ ಪ್ಲೇ ಪಾಸ್‌ ಪಡೆಯುವುದು ಹೇಗೆ?

ಆಂಡ್ರಾಯ್ಡ್‌ ಫೋನ್‌ನಲ್ಲಿ ಗೂಗಲ್‌ ಪ್ಲೇ ಪಾಸ್‌ ಪಡೆಯುವುದು ಹೇಗೆ?

ಹಂತ:1 ಮೊದಲಿಗೆ ಗೂಗಲ್‌ ಪ್ಲೇ ಸ್ಟೋರ್‌ಗೆ ಹೋಗಿ ಮತ್ತು ಮೇಲಿನ ಬಲ ಮೂಲೆಯಿಂದ ನಿಮ್ಮ ಪ್ರೊಫೈಲ್ ಐಕಾನ್ ಅನ್ನು ಟ್ಯಾಪ್ ಮಾಡಿ.
ಹಂತ:2 ಇದರಲ್ಲಿ ಪ್ಲೇ ಪಾಸ್ ಅನ್ನು ಟ್ಯಾಪ್ ಮಾಡಿ.
ಹಂತ:3 ಪ್ಲೇ ಪಾಸ್ ಸೇವೆಗೆ ಚಂದಾದಾರಿಕೆಯೊಂದಿಗೆ ಮುಂದುವರಿಯಲು ಇಂಟ್ರೂಡಕ್ಷನ್‌ ಸ್ಕ್ರೀನ್‌ನಲ್ಲಿ ಸ್ಟಾರ್ಟ್‌ ಅನ್ನು ಒತ್ತಿರಿ.
ಹಂತ:4 ನೀವು ಆಯ್ಕೆ ಮಾಡುವ ಚಂದಾದಾರಿಕೆಯ ಒಟ್ಟು ಮೊತ್ತವನ್ನು ನೋಡಿ ಮತ್ತು ಸೇವೆಯ ನಿಯಮಗಳನ್ನು ಓದಲು ಕೆಳಗೆ ಸ್ಕ್ರಾಲ್ ಮಾಡಿ.
ಹಂತ:5 ನಂತರ ನಿಮ್ಮ ಖಾತೆಯಲ್ಲಿ ಸೇವೆಯನ್ನು ಸಕ್ರಿಯಗೊಳಿಸಲು ಚಂದಾದಾರರಾಗಿ ಟ್ಯಾಪ್ ಮಾಡಿ.
ಹಂತ:6 ನಿಮ್ಮ ಗೂಗಲ್‌ ಖಾತೆಗಾಗಿ ಪಾಸ್‌ವರ್ಡ್ ಅನ್ನು ನಮೂದಿಸಿ ಮತ್ತು ಮುಂದುವರೆಯಲು ಪರಿಶೀಲಿಸು ಟ್ಯಾಪ್ ಮಾಡಿ.

ಸದ್ಯ ಈ ಸೇವೆಯು ವಿಶೇಷವಾಗಿ ಒಂದು ತಿಂಗಳ ಉಚಿತ ಪ್ರಯೋಗದೊಂದಿಗೆ ಲಭ್ಯವಿದೆ. ಗೂಗಲ್‌ ಪ್ಲೇ ಪಾಸ್‌ಗೆ ಚಂದಾದಾರರಾದ ನಂತರ ನೀವು ಪಡೆಯುವ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳನ್ನು ನೋಡಲು ನೀವು ಇಂಟ್ರೊಡಕ್ಷನ್ ಸ್ಕ್ರೀನ್‌ನಲ್ಲಿ ಸ್ವಲ್ಪ ಕೆಳಗೆ ಸ್ಕ್ರಾಲ್ ಮಾಡಬಹುದು.

ಗೂಗಲ್‌ ಪ್ಲೇ ಪಾಸ್‌ ಅನ್ನು ಬಳಸುವುದು ಹೇಗೆ?

ಗೂಗಲ್‌ ಪ್ಲೇ ಪಾಸ್‌ ಅನ್ನು ಬಳಸುವುದು ಹೇಗೆ?

ಹಂತ:1 ಗೂಗಲ್‌ ಪ್ಲೇಗೆ ಹೋಗಿ ಮತ್ತು ಬಾಟಮ್‌ ಬಾರ್‌ನಲ್ಲಿ ಪ್ಲೇ ಪಾಸ್‌ ಟ್ಯಾಬ್ ಅನ್ನು ಆಯ್ಕೆಮಾಡಿ.
ಹಂತ:2 ಇದರಲ್ಲಿ ನಿಮಗಾಗಿ ರಚಿಸಲಾದ ಕ್ಯಾಪ್ಶನ್‌ಗಳನ್ನು ನೋಡಲು ಕೆಳಗೆ ಸ್ಕ್ರಾಲ್ ಮಾಡಿ.
ಹಂತ:3 ನೀವು ಬಯಸುವ ಯಾವುದೇ ಅಪ್ಲಿಕೇಶನ್‌ಗಳು ಅಥವಾ ಗೇಮ್‌ಗಳ ಮೇಲೆ ಟ್ಯಾಪ್ ಮಾಡಿ ಮತ್ತು ನಿಮ್ಮ ಡಿವೈಸ್‌ನಲ್ಲಿ ಇನ್‌ಸ್ಟಾಲ್‌ ಮಾಡಿ

ಇನ್ನು ಗೂಗಲ್‌ ಪ್ಲೇ ನಿಮ್ಮ ಚಂದಾದಾರಿಕೆಯೊಂದಿಗೆ ಲಭ್ಯವಿರುವ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳ ಲಿಸ್ಟ್‌ನಲ್ಲಿ ಪ್ಲೇ ಪಾಸ್‌ "ಟಿಕೆಟ್" ಅನ್ನು ತೋರಿಸುತ್ತದೆ. ಪ್ರತಿಯೊಂದು ಅಪ್ಲಿಕೇಶನ್ ಮತ್ತು ಗೇಮ್‌ ಲಿಸ್ಟ್‌ ನೀವು ಪ್ಲೇ ಪಾಸ್‌ ಅನ್ನು ಖರೀದಿಸದಿದ್ದರೆ ನೀವು ಪಾವತಿಸಬೇಕಾದ ನಿಜವಾದ ಬೆಲೆಯನ್ನು ಸಹ ತೋರಿಸಲಿದೆ.

Best Mobiles in India

English summary
Android users in India can subscribe to Google Play Pass by paying Rs. 99 a month or Rs. 889 a year.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X