ಪಬ್ಲಿಕ್‌ ಲಿಂಕ್‌ ಮೂಲಕ ಗೂಗಲ್‌ ಫೋಟೋಸ್‌ ಶೇರ್‌ ಮಾಡುವುದು ಹೇಗೆ?

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಪರಿಚಯಿಸಿರುವ ಜನಪ್ರಿಯ ಸೇವೆಗಳಲ್ಲಿ ಗೂಗಲ್‌ ಫೋಟೋಸ್‌ ಸೇವೆ ಕೂಡ ಒಂದಾಗಿದೆ. ಗೂಗಲ್‌ ಫೋಟೋಸ್‌ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿರುವ ಫೋಟೋ ಮತ್ತು ವೀಡಿಯೊ ಬ್ಯಾಕಪ್ ಸೇವೆಗಳಲ್ಲಿ ಒಂದಾಗಿದೆ. ಇದರಿಂದ ನಿಮ್ಮ ಫೋಟೋಗಳನ್ನು ಗೂಗಲ್‌ ಫೋಟೋಸ್‌ನಲ್ಲಿ ಸೇಫ್‌ ಆಗಿ ಸ್ಟೋರೇಜ್‌ ಮಾಡಬಹುದು. ಮೊಬೈಲ್‌ನಲ್ಲಿ ಸ್ಟೋರೇಜ್‌ ಸ್ಪೇಸ್‌ ಉಳಿಸುವುದಕ್ಕೆ ಗೂಗಲ್‌ ಫೋಟೋಸ್‌ ತುಂಬಾನೆ ಸಹಾಯಕವಾಗಿದೆ.

ಗೂಗಲ್‌ ಫೋಟೋಸ್‌

ಹೌದು, ಗೂಗಲ್‌ ಫೋಟೋಸ್‌ ಪ್ರಮುಖ ಬ್ಯಾಕಪ್‌ ಸೇವೆಗಳಲ್ಲಿ ಒಂದಾಗಿದೆ. ನಿಮ್ಮ ಗೂಗಲ್‌ ಅಕೌಂಟ್‌ಗೆ ಲಾಗ್‌ ಇನ್‌ ಆಗುವ ಮೂಲಕ ಯಾವುದೇ ಡಿವೈಸ್‌ನಲ್ಲಿ ಬೇಕಿದ್ದರೂ ಗೂಗಲ್‌ ಫೋಟೋಸ್‌ನಲ್ಲಿ ಸೇವ್‌ ಮಾಡಲಾದ ಫೋಟೋಸ್‌ ಮತ್ತು ವೀಡಿಯೋಸ್‌ ಗಳನ್ನು ಪ್ರವೇಶಿಸಬಹುದು. ಇದಲ್ಲದೆ, ನೀವು ಇತರ ಗೂಗಲ್‌ ಅಕೌಂಟ್‌ ಬಳಕೆದಾರರೊಂದಿಗೆ ನಿಮ್ಮ ಗೂಗಲ್‌ ಫೋಟೋಸ್‌ನಲ್ಲಿರುವ ಮೀಡಿಯಾ ಫೈಲ್‌ಗಳನ್ನು ಶೇರ್‌ ಮಾಡಬಹುದು. ಅಲ್ಲದೆ ಪಬ್ಲಿಕ್‌ ಲಿಂಕ್ಸ್‌ ಬಳಸುವ ಮೂಲಕ ಗೂಗಲ್‌ ಅಕೌಂಟ್‌ ಹೊಂದಿರದ ಜನರಿಗೂ ಕೂಡ ನಿಮ್ಮ ವೀಡಿಯೊಗಳು ಮತ್ತು ಫೋಟೋಗಳನ್ನು ಶೇರ್‌ ಮಾಡಬಹುದು. ಹಾಗಾದ್ರೆ ಗೂಗಲ್‌ ಫೋಟೋಸ್‌ನಲ್ಲಿನ ಫೋಟೋಗಳನ್ನು ಪಬ್ಲಿಕ್‌ ಲಿಂಕ್‌ ಮೂಲಕ ಶೇರ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿನ ತಿಳಿಸಿಕೊಡ್ತೀವಿ ಓದಿರಿ.

ಪಬ್ಲಿಕ್‌ ಲಿಂಕ್‌ ಮೂಲಕ ಗೂಗಲ್‌ ಫೋಟೋಸ್‌ಗಳನ್ನು ಶೇರ್‌ ಮಾಡುವುದು ಹೇಗೆ?

ಪಬ್ಲಿಕ್‌ ಲಿಂಕ್‌ ಮೂಲಕ ಗೂಗಲ್‌ ಫೋಟೋಸ್‌ಗಳನ್ನು ಶೇರ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಫೋಟೋಸ್‌ ಅಪ್ಲಿಕೇಶನ್ ತೆರೆಯಿರಿ
ಹಂತ:2 ನಂತರ ನೀವು ಹಂಚಿಕೊಳ್ಳಲು ಬಯಸುವ ಫೋಟೋಗಳು ಅಥವಾ ವೀಡಿಯೊಗಳನ್ನು ಆಯ್ಕೆಮಾಡಿ.
ಹಂತ:3 ಇದೀಗ ಶೇರ್‌ ಐಕಾನ್ ಅನ್ನು ಟ್ಯಾಪ್ ಮಾಡಿ
ಹಂತ:4 ನಂತರ ಶೇರ್‌ ಲಿಂಕ್ ಅನ್ನು ಕ್ರಿಯೆಟ್‌ ಮಾಡಿ ಮತ್ತು ಕಾಪಿ ಮಾಡಿ.
ಹಂತ:5 ಇದೀಗ ವಾಟ್ಸಾಪ್‌ ಅಥವಾ ಜಿಮೇಲ್ ನಂತಹ ಅಪ್ಲಿಕೇಶನ್ ಮೂಲಕ ಕಾಪಿ ಮಾಡಿದ ಲಿಂಕ್‌ ಅನ್ನು ಸೆಂಡ್‌ಮಾಡಿ

ಹೀಗೆ ಮಾಡುವ ಮೂಲಕ ನಿಮ್ಮ ಗೂಗಲ್‌ ಫೋಟೋಸ್‌ನಲ್ಲಿರುವ ಫೋಟೋಗಳನ್ನು ಶೇರ್‌ ಮಾಡಬಹುದು.

ಆಲ್ಬಮ್‌ ಮೂಲಕ ಗೂಗಲ್‌ ಫೋಟೋಸ್‌ ಶೇರ್‌ ಮಾಡಲು ಹೀಗೆ ಮಾಡಿ?

ಆಲ್ಬಮ್‌ ಮೂಲಕ ಗೂಗಲ್‌ ಫೋಟೋಸ್‌ ಶೇರ್‌ ಮಾಡಲು ಹೀಗೆ ಮಾಡಿ?

ಗೂಗಲ್‌ ಫೋಟೋಸ್‌ನಲ್ಲಿನ ಫೋಟೋಗಳನ್ನು ಶೇರ್‌ ಆಲ್ಬಮ್ ಮೂಲಕ ಕೂಡ ಶೇರ್‌ ಮಾಡಬಹುದು. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಮೊದಲಿಗೆ ನೀವು ನಿಮ್ಮ ಗೂಗಲ್‌ ಫೋಟೋಸ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ನಂತರ 'ಶೇರ್‌ ಐಕಾನ್' ಮೇಲೆ ಟ್ಯಾಪ್ ಮಾಡಿ ಮತ್ತು 'ಶೇರಿಂಗ್‌ ಆಲ್ಬಮ್ ಕ್ರಿಯೆಟ್‌' ಆಯ್ಕೆಮಾಡಿ.
ಹಂತ:3 ಇದೀಗ ನೀವು ಕ್ರಿಯೆಟ್‌ ಮಾಡಿದ ಆಲ್ಬಮ್ ಗೆ ಕ್ಯಾಪ್ಶನ್‌ ನೀಡಿ ಮತ್ತು ಫೋಟೋಗಳು ಮತ್ತು ವೀಡಿಯೊಗಳನ್ನು ಆಯ್ಕೆಮಾಡಿ.
ಹಂತ:4 ನಂತರ, ಶೇರ್‌ ಮೇಲೆ ಟ್ಯಾಪ್ ಮಾಡಿ ಮತ್ತು ನೀವು ಗೂಗಲ್‌ ಫೋಟೋಸ್‌ಗಳನ್ನು ಶೇರ್‌ ಮಾಡಲು ಬಯಸುವ ಸಂಪರ್ಕಗಳನ್ನು ಆಯ್ಕೆ ಮಾಡಿರಿ.
ಹಂತ:5 ಆಯ್ಕೆಮಾಡಿದ ಸ್ವೀಕೃತದಾರರು ನಂತರ ತಮ್ಮ ಗೂಗಲ್‌ ಫೋಟೋಸ್‌ಗಳ ಅಪ್ಲಿಕೇಶನ್‌ನಲ್ಲಿ ಶೇರಿಂಗ್‌ ಆಲ್ಬಮ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.

ಅಪ್ಲಿಕೇಶನ್‌ನಲ್ಲಿ ಮೆಸೇಜ್‌ ಮೂಲಕ ಗೂಗಲ್‌ ಫೋಟೋಸ್‌ ಶೇರ್‌ ಮಾಡುವುದು ಹೇಗೆ?

ಅಪ್ಲಿಕೇಶನ್‌ನಲ್ಲಿ ಮೆಸೇಜ್‌ ಮೂಲಕ ಗೂಗಲ್‌ ಫೋಟೋಸ್‌ ಶೇರ್‌ ಮಾಡುವುದು ಹೇಗೆ?

ಹಂತ:1 ಗೂಗಲ್‌ ಫೋಟೋಸ್‌ ಅಪ್ಲಿಕೇಶನ್ ತೆರೆಯಿರಿ, ನೀವು ಹಂಚಿಕೊಳ್ಳಲು ಬಯಸುವ ಫೋಟೋ ಮತ್ತು ವೀಡಿಯೊಗಳನ್ನು ಆಯ್ಕೆಮಾಡಿ.
ಹಂತ:2 ಶೇರ್‌ ಬಟನ್ ಮೇಲೆ ಟ್ಯಾಪ್ ಮಾಡಿ ಮತ್ತು ಗೂಗಲ್‌ ಫೋಟೋಸ್‌ನಲ್ಲಿ ಸೆಂಡ್‌ ವಿಭಾಗವನ್ನು ನೋಡಿ.
ಹಂತ:3 ಈಗ, ನೀವು ಫೋಟೋಗಳನ್ನು ಹಂಚಿಕೊಳ್ಳಲು ಮತ್ತು ಕಳುಹಿಸಲು ಬಯಸುವ ಸಂಪರ್ಕಗಳನ್ನು ಆಯ್ಕೆಮಾಡಿ.

ಆಂಡ್ರಾಯ್ಡ್‌ನಲ್ಲಿ ನಿಯರ್‌ ಬೈ ಶೇರ್‌ ಮೂಲಕ ಗೂಗಲ್‌ ಫೋಟೊಸ್‌ ಶೇರ್ ಮಾಡುವುದು ಹೇಗೆ?

ಆಂಡ್ರಾಯ್ಡ್‌ನಲ್ಲಿ ನಿಯರ್‌ ಬೈ ಶೇರ್‌ ಮೂಲಕ ಗೂಗಲ್‌ ಫೋಟೊಸ್‌ ಶೇರ್ ಮಾಡುವುದು ಹೇಗೆ?

ಹಂತ:1 ಗೂಗಲ್‌ ಫೋಟೋಸ್‌ನಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಆಯ್ಕೆಮಾಡಿ.
ಹಂತ:2 ಶೇರ್‌ ಟ್ಯಾಬ್ ಆಯ್ಕೆಮಾಡಿ ಮತ್ತು ನಿಯರ್‌ ಬೈ ಶೇರ್‌ ಆಯ್ಕೆಯನ್ನು ಆರಿಸಿ.
ಹಂತ:3 ಸ್ವೀಕರಿಸುವವರನ್ನು ಆಯ್ಕೆಮಾಡಿ ಮತ್ತು ನಿಯರ್‌ ಬೈ ಶೇರ್‌ ಅನ್ನು ಸಕ್ರಿಯಗೊಳಿಸಲು ಮತ್ತು ವಿನಂತಿಯನ್ನು ಸ್ವೀಕರಿಸಲು ಅವರನ್ನು ಕೇಳಿ.
ಹಂತ:4 ಅವರು ವಿನಂತಿಯನ್ನು ಸ್ವೀಕರಿಸಿದ ನಂತರ ಫೋಟೋಗಳು ಮತ್ತು ವೀಡಿಯೊಗಳು ವರ್ಗಾವಣೆ ಆಗಲಿದೆ.
ಆದರೆ ಫೋಟೋಸ್‌ ಶೇರ್‌ ಮಾಡುವವರು ಮತ್ತು ಫೋಟೋ ರಿಸಿವ್‌ ಮಾಡಿಕೊಳ್ಳುವವರು ಇಬ್ಬರು ಕೂಡ ಒಂದೇ ಕಡೆ ಇದ್ದಾಗ ಮಾತ್ರ ಈ ಮಾದರಿಯನ್ನು ನೀವು ಅನುಸರಿಸಬಹುದಾಗಿದೆ.

Best Mobiles in India

English summary
Here's a handy guide to share your favourite images and videos on Google Photos.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X