ಸ್ನ್ಯಾಪ್‌ಚಾಟ್‌ನಲ್ಲಿ ಯುಟ್ಯೂಬ್‌ ವೀಡಿಯೊಗಳನ್ನು ಶೇರ್‌ ಮಾಡುವುದು ಹೇಗೆ?

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಸಾಲಿನಲ್ಲಿ ಸ್ನ್ಯಾಪ್‌ಚಾಟ್‌ ಅಪ್ಲಿಕೇಶನ್‌ ಕೂಡ ಸೇರಿದೆ. ಆದರೆ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಗಿಂತ ಭಿನ್ನವಾದ ಫೀಚರ್ಸ್‌ಗಳನ್ನು ಸ್ನ್ಯಾಪ್‌ಚಾಟ್‌ ನೀಡುತ್ತಾ ಬಂದಿದೆ. ಇದೇ ಕಾರಣಕ್ಕೆ ಸ್ನ್ಯಾಪ್‌ಚಾಟ್‌ ಅಪ್ಲಿಕೇಶನ್‌ ಬಳಕೆದಾರರ ಗಮನ ಸೆಳೆದಿದೆ. ಸದ್ಯ ಇದೀಗ ಸ್ನ್ಯಾಪ್‌ಚಾಟ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಅಪ್ಡೇಟ್‌ ಮಾಡಿದೆ. ಈ ಅಪ್ಡೇಟ್‌ ಮೂಲಕ ಇತರೆ ಪ್ಲಾಟ್‌ಫಾರ್ಮ್‌ಗಳ ವೀಡಿಯೊಗಳನ್ನು ಸ್ನ್ಯಾಪ್‌ಚಾಟ್‌ನಲ್ಲಿ ಶೇರ್‌ ಮಾಡುವುದಕ್ಕೆ ಅವಕಾಶ ನೀಡಿದೆ.

ಸ್ನ್ಯಾಪ್‌ಚಾಟ್‌

ಹೌದು, ಸ್ನ್ಯಾಪ್‌ಚಾಟ್‌ ತನ್ನ ಹೊಸ ಅಪ್ಡೇಟ್‌ನಲ್ಲಿ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅದರಂತೆ ಇನ್ಮುಂದೆ ಸ್ನ್ಯಾಪ್‌ಚಾಟ್‌ನಲ್ಲಿ ಯುಟ್ಯೂಬ್‌ ವೀಡಿಯೋಗಳನ್ನು ಕೂಡ ಶೇರ್‌ ಮಾಡಬಹುದಾಗಿದೆ. ಎಲ್ಲಾ ಸ್ನ್ಯಾಪ್‌ಚಾಟ್ ಬಳಕೆದಾರರು ತಮ್ಮ ನೆಚ್ಚಿನ ಯುಟ್ಯೂಬ್ ವೀಡಿಯೊಗಳನ್ನು ನೇರವಾಗಿ ಸ್ನ್ಯಾಪ್‌ಚಾಟ್ ಕ್ಯಾಮೆರಾ ಮೂಲಕ ತಮ್ಮ ಸ್ನೇಹಿತರೊಂದಿಗೆ ಶೇರ್‌ ಮಾಡಲು ಸಾಧ್ಯವಾಗುತ್ತದೆ ಎಂದು ಸ್ನ್ಯಾಪ್‌ಚಾಟ್‌ ಕಂಪನಿ ಘೋಷಿಸಿದೆ. ಹಾಗಾದ್ರೆ ಸ್ನ್ಯಾಪ್‌ಚಾಟ್‌ನಲ್ಲಿ ಯುಟ್ಯೂಬ್‌ ವೀಡಿಯೊಗಳನ್ನು ಶೇರ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ನ್ಯಾಪ್‌ಚಾಟ್‌

ಇನ್ಮುಂದೆ ಸ್ನ್ಯಾಪ್‌ಚಾಟ್‌ ಬಳಕೆದಾರರು ತಮ್ಮ ಪೋಸ್ಟ್‌ಗಳಲ್ಲಿ ಯೂಟ್ಯೂಬ್‌ ವೀಡಿಯೊಗಳನ್ನು ಲಿಂಕ್ ಸ್ಟಿಕ್ಕರ್‌ಗಳ ರೂಪದಲ್ಲಿ ಶೇರ್‌ ಮಾಡಬಹುದಾಗಿದೆ. ನೀವು ಸ್ನ್ಯಾಪ್‌ಚಾಟ್‌ನಲ್ಲಿ ಶೇರ್‌ ಮಾಡಿದ ಲಿಂಕ್‌ ಸ್ಟಿಕ್ಕರ್ ಮೇಲೆ ಟ್ಯಾಪ್ ಮಾಡುವ ಮೂಲಕ ಯುಟ್ಯೂಬ್‌ ವೀಡಿಯೊಗೆ ಪ್ರವೇಶಿಸಬಹುದಾಗಿದೆ. ಇದರಿಂದ ಸ್ನ್ಯಾಪ್‌ಚಾಟ್‌ ಮೂಲಕ ಯೂಟ್ಯೂಬ್‌ ವೀಡಿಯೋಗಳನ್ನು ವೀಕ್ಷಿಸುವುದು ಸುಲಭವಾಗಲಿದೆ. ಸದ್ಯ ಈ ಹೊಸ ಅಪ್ಡೇಟ್‌ ಮೂಲಕ ಸ್ನ್ಯಾಪ್‌ಚಾಟ್‌ನಲ್ಲಿ ತಮ್ಮ ಸ್ನೇಹಿತರೊಂದಿಗೆ ನೆಚ್ಚಿನ ಕ್ಲಿಪ್‌ಗಳು ಮತ್ತು ವೀಡಿಯೊಗಳನ್ನು ಶೇರ್‌ ಮಾಡುವುದನ್ನು ಸುಲಭಗೊಳಿಸುತ್ತಿದ್ದೇವೆ ಎಂದು ಸ್ನ್ಯಾಪ್‌ಚಾಟ್‌ ಕಂಪನಿ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಬರೆದುಕೊಂಡಿದೆ.

ಸ್ನ್ಯಾಪ್‌ಚಾಟ್‌ನಲ್ಲಿ ಯುಟ್ಯೂಬ್‌ ವೀಡಿಯೊಗಳನ್ನು ಶೇರ್‌ ಮಾಡುವುದು ಹೇಗೆ?

ಸ್ನ್ಯಾಪ್‌ಚಾಟ್‌ನಲ್ಲಿ ಯುಟ್ಯೂಬ್‌ ವೀಡಿಯೊಗಳನ್ನು ಶೇರ್‌ ಮಾಡುವುದು ಹೇಗೆ?

ಸ್ನ್ಯಾಪ್‌ಚಾಟ್‌ ತನ್ನ ಹೊಸ ಅಪ್ಡೇಟ್‌ iOS ಮತ್ತು ಆಂಡ್ರಾಯ್ಡ್‌ ಆಧಾರಿತ ಅಪ್ಲಿಕೇಶನ್‌ಗಳಲ್ಲಿ ಬಳಸಲು ಲಭ್ಯವಿದೆ ಎಂದು ಹೇಳಿದೆ. ನೀವು ಕೂಡ ಸ್ನ್ಯಾಪ್‌ಚಾಟ್‌ ನಲ್ಲಿ ಯುಟ್ಯೂಬ್‌ ವೀಡಿಯೊಗಳನ್ನು ಸ್ಟಿಕ್ಕರ್‌ಗಳ ರೂಪದಲ್ಲಿ ಶೇರ್‌ ಮಾಡುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯುಟ್ಯೂಬ್‌ ಅಪ್ಲಿಕೇಶನ್ ತೆರೆಯಿರಿ ಮತ್ತು ನಂತರ ವೀಕ್ಷಿಸಲು ವೀಡಿಯೊವನ್ನು ತೆರೆಯಿರಿ.
ಹಂತ:2 ನಂತರ, "ಶೇರ್‌" ಬಟನ್ ಅನ್ನು ಟ್ಯಾಪ್ ಮಾಡಿ.
ಹಂತ:3 ಈಗ ನೀವು ವೀಡಿಯೊವನ್ನು ಶೇರ್‌ಮಾಡುಬಹುದಾದ ಆಯ್ಕೆಗಳ ಹೋಸ್ಟ್ ಅನ್ನು ನೋಡುತ್ತೀರಿ.
ಹಂತ:4 ಸ್ನ್ಯಾಪ್‌ಚಾಟ್‌ ಕ್ಯಾಮರಾಕ್ಕೆ ಸ್ವಯಂಚಾಲಿತವಾಗಿ ನೆಗೆಯಲು "ಸ್ನ್ಯಾಪ್‌ಚಾಟ್‌" ಐಕಾನ್ ಅನ್ನು ಟ್ಯಾಪ್ ಮಾಡಿ.
ಹಂತ:5 ನಂತರ ಆಟೋಮ್ಯಾಟಿಕ್‌ ಯುಟ್ಯೂಬ್‌ ಸ್ಟಿಕ್ಕರ್‌ನೊಂದಿಗೆ ಮೂಲ ಸ್ನ್ಯಾಪ್ ಅನ್ನು ರಚಿಸಿ.
ಹಂತ:6 ಇದೀಗ, ನಿಮ್ಮ ಸ್ನೇಹಿತರು ತಮ್ಮ ಯುಟ್ಯೂಬ್‌ ಅಪ್ಲಿಕೇಶನ್ ನಲ್ಲಿ ವೀಡಿಯೊವನ್ನು ವೀಕ್ಷಿಸಲು ಯುಟ್ಯೂಬ್‌ ಸ್ಟಿಕ್ಕರ್ ಅನ್ನು ಟ್ಯಾಪ್ ಮಾಡಿ.

ಸ್ನ್ಯಾಪ್‌ಚಾಟ್‌

ಇದಲ್ಲದೆ ನೀವು ನಿಮ್ಮ ಸ್ನ್ಯಾಪ್‌ಚಾಟ್‌ ಅಕೌಂಟ್‌ನ ಯೂಸರ್‌ನೇಮ್‌ ಅನ್ನು ಕೂಡ ಬದಲಾಯಿಸುವುದಕ್ಕೆ ಅವಕಾಸವಿದೆ. ಒಂದು ವೇಳೆ ನೀವು ಸ್ನ್ಯಾಪ್‌ಚಾಟ್‌ ಅಕೌಂಟ್‌ನ ಯೂಸರ್‌ನೇಮ್‌ ಅನ್ನು ಒಂದು ಬಾರಿ ಬದಲಾಯಿಸಿದರೆ ಒಂದು ವರ್ಷದ ತನಕ ಮತ್ತೆ ಬದಲಾಯಿಸಲು ಸಾಧ್ಯವಾಗುವುದಿಲ್ಲ. ಇಲ್ಲದೆ ಹೋದರೆ ಹೊಸ ಖಾತೆಯನ್ನು ರಚಿಸುವ ಮೂಲಕ ಬಳಕೆದಾರರ ಹೆಸರನ್ನು ಹೊಸದಾಗಿ ನಮೂದಿಸಬೇಕಾಗುತ್ತದೆ.

ಸ್ನ್ಯಾಪ್‌ಚಾಟ್‌ನಲ್ಲಿ ಯೂಸರ್‌ನೇಮ್‌ ಬದಲಾಯಿಸುವುದು ಹೇಗೆ?

ಸ್ನ್ಯಾಪ್‌ಚಾಟ್‌ನಲ್ಲಿ ಯೂಸರ್‌ನೇಮ್‌ ಬದಲಾಯಿಸುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಸ್ನ್ಯಾಪ್‌ಚಾಟ್‌ ತೆರೆಯಿರಿ, ನಿಮ್ಮ ಪ್ರೊಫೈಲ್‌ಗೆ ಹೋಗಲು ಸ್ಕ್ರೀನ್‌ ಮೇಲಿನ ಎಡ ಮೂಲೆಯಲ್ಲಿ ಇರಿಸಲಾಗಿರುವ Bitmoji ಮೇಲೆ ಕ್ಲಿಕ್ ಮಾಡಿ.
ಹಂತ:2 ಈಗ, ಮೇಲಿನ ಬಲ ಮೂಲೆಯಲ್ಲಿ ಇರಿಸಲಾಗಿರುವ ಸೆಟ್ಟಿಂಗ್‌ಗಳ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ:3 ನಂತರ ಬಳಕೆದಾರ ಹೆಸರು ವಿಭಾಗಕ್ಕೆ ಹೋಗಿ ಮತ್ತು ಚೇಂಜ್‌ ಯೂಸರ್‌ ನೇಮ್‌ ಕ್ಲಿಕ್ ಮಾಡಿ.
ಹಂತ:4 ಇದರಲ್ಲಿ ನೀವು ಹೊಸ ಯೂಸರ್‌ನೇಮ್‌ ಅನ್ನು ಕ್ರಿಯೆಟ್‌ ಮಾಡಿ ಮತ್ತು ಬದಲಾಯಿಸಲು 'ನೆಕ್ಸ್ಟ್‌' ಕ್ಲಿಕ್ ಮಾಡಿ.

Best Mobiles in India

English summary
Snapchat's latest update that lets users share YouTube videos directly on its platform.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X