ಐಫೋನ್‌ನಿಂದ ಆಂಡ್ರಾಯ್ಡ್‌ ಫೋನ್‌ಗೆ ಫೋಟೋಗಳನ್ನು ವರ್ಗಾಯಿಸುವುದು ಹೇಗೆ?

|

ಪ್ರಸ್ತುತ ಟೆಕ್‌ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್‌ ಮತ್ತು ಐಫೋನ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇನ್ನು ಆಂಡ್ರಾಯ್ಡ್‌ ಮತ್ತು ಐಫೋನ್‌ಗಳು ಸಾಕಷ್ಟು ವೈವಿಧ್ಯಮಯ ಫೀಚರ್ಸ್‌ಗಳನ್ನು ಒಳಗೊಂಡಿವೆ. ನೀವು ಕೂಡ ಒಂದು ವೇಳೆ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಿಂದ ಐಫೋನ್‌ಗೆ ಬದಲಾದರೆ ಆಂಡ್ರಾಯ್ಡ್‌ನಲ್ಲಿರುವ ನಿಮ್ಮ ಡೇಟಾವನ್ನು ಐಫೋನ್‌ಗೆ ವರ್ಗಾಯಿಸಲು ಕೆಲವು ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ.

ಆಂಡ್ರಾಯ್ಡ್‌

ಹೌದು, ನೀವು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಿಂದ ಐಫೋನ್‌ಗೆ ಬದಲಾದರೆ ನಿಮ್ಮ ಫೋಟೋಸ್‌ ಮತ್ತು ಡೇಟಾವನ್ನು ವರ್ಗಾಯಿಸಲು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ನಿಮ್ಮ ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳನ್ನು ನಿಮ್ಮ ಐಫೋನ್‌ನಿಂದ ನಿಮ್ಮ ಆಂಡ್ರಾಯ್ಡ್‌ಗೆ ಇಲ್ಲವೇ ಆಂಡ್ರಾಯ್ಡ್‌ನಿಂದ ಐಫೋನ್‌ಗೆ ಬದಲಾಯಿಸಬಹುದು. ಹಾಗಾದ್ರೆ ಐಫೋನ್‌ನಿಂದ ನಿಮ್ಮ ಆಂಡ್ರಾಯ್ಡ್‌ ಫೋನ್‌ಗೆ ನಿಮ್ಮ ಎಲ್ಲಾ ಫೋಟೋಗಳನ್ನು ವರ್ಗಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಡ್ರೈವ್ ಬಳಸಿ ಫೋಟೋ ವರ್ಗಾವಣೆ ಮಾಡಲು ಹೀಗೆ ಮಾಡಿ?

ಗೂಗಲ್‌ ಡ್ರೈವ್ ಬಳಸಿ ಫೋಟೋ ವರ್ಗಾವಣೆ ಮಾಡಲು ಹೀಗೆ ಮಾಡಿ?

ಹಂತ:1 ನಿಮ್ಮ ಐಫೋನ್‌ನಲ್ಲಿ ಗೂಗಲ್‌ ಡ್ರೈವ್‌ ಅಪ್ಲಿಕೇಶನ್ ಅನ್ನು ತೆರೆಯಿರಿ.
ಹಂತ:2 ಇದೀಗ ಆಡ್‌ ಬಟನ್ > ಅಪ್‌ಲೋಡ್ ಟ್ಯಾಪ್ ಮಾಡಿ.
ಹಂತ:3 ನಂತರ ಫೋಟೋಸ್‌ ಮತ್ತು ವೀಡಿಯೊಗಳಿಗೆ ಹೋಗಿ.
ಹಂತ:4 ಇದರಲ್ಲಿ ನೀವು ವರ್ಗಾಯಿಸಲು ಬಯಸುವ ಫೋಟೋಸ್‌ಗಳನ್ನು ಆಯ್ಕೆಮಾಡಿ ಮತ್ತು ನಂತರ ಅಪ್‌ಲೋಡ್ ಬಟನ್‌ ಪ್ರೆಸ್‌ ಮಾಡಿ.
ಹಂತ:5 ನಂತರ ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ, ಗೂಗಲ್‌ ಡ್ರೈವ್‌ ತೆರೆಯಿರಿ ಮತ್ತು ನಿಮ್ಮ ಗೂಗಲ್‌ ಖಾತೆಗೆ ಲಾಗ್ ಇನ್ ಮಾಡಿ.
ಹಂತ:6 ನೀವು ಅಪ್‌ಲೋಡ್ ಮಾಡಿದ ಚಿತ್ರಗಳನ್ನು ಹುಡುಕಿ ಮತ್ತು ಆಯ್ಕೆಮಾಡಿ.
ಹಂತ:7 ಅಪ್ಲಿಕೇಶನ್‌ನ ಮೇಲಿನ ಬಲ ಮೂಲೆಯಲ್ಲಿ ಗೋಚರಿಸುವ ಮೆನು ಬಟನ್ ಮೇಲೆ ಟ್ಯಾಪ್ ಮಾಡಿ.
ಹಂತ:8 ಇದೀಗ ಡೌನ್‌ಲೋಡ್ ಬಟನ್ ಟ್ಯಾಪ್ ಮಾಡಿ.

ನಿಮ್ಮ ಲ್ಯಾಪ್‌ಟಾಪ್‌ ಮೂಲಕ ಐಫೋನ್‌ನಿಂದ ಆಂಡ್ರಾಯ್ಡ್‌ಗೆ ಫೋಟೋ ವರ್ಗಾಯಿಸುವುದು ಹೇಗೆ?

ನಿಮ್ಮ ಲ್ಯಾಪ್‌ಟಾಪ್‌ ಮೂಲಕ ಐಫೋನ್‌ನಿಂದ ಆಂಡ್ರಾಯ್ಡ್‌ಗೆ ಫೋಟೋ ವರ್ಗಾಯಿಸುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಲ್ಯಾಪ್‌ಟಾಪ್‌ಗೆ ನಿಮ್ಮ ಐಫೋನ್‌ಗೆ ಕನೆಕ್ಟ್‌ ಮಾಡಿ ಮತ್ತು ನಂತರ ಅದನ್ನು ಅನ್ಲಾಕ್ ಮಾಡಿ
ಹಂತ:2 ಪ್ರಾಂಪ್ಟ್ ಮಾಡಿದಾಗ, ನಿಮ್ಮ ಐಫೋನ್‌ ನಲ್ಲಿ ಫೋಟೋಗಳು ಮತ್ತು ವೀಡಿಯೊಗಳಿಗೆ ನಿಮ್ಮ ಲ್ಯಾಪ್‌ಟಾಪ್‌ಗೆ ಪ್ರವೇಶವನ್ನು ನೀಡಿ.
ಹಂತ:3 ಇದರಲ್ಲಿ ಸ್ಟಾರ್ಟ್ ವಿಂಡೋಸ್ ಬಟನ್ ಮೇಲೆ ಕ್ಲಿಕ್ ಮಾಡಿ. ಇದೀಗ ಫೋಟೋಸ್‌ ಅಪ್ಲಿಕೇಶನ್ ತೆರೆಯಿರಿ.
ಹಂತ:4 ಈಗ ಇಂಪೋರ್ಟ್‌ ಆಯ್ಕೆಮಾಡಿ ಮತ್ತು ನಂತರ ಕನೆಕ್ಟೆಡ್‌ ಡಿವೈಸ್‌ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:5 ನೀವು ಇಂಪೋರ್ಟ್‌ ಮಾಡಲು ಬಯಸುವ ಫೋಟೋಸ್‌ ಮತ್ತು ವೀಡಿಯೊಸ್‌ಗಳನ್ನು ಆಯ್ಕೆಮಾಡಿ ಮತ್ತು ಇಂಪೋರ್ಟ್‌ ಕ್ಲಿಕ್ ಮಾಡಿ.

ಆಂಡ್ರಾಯ್ಡ್‌

ಹಂತ:6 ಇದೀಗ, ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಅನ್ನು ನಿಮ್ಮ ಲ್ಯಾಪ್‌ಟಾಪ್‌ಗೆ ಕನೆಕ್ಟ್‌ ಮಾಡಿರಿ.
ಹಂತ:7 ನಂತರ 'USB ಮೂಲಕ ಈ ಡಿವೈಸ್‌ ಅನ್ನು ಚಾರ್ಜ್ ಮಾಡಲಾಗುತ್ತಿದೆ' ಎಂದು ಹೇಳುವ ಸಂದೇಶ ಬರಲಿದೆ.
ಹಂತ:8 ಅದರ ಮೇಲೆ ಟ್ಯಾಪ್ ಮಾಡಿ ಮತ್ತು ನಂತರ ನಿಮ್ಮ ಆಯ್ಕೆಯನ್ನು ದೃಢೀಕರಿಸಿ.
ಹಂತ:9 ಇದೀಗ ಫೈಲ್ ವರ್ಗಾವಣೆ ಆಯ್ಕೆಯನ್ನು ಆರಿಸಿ.
ಹಂತ:10 ನಿಮ್ಮ ಲ್ಯಾಪ್‌ಟಾಪ್‌ನಲ್ಲಿ, ಫೋಟೋಸ್‌ ಸೇವ್‌ ಮಾಡುವ ಫೋಲ್ಡರ್‌ಗೆ ಹೋಗಿ. ನೀವು ವರ್ಗಾಯಿಸಲು ಬಯಸುವ ಫೋಟೋಗಳು ಮತ್ತು ವೀಡಿಯೊಗಳನ್ನು ಆಯ್ಕೆಮಾಡಿ, ಬಲ ಕ್ಲಿಕ್ ಮಾಡಿ ಮತ್ತು ನಕಲಿಸಿ ಆಯ್ಕೆಯನ್ನು ಆರಿಸಿ.
ಹಂತ:11 ಇದೀಗ ನಿಮ್ಮ PC ಯಲ್ಲಿ ಮೈ ಕಂಪ್ಯೂಟರ್‌ ಆಯ್ಕೆಗೆ ಹೋಗಿ > ನಿಮ್ಮ ಆಂಡ್ರಾಯ್ಡ್‌ ಫೋನ್ ಹುಡುಕಿ >ಕ್ಯಾಮೆರಾ > DCIM ಫೋಲ್ಡರ್ > ರೈಟ್‌ ಕ್ಲಿಕ್ ಮಾಡಿ ಮತ್ತು ಪೇಸ್ಟ್‌ ಆಯ್ಕೆಮಾಡಿ.

Best Mobiles in India

Read more about:
English summary
Here's How to transfer photos from your iPhone to Android smartphone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X