ಗೂಗಲ್‌ ಡ್ರೈವ್‌ ಬಳಸದೆ ನಿಮ್ಮ ವಾಟ್ಸಾಪ್‌ ಬ್ಯಾಕಪ್‌ ಅನ್ನು ಪಡೆಯುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಸಂದೇಶ ವಿನಿಮಯವನ್ನು ವಾಟ್ಸಾಪ್‌ ಮೂಲಕ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ವಾಟ್ಸಾಫ್‌ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್‌ ಹೊಂದಿರುವುದರಿಂದ ಬಳಕೆದಾರರ ಚಾಟ್‌ ಸುರಕ್ಷಿತವಾಗಿರಲಿದೆ. ಇನ್ನು ವಾಟ್ಸಾಪ್‌ ತನ್ನ ಚಾಟ್‌ ಬ್ಯಾಕಪ್‌ನಲ್ಲಿಯೂ ಕೂಡ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್‌ ಅನುಮತಿಸುವ ಫೀಚರ್ಸ್‌ ಪರಿಚಯಿಸಿದೆ. ಅದಾಗ್ಯೂ ಕೂಡ ಗೂಗಲ್‌ ಡ್ರೈವ್‌ ಇಲ್ಲದೆ ಹೋದರೂ ನಿಮ್ಮ ಚಾಟ್‌ ಬ್ಯಾಕಪ್‌ ಪಡೆಯಲು ವಾಟ್ಸಾಪ್‌ನಲ್ಲಿ ಸಾಧ್ಯವಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನಲ್ಲಿ ಚಾಟ್‌ ಬ್ಯಾಕಪ್‌ ಗೂಗಲ್‌ ಡ್ರೈವ್‌ಮತ್ತು ಐಕ್ಲೌಡ್‌ನಲ್ಲಿರಲಿದೆ. ಆದರೂ ಕೂಡ ನೀವು ನಿಮ್ಮ ವಾಟ್ಸಾಪ್‌ ಡೇಟಾವನ್ನು ಗೂಗಲ್‌ ಡ್ರೈವ್‌ ಇಲ್ಲದಿದ್ದರೂ ಡೇಟಾವನ್ನು ಬ್ಯಾಕಪ್ ಮಾಡಬಹುದು. ಅಷ್ಟೇ ಅಲ್ಲ ಆಫ್‌ಲೈನ್ ವಿಧಾನಗಳ ಮೂಲಕ ಇನ್ನೊಂದು ಫೋನ್‌ಗೆ ನಿಮ್ಮ ಚಾಟ್‌ ಬ್ಯಾಕಪ್‌ ಅನ್ನು ವರ್ಗಾಯಿಸಬಹುದು. ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ RAR ನಂತಹ ಫೈಲ್ ಕಂಪ್ರೆಷನ್ ಅಪ್ಲಿಕೇಶನ್ ಬಳಸಬೇಕಾಗುತ್ತದೆ. ಹಾಗಾದ್ರೆ ಗೂಗಲ್‌ ಡ್ರೈವ್‌ ಇಲ್ಲದೆ ಇದ್ದರೂ ನಿಮ್ಮ ವಾಟ್ಸಾಪ್‌ ಡೇಟಾವನ್ನು ಹೊಸ ಸ್ಮಾರ್ಟ್‌ಫೋನ್‌ಗೆ ಟ್ರಾನ್ಸಫರ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ನಲ್ಲಿರುವ ನಿಮ್ಮ ಡೇಟಾವನ್ನು ಗೂಗಲ್‌ ಡ್ರೈವ್‌ ಇಲ್ಲದೆ ಹೋದರೂ ಹೊಸ ಸ್ಮಾರ್ಟ್‌ಫೋನ್‌ಗೆ ಸುಲಭವಾಗಿ ವರ್ಗಾವಣೆ ಮಾಡಬಹುದು. ಇದಕ್ಕೆ RAR ನಂತಹ ಫೈಲ್ ಕಂಪ್ರೆಷನ್ ಅಪ್ಲಿಕೇಶನ್ ಅವಕಾಶ ನೀಡಲಿದೆ. ಇದು ಫೈಲ್‌ಗಳ ಆಫ್‌ಲೈನ್ ಬ್ಯಾಕಪ್ ತೆಗೆದುಕೊಳ್ಳುವ ಮೂಲಕ, ಎಲ್ಲಾ ಡೇಟಾವನ್ನು ಒಂದೇ ಫೋಲ್ಡರ್‌ಗೆ ಪಡೆಯುವ ಮೂಲಕ ಮತ್ತು ಆ ಫೋಲ್ಡರ್ ಅನ್ನು ಇನ್ನೊಂದು ಫೋನ್‌ಗೆ ವರ್ಗಾಯಿಸಬಹುದು. ಇದರಿಂದ ನಿಮಗೆ ಗೂಗಲ್‌ ಡ್ರೈವ್‌ನ ಅಗತ್ಯವೇ ಬರುವುದಿಲ್ಲ. ಇದಕ್ಕಾಗಿ ನೀವು ಈ ಕೆಳಗಿನ ನಿಯಯಮಗಳನ್ನು ಪಾಲಿಸಬೇಕಾಗುತ್ತದೆ.

ಹಂತ:1 ವಾಟ್ಸಾಪ್‌ ನಲ್ಲಿ ಲೋಕಲ್‌ ಬ್ಯಾಕಪ್‌ ಕ್ರಿಯೆಟ್‌ ಮಾಡಿರಿ.

ಹಂತ:1 ವಾಟ್ಸಾಪ್‌ ನಲ್ಲಿ ಲೋಕಲ್‌ ಬ್ಯಾಕಪ್‌ ಕ್ರಿಯೆಟ್‌ ಮಾಡಿರಿ.

ವಾಟ್ಸಾಪ್ ನ ಮೇನ್‌ಪೇಜ್‌ ನಲ್ಲಿ ಮೂರು ಡಾಟ್ ಅನ್ನು ಟ್ಯಾಪ್‌ ಮಾಡಿರಿ. ಇದರಲ್ಲಿ ನೀವು ಸೆಟ್ಟಿಂಗ್ಸ್/ ಚಾಟ್/ ಚಾಟ್ ಬ್ಯಾಕಪ್ ಗೆ ಹೋಗಿ, 'ಬ್ಯಾಕ್ ಅಪ್' ಮೇಲೆ ಟ್ಯಾಪ್ ಮಾಡಿ. ಇಲ್ಲಿ ಬ್ಯಾಕಪ್ ಕ್ರಿಯೆಟ್‌ ಮಾಡಬಹುದಾಗಿದೆ. ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಕಪ್‌ ಕ್ರಿಯೆಟ್‌ ಆದ ನಂಯತರ ಹಳೆಯ ಫೋನ್‌ನಲ್ಲಿರುವ ಬ್ಯಾಕಪ್‌ ಅನ್ನು ಅನ್‌ಇನ್‌ಸ್ಟಾಲ್‌ ಮಾಡಿರಿ.

ಹಂತ:2 RAR ಅಥವಾ ಯಾವುದೇ ಇತರ ಫೈಲ್ ಕಂಪ್ರೆಷನ್ ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡಿರಿ.

ಹಂತ:2 RAR ಅಥವಾ ಯಾವುದೇ ಇತರ ಫೈಲ್ ಕಂಪ್ರೆಷನ್ ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡಿರಿ.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ RAR ಆಪ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಅದನ್ನು ಸೆಟಪ್ ಮಾಡಿ. ಇದರಲ್ಲಿ ಫೈಲ್‌ಗಳ ಆಫ್‌ಲೈನ್ ಬ್ಯಾಕಪ್ ಮಾಡಬಹುದು. ವಾಟ್ಸಾಪ್ ಡೇಟಾವನ್ನು ಒಂದೇ ಫೈಲ್ ನಲ್ಲಿ ಕೂಡಿಸಿ ಫೋಲ್ಡರ್‌ ಮಾಡಲು ಇದನ್ನು ಬಳಸಬಹುದಾಗಿದೆ.

ಹಂತ:3 ನಿಮ್ಮ ವಾಟ್ಸಾಪ್‌ ಡೇಟಾವನ್ನು ಕಂಪ್ರೆಸ್‌ ಮಾಡಿರಿ.

ಹಂತ:3 ನಿಮ್ಮ ವಾಟ್ಸಾಪ್‌ ಡೇಟಾವನ್ನು ಕಂಪ್ರೆಸ್‌ ಮಾಡಿರಿ.

RAR ಅಪ್ಲಿಕೇಶನ್ ನಲ್ಲಿ ನಿಮ್ಮ ಫೋನಿನ ಇಂಟರ್‌ ಸ್ಟೋರೇಜ್‌ ಅನ್ನು ಕಾಣಬಹುದು. ಇದರಲ್ಲಿ ನಿಮ್ಮ ವಾಟ್ಸಾಫ್‌ ಡೇಟಾವನ್ನು ಕಂಪ್ರೆಸ್‌ ಮಾಡಿರಿ. ಇಲ್ಲಿ ನೀವು ಆಂಡ್ರಾಯ್ಡ್‌/ ಮೀಡಿಯಾಗೆ ನ್ಯಾವಿಗೇಟ್ ಮಾಡಿ ಮತ್ತು 'com.whatsapp' ಫೋಲ್ಡರ್‌ ಕಾಣಬಹುದು. Com.whatsapp ಫೋಲ್ಡರ್ ಪಕ್ಕದಲ್ಲಿರುವ ಟಿಕ್ ಮಾರ್ಕ್ ಅನ್ನು ಆಯ್ಕೆ ಮಾಡಿ ಮತ್ತು ಮೇಲೆ ಆರ್ಕೈವ್ ಆಡ್ ಬಟನ್ ಒತ್ತಿ. ಫುಲ್‌ ಫೋಲ್ಡರ್ ಈಗ .rar ಫೈಲ್ ಆಗಿ ಬದಲಾಗಲಿದೆ.

ಹಂತ:4 ಡೇಟಾವನ್ನು ನಿಮ್ಮ ಹೊಸ ಫೋನ್‌ಗೆ ಟ್ರಾನ್ಸಫರ್‌ ಮಾಡಿ

ಹಂತ:4 ಡೇಟಾವನ್ನು ನಿಮ್ಮ ಹೊಸ ಫೋನ್‌ಗೆ ಟ್ರಾನ್ಸಫರ್‌ ಮಾಡಿ

ಇದೀಗ ನಿಮ್ಮ ಹೊಸ com.whatsapp.rar ಫೈಲ್ ಅನ್ನು ನಿಮ್ಮ ಹೊಸ ಫೋನ್‌ಗೆ ವರ್ಗಾವಣೆ ಮಾಡಿ. ಹೊಸ ಫೋನಿನ ಇಂಟರ್‌ ಸ್ಟೋರೇಜ್‌ನಲ್ಲಿ ಅದೇ ಫೈಲ್ ಅನ್ನು ಅನ್‌ಜಿಪ್ ಮಾಡಲು ಮತ್ತೊಮ್ಮೆ RAR ಅನ್ನು ಬಳಸಿ. ಅನ್‌ಜಿಪ್‌ ಮಾಡಿದ ಫೋಲ್ಡರ್ ಅನ್ನು com.whatsapp ಎಂಬ ಹೆಸರಿನ ಪೋಲ್ಡರ್‌ನಲ್ಲಿಯೇ ಇರಿಸಿ.

ಹಂತ:5 ನಿಮ್ಮ ಹೊಸ ಫೋನ್‌ನಲ್ಲಿ ವಾಟ್ಸಾಪ್‌ ಇನ್‌ಸ್ಟಾಲ್‌ ಮಾಡಿ

ಹಂತ:5 ನಿಮ್ಮ ಹೊಸ ಫೋನ್‌ನಲ್ಲಿ ವಾಟ್ಸಾಪ್‌ ಇನ್‌ಸ್ಟಾಲ್‌ ಮಾಡಿ

ನಂತರ ನಿಮ್ಮ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಅನ್ನು ಇನ್‌ಸ್ಟಾಲ್ ಮಾಡಿರಿ. ಆರಂಭಿಕ ಪ್ರಕ್ರಿಯೆಯಲ್ಲಿ ಗೂಗಲ್ ಡ್ರೈವ್ ಬ್ಯಾಕಪ್ ಪ್ರಾಂಪ್ಟ್ ಅನ್ನು ಬಿಟ್ಟು, ಲೋಕಲ್‌ ಬ್ಯಾಕಪ್ ಅನ್ನು ಕ್ರಿಯೆಟ್‌ ಮಾಡಿ. ಆಗ ನೀವು com.whatsapp ರಿ ಸ್ಟೋರ್‌ ಮಾಡಿ ಫೈಲ್‌ಗಳನ್ನು ವಾಟ್ಸಾಪ್‌ ಡಿಟೆಕ್ಟ್‌ ಮಾಡಲಿದೆ. ಡಿಟೆಕ್ಟ್‌ ಮಾಡಲಾದ ಬ್ಯಾಕಪ್ ಅನ್ನು ರಿಸ್ಟೋರ್‌ ಮಾಡಿ. ಹೀಗೆ ಮಾಡಿದ ನಂತರ ನಿಮ್ಮ ಹಳೆಯ ಬ್ಯಾಕಪ್‌ ಹೊಸ ಫೋನಿನಲ್ಲಿ ಲಭ್ಯವಾಗಲಿದೆ.

Best Mobiles in India

English summary
Here’s how you can transfer your WhatsApp data from one phone to another without using the Google Drive backup feature.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X