ಐಕ್ಲೌಡ್ ಪೋಟೋಸ್‌ ಅನ್ನು Google ಫೋಟೋಸ್‌ಗೆ ಟ್ರಾನ್ಸಫರ್‌ ಮಾಡುವುದು ಹೇಗೆ?

|

ಆಪಲ್‌ ಐಕ್ಲೌಡ್‌ ಸೇವೆ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇನ್ನು ಈ ಐಕ್ಲೌಡ್‌ನಲ್ಲಿ ಫೋಟೋಗಳು, ವೀಡಿಯೋಗಳನ್ನು ಸ್ಟೋರೇಜ್‌ ಮಾಡಬಹುದಾಗಿದೆ. ಸದ್ಯ ಇದೀಗ ಐಕ್ಲೌಡ್‌ನಿಂದ ಗೂಗಲ್ ಫೋಟೋಗಳಿಗೆ ಸುಲಭವಾಗಿ ಫೋಟೋಗಳನ್ನು ಮತ್ತು ವೀಡಿಯೊಗಳನ್ನು ವರ್ಗಾಯಿಸಲು ಅನುವು ಮಾಡಿಕೊಡುತ್ತದೆ. ಹೀಗಾಗಿ ಆಪಲ್ ಅಲ್ಲದ ಸೇವೆಗಳನ್ನು ತಮ್ಮ ಆಪಲ್ ಸಾಧನಗಳೊಂದಿಗೆ ಸುಲಭವಾಗಿ ಬಳಸಲು ಸಾಧ್ಯವಾಗಲಿದೆ.

ಗೂಗಲ್‌

ಹೌದು, ಆಪಲ್‌ ಐಕ್ಲೌಡ್‌ನಿಂದ ಗೂಗಲ್‌ ಫೋಟೋಸ್‌ಗೆ ಪೋಟೋಗಳು, ವಿಡಿಯೋಗಳನ್ನು ಟ್ರಾನ್ಸಫರ್‌ ಮಾಡಬಹುದಾಗಿದೆ. ಆಪಲ್ ಒನ್‌ ಬದಲು ಗೂಗಲ್ ಕ್ಲೌಡ್ ಸೇವೆಯನ್ನು ಆಯ್ಕೆ ಮಾಡಲು ಬಯಸುವ ಬಳಕೆದಾರರರಿಗೆ ಇದು ಸಾಕಷ್ಟು ಉಪಯುಕ್ತವಾಗಲಿದೆ. ಇದರಿಂದ ಅವರ ಡೇಟಾವನ್ನು ಹೆಚ್ಚು ತೊಂದರೆಯಿಲ್ಲದೆ ಸುಲಭವಾಗಿ ವರ್ಗಾಯಿಸಲು ಬಯಸಿದಾಗ ಇದು ಸಹಾಯ ಮಾಡುತ್ತದೆ. ಇನ್ನುಳಿದಂತೆ ಈ ಹೊಸ ನಿಬಂಧನೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೋಟೋಗಳು

ಐಕ್ಲೌಡ್‌ನಲ್ಲಿರುವ ನಿಮ್ಮ ಫೋಟೋಗಳು ಮತ್ತು ವೀಡಿಯೊಗಳ ನಕಲನ್ನು ಗೂಗಲ್ ಫೋಟೋಗಳಿಗೆ ವರ್ಗಾಯಿಸಲು ಆಪಲ್ ಈಗ ನಿಮಗೆ ಅವಕಾಶ ನೀಡುತ್ತದೆ. ಅಲ್ಲದೆ ಫೋಟೋ, ವಿಡಿಯೋ ಟ್ರಾನ್ಸಫರ್‌ ಮಾಡುವಾಗ ಐಕ್ಲೌಡ್ ಡೇಟಾವು ಯಾವುದೇ ರೀತಿಯಲ್ಲೂ ಅಡ್ಡಿಯಾಗುವುದಿಲ್ಲ. ಈ ಸೇವೆ ಪ್ರಸ್ತುತ ಆಸ್ಟ್ರೇಲಿಯಾ, ಕೆನಡಾ, ಯುರೋಪಿಯನ್ ಯೂನಿಯನ್, ಐಸ್ಲ್ಯಾಂಡ್, ಲಿಚ್ಟೆನ್‌ಸ್ಟೈನ್, ನ್ಯೂಜಿಲೆಂಡ್, ನಾರ್ವೆ, ಸ್ವಿಟ್ಜರ್ಲೆಂಡ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಲಭ್ಯವಿದೆ ಎಂದು ಸೂಚಿಸಲಾಗಿದೆ.

ಐಕ್ಲೌಡ್ ಪೋಟೋಸ್‌ ಅನ್ನು Google ಫೋಟೋಸ್‌ಗೆ ಟ್ರಾನ್ಸಫರ್‌ ಮಾಡುವುದು ಹೇಗೆ?

ಐಕ್ಲೌಡ್ ಪೋಟೋಸ್‌ ಅನ್ನು Google ಫೋಟೋಸ್‌ಗೆ ಟ್ರಾನ್ಸಫರ್‌ ಮಾಡುವುದು ಹೇಗೆ?

ಐಕ್ಲೌಡ್‌ನಿಂದ ಗೂಗಲ್ ಫೋಟೋಗಳಿಗೆ ವರ್ಗಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿರಿ.

ಹಂತ 1: ಪ್ರೈವೆಸಿ.ಅಪಲ್.ಕಾಮ್ ವೆಬ್‌ಸೈಟ್‌ಗೆ ಹೋಗಿ ಮತ್ತು ನಿಮ್ಮ ಆಪಲ್ ಐಡಿಯೊಂದಿಗೆ ಸೈನ್ ಇನ್ ಮಾಡಿ.

ಹಂತ 2: ‘Transfer a copy of your data' ಆಯ್ಕೆಯ ಕೆಳಗೆ ‘Get a copy of your data' ಆಯ್ಕೆಯನ್ನು ಆರಿಸಿ.

ಹಂತ 3: ಈಗ ‘Request to transfer a copy of your data' ಕ್ಲಿಕ್ ಮಾಡಿ ಮತ್ತು ಗೋಚರಿಸುವ ಡ್ರಾಪ್‌ಡೌನ್ ಮೆನುವಿನಿಂದ ರಿಸೀವರ್ ಆಯ್ಕೆಯಾಗಿ ಗೂಗಲ್ ಫೋಟೋಗಳನ್ನು ಆಯ್ಕೆ ಮಾಡಿ.

ವರ್ಗಾಯಿಸಲು

ಹಂತ 4: ಈಗ, ನೀವು ವರ್ಗಾಯಿಸಲು ಬಯಸುವ ಡೇಟಾವನ್ನು ಆಯ್ಕೆಮಾಡಿ (ಫೋಟೋಗಳು, ವೀಡಿಯೊಗಳು ಅಥವಾ ಎರಡೂ ಆಗಿರಬಹುದು) ಮತ್ತು ಮುಂದುವರಿಸಿ ಟ್ಯಾಪ್ ಮಾಡಿ. ಈಗ, ವರ್ಗಾವಣೆಗೆ ನಿಮ್ಮಲ್ಲಿ ಸಾಕಷ್ಟು Google ಫೋಟೋ ಸ್ಟೋರೇಜ್‌ ಇದೆ ಎಂದು ಖಚಿತಪಡಿಸಿ.

ಹಂತ 5: ನಂತರ, ನೀವು ಡೇಟಾದ ನಕಲನ್ನು ಕಳುಹಿಸಲು ಬಯಸುವ ನಿಮ್ಮ Google ಖಾತೆಗೆ ಸೈನ್ ಇನ್ ಮಾಡಿ, ಪ್ರಕ್ರಿಯೆಯನ್ನು ಪ್ರಾರಂಭಿಸಲು ಆಪಲ್ ಅನ್ನು ಅನುಮತಿಸಿ ಮತ್ತು ಪ್ರಾರಂಭಿಸಲು ‘ವರ್ಗಾವಣೆಯನ್ನು ದೃಡೀಕರಿಸಿ ಆಯ್ಕೆಯನ್ನು ಆರಿಸಿ.

ಇದನ್ನು ಮಾಡಿದ ನಂತರ, ವರ್ಗಾವಣೆ ಗೊಂಡಿರುವ ಫೋಟೋ, ವಿಡಿಯೋಗಳು ಲಭ್ಯವಾಗಲು ಮೂರರಿಂದ ಏಳು ದಿನಗಳನ್ನು ತೆಗೆದುಕೊಳ್ಳುತ್ತದೆ.

Best Mobiles in India

Read more about:
English summary
Apple now lets people transfer photos and videos from iCloud to Google Photos. Here's how you can do so by following these simple steps.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X