ಡಿಲೀಟ್ ಆಗಿರುವ ವಾಟ್ಸ್ ಆಪ್ ಮೆಸೇಜ್ ನ್ನು ಸೀಕ್ರೆಟ್ ಆಗಿ ಓದುವುದು ಹೇಗೆ?

By Gizbot Bureau
|

ವಾಟ್ಸ್ ಆಪ್ ಇತ್ತೀಚೆಗೆ ಡಿಲೀಟ್ ಫಾರ್ ಎವರಿವನ್ ಅನ್ನೋ ಹೊಸ ಫೀಚರ್ ನ್ನು ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿತ್ತು. ಬಳಕೆದಾರರು ಈ ಫೀಚರ್ ನ್ನು ಅತ್ಯದ್ಭುತವಾಗಿ ಬಳಸಿಕೊಳ್ಳುತ್ತಿದ್ದಾರೆ.ನಾವು ಈಗಾಗಲೇ ಕಳುಹಿಸಿರುವ ಮೆಸೇಜ್ ಗಳನ್ನು ಡಿಲೀಟ್ ಮಾಡುವುದಕ್ಕೆ ಹಲವು ಕಾರಣಗಳಿವೆ. ಆದರೆ ಒಮ್ಮೆ ಡಿಲೀಟ್ ಮಾಡಿದ ನಂತರ ಪುನಃ ಓದಬೇಕು ಎಂದು ಅನ್ನಿಸಿದರೆ ಏನು ಮಾಡೋದು? ಅದಕ್ಕಾಗಿ ಪ್ಲೇ ಸ್ಟೋರ್ ನಲ್ಲಿ ಕೆಲವು ಆಪ್ ಗಳಿದ್ದು ನೀವು ವಾಟ್ಸ್ ಆಪ್ ನಲ್ಲಿ ಡಿಲೀಟ್ ಮಾಡಿರುವ ಮೆಸೇಜ್ ಗಳನ್ನು ಪುನಃ ಓದುವುದಕ್ಕೆ ಇದು ಅವಕಾಶ ಮಾಡಿಕೊಡುತ್ತದೆ. ಬಹಳ ಕುತೂಹಲಕಾರಿಯಾಗಿದೆ ಅಲ್ವೇ?

ಡಿಲೀಟ್ ಆಗಿರುವ ವಾಟ್ಸ್ ಆಪ್ ಮೆಸೇಜ್ ನ್ನು ಸೀಕ್ರೆಟ್ ಆಗಿ ಓದುವುದು ಹೇಗೆ?

ಗೂಗಲ್ ಪ್ಲೇ ಸ್ಟೋರ್ ನಲ್ಲಿ ನೋಟಿಸೇವ್ ಅನ್ನೋ ಆಪ್ ವೊಂದಿದೆ.ಇದು ನಿಮಗೆ ವಾಟ್ಸ್ ಆಪ್ ನಲ್ಲಿ ಡಿಲೀಟ್ ಮಾಡಿರುವ ಮೆಸೇಜ್ ಗಳನ್ನು ರೀಸ್ಟೋರ್ ಮಾಡುವುದಕ್ಕೆ ಸಹಾಯ ಮಾಡುತ್ತದೆ.ಈ ಆಪ್ ಕೇವಲ ಡಿಲೀಟ್ ಆಗಿರುವ ಮೆಸೇಜ್ ಗಳನ್ನು ಮಾತ್ರವಲ್ಲದೆ ಆಡಿಯೋ, ವೀಡಿಯೋ, ಜಿಫ್ ಫೈಲ್ ಗಳನ್ನು ಕೂಡ ರೀಸ್ಟೋರ್ ಮಾಡುವುದಕ್ಕೆ ಸಹಾಯ ಮಾಡುತ್ತದೆ ಜೊತೆಗೆ ಇನ್ನಷ್ಟು ಕುತೂಹಲಕಾರಿ ಅಂಶಗಳನ್ನು ಹೊಂದಿದೆ.ಹಾಗಾದ್ರೆ ಈ ಆಪ್ ಹೇಗೆ ಕೆಲಸ ಮಾಡುತ್ತದೆ ಮತ್ತು ಇದರಿಂದ ಹೇಗೆ ವಾಟ್ಸ್ ಆಪ್ ನಲ್ಲಿ ಡಿಲೀಟ್ ಮಾಡಿರುವ ಮೆಸೇಜ್ ಗಳನ್ನು ರೀಸ್ಟೋರ್ ಮಾಡಿಕೊಳ್ಳಬಹುದು ತಿಳಿದುಕೊಳ್ಳೋಣ.

ಪ್ರಮುಖವಾಗಿ 5 ಹಂತಗಳನ್ನು ನೀವು ಫಾಲೋ ಮಾಡಬೇಕು.

ಹಂತ 1 -ಗೂಗಲ್ ಪ್ಲೇ ಸ್ಟೋರ್ ಗೆ ತೆರಳಿ.ಕೇವಲ ಆಂಡ್ರಾಯ್ಡ್ ನಲ್ಲಿ ಮಾತ್ರವೇ ಈ ಆಪ್ ಲಭ್ಯವಿರುತ್ತದೆ ಎಂಬುದು ನಿಮಗೆ ತಿಳಿದಿರಲಿ.ಐಓಎಸ್ ಬಳಕೆದಾರರಿಗೆ ಸದ್ಯ ಈ ಆಪ್ ಲಭ್ಯವಲ್ಲ.

ಹಂತ 2 – ನಿಮ್ಮ ಸ್ಮಾರ್ಟ್ ಫೋನಿನಲ್ಲಿ ನೋಟಿಸೇವ್ ಆಪ್ ನ್ನು ಡೌನ್ ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.ವಾಟ್ಸ್ ಆಪ್ ಐಕಾನ್ ನ್ನೇ ಇದು ತೋರಿಸುತ್ತದೆ.

ಹಂತ 3 -ಆಪ್ ಗೆ ಲಾಗಿನ್ ಆಗಿ ಮತ್ತು ಅಗತ್ಯವಿರುವ ವಿವರಗಳನ್ನು ನೀಡಿ.

ಹಂತ 4 – ವಾಟ್ಸ್ ಆಪ್ ಐಕಾನ್ ನ್ನು ಸೆಲೆಕ್ಟ್ ಮಾಡಿ ಮತ್ತು ನೀವು ಎಲ್ಲಾ ಡಿಲೀಟ್ ಆಗಿರುವ ಮೆಸೇಜ್ ಗಳನ್ನು ಅಲ್ಲಿ ಕಾಣಬಹುದಾಗಿದೆ.

ಹಂತ 5 – ನಿರ್ಧಿಷ್ಟ ಕಾಂಟ್ಯಾಕ್ಟ್ ನ್ನು ಪರೀಕ್ಷಿಸುವುದಕ್ಕೂ ಕೂಡ ನೋಟಿಸೇವ್ ಆಪ್ ನಿಮಗೆ ಅವಕಾಶ ನೀಡುತ್ತದೆ. ಅದಕ್ಕಾಗಿ ನೀವು ಕಾಂಟ್ಯಾಕ್ಟ್ ನ್ನು ಫಿಲ್ಟರ್ ಮಾಡಿದರೆ ಆಯ್ತು.

ಆದರೆ ನೋಟಿಸೇವ್ ಆಪ್ ಒಂದಷ್ಟು ಜಾಹೀರಾತುಗಳನ್ನು ಕೂಡ ಪ್ರದರ್ಶಿಸುತ್ತದೆ ಎಂಬುದು ನೆನಪಿರಲಿ. ಒಂದು ವೇಳೆ ನೀವು ಈ ಆಪ್ ನ್ನು ಬಳಸುತ್ತೀರಾದ್ರೆ ನಿಮ್ಮ ರಿಸ್ಕ್ ನ್ನು ನೀವೇ ತೆಗೆದುಕೊಳ್ಳಬೇಕಾಗುತ್ತದೆ.ಆಪ್ ನಲ್ಲಿ ಮೂರನೇ ವ್ಯಕ್ತಿಗಳ ಮಾಲ್ವೇರ್ ಗಳು ಕೂಡ ಇರುವ ಸಾಧ್ಯತೆ ಇದೆ ಎಂಬುದು ನಿಮ್ಮ ಗಮನದಲ್ಲಿರಲಿ.ಹಾಗಾಗಿ ಆಪ್ ನ ಒಳಭಾಗದಲ್ಲಿ ಕಾಣಿಸುವ ರ್ಯಾಡಂ ಲಿಂಕ್ ಗಳನ್ನು ಕ್ಲಿಕ್ಕಿಸುವ ಮುನ್ನ ಜಾಗೃತರಾಗಿರಿ.

Most Read Articles
Best Mobiles in India

English summary
Here's The Process On How To Read Deleted Messages ​On WhatsApp

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X