ಇಂದಿನ ದಿನದಲ್ಲಿ ಇಂಟರ್ನೆಟ್ ಭಾರಿ ವೇಗದಲ್ಲಿ ಬೆಳವಣಿಗೆಯನ್ನು ಸಾಧಿಸುತ್ತಿದ್ದು, ಅದಿಲ್ಲದೇ ನಮ್ಮ ದೈನಂದಿನ ಬದುಕು ಸಾಧ್ಯವೇ ಇಲ್ಲ ಎನ್ನುವ ಮಟ್ಟಕ್ಕೆ ಅಭಿವೃದ್ಧಿಯನ್ನು ಹೊಂದಿದೆ. ಹೀಗಾಗಿ ಕೇಲವು ವೆಬ್ ಸೈಟ್ ಗಳನ್ನು ಕೇಲವು ಕಡೆಗಳಲ್ಲಿ ಬ್ಲಾಕ್ ಮಾಡುವ ಪರಿಪಾಠವು ಬೆಳೆದುಕೊಂಡಿದೆ.

ಶಾಲೆ, ಕಾಲೇಜು, ಕಚೇರಿಗಳಲ್ಲಿ ಕೇಲವು ಮಾದರಿಯ ವೆಬ್ ಸೈಟ್ ಗಳನ್ನು ಬ್ಲಾಕ್ ಮಾಡಿರುತ್ತಾರೆ. ಇದಕ್ಕೆ ಹಲವು ಕಾರಣಗಳು ಇರಲಿದೆ. ಇವುಗಳಲ್ಲಿ ಸೋಶಿಯಲ್ ಮೀಡಿಯಾ, ಪಾಪ್ ಕಲ್ಚಚರ್, ಆರೋಗ್ಯ, ಧಾರ್ಮಿಕ, ರಾಜಕೀಯಕ್ಕೆ ಸೇರಿದ ವೆಬ್ ತಾಣಗಳು ಇರಬಹುದು. ಇವುಗಳನ್ನು ಬಳಸುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.
ಕಾಷ್:
ಸರ್ಚ್ ಇಂಜಿನ್ ಗಳಲ್ಲಿ ವೆಬ್ ಪೇಜ್ ಗಳ ಕಾಷ್ ಅನ್ನು ನೀಡಲಾಗಿರುತ್ತದೆ. ನೀವು ಅಲ್ಲಿ ಹೋಗಿ ವೆಬ್ ಸೈಟ್ ಗಳನ್ನು ಬಂದ್ ಮಾಡಬಹುದಾಗಿದೆ, ಗೂಗಲ್ ಸೇರಿದಂತೆ ಎಲ್ಲಾ ಸರ್ಜ್ ಇಂಜಿನ್ ನಲ್ಲಿಯೂ ಈ ಆಯ್ಕೆ ಇದೆ. ಅಲ್ಲಿಯೇ ಅದನ್ನು ಓಪನ್ ಮಾಡುವ ಮೂಲಕ ಬಳಸಬಹುದು.
ಡಿ ಎನ್ ಎಸ್:
ಇದಲ್ಲದೇ ನೀವು ಡಿ ಎನ್ ಎಸ್ ಮೂಲಕವೂ ಬ್ಲಾಕ್ ಮಾಡಬಹುದಾಗಿದೆ. ಇಲ್ಲಿ ಬ್ಲಾಕ್ ಮಾಡಲು ಐಪಿ ಆಡ್ರಸ್ ಬೇಕಾಗಿರುತ್ತದೆ. ಇದು ಸರ್ವರ್ ಮೂಲಕವೇ ಬೇಡದಿರುವ ವೆಬ್ ಗಳನ್ನು ನಿಯಂತ್ರಿಸಲಿದೆ. ಇಲ್ಲಿವೂ ನೀವು ಡಿಎನ್ ಎಸ್ ಬದಲಾಯಿಸಿ ಬಳಕೆ ಮಾಡಿಕೊಳ್ಳಬಹುದು.
ಭಾರತದಲ್ಲಿ ‘ಇನ್ ಆಪ್ ಚಾಟ್' ಹಾಗೂ ‘ಮಲ್ಟಿ ಡೆಸ್ಟಿನೇಷನ್' ಆಪ್ ಪರಿಚಯಿಸಿದ ಊಬರ್!!
ಪ್ರಾಕ್ಸಿ ಸರ್ವರ್ಸ್:
ಇದಲ್ಲದೇ ಹಲವು ಪ್ರಾಕ್ಸಿ ವೆಬ್ ಸೈಟ್ ಗಳು ಲಭ್ಯವಿದ್ದು, ಇದು ಬ್ಲಾಕ್ ಮಾಡಿದ ವೆಬ್ ತಾಣಗಳನ್ನು ಬೇರೆ ಸರ್ವರ್ ನಲ್ಲಿ ಓಪನ್ ಮಾಡಲಿದೆ. ಇಂದು ಹಲವಾರು ಪ್ರಾಕ್ಸಿ ವೆಬ್ ಸೈಟ್ ಗಳು ಕಾರ್ಯನಿರ್ವಹಿಸುತ್ತಿದೆ.
ವಿಪಿಎನ್:
ವಿಪಿಎನ್ ಮೂಲಕವು ನೆಟ್ ವರ್ಕ್ ಆಚೆಗೆ ಸಂಪರ್ಕವನ್ನು ಸಾಧಿಸಬಹುದು. ಇದರಿಂದ ನೀವು ಬ್ಲಾಕ್ ಆಗಿರುವ ತಾಣಗಳನ್ನು ಓಪನ್ ಮಾಡಬಹುದು.
ಎನ್ ವೈಯುಡಿ.ನೆಟ್:
ನೀವು ಬ್ಲಾಕ್ ಮಾಡಬೇಕಾದ ತಾಣಗಳನ್ನು ಆನ್ ಬ್ಲಾಕ್ ಮಾಡಲು ಈ ವೆಬ್ ಸೈಟಿನಲ್ಲಿ ಯುಆರ್ ಎಲ್ ಪೇಸ್ಟ್ ಮಾಡಿದರೆ ಸಾಕು.
ಐಪಿ ಹೈಡಿಂಗ್:
ಇದಲ್ಲದೇ ಐಪಿ ಆಡ್ರಸ್ ಹೈಡ್ ಮಾಡುವ ಮೂಲಕವೂ ನೀವು ಬ್ಲಾಕ್ ಆಗಿರುವ ವೆಬ್ ತಾಣಗಳ ಆಕ್ಸಿಸ್ ಪಡೆಯಬಹುದಾಗಿದೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.