ಫೇಸ್‌ಬುಕ್‌ ಮತ್ತು ಜಿಮೇಲ್ ಹ್ಯಾಕ್ ಆಗದಂತೆ ತಡೆಯುವುದು ಹೇಗೆ?

ನಾವೇಷ್ಟೇ ಶಕ್ತಿಯುತ ಪಾಸ್‌ವರ್ಡ್‌ಗಳನ್ನೇ ನೀಡಿದರೂ ಸಹ ಅವುಗಳನ್ನು ಬ್ರೇಕ್ ಮಾಡುವ ಹ್ಯಾಕರ್‌ಗಳು ಇರುತ್ತಾರೆ.! ಕಂಡ ಕಂಡ ಲಿಂಕ್‌ಗಳನ್ನು ಕ್ಲಿಕ್ ಮಾಡಿ ನಾವೇ ಅವರಿಗೆ ನಮ್ಮ ಖಾತೆಯನ್ನು ಹ್ಯಾಕ್ ಮಾಡಲು ದಾರಿ ಮಾಡಿಕೊಟ್ಟಿರುತ್ತೇವೆ.

|

ಕಂಡ ಕಂಡ ಲಿಂಕ್‌ಗಳನ್ನು ಕ್ಲಿಕ್ ಮಾಡಿ ಆಟವಾಡುವ ಹಲವರಿಗೆ ಆ ಲಿಂಕ್‌ನ ಹಿಂದೆ ಯಾವ ಸೈಬರ್ ಕ್ರಿಮಿನಲ್ ಅಡಗಿಕುಳಿತಿದ್ದಾನೋ ಎಂಬುದು ತಿಳಿದಿರುವುದಿಲ್ಲ. ಇಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡುವುದರಿಂದ ನಮ್ಮ ಯಾವುದೇ ಇಂಟರ್‌ನೆಟ್ ಖಾತೆ ಹ್ಯಾಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎಂಬ ಮಾಹಿತಿ ಕೂಡ ಗೊತ್ತಿರುವುದಿಲ್ಲ.!!

ನಾವೇಷ್ಟೇ ಶಕ್ತಿಯುತ ಪಾಸ್‌ವರ್ಡ್‌ಗಳನ್ನೇ ನೀಡಿದರೂ ಸಹ ಅವುಗಳನ್ನು ಬ್ರೇಕ್ ಮಾಡುವ ಹ್ಯಾಕರ್‌ಗಳು ಇರುತ್ತಾರೆ.! ಕಂಡ ಕಂಡ ಲಿಂಕ್‌ಗಳನ್ನು ಕ್ಲಿಕ್ ಮಾಡಿ ನಾವೇ ಅವರಿಗೆ ನಮ್ಮ ಖಾತೆಯನ್ನು ಹ್ಯಾಕ್ ಮಾಡಲು ದಾರಿ ಮಾಡಿಕೊಟ್ಟಿರುತ್ತೇವೆ. ಅವರು ನಮ್ಮನ್ನೇ ದಾಳ ಮಾಡಿಕೊಂಡು ಖಾತೆಗೆ ಕನ್ನಹಾಕಿ ನಮ್ಮನ್ನು ದೋಚುತ್ತಾರೆ.!!

ಫೇಸ್‌ಬುಕ್‌ ಮತ್ತು ಜಿಮೇಲ್ ಹ್ಯಾಕ್ ಆಗದಂತೆ ತಡೆಯುವುದು ಹೇಗೆ?

ಹಾಗಾಗಿ, ಇಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮುನ್ನ ಎರಡು ಹಂತದ ಸುರಕ್ಷತಾ ವ್ಯವಸ್ಥೆಯನ್ನು ನೀವು ಅಳವಡಿಸಿಕೊಳ್ಳಿ. ಬಹುತೇಕ ಬ್ಯಾಂಕ್‌ಗಳು ಅಳವಡಿಸಿಕೊಂಡಿರುವ ಎರಡು ಹಂತದ ಸುರಕ್ಷತಾ ವ್ಯವಸ್ಥೆ ಈಗ ಎಲ್ಲೆಡೆ ಜಾರಿಗೆ ಬರುತ್ತಿದೆ. ಉದಾಹರಣೆಗೆ ನಾವು ಹೆಚ್ಚು ಬಳಸುವ ಫೇಸ್‌ಬುಕ್‌ ಮತ್ತು ಜಿಮೇಲ್‌ಗಳಲ್ಲಿಯೂ ಎರಡು ಹಂತದ ಸುರಕ್ಷಾ ವ್ಯವಸ್ಥೆ ಲಭ್ಯವಿದೆ.!!

ಫೇಸ್‌ಬುಕ್‌ನಲ್ಲಿ ಎರಡು ಹಂತದ ಸುರಕ್ಷತೆ!!

ಫೇಸ್‌ಬುಕ್‌ನಲ್ಲಿ ಎರಡು ಹಂತದ ಸುರಕ್ಷತೆ!!

ಫೇಸ್‌ಬುಕ್ ಖಾತೆಗೆ ಲಾಗಿನ್ ಆಗಿ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ ಸೆಟ್ಟಿಂಗ್ಸ್‌ನಲ್ಲಿ Security &login ಆಯ್ಕೆ ಮಾಡಿ ಅಲ್ಲಿ ನಿಮಗೆ ನೀವು ಫೇಸ್‌ಬುಕ್‌ಗೆ ಲಾಗಿನ್ ಆದ ಸಿಸ್ಟಂ, ಲಾಗಿನ್ ಆದ ದಿನಾಂಕದ ಕೆಳಗೆ Use two-factor authentication ಎಂದು ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ ನಿಮ್ಮ ಮೊಬೈಲ್‌ಗೆ ಒಟಿಪಿ ಬಂದ ನಂತರವಷ್ಟೆ ಫೇಸ್‌ಬುಕ್‌ಗೆ ಲಾಗಿನ್ ಆಗುವಂತೆ ಮಾಡಬಹುದು.!!

ಹ್ಯಾಕ್ ಆಗಿದಿದ್ದರೂ ತಿಳಿಯುತ್ತದೆ!!

ಹ್ಯಾಕ್ ಆಗಿದಿದ್ದರೂ ತಿಳಿಯುತ್ತದೆ!!

ಸೆಟ್ಟಿಂಗ್ಸ್‌ನಲ್ಲಿ Security &login ಆಯ್ಕೆ ಮಾಡಿ ಅಲ್ಲಿ ನಿಮಗೆ ನೀವು ಫೇಸ್‌ಬುಕ್‌ಗೆ ಲಾಗಿನ್ ಆದ ಸಿಸ್ಟಂ, ಲಾಗಿನ್ ಆದ ದಿನಾಂಕ ಮತ್ತು ಸಮಯ ಕೂಡ ಕಾಣುತ್ತದೆ .ಇಲ್ಲಿ ನಿಮಗೆ ತಿಳಿಯದೆ ಬೇರೆ ಯಾವುದಾದರೂ ಸಿಸ್ಟಂನಿಂದ ಲಾಗಿನ್ ಆಗಿದ್ದರೆ ನಿಮ್ಮ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ ಎಂದು ತಿಳಿದು ಅದನ್ನು ಕೊನೆಗೊಳಿಸಬಹುದು.!!

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT
ಒಮ್ಮೆಲೆ ಎಲ್ಲೆಡೆ ಲಾಗ್ ಔಟ್ ಮಾಡಿ!!

ಒಮ್ಮೆಲೆ ಎಲ್ಲೆಡೆ ಲಾಗ್ ಔಟ್ ಮಾಡಿ!!

ನಿಮ್ಮ ಫೇಸ್‌ಬುಕ್ ಖಾತೆ ಹಲವೆಡೆ ಲಾಗಿನ್ ಆಗಿದ್ದರೆ ನಿಮ್ಮ ಖಾತೆ ಲಾಗಿನ್ ಆದ ಸಿಸ್ಟಂಗಳ ಮಾಹಿತಿಯ ಕೆಳಗೆ logout off all sessions ಎಂದು ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಇಲ್ಲಿಯವರೆಗೂ ನೀವು ಲಾಗಿನ್ ಆಗಿದ್ದ ಅಥವಾ ಇತರರು ನಿಮ್ಮ ಖಾತೆಯಿಂದ ಲಾಗಿನ್ ಆಗಿದ್ದ ಖಾತೆಗಳೆಲ್ಲವೂ ಸೈನ್ ಔಟ್ ಆಗುತ್ತವೆ.!!

ಜೀಮೇಲ್ ಕೂಡ ಹುಷಾರು!!

ಜೀಮೇಲ್ ಕೂಡ ಹುಷಾರು!!

ಜೀಮೇಲ್ ಮೂಲಕ ಲಾಗಿನ್ ಆದಾಗಲೆಲ್ಲಾ ನಿಮಗೆ ಗೊತ್ತಾಗಬೇಕು ಎಂದಾದರೆ ಜೀಮೇಲ್‌ನಲ್ಲಿ ಲಾಗಿನ್ ಅಲರ್ಟ್ ಸೆಟ್ ಮಾಡಿದರೆ ಸಾಕು.ಲಾಗಿನ್ ಅಲರ್ಟ್ ಸೆಟ್ ಮಾಡಿದರೆ ಖಾತೆಗೆ ಲಾಗಿನ್ ಆದಾಗಲೆಲ್ಲಾ ನಿಮಗೆ ಇಮೇಲ್ ಅಥವಾ ಮೊಬೈಲ್ ಸಂದೇಶ ಲಭಿಸುತ್ತದೆ.ಅದರಲ್ಲಿರುವ OTP ನಮೂದಿಸಿದ ನಂತರವೇ ನಿವು ಲಾಗಿನ್ ಆಗಬಹುದು.!!

Best Mobiles in India

English summary
Two-factor verification is a security measure that requires an extra code when you log in. When enabled. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X