ಊಬರ್ ಡ್ರೈವರ್ ಜೊತೆಗೆ ಬುಕ್ಕಿಂಗ್ ನಂತರ ಚಾಟ್ ಮಾಡಲು ಅವಕಾಶ !

|

ನಮ್ಮಲ್ಲಿ ಯಾರಿಗಾದ್ರೂ ದಾರಿ ಹೇಳುವುದು ಅಂದರೆ ಅದು ಬಹಳ ಕಷ್ಟದ ಕೆಲಸ ಅದರಲ್ಲೂ ಇಂತಲ್ಲಿಗೆ ಬನ್ನಿ,ನಾವು ಕಾಯುತ್ತಿರುತ್ತೇವೆ ಎಂದು ಹೇಳುವಾಗ ಜಾಗ ಹೇಳುವ ಪರಿಸ್ಥಿತಿ ಇದೆಯಲ್ಲ ಅದು ಬಹಳ ಕಷ್ಟವಾಗುತ್ತದೆ. ಅದರಲ್ಲೂ ಮಹಾನಗರಿಗಳಲ್ಲಂತೂ ಇದರ ಪಾಡು ಹೇಳುವುದೇ ಬೇಡ. ಊಬರ್ ಡ್ರೈವರ್ ಗಳಿಗೆ ದಾರಿ ಹೇಳುವಾಗ ಕೂಡ ನಾವು ಈ ಸಮಸ್ಯೆಯನ್ನು ಎದುರಿಸುವುದುಂಟು.

ಊಬರ್ ಡ್ರೈವರ್ ಜೊತೆಗೆ ಬುಕ್ಕಿಂಗ್ ನಂತರ ಚಾಟ್ ಮಾಡಲು ಅವಕಾಶ !

ಇದನ್ನು ಸುಲಭಗೊಳಿಸುವುದಕ್ಕಾಗಿ ಊಬರ್ ಇತ್ತೀಚೆಗೆ ಹೊಸ ಫೀಚರ್ ವೊಂದನ್ನು ಆಪ್ ನಲ್ಲಿ ಸೇರಿಸಿದ್ದು ಅದುವೇ “ಪಿಕ್ ಅಪ್ ನೋಟ್ಸ್” .

ಹೊಸ ಫೀಚರ್ ಬಳಕೆದಾರರಿಗೆ ಹೆಚ್ಚುವರಿ ನೋಟ್ಸ್ ನ್ನು ಬರೆಯಲು ಅವಕಾಶ ನೀಡುತ್ತದೆ ಮತ್ತು ನಿಮ್ಮ ಲೊಕೇಷನ್ ನ್ನು ಆದಷ್ಟು ಬೇಗ ತಲುಪಲು ಡ್ರೈವರ್ ಗೆ ಸಹಾಯವಾಗುವಂತಹ ಮಾಹಿತಿಗಳನ್ನು ನೀವಲ್ಲಿ ಬರೆಯಬಹುದು. ಈ ಫೀಚರ್ ಬಹಳ ಜನವಿರುವ ಮತ್ತು ಸಾಕಷ್ಟು ಗೇಟ್ ಗಳಿರುವ ಪ್ರದೇಶದಲ್ಲಿ ಸೇರಿದಂತೆ ಇನ್ನೂ ಹಲವು ಗೊಂದಲ ಸೃಷ್ಟಿಸುವ ಪ್ರದೇಶಗಳಲ್ಲಿ ಅನುಕೂಲಕ್ಕೆ ಬರುತ್ತದೆ.

ಒಂದು ವೇಳೆ ನೀವೂ ಕೂಡ ಈ ಫೀಚರ್ ನ್ನು ಊಬರ್ ಆಪ್ ನಲ್ಲಿ ಬಳಸುವುದು ಹೇಗೆ ಎಂಬ ಬಗ್ಗೆ ಆಲೋಚಿಸುತ್ತಿದ್ದಲ್ಲಿ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಪ್ರಾಥಮಿಕ ಅಗತ್ಯತೆಗಳು:

ಪ್ರಾಥಮಿಕ ಅಗತ್ಯತೆಗಳು:

- ನಿಮ್ಮ ಆಪ್ ಸ್ಟೋರ್ ಬಳಸಿ ನೂತನ ವರ್ಷನ್ ನ ಊಬರ್ ಆಪ್ ನ್ನು ಡೌನ್ ಲೋಡ್ ಮಾಡಿ ಮತ್ತು ಇನ್ಸ್ಚಾಲ್ ಮಾಡಿ.

- ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಂತರ್ಜಾಲ ಸಂಪರ್ಕವಿರಬೇಕು

ಅಪ್ ಡೇಟ್ ಅಥವಾ ಡೌನ್ ಲೋಡ್ ಗೆ ಅನುಸರಿಸಬೇಕಾಗಿರುವ ಹಂತಗಳು:

ಅಪ್ ಡೇಟ್ ಅಥವಾ ಡೌನ್ ಲೋಡ್ ಗೆ ಅನುಸರಿಸಬೇಕಾಗಿರುವ ಹಂತಗಳು:

- ಪ್ಲೇ ಸ್ಟೋರ್(ಆಂಡ್ರಾಯ್ಡ್) ಅಥವಾ ಆಪ್ ಸ್ಟೋರ್(ಐಓಎಸ್) ಗೆ ತೆರಳಿ.

- ಊಬರ್ ಆಪ್ ನ್ನು ಸರ್ಚ್ ಮಾಡಿ

- ಮುಂದಿನ ಪ್ರೊಸೆಸ್ ನ್ನು ಅನುಸರಿಸಲು ಅಪ್ ಡೇಟ್ ಬಟನ್ ನ್ನು ಟ್ಯಾಪ್ ಮಾಡಿ

ಪಿಕ್ ಅಪ್ ನೋಟ್ ನ್ನು ಹಾಕಲು ಅನುಸರಿಸಬೇಕಾಗಿರುವ ಹಂತಗಳು

ಪಿಕ್ ಅಪ್ ನೋಟ್ ನ್ನು ಹಾಕಲು ಅನುಸರಿಸಬೇಕಾಗಿರುವ ಹಂತಗಳು

1.ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಊಬರ್ ಆಪ್ ನ್ನು ತೆರೆಯಿರಿ

2.ನಿಮ್ಮ ಅಗತ್ಯತೆಗೆ ಅನುಸಾರವಾಗಿ ನೀವೆಲ್ಲಿ ಇಳಿಯಬೇಕು ಎಂಬ ಡ್ರಾಪ್ ಲೊಕೇಷನ್ ನ್ನು ಸೆಲೆಕ್ಟ್ ಮಾಡಿ

3.ನಂತರ ನೀವು ಆಯ್ಕೆ ಮಾಡಿಕೊಳ್ಳಬೇಕು ಎಂದಿರುವ ಕ್ಯಾಬ್ ನ್ನು ಸೆಲೆಕ್ಟ್ ಮಾಡಿ.

4.ಬುಕ್ಕಿಂಗ್ ಮಾಡಿ

5.ಒಮ್ಮೆ ಮೇಲಿನ ಹಂತ ಮುಗಿದ ನಂತರ ಬುಕ್ಕಿಂಗ್ ಮಾಹಿತಿಗಳನ್ನು ಒಳಗೊಂಡಿರುವ ಸ್ಲೈಡರ್ ನ್ನು ಸ್ವೈಪ್ ಅಪ್ ಮಾಡಿ.

6.ನಂತರ ಎನಿ ಪಿಕ್ ಅಪ್ ನೋಟ್ಸ್ ಆಯ್ಕೆಯನ್ನು ಗಮನಿಸಿ

7.ಅದನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಮೆಸೇಜ್ ನ್ನು ಟೈಮ್ ಮಾಡಲು ಆರಂಭಿಸಿ ಉದಾಹರಣೆಗೆ- ನನ್ನನ್ನು ಗೇಟ್ ನಂಬರ್ 1 ರ ಬಳಿ ಪಿಕ್ ಅಪ್ ಮಾಡಿ.

8.ಮೆಸೇಜ್ ಸೆಂಡ್ ಮಾಡಲು ಸೆಂಡ್ ಬಟನ್ ನ್ನು ಹಿಟ್ ಮಾಡಿ.

ಊಬರ್ ಡ್ರೈವರ್ ಕೂಡ ನಿಮ್ಮ ಮೆಸೇಜ್ ಗೆ ರಿಪ್ಲೈ ಮಾಡಬಹುದು. ನೀವು ನಿಮ್ಮ ಲೊಕೇಷನ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಲು ಅವಕಾಶವಿರುತ್ತದೆ ಅಥವಾ ಇಬ್ಬರೂ ಚಾಟ್ ನಡೆಸಿ ಇನ್ನೂ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಿಕೊಳ್ಳಲು ಈ ಫೀಚರ್ ನಲ್ಲಿ ಅವಕಾಶವಿರುತ್ತದೆ.

Best Mobiles in India

Read more about:
English summary
How to add pickup note for Uber driver

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X