50 ರೂ. ಕೊಟ್ರೆ ಸ್ಮಾರ್ಟ್‌ಫೋನ್‌ನಲ್ಲೇ ಡ್ರೈವಿಂಗ್ ಲೈಸೆನ್ಸ್..!

|

ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಪರದಾಡುವರನ್ನು ನಾವು ಸಾಮಾನ್ಯವಾಗಿ ಕಾಣಬಹುದಾಗಿದ್ದು, ಇದಕ್ಕೆಲ್ಲ ಕಾರಣ ಎಂದರೆ ಏಜೆಂಟ್ ಗಳ ಹಾವಳಿ. ಇದಕ್ಕಾಗಿ ನೀವೆ ನೇರವಾಗಿ ಡ್ರೈವಿಂಗ್ ಲೈಸೆಸ್ಸ್ ಅನ್ನು ಮಾಡಿಸಿಕೊಳ್ಳುವ ಹೊಸದೊಂದು ಯೋಜನೆಯೂ ಶ್ರೀಘ್ರವೇ ದೇಶದಲ್ಲಿ ಎಲ್ಲಾ ಕಡೆಯೂ ಜಾರಿಯಾಗಲಿದೆ. ಇದು ಪ್ರಾರಂಭವಾದ ನಂತರದಲ್ಲಿ ನೀವು ನಿಮ್ಮ ಮೊಬೈಲ್ ಮೂಲಕವೇ ನೇರವಾಗಿ ಡೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ಳುವ ಅವಕಾಶವು ದೊರೆಯಲಿದೆ.

50 ರೂ. ಕೊಟ್ರೆ ಸ್ಮಾರ್ಟ್‌ಫೋನ್‌ನಲ್ಲೇ ಡ್ರೈವಿಂಗ್ ಲೈಸೆನ್ಸ್..!

ಆನ್‌ಲೈನ್ ಮೂಲಕ ಡ್ರೈವಿಂಗ್ ಲೈಸನ್ಸ್ ಮಾಡಿಸಲು ಅವಕಾಶ ಇದ್ದರೂ ಸಹ RTOಗಳಲ್ಲಿ ಏಜೆಂಟ್ ಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿರುವ ಕಾರಣ ಅವ್ಯವಹಾರ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಸಾಮಾನ್ಯ ವರ್ಗದ ಎಲ್ಲಾ ಮಂದಿಗೂ ಹಣ ನೀಡಿದೆ ಡೈವಿಂಗ್ ಲೈಸೆನ್ಸ್ ಮಾಡಿಸಿಸುವುದು ತುಂಬ ಕಷ್ಟಕರವಾಗಿದೆ. ಈ ಹಿನ್ನಲೆಯಲ್ಲಿ ಮೊಬೈಲ್‌ ಮೂಲಕ ನೇರವಾಗಿ ಡೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನವು ಇದಾಗಿದೆ. ಕೇವಲ ರೂ.50 ಕೊಟ್ಟರೆ ಅಧಿಕಾರಿಗಳೇ ನಿಮ್ಮ ಮನೆಗೆ ಬಂದು ಡ್ರೈವಿಂಗ್ ಲೈಸೆಸ್ಸ್ ಮಾಡಿಕೊಡುತ್ತಾರೆ.

ಮನೆಯಲ್ಲಿ ಕುಳಿತು ಮಾಡಿಸಿ:

ಮನೆಯಲ್ಲಿ ಕುಳಿತು ಮಾಡಿಸಿ:

ಇಂದು ಆನ್‌ಲೈನಿನಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಅವಕಾಶ ಇದ್ದರೂ ಸಹ ಮನೆಯಲ್ಲಿ ಕುಳಿತು ಮಾಡಿಸಿಕೊಳ್ಳುವಷ್ಟು ಸುಲಭವಾಗಿಲ್ಲ. ಏಜೆಂಟ್ ಇಲ್ಲದೆ DL ಮಾಡಿಸಿಕೊಳ್ಳುವುದು ಕಷ್ಟ ಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಈಗ ಬಂದಿರುವ ಈ ಹೊಸ ಯೋಜನೆಯ ಮೂಲಕ ಡ್ರೈವಿಂಗ್ ಲೈಸನ್ಸ್ ಬಹಳಷ್ಟು ಸುಲಭವಾಗಿ ಮನೆಯಲ್ಲೇ ಕುಳಿತು ಮಾಡಿಕೊಳ್ಳಬಹುದು.

ಮೊದಲಿಗೆ ದೆಹಲಿಯಲ್ಲಿ:

ಮೊದಲಿಗೆ ದೆಹಲಿಯಲ್ಲಿ:

ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲವೇ ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಮೊದಲು ಅವಕಾಶವನ್ನು ನೀಡುತ್ತಿರುವ ದೆಹಲಿಯ ಸರಕಾರ. ಇಲ್ಲಿ ಈ ಯೋಜನೆಯೂ ಯಶಸ್ಸು ಪಡೆದ ನಂತರದಲ್ಲಿ ದೇಶದ ಎಲ್ಲಾ ಕಡೆಗಳಲ್ಲಿಯೂ ಈ ಸೇವೆಯನ್ನು ಸಾರಿಗೆ ಇಲಾಖೆ ವಿಸ್ತರಿಸಲಿದೆ ಎನ್ನಲಾಗಿದೆ. ಇದರಿಂದಾಗಿ ಡ್ರೈವಿಂಗ್ ಲೈಸನ್ಸ್ ಮಾಡಿಸುವುದು ಸುಲಭವಾಗಲಿದೆ.

RTOಗೆ ಹೋಗಬೇಕಾಗಿಲ್ಲ:

RTOಗೆ ಹೋಗಬೇಕಾಗಿಲ್ಲ:

ಈ ಹೊಸದಾಗಿ ಆರಂಭಿಸಿರಲಿರುವ ಯೋಜನೆಯಲ್ಲಿ ಡ್ರೈವಿಂಗ್ ಲೈಸನ್ಸ್ ಮಾಡಿಸುವವರಿಗೆ ಬಹಳಷ್ಟು ಉಪಯೋಗವಾಗಲಿದೆ. ಇದಕ್ಕಾಗಿ ಮೊದಲಿಗೆ RTOಗೆ ಹೋಗಬೇಕಾದ ಅನಿವಾರ್ಯತೆ ಇಲ್ಲ ಎನ್ನಲಾಗಿದೆ. ಅಲ್ಲದೇ ಯಾವುದೇ ಏಜೆಂಟ್ ಗಳನ್ನು ಸಂಪರ್ಕಿಸ ಬೇಕಾಗದ ಅಗತ್ಯತೆಯೂ ಇಲ್ಲ ಎನ್ನಲಾಗಿದೆ.

ಅಧಿಕಾರಿಯನ್ನು ಮನೆಗೆ ಕರಿಸಿಕೊಳ್ಳಿ:

ಅಧಿಕಾರಿಯನ್ನು ಮನೆಗೆ ಕರಿಸಿಕೊಳ್ಳಿ:

ಈಗ ಹೊಸದಾಗಿ ನೀಡಿರುವ ಯೋಜನೆಯಲ್ಲಿ RTO ಅಧಿಕಾರಿ ನಿಮ್ಮ ಮನೆಗೆ ಬಂದು ಮಾಹಿತಿಗಳನ್ನು ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ನೀವು ನಿಮ್ಮ ಮೊಬೈಲ್‌ನಿಂದ ಒಂದು ಕರೆಯನ್ನು ಮಾಡಿದರೆ ಸಾಕು ಎನ್ನಲಾಗಿದೆ. ಒಂದು ಕರೆಯನ್ನು ಮಾಡಿದರೆ ಅಧಿಕಾರಿ ಮನೆಗೆ ಬಂದು ಲೈಸೆನ್ಸ್ ಗೆ ಬೇಕಾದ ದಾಖಲೆಗಳನ್ನು ಪಡೆದುಕೊಳ್ಳಿದ್ದಾರೆ. ಇದಕ್ಕಾಗಿ ರೂ.50 ಪಾವತಿ ಮಾಡಬೇಕಾಗುತ್ತದೆ.

ಒಂದೇ ಕರೆ:

ಒಂದೇ ಕರೆ:

ಡ್ರೈವಿಂಗ್ ಲೈಸೆನ್ಸ್ ಮಾಡುವವರಿಗೆ ಹೆಲ್ಪ್ ಲೈನ್ ನಂಬರ್ ಅನ್ನು ನೀಡಲಾಗುತ್ತದೆ. ಈ ನಂಬರ್ ಗೆ ಕರೆ ಮಾಡುವ ಮೂಲಕ ನೀವು ನಿಮ್ಮ ವಿಳಾಸವನ್ನು ರಿಜಿಸ್ಟರ್ ಮಾಡಿಸಿಕೊಳ್ಳಬೇಕಾಗುತ್ತದೆ. ನಂತರದ ಕೆಲದಿನಗಳಲ್ಲಿ ಸರಕಾರ ಅಧಿಕಾರಿಯೊಬ್ಬರು ನಿಮ್ಮ ಬಳಿ ಬಂದು ಲೈಸನ್ಸ್ ಗೆ ಬೇಕಾದ ದಾಖಲೆಗಳನ್ನು ಪಡೆಯುತ್ತಾರೆ.

ಮೊಬೈಲ್ ಮೂಲಕವೇ

ಮೊಬೈಲ್ ಮೂಲಕವೇ

ಹೀಗೆ ನಿಮ್ಮ ಮನೆಗೆ ಬಂದ ಅಧಿಕಾರಿ ಮೊಬೈಲ್ ನೀವು ನೀಡುವ ಮಾಹಿತಿಯನ್ನು ಅಪ್ಲೋಡ್ ಮಾಡಿಕೊಳ್ಳುತ್ತಾರೆ ಮತ್ತು ನಿಮಗೆ ಒಂದು ದಿನಾಂಕವನ್ನು ನೀಡುತ್ತಾರೆ ಅಂದು ಹತ್ತಿರದ RTO ಕಚೇರಿಯಲ್ಲಿ ನೀವು ಸೂಕ್ತ ದಿನದಂದು ಟ್ರಯಲ್ ನೀಡಬೇಕಾಗುತ್ತದೆ.

ಎಲ್ಲರಿಗೂ ಒಂದೇ ಮಾದರಿಯಲ್ಲಿ:

ಎಲ್ಲರಿಗೂ ಒಂದೇ ಮಾದರಿಯಲ್ಲಿ:

ನೀವು ಟ್ರಯಲ್ ಮಾಡಿದ್ದು ಓಕೆ ಆದರೆ ನಿಮಗೆ ಕಲಿಕಾ ಲೈಸನ್ಸ್ ದೊರೆಯುತ್ತದೆ. ನಿಮ್ಮ ಮನೆಗೆ ಪೋಸ್ಟ್ ನಲ್ಲಿ DL ಬರಲಿದೆ ಎನ್ನಲಾಗಿದೆ. ದ್ವಿಚಕ್ರ ವಾಹನ ಲೈಸನ್ಸ್ ಕೂಡ ಇದೆ ರೀತಿಯಲ್ಲಿ ದೊರೆಯಲಿದೆ. ಸದ್ಯಕ್ಕೆ ಈ ಪ್ರಯತ್ನವನ್ನು ದೆಹಲಿಯಲ್ಲಿ ನಡೆಸಲಾಗುತ್ತಿದೆ.

ನಮ್ಮಲ್ಲಿಯೂ ದೊರೆಯಲಿದೆ:

ನಮ್ಮಲ್ಲಿಯೂ ದೊರೆಯಲಿದೆ:

ಮೊದಲಿಗೆ ನಡೆಯಲಿರುವ ಪ್ರಯೋಗವು ಯಶಸ್ಸು ಕಾಣುತ್ತಿದ್ದಂತೆ ದೇಶದ ಎಲ್ಲ ಕಡೆ ಇದೆ ರೀತಿಯ ನಿಯಮ ಜಾರಿಗೆ ತರಲು ಸರಕಾರಗಳು ಮುಂದಾಗಲಿದೆ. ನಮ್ಮ ರಾಜ್ಯದ RTO ಸಹ ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂದಿದ್ದು, ಶೀಘ್ರವೇ ಇಲ್ಲಿಯೂ ಜಾರಿಗೆ ತಂದರು ಆಶ್ಚರ್ಯ ಪಡಬೇಕಾಗಿಲ್ಲ.

ಆನ್‌ಲೈನಿನಲ್ಲಿ ಆಧಾರ್ ನೀಡಿದ್ರೆ 10 ನಿಮಿಷದಲ್ಲಿ ಮನೆಗೆ ರೇಷನ್ ಕಾರ್ಡ್..!

ಆನ್‌ಲೈನಿನಲ್ಲಿ ಆಧಾರ್ ನೀಡಿದ್ರೆ 10 ನಿಮಿಷದಲ್ಲಿ ಮನೆಗೆ ರೇಷನ್ ಕಾರ್ಡ್..!

ರಾಜ್ಯದಲ್ಲಿ ಹೊಸದಾಗಿ ರೇಷನ್ ಕಾರ್ಡ್ ಮಾಡಿಸುವ ಕಾರ್ಯಕ್ಕೆ ತಾತ್ಕಾಲಿಕವಾಗಿ ನೀಡಲಾಗಿದ್ದ ತಡೆ ತರೆವುಗೊಂಡಿದ್ದು, ಆನ್‌ಲೈನಿನಲ್ಲಿ ಮತ್ತೊಮ್ಮೆ ಹೊಸದಾಗಿ ಅರ್ಜಿ ಸಲ್ಲಿಸುವ ಮತ್ತು ಈ ಹಿಂದಿನ ರೆಷನ್ ಕಾರ್ಡಿನಲ್ಲಿರುವ ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದಲ್ಲದೇ ಈ ಬಾರಿ ಅಕ್ರಮಗಳನ್ನು ತಡೆಯುವ ಸಲುವಾಗಿ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯೂ ಕಾರ್ಡುದಾರರಿಗೆ SMS ಕಳುಹಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಹೊಸ ಕಾರ್ಡ್ ಮಾಡಿಸಿಕೊಳ್ಳಲು ಅನುಮತಿ ದೊರೆತಿದ್ದು ಇದಕ್ಕಾಗಿ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವೆಬ್ ಸೈಟಿನಲ್ಲಿ ಅವಕಾಶ ನೀಡಲಾಗಿದೆ. ಇದಲ್ಲೇ ಕಳೆದ ಬಾರಿಗಿಂತಲೂ ಈ ಬಾರಿ ಸುಲಭವಾಗಿ ಕಾರ್ಡ್ ಮಾಡಿಸಲು ಹೆಚ್ಚಿನ ಅವಕಾಶವನ್ನು ನೀಡಲಾಗಿದೆ. ಇದು ನಾಗರೀಕರಿಗೆ ಸಹಾಯವನ್ನು ಮಾಡಲಿದೆ.

ಶೇರ್ ಮಾಡಿ:

ಶೇರ್ ಮಾಡಿ:

ಒಮ್ಮೆ ನೀವು ಈ ಲೇಖನವನ್ನು ಓದಿದ ನಂತರದಲ್ಲಿ ನಿಮ್ಮ ಸ್ನೇಹಿತರು ಮತ್ತು ಅಕ್ಕಪಕ್ಕದವರು ಸಹ ಸುಲಭವಾಗಿ ಆನ್‌ಲೈನಿನಲ್ಲಿ ರೆಷನ್ ಕಾರ್ಡ್ ಪಡೆದುಕೊಳ್ಳಲಿ ಎನ್ನುವ ಕಾರಣಕ್ಕೇ ಶೇರ್ ಮಾಡುವುದನ್ನು ಮರೆಯಬೇಡಿರಿ.

ಆನ್‌ಲೈನಿನಲ್ಲಿಯೇ ಸಲ್ಲಿಸಿ:

ಆನ್‌ಲೈನಿನಲ್ಲಿಯೇ ಸಲ್ಲಿಸಿ:

ಮೊದಲಿಗೆ https://ahara.kar.nic.in/home.aspx ವೆಬ್ ಸೈಟ್ ಅನ್ನು ಓಪನ್ ಮಾಡಿಕೊಳ್ಳಿ, ಇದಾದ ನಂತರದಲ್ಲಿ ಇ- ಸೇವೆಗಳು ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ, ನಂತರದಲ್ಲಿ ಅನೇಕ ಆಯ್ಕೆಗಳು ಕಾಣಿಸಿಕೊಳ್ಳಲಿದ್ದು, ಅದರಲ್ಲಿ ಇ-ಪಡಿತರ ಚೀಟಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ.

ಅನೇಕ ಆಯ್ಕೆಗಳು:

ಅನೇಕ ಆಯ್ಕೆಗಳು:

ಇ-ಪಡಿತರ ಚೀಟಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರದಲ್ಲಿ ಹಲವು ಆಯ್ಕೆಗಳು ಕಾಣಿಸಿಕೊಳ್ಳಿದ್ದು, ಹೊಸ ಪಡಿತರ ಚೀಟಿ ಮಾಡಿಸುವ ಆಯ್ಕೆ ಸೇರಿದಂತೆ ಹಲವು ಆಯ್ಕೆಗಳು ಕಾಣಿಸಿಕೊಳ್ಳಲಿದ್ದು, ಆಧಾರ್ ಆಪ್ ಡೇಟ್ ಸೇರಿದಂತೆ ವಿವಿಧ ಆಯ್ಕೆಗಳು ಅಲ್ಲಿ ಲಭ್ಯವಿದೆ.

ಕನ್ನಡ ಸೆಲೆಕ್ಟ್ ಮಾಡಿ:

ಕನ್ನಡ ಸೆಲೆಕ್ಟ್ ಮಾಡಿ:

ನೀವು ಹೊಸ ಪಡಿತರ ಚೀಟಿಗಾಗಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರದಲ್ಲಿ ನಿಮಗೆ ಭಾಷೆ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಇದರಲ್ಲಿ ಕನ್ನಡ ಇಲ್ಲವೇ ಇಂಗ್ಲಿಷ್ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಕನ್ನಡವನ್ನು ಆಯ್ಕೆ ಮಾಡಿಕೊಂಡು ಮುಂದುವರೆಯಿರಿ.

ನಂತರದಲ್ಲಿ:

ನಂತರದಲ್ಲಿ:

ಇದಾದ ನಂತರದಲ್ಲಿ ಹೊಸ ಪಡಿತರ ಚೀಟಿಗಾಗಿ. ಉಳಿಸಲಾದ ಅರ್ಜಿ ಮತ್ತು ಅರ್ಜಿ ಹಿಂಪಡೆಯಲು ಎನ್ನುವ ಮೂರು ಆಯ್ಕೆಗಳು ಕಾಣಿಸಿಕೊಳ್ಳಲಿದೆ. ಇದರಲ್ಲಿ ಹೊಸ ಪಡಿತರ ಚೀಟಿಗಾಗಿ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ. ಇದಾದ ನಂತರದಲ್ಲಿ ಕಾಣಿಸಿಕೊಳ್ಳುವ ವಿಂಡೋದಲ್ಲಿ ಎರಡು ಆಯ್ಕೆಗಳು ಕಾಣಿಸಿಕೊಳ್ಳಲಿದೆ.

ಎರಡು ಆಯ್ಕೆಗಳು:

ಎರಡು ಆಯ್ಕೆಗಳು:

ಆದ್ಯತಾ ಕುಟುಂಬ ಮತ್ತು ಆದ್ಯತೇತರ ಕುಟುಂಬ ಎಂಬ ಆಯ್ಕೆಗಳು ಕಾಣಿಸಿಕೊಳ್ಳಿದೆ. ಇದರಲ್ಲಿ ನಿಮ್ಮ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡು ಮುಂದುವರೆಯಿರಿ. ಇದರಲ್ಲಿ ನಿಮ್ಮ ಆಯ್ಕೆಯನ್ನು ತಿಳಿದುಕೊಳ್ಳಲು ಅವುಗಳ ಮೇಲೆ ಕ್ಲಿಕ್ ಮಾಡಿ.

ಇದಾದ ಮೇಲೆ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ನೀಡಿ:

ಇದಾದ ಮೇಲೆ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ನೀಡಿ:

ಇಲ್ಲಿ ನೀವು ಆಯ್ಕೆಯನ್ನು ಮಾಡಿಕೊಂಡ ನಂತರದಲ್ಲಿ ನಿಮ್ಮ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ನೀಡಬೇಕಾಗಿದೆ. ಇದನ್ನು ನೀಡಿದ ನಂತರದಲ್ಲಿ ನಿಮ್ಮ ಮೊಬೈಲ್ ನಂಬರ್‌ಗೆ OTPಯೊಂದು ಬರಲಿದೆ.

ನಂತರ ಆಡ್ ಮಾಡಿ:

ನಂತರ ಆಡ್ ಮಾಡಿ:

ಇದಾದ ಮೇಲೆ ನಿಮ್ಮ ಮಾಹಿತಿಯೂ ಅಲ್ಲಿ ಕಾಣಿಸಿಕೊಳ್ಳಿದ್ದು, ಅದರ ಪಕ್ಕದಲ್ಲಿಯೇ ಆಡ್ ಎನ್ನು ಆಯ್ಕೆಯೊಂದು ಕಾಣಿಸಿಕೊಳ್ಳಿದೆ. ಇದಾದ ಮೇಲೆ ನಿಮ್ಮ ಮಾಹಿತಿಯೂ ಸೇವ್ ಆಗಲಿದೆ. ಇದರೊಂದಿಗೆ ನಿಮ್ಮ ಕುಟುಂಬದವರ ಮಾಹಿತಿಯನ್ನು ನೀವು ಆಡ್ ಮಾಡಬಹುದಾಗಿದೆ.

ಮಾಡಿದ ನಂತರ:

ಮಾಡಿದ ನಂತರ:

ಇದಾದ ನಂತರದಲ್ಲಿ ನೀವು ಗ್ರಾಮೀಣ ಇಲ್ಲವೇ ನಗರ ಭಾಗದಲ್ಲಿ ವಾಸ ಮಾಡುತ್ತಿರುವ ಕುರಿತು ಮಾಹಿತಿಯನ್ನು ನೀಡಬೇಕಾಗಿದೆ. ಅಲ್ಲಿಯೇ ಆಯ್ಕೆಗಳು ಬರಲಿದ್ದು, ಅವುಗಳ ಮೇಲೆ ಕ್ಲಿಕ್ ಮಾಡಿದರೆ ಸಾಕು.

ಅಲ್ಲಿಯೇ ತೋರಿಸಲಿದೆ:

ಅಲ್ಲಿಯೇ ತೋರಿಸಲಿದೆ:

ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರದಲ್ಲಿ ನಿಮ್ಮ ರೆಷನ್ ಕಾರ್ಡ್ ಆಲ್ಲಿಯೇ ತೋರಿಸಲಿದ್ದು, ಅಲ್ಲಿಂದಲೇ ಪ್ರಿಂಟ್ ಅನ್ನು ಪಡೆದುಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಈ ಹಿಂದೆ ಇದ್ದಂತಹ ಯಾವುದೇ ತೊಂದರೆಗಳು ಇದರಲ್ಲಿ ಇಲ್ಲ. ಕೇವಲ 10 ನಿಮಿಷದಲ್ಲಿ ನಿಮ್ಮ ರೆಷನ್ ಕಾರ್ಡ್ ಅನ್ನು ಪ್ರಿಂಟ್ ಮಾಡಿಕೊಳ್ಳಬಹುದು.

ಅತ್ಯಂತ ಸುಲಭ ವಿಧಾನ:

ಅತ್ಯಂತ ಸುಲಭ ವಿಧಾನ:

ಈ ಹಿಂದಿನಂತೆ ನೀವು ರೇಷನ್ ಕಾರ್ಡ್ ಮಾಡಿಸಲು ಅಲ್ಲಿಂದ ಇಲ್ಲಿಗೆ ಅಲೆಯೂವ ಅಗತ್ಯವೇ ಇರುವುದಿಲ್ಲ. ಬದಲಾಗಿ ಕ್ಷಣ ಮಾತ್ರದಲ್ಲಿಯೇ ನಿಮ್ಮ ಮನೆಯಲ್ಲಿಯೇ ಕುಳಿತು ರೆಷನ್ ಕಾರ್ಡ್ ಅನ್ನು ಮಾಡಿಸಿಕೊಳ್ಳಬಹುದಾಗಿದೆ.

Most Read Articles
Best Mobiles in India

English summary
How To Apply for a Driving Licence in mobile. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more