ಒಂದೇ ನಿಮಿಷದಲ್ಲಿ ಆನ್‌ಲೈನಿನಲ್ಲಿ ಉಚಿತ ವೋಟರ್ ಐಡಿ ಕಾರ್ಡ್: ಮಾಡಿಸುವುದು ಹೇಗೆ..?

|

ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿದೆ. ಮತ ಬೇಟೆಗೆ ರಾಜಕೀಯ ನಾಯಕರು ಮುಂದಾಗಿದ್ದಾರೆ, ಮತದಾರರು ಸೂಕ್ತ ಅಭ್ಯರ್ಥಿಗೆ ಮತ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯ ಚುನಾವಣೆಯಲ್ಲಿ ನೀವು ಮತದಾನ ಮಾಡುವ ಸಲುವಾಗಿ ವೋಟರ್ ಐಡಿ ಹೊಂದಿರ ಬೇಕಾಗುತ್ತಿದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಯಾವುದಾದರೂ ಗುರುತಿನ ಚೀಟಿ ಹೊಂದಿದ್ದರು ನೀವು ಮತ ಚಲಾಯಿಸಬಹುದು.

ಒಂದೇ ನಿಮಿಷದಲ್ಲಿ ಆನ್‌ಲೈನಿನಲ್ಲಿ ಉಚಿತವಾಗಿ ವೋಟರ್ ಐಡಿ ಕಾರ್ಡ್: ಹೇಗೆ..?

ಈ ಹಿನ್ನಲೆಯಲ್ಲಿ ಮನೆಯಲ್ಲಿ ಕುಳಿತು ವೋಟರ್ ಐಡಿಯನ್ನು ಸುಲಭವಾಗಿ ಮಾಡಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ. 18 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ವೋಟರ್ ಐಡಿ ಮಾಡಿಸಿಕೊಳ್ಳಬೇಕಾಗಿದ್ದು, ಈ ಹಿನ್ನಲೆಯಲ್ಲಿ ವೋಟರ್ ಐಡಿ ಮಾಡಿಸಿಕೊಳ್ಳುವ ವಿಧಾನ, ಬೇಕಾಗಿರುವ ಡಾಕ್ಯೂಮೆಂಟ್‌ಗಳು ಯಾವುವು ಎಂಬುದನ್ನು ಮುಂದಿನಂತೆ ತಿಳಿದುಕೊಳ್ಳಿ.

ವೋಟರ್ ಐಡಿ ಮಾಡಿಸಬೇಕಾದ ಡಾಕ್ಯೂಮೆಂಟ್‌ಗಳು:

ವೋಟರ್ ಐಡಿ ಮಾಡಿಸಬೇಕಾದ ಡಾಕ್ಯೂಮೆಂಟ್‌ಗಳು:

ದೇಶದಲ್ಲಿ ವೋಟರ್ ಐಡಿ ಕಾರ್ಡ್ ಮಾಡಿಸಿಕೊಳ್ಳಲು ಎರಡು ಮಾದರಿಯ ದಾಖಲಾತಿಗಳು ಅಗತ್ಯವಾಗಿದೆ. ಒಂದು ನಿಮ್ಮ ವಯಸ್ಸನ್ನು ದೃಢಿಕರಿಸಲು ಅವಶ್ಯವಾದ ದಾಖಲೆಗಳು, ಮತ್ತೊಂದು ನಿಮ್ಮ ವಿಳಾಸವನ್ನು ದೃಢಿಕರಿಸುವ ದಾಖಲಾತಿಗಳು. ಜೊತೆಗೆ ನಿಮ್ಮ ಪಾಸ್‌ಪೋರ್ಟ್ ಸೈಜಿನ ಫೋಟೊವೊಂದು ಬೇಕು. ಇವುಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ. ಅರ್ಜಿ ಹಾಕಬೇಕಾದರೆ ಇವುಗಳನ್ನು ಆಪ್‌ಲೋಡ್ ಮಾಡಬೇಕಾಗುತ್ತದೆ.

ವಯಸ್ಸು ದೃಢಿಕರಿಸುವ ದಾಖಲೆಗಳು:

ವಯಸ್ಸು ದೃಢಿಕರಿಸುವ ದಾಖಲೆಗಳು:

ಇವುಗಳಲ್ಲಿ ಯಾವುದಾರರು ಒಂದು

- ಜನನ ಪ್ರಮಾಣಪತ್ರ
- ಹುಟ್ಟಿದ ದಿನಾಂಕವಿರುವ 10 ನೇ ತರಗತಿ ಅಂಕಪಟ್ಟಿ
- ಭಾರತೀಯ ಪಾಸ್ ಪೋರ್ಟ್
- ಪ್ಯಾನ್ ಕಾರ್ಡ್
- ಚಾಲನಾ ಪರವಾನಿಗೆ
- ಆಧಾರ್

ವಿಳಾಸ ದೃಢೀಕರಣಕ್ಕೆ ದಾಖಲೆಗಳು:

ವಿಳಾಸ ದೃಢೀಕರಣಕ್ಕೆ ದಾಖಲೆಗಳು:

ಇವುಗಳಲ್ಲಿ ಯಾವುದಾರರು ಒಂದು

- ಬ್ಯಾಂಕ್ ಪಾಸ್ ಬುಕ್
- ರೇಷನ್ ಕಾರ್ಡ್
- ಭಾರತೀಯ ಪಾಸ್ ಪೋರ್ಟ್
- ಪ್ಯಾನ್ ಕಾರ್ಡ್
- ಚಾಲನಾ ಪರವಾನಿಗೆ
- ನೀರು / ದೂರವಾಣಿ / ವಿದ್ಯುತ್ / ಅನಿಲ ಸಂಪರ್ಕ ಬಿಲ್

ಆನ್‌ಲೈನಿನಲ್ಲಿ ಆಪ್ಲೈ ಮಾಡುವುದು ಹೇಗೆ..?

ಆನ್‌ಲೈನಿನಲ್ಲಿ ಆಪ್ಲೈ ಮಾಡುವುದು ಹೇಗೆ..?

ಈ ಮೇಲಿನ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ. ಇದಾದ ನಂತರದಲ್ಲಿ ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನೀವು ಆನ್‌ಲೈನಿನಲ್ಲಿ ವೋಟರ್ ಕಾರ್ಡಿಗೆ ಆಪ್ಲೇ ಮಾಡಿ.

How to Check Your Voter ID Card Status (KANNADA)
ಹಂತ 01:

ಹಂತ 01:

ಮೊದಲಿಗೆ ನಾಷಿನಲ್ ವೋಟರ್ ಸರ್ವೀಸ್ ಪೋರ್ಟಲ್ ಓಪನ್ ಮಾಡಿಕೊಳ್ಳಿ, ನಂತರದಲ್ಲಿ Apply online for registration of new voter / due to shifting from AC ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.

ಹಂತ 02:

ಹಂತ 02:

ಇದು ನಿಮಗೆ ಕಷ್ಟವಾದರೆ ನೇರವಾಗಿ NVSP Form 6 page ಅನ್ನು ಆಯ್ಕೆಮಾಡಿಕೊಳ್ಳಿ. ಅಲ್ಲಿ ನಿಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ.

ಹಂತ 03:

ಹಂತ 03:

ನಂತರದಲ್ಲಿ ಅಲ್ಲಿರುವ ಖಾಲಿ ಜಾಗಗಳಲ್ಲಿ ನಿಮ್ಮ ಮಾಹಿತಿಗಳನ್ನು ತುಂಬಿರಿ. ಹೆಸರು, ವಯಸ್ಸು, ವಿಳಾಸ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ದಾಖಲಿಸಿ.

ಹಂತ 04:

ಹಂತ 04:

ಅಲ್ಲಿ ಕೇಳಿರುವ ಮಾಹಿತಿಗೆ ಅನುಗುಣವಾಗಿ ನೀವು ಸ್ಕ್ಯಾನ್ ಮಾಡಿಕೊಂಡಿರುವ ದಾಖಲಾತಿಗಳನ್ನು ಆಪ್‌ಲೋಡ್ ಸಹ ಮಾಡಿರಿ. ಅವುಗಳನ್ನು ಕೇಳಿದ ಜಾಗದಲ್ಲಿಯೇ ಆಪ್‌ಲೋಡ್ ಮಾಡಿ.

ಹಂತ 05:

ಹಂತ 05:

ಒಮ್ಮೆ ಎಲ್ಲಾ ಮಾಹಿತಿಯನ್ನು ಆಪ್‌ಲೋಡ್ ಮಾಡಿದ ಮೇಲೆ, ಎಲ್ಲವೂ ಸರಿ ಇದೆಯೇ ಇಲ್ಲವೇ ಎಂಬುದನ್ನು ತಿಳಿಯವು ಸಲುವಾಗಿ ಮತ್ತೊಮ್ಮೆ ಚೆಕ್ ಮಾಡಿಕೊಳ್ಳಿ. ಇದಾದ ನಂತರದಲ್ಲಿ ಸಬಿಟ್ ಬಟನ್ ಕ್ಲಿಕ್ ಮಾಡಿರಿ.

ಹಂತ 06:

ಹಂತ 06:

ಇಷ್ಟು ಮಾಹಿತಿಗಳನ್ನು ನೀಡಿದ ಮೇಲೆ ನಿಮ್ಮ ಐಡಿ ಕಾರ್ಡ್ ಅನ್ನು 30 ದಿನಗಳ ಒಳಾಗಾಗಿ ವಿತರಿಸಲಾಗುವುದು. ಅಲ್ಲದೇ ನೀವು ಅರ್ಜಿ ಹಾಕಿರುವುದಕ್ಕೆ ಕನ್ಫರ್ಮೇಷನ್ ಇ ಮೇಲ್ ಸಹ ಬರಲಿದೆ.

ಓದಿರಿ: ಮಾರುಕಟ್ಟೆ ನಡುಗಿಸಲಿದೆ ಆಪಲ್: ಅರ್ಧ ಬೆಲೆಗೆ, ಡ್ಯುಯಲ್ ಸಿಮ್ ಐಫೋನ್..!

Best Mobiles in India

English summary
How to Apply for Voter ID Card Online. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X