ಮನೆಯಲ್ಲಿ ಹೈಸ್ಪೀಡ್ ಸಂಪರ್ಕವಿದ್ದರೂ ಇಂಟರ್‌ನೆಟ್ ಸ್ಲೋ ಆಗಿದೆಯೇ?..ಇಲ್ಲಿ ನೋಡಿ!

|

ಯಾವುದೇ ಕಂಪೆನಿಯ ಬ್ರಾಡ್‌ಬ್ಯಾಂಡ್ ಕನೆಕ್ಷನ್ ಪಡೆದರೂ ಸಹ ಸ್ಪೀಡ್ ಇಂಟರ್‌ನೆಟ್ ದೊರೆಯುತ್ತಿಲ್ಲ ಎಂಬುದು ಬಹುತೇಕ ಬಳಕೆದಾರರ ದೂರು. ನೆಟ್‌ವರ್ಕ್ ಕವರೇಜ್ ಚೆನ್ನಾಗಿದೆ, ಆದರೆ ಅದರಿಂದ ಸ್ಪೀಡ್ ಇಂಟರ್‌ನೆಟ್ ದೊರೆಯುತ್ತಿಲ್ಲ ಎಂದು ಹಲವರು ಹೇಳುವುದನ್ನು ಕೇಳಿದ್ದೇನೆ. ಹಾಗಾಗಿ, ಇಂದಿನ ಲೇಖನದಲ್ಲಿ ನಾನು ನಿಮಗೆ ಸಹಾಯ ಮಾಡಲು ಬಂದಿದ್ದೇನೆ.

ಹೌದು, ನೀವು ಎಷ್ಟೇ ಹೈಸ್ಪೀಡ್ ಸಂಪರ್ಕವಿರುವ ಬ್ರಾಡ್‌ಬ್ಯಾಂಡ್ ಕನೆಕ್ಷನ್ ಪಡೆದರೂ ಅದು ಸ್ಲೋ ಆಗಿ ಕೆಲಸ ಮಾಡುತ್ತದೆ. ಒಮ್ಮೊಮ್ಮೆ ಇದು ಇಂಟರ್‌ನೆಟ್ ಸೇವೆ ಪೂರೈಕೆದಾರ ತಪ್ಪಾಗಿದ್ದರೆ, ಅದರ ಹೊರತಾಗಿ ವೈಫೈ ಸ್ಲೋ ಆಗಿರಲು ಇತರೆ ಕಾರಣಗಳಿರಬಹುದು. ಅವುಗಳ ಬಗ್ಗೆ ನೀವು ಸ್ವಲ್ಪ ತಿಳಿದರೂ ಸಹ ಹೈಸ್ಪೀಡ್ ಇಂಟರ್‌ನೆಟ್ ಸಂಪರ್ಕ ಪಡೆಯಬಹುದು.

ಮನೆಯಲ್ಲಿ ಹೈಸ್ಪೀಡ್ ಸಂಪರ್ಕವಿದ್ದರೂ ಇಂಟರ್‌ನೆಟ್ ಸ್ಲೋ ಆಗಿದೆಯೇ?..ಇಲ್ಲಿ ನೋಡಿ!

ಉದಾಹರಣೆಗೆ, ನೀವಿನ್ನು ಹಳೆಯ ರೂಟರ್ಗಳನ್ನು ಬಳಸುತ್ತಿದ್ದರೆ, ಹೈಸ್ಪೀಡ್ ಸಂಪರ್ಕವಿದ್ದರೂ ಇಂಟರ್‌ನೆಟ್ ಸಂಪರ್ಕ ಸ್ಲೋ ಆಗಿರುತ್ತದೆ. ಹಾಗಾಗಿ, ರೂಟರ್ ಹಳೆಯದಾಗಿದ್ದರೆ, ಹೊಸ ಮಾದರಿಯ ರೂಟರ್ ಬಳಸಿ. ಮನೆ ದೊಡ್ಡದಾಗಿದ್ದಲ್ಲಿ ಹೆಚ್ಚು ನೆಟ್‌ವರ್ಕ್ ಕವರೇಜ್‌ಗಾಗಿ ಎಕ್ಸ್‌ಟರ್ನಲ್ ವೈ-ಫೈ ಆಂಟೆನಾ ಬಳಸಿ. ಇದರಿಂದ ಸಿಗ್ನಲ್ ಹೆಚ್ಚು ಸ್ಥಳವನ್ನು ತಲುಪಲು ಸಾಧ್ಯ.

ಯಾವುದೇ ಕಾರಣಕ್ಕೂ ರೂಟರ್ ಅನ್ನು ಸಿಗ್ನಲ್ ಸಿಗಂದಂತಹ ಜಾಗದಲ್ಲಿ ಇರಿಸಬೇಡಿ, ರೂಟರ್ ಇರಿಸುವ ಜಾಗವೂ ಇಂಟರ್‌ನೆಟ್ ವೇಗದ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚು ಕವರೇಜ್ ಇರುವ ಪ್ರದೇಶದಲ್ಲಿ ರೂಟರ್ ಇರಿಸುವುದು ಸೂಕ್ತ. ಈಗ ನಿಮ್ಮ ಮನೆಯಲ್ಲಿ ಯಾವ ಜಾಗದಲ್ಲಿ ಹೆಚ್ಚು ಇಂಟರ್‌ನೆಟ್ ಸಿಗಲಿದೆ ಎಂಬುದನ್ನು ಆಪ್‌ ಮೂಲಕ ತಿಳಿಯಬಹುದು.

ಮನೆಯಲ್ಲಿ ಹೈಸ್ಪೀಡ್ ಸಂಪರ್ಕವಿದ್ದರೂ ಇಂಟರ್‌ನೆಟ್ ಸ್ಲೋ ಆಗಿದೆಯೇ?..ಇಲ್ಲಿ ನೋಡಿ!

ಇನ್ನು ತಂತ್ರಜ್ಞಾನ ಮಾದರಿಯಲ್ಲಿ ಹೇಳುವುದಾದರೆ, ನಿಮ್ಮ ರೂಟರ್‌ನಲ್ಲಿ ಡುಯಲ್ ಬಾಂಡ್ ರೂಟರ್‌ನಲ್ಲಿ 2.4GHz ಬದಲು 5GHz ಫ್ರೀಕ್ವೆನ್ಸಿ ಆಯ್ಕೆ ಮಾಡಿಕೊಳ್ಳಿ, ಇದರಿಂದ ವೇಗ ವರ್ಧನೆಯಾಗುತ್ತದೆ. ಇದರ ಜೊತೆಗೆ ಮುಖ್ಯ ಸಲಹೆ ಎಂದರೆ, ವೈಫೈ ಮೂಲಕ ನೆಟ್‌ವರ್ಕ್ ಹೆಚ್ಚು ವೇಗ ಮತ್ತು ಕವರೇಜ್ ಹೊಂದಿರಲು ಅಧಿಕ ಬ್ಯಾಂಡ್ ಹೊಂದಿರುವ ರೂಟರ್ ಬಳಸಿ.

Best Mobiles in India

English summary
How to speed up Wi-Fi: ways to boost your broadband internet speed. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X