ವಿಂಡೋಸ್‌ನಲ್ಲಿ ಫೋಲ್ಡರ್ ಬಣ್ಣ ಬದಲಾಯಿಸುವುದು ಹೇಗೆ..?
ನಾವಿಂದು ಆ ಫೋಲ್ಡರ್ ಗಳನ್ನು ಹೇಗೆ ಬಣ್ಣ-ಬಣ್ಣವಾಗಿಸುವುದು ಎನ್ನುವುದನ್ನು ತಿಳಿಸಿಕೊಡಲಿದ್ದೇವೆ,
ಇಂದು ಸಾಕಷ್ಟು ಕಂಪ್ಯೂಟರ್ ಗಳು ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ನಲ್ಲಿಯೇ ಕಾರ್ಯನಿರ್ವಹಿಸುತ್ತಿರುವುದನ್ನು ನಾವು ಕಾಣಬಹುದು. ನೀವು ಸಹ ವಿಂಡೋಸ್ ಬಳಕೆ ಮಾಡಿಕೊಳ್ಳುತ್ತಿದ್ದರೇ ಅದರಲ್ಲಿ ಒಂದೇ ಬಣ್ಣದ ಫೋಲ್ಡರ್ ಗಳನ್ನು ನೋಡಿ ನೋಡಿ ಬೇಜಾರು ಆಗಿದ್ಯಾ..?

ಓದಿರಿ: ಜಿಯೋಗೆ ವರ್ಷ ತುಂಬಿದ ಸಂಭ್ರಮ: ದಾಖಲೆ ಮುಟ್ಟಿದೆ ಜಿಯೋ ಬಳಕೆದಾರರ ಸಂಖ್ಯೆ
ಹಾಗಿದ್ರೆ ನಾವಿಂದು ಆ ಫೋಲ್ಡರ್ ಗಳನ್ನು ಹೇಗೆ ಬಣ್ಣ-ಬಣ್ಣವಾಗಿಸುವುದು ಎನ್ನುವುದನ್ನು ತಿಳಿಸಿಕೊಡಲಿದ್ದೇವೆ, ಇದರಿಂದ ನೀವು ಡೇಟಾ ವನ್ನು ಸೇವ್ ಮಾಡುವಾಗ ಬಣ್ಣ ಬಣ್ಣದಲ್ಲಿದ್ದರೇ ನೀವು ಗುರುತಿಸಲು ಸಹಾಯಕವಾಗಲಿದೆ.

ಹಂತ 01:
ಮೊದಲು Folder Colorizer ಅನ್ನು download.cnet.com ನಿಂದ ಡೌನ್‌ಲೋಡ್ ಮಾಡಿಕೊಳ್ಳಿ. ಅದುವೇ ಉಚಿತವಾಗಿ ದೊರೆಯಲಿದೆ.

ಹಂತ 02:
Folder Colorizer ಅನ್ನು ಡೌನ್‌ಲೋಡ್ ಮಾಡಿದ ನಂತರದಲ್ಲಿ ಸೆಟಪ್ ಫೈಲ್ ಮೇಲೆ ಡಬ್ಬಲ್ ಕ್ಲಿಕ್ ಮಾಡಿ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ.

ಹಂತ 03:
ನಂತರ ಅಲ್ಲಿ ಲೈಸೆನ್ಸ್ ಆಗ್ರಿಮೆಂಟ್ ಅನ್ನು ಅಕ್ಸೆಪ್ಟ್ ಮಾಡುವಂತೆ ಕೇಳಿಕೊಳ್ಳಲಿದೆ. ಅದನ್ನು ಅಕ್ಸೆಪ್ಟ್ ಮಾಡಿರಿ. ನಂತರ ಅಲ್ಲಿರುವ ನೆಕ್ಸಟ್ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 04:
ನಂತರದಲ್ಲಿ ನಿಮ್ಮ ಇನ್‌ಸ್ಟಾಲ್ ಕಸ್ಟಮೇಜ್ ಅನ್ನುವ ಆಯ್ಕೆಯು ಕಾಣಿಸಿಕೊಳ್ಳಲಿದ್ದು, ನಂತರ ಅಲ್ಲಿ ಇನ್‌ಸ್ಟಾಲ್ ಡೈವ್ ಅನ್ನು ಆಯ್ಕೆ ಮಾಡಿಕೊಳ್ಳಿ. ನಂತರ ಇನ್‌ಸ್ಟಾಲ್ ನೌ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 05:
ಇನ್‌ಸ್ಟಾಲ್ ಮಾಡಿದ ನಂತರದಲ್ಲಿ ನೀವು ಫೋಲ್ಡರ್ ಮೇಲೆ ರೈಟ್ ಕ್ಲಿಕ್ ಮಾಡಿದ ನಂತರದಲ್ಲಿ ಅಲ್ಲಿ ಕಲರೈಜ್ಡ್ ಆಯ್ಕೆಯೊಂದು ಕಾಣಿಸಿಕೊಳ್ಳಲಿದೆ. ಅದನ್ನು ಕ್ಲಿಕ್ ಮಾಡಿ ನಿಮಗೆ ಬೇಕಾದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಿ.


Click it and Unblock the Notifications








