ಜಿಯೋಗೆ ವರ್ಷ ತುಂಬಿದ ಸಂಭ್ರಮ: ದಾಖಲೆ ಮುಟ್ಟಿದೆ ಜಿಯೋ ಬಳಕೆದಾರರ ಸಂಖ್ಯೆ

Written By:

ದೇಶದಲ್ಲಿ ಜಿಯೋ ಆರಂಭವಾಗಿ ಒಂದು ವರ್ಷ ಕಳೆದಿದೆ, ಹೊಸ ಕ್ರಾಂತಿಯನ್ನು ಹುಟ್ಟುಹಾಕಿದ್ದ ಮುಖೇಶ್ ಅಂಬಾನಿ ದೇಶದ ಜನತೆಗೆ ಅತೀ ಕಡಿಮೆ ಡೇಟಾವನ್ನು ನೀಡಿದ್ದಲ್ಲದೇ, ಬೇರೆ ಕಂಪನಿಗಳಿಂದಲೂ ಡೇಟಾವನ್ನು ಕಡಿಮೆ ಬೆಲೆಗೆ ನೀಡುವಂತೆ ಮಾಡಿದ್ದರು.

ಜಿಯೋಗೆ ವರ್ಷ ತುಂಬಿದ ಸಂಭ್ರಮ: ದಾಖಲೆ ಮುಟ್ಟಿದೆ ಜಿಯೋ ಬಳಕೆದಾರರ ಸಂಖ್ಯೆ

ಓದಿರಿ: ಈ ಸ್ಮಾರ್ಟ್‌ಫೋನ್ ಲಾಂಚ್ ಆದರೆ ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳ ಕಥೆ ಮುಗಿದ ಹಾಗೆ..!

ಜಿಯೋ ಕೆಲವು ದಿನಗಳು ಮಾತ್ರವೇ ಉಳಿಯಲಿದ್ದು, ಬೇರೆ ಟೆಲಿಕಾಂ ಕಂಪನಿಗಳಂತೆ ಮುಚ್ಚಿಹೋಗಲಿದೆ ಎಂದು ಅನೇಕ ಭಾವಿಸಿದ್ಧರೂ, ಆದರೆ ಮುಖೇಶ್ ಅಂಬಾನಿ ಇದನ್ನೆಲ್ಲಾ ತಲೆಕೆಳಗೆ ಮಾಡಿದಲ್ಲದೇ ವರ್ಷ ಕಳೆದರೂ ದೇಶದ ಬೇರೆಲ್ಲಾ ಟೆಲಿಕಾಂ ಕಂಪನಿಗಳು ಜಿಯೋಗೆ ಹೆದರುವಂತೆ ಮಾಡಿದ್ದಾರೆ. ಒಂದೇ ವರ್ಷದಲ್ಲಿ ದಾಖಲೆ ಪ್ರಮಾಣದ ಚಂದದಾರನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಂಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಬಳಕೆದಾರರ ಸಂಖ್ಯೆ?

ಜಿಯೋ ಬಳಕೆದಾರರ ಸಂಖ್ಯೆ?

ಒಂದು ವರ್ಷದಲ್ಲಿ ಜಿಯೋ ಬಳಗವನ್ನು ಸೇರಿದವರ ಸಂಖ್ಯೆಯೂ 130 ಮಿಲಿಯನ್ ಎಂದರೇ ನೀವು ನಂಬಲೇ ಬೇಕು. ಮೊದಲು ಉಚಿತ ಸೇವೆ ಇದಕ್ಕಾಗಿ ಜನ ಮುಗಿಬೀಳುತ್ತಿದ್ದಾರೆ ಎಂದರೆ, ಆದರೆ ನಂತರ ತನ್ನ ಸೇವೆಗೆ ದರವನ್ನು ವಿಧಿಸಿದರೂ ಸಹ ಜನ ಜಿಯೋ ಬಿಡಲಿಲ್ಲ. ಡುಡ್ಡು ಕೊಟ್ಟು ಜಿಯೋ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಎಲ್ಲಾರಿಗೂ ವೇಗ ಇಂಟರ್ನೆಟ್:

ಎಲ್ಲಾರಿಗೂ ವೇಗ ಇಂಟರ್ನೆಟ್:

ಬರೀ ಬಫರಿಂಗ್ ವಿಡಿಯೋ ನೋಡುತ್ತಿದ್ದ ಭಾರತೀಯರಿಗೆ ಒಮ್ಮೆಗೆ HD ವಿಡಿಯೋ ನೋಡುವಷ್ಟು ಡೇಟಾವನ್ನು ಉಚಿತವಾಗಿ ನೀಡಿದ ಅಂಬಾನಿಯನ್ನು ಜನರು ಸಹ ನಂಬಿದ್ದಾರೆ. ಅಲ್ಲದೇ ಇತರೆ ಕಂಪನಿಗಳು ಸಹ ಜಿಯೋ ಮಾದರಿಯಲ್ಲಿ ತಮ್ಮ ಬಳಕೆದಾರರಿಗೆ ವೇಗ ಇಂಟರ್ ನೆಟ್ ಸೇವೆಯನ್ನು ನೀಡುತ್ತಿವೆ.

Jio Monsoon Offers !! ಜಿಎಸ್‌ಟಿ ಸ್ಟಾಟರ್ ಕಿಟ್ ಜೊತೆಗೆ ಜಿಯೋ ಹೊಸ 12 ಆಫರ್‌ಗಳು !!
20 ಕೋಟಿ GB ಯಿಂದ 125 ಕೋಟಿ GB:

20 ಕೋಟಿ GB ಯಿಂದ 125 ಕೋಟಿ GB:

ಇದೇ ವರ್ಷದ ಕೆಳಗೆ ಭಾರತದಲ್ಲಿ ಒಂದು ತಿಂಗಳ 20 ಕೋಟಿ GB ಡೇಟಾವನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಜಿಯೋ ನಂತರದಲ್ಲಿ ಈ ಪ್ರಮಾಣವೂ 150 ಕೋಟಿ GB ತಲುಪಿದೆ ಎಂದರೆ ಜಿಯೋ ತಾಕತ್ತು ಎಂತಹದು ಎನ್ನುವುದನ್ನು ಯೋಜಿಸಿ. ಇಡೀ ವಿಶ್ವದಲ್ಲೇ ಅತೀ ಹೆಚ್ಚು ಮೊಬೈಲ್ ಡೇಟಾ ಬಳಸುವ ದೇಶ ಎಂದರೆ ಭಾರತ. ಇದಕ್ಕೆ ಕಾರಣ ಜಿಯೋ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Jio has made several records not only in India but across the globe and crossed 130 million customers mark in one year of its operations. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot