ಫೈಲ್ ಡೌನ್ಲೋಡ್ ಮಾಡುವ ಮುನ್ನ ಅದು ಸುರಕ್ಷಿತವೇ ಎಂದು ತಿಳಿಯುವುದು ಹೇಗೆ?

By Tejaswini P G
|

ನೀವು ಇಂಟರ್ನೆಟ್ ನಿಂದ ಡೌನ್ಲೋಡ್ ಮಾಡ ಹೊರಟಿರುವ ಫೈಲ್ ಮೇಲ್ನೋಟಕ್ಕೆ ಸುರಕ್ಷಿತವೆಂದೇ ಕಂಡರೂ ಅದು ನಿಜವಾಗಿಯೂ ಸುರಕ್ಷಿತವಾಗಿರಲಿಕ್ಕಿಲ್ಲ. ಹಾಗೆಯೇ ನೀವು ನಿಮ್ಮ ಸಾಧನಕ್ಕೆ ಹಾನಿಕಾರಕ ಫೈಲ್ ಅನ್ನು ಡೌನ್ಲೋಡ್ ಮಾಡಲು ಖಂಡಿತ ಬಯಸುವುದಿಲ್ಲ. ಈ ವಿಷಯದಲ್ಲಿ ಆಂಟಿ-ವೈರಸ್ ಸಾಫ್ಟ್ವೇರ್ ಮೇಲೆ ಅವಲಂಬಿಸುವುದೇನೋ ಸರಿ, ಆದರೆ ಡೌನ್ಲೋಡ್ ಮಾಡುವ ಮುನ್ನ ಅದರಲ್ಲಿರುವ ತೊಂದೆರೆಯನ್ನು ಅದು ಗ್ರಹಿಸದೇ ಇದ್ದೀತು.

ಫೈಲ್ ಡೌನ್ಲೋಡ್ ಮಾಡುವ ಮುನ್ನ ಅದು ಸುರಕ್ಷಿತವೇ ಎಂದು ತಿಳಿಯುವುದು ಹೇಗೆ?

ಈ ಸನ್ನಿವೇಶಗಳು ಭಯವನ್ನುಂಟು ಮಾಡುತ್ತದಲ್ಲವೇ? ಚಿಂತಿಸದರಿ. ನೀವು ಡೌನ್ಲೋಡ್ ಮಾಡಲಿರುವ ಫೈಲ್ ಹಾನಿಕಾರಕವೇ ಅಥವಾ ಸುರಕ್ಷಿತವೇ ಎಂದು ತಿಳಿಯಲು ಹಲವು ವಿಧಾನಗಳಿವೆ.

ಫೈಲ್ ಡೌನ್ಲೋಡ್ ಮಾಡುವ ಮುನ್ನ ವೈರಸ್ಟೋಟಲ್ ಪ್ರಯತ್ನಿಸಿ

ಫೈಲ್ ಡೌನ್ಲೋಡ್ ಮಾಡುವ ಮುನ್ನ ವೈರಸ್ಟೋಟಲ್ ಪ್ರಯತ್ನಿಸಿ

ನೀವು ಡೌನ್ಲೋಡ್ ಮಾಡಲಿರುವ ಫೈಲ್ ಹಾನಿಕಾರಕವೇ ಅಥವಾ ಸುರಕ್ಷಿತವೇ ಎಂದು ತಿಳಿಯಲು ಅಗತ್ಯ ಆನ್ಲೈನ್ ಸೇವೆಯನ್ನು ನೀಡುತ್ತದೆ ವೈರಸ್ಟೋಟಲ್. ಇದಕ್ಕಾಗಿ ನೀವು ಫೈಲ್ ನ ಡೌನ್ಲೋಡ್ ಲಿಂಕ್ ಅನ್ನು ಕಾಪಿ ಮಾಡಿಟ್ಟುಕೊಳ್ಳಬೇಕು. ನಾವಿಲ್ಲಿ ಫೈಲ್ ಡೌನ್ಲೋಡ್ ಮಾಡುವ ಪುಟದ ವಿಳಾಸದ ಕುರಿತು ಹೇಳುತ್ತಿಲ್ಲವೆಂಬುದನ್ನು ತಿಳಿಯಿರಿ.

ಹಂತ 1: ನೀವು ಡೌನ್ಲೋಡ್ ಮಾಡಲಿರುವ ಫೈಲ್ ನ ಡೈರೆಕ್ಟ್ ಲಿಂಕ್ ಆನ್ನು ಕಾಪಿ ಮಾಡಿಕೊಳ್ಳಿ. ಡೈರೆಕ್ಟ್ ಲಿಂಕ್ ಪಡೆಯಲು ಡೌನ್ಲೋಡ್ ಲಿಂಕ್ ನ ಮೇಲೆ ರೈಟ್-ಕ್ಲಿಕ್ ಮಾಡಿ "ಕಾಪಿ ಲಿಂಕ್ ಅಡ್ರೆಸ್" ಅನ್ನು ಆಯ್ಕೆ ಮಾಡಿ.

ಹಂತ 2: ಲಿಂಕ್ ಅನ್ನು ಕಾಪಿ ಮಾಡಿದ ನಂತರ, ನಿಮ್ಮ ವೆಬ್ ಬ್ರೌಸರ್ ನಲ್ಲಿ ಹೊಸ ಟ್ಯಾಬ್ ತೆರೆದು 'VirusTotal.com'ಎಂದು ಹುಡುಕಿರಿ. ಹಾನಿಕಾರಕ ಫೈಲ್ ಗಳನ್ನು ಗುರುತಿಸಲು ಸಹಾಯ ಮಾಡುವ ಗೂಗಲ್ ನ ಆನ್ಲೈನ್ ಟೂಲ್ ಇದಾಗಿದೆ.

ಹಂತ 3: ಈಗ ವೈರಸ್ಟೋಟಲ್ ನ ಹೋಮ್ ಸ್ಕ್ರೀನ್ ನಿಮ್ಮ ಪರದೆಯ ಮೇಲೆ ಮೂಡುತ್ತದೆ. ಇಲ್ಲಿ "URL" ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ ಕಾಪಿ ಮಾಡಿಕೊಂಡಿರುವ ಲಿಂಕ್ ಅನ್ನು ಬಾಕ್ಸ್ ನಲ್ಲಿ ಪೇಸ್ಟ್ ಮಾಡಿ. 'ಎಂಟರ್' ಒತ್ತುವ ಮೂಲಕ ಅಥವಾ 'ಸರ್ಚ್' ಮೇಲೆ ಕ್ಲಿಕ್ ಮಾಡುವ ಮೂಲಕ ಫೈಲ್ ಅನ್ನು ಸ್ಕ್ಯಾನ್ ಮಾಡಿ.

ವೈರಸ್ಟೋಟಲ್ ನೀವು ನೀಡಿರುವ ಲಿಂಕ್ ಬಳಸಿ ಸರ್ವರ್ ನಿಂದ ಫೈಲ್ ಅನ್ನು ಡೌನ್ಲೋಡ್ ಮಾಡಿ ಅದನ್ನು ವಿವಿಧ ಆಂಟಿವೈರಸ್ ಇಂಜಿನ್ ಬಳಸಿ ಸ್ಕ್ಯಾನ್ ಮಾಡುತ್ತದೆ. ಅಲ್ಲದೆ ಇತ್ತೀಚೆಗೆ ಇತರರು ನೀವು ಡೌನ್ಲೋಡ್ ಮಾಡಲಿರುವ ಫೈಲ್ ಅನ್ನು ಪರೀಕ್ಷಿಸಿದ್ದರೆ ಅದರ ಸ್ಕ್ಯಾನ್ ಫಲಿತಾಂಶವನ್ನೂ ನಿಮಗೆ ನೀಡುತ್ತದೆ.

ಫೈಲ್ ಹಾನಿಕಾರಕವೇ ಇಲ್ಲವೇ ಎಂದು ನಿಮಗೆ ಹೇಗೆ ತಿಳಿಯುತ್ತದೆ?

ಫೈಲ್ ಹಾನಿಕಾರಕವೇ ಇಲ್ಲವೇ ಎಂದು ನಿಮಗೆ ಹೇಗೆ ತಿಳಿಯುತ್ತದೆ?

ಸ್ಕ್ಯಾನ್ ಪೂರ್ಣಗೊಂಡ ಬಳಿಕ ನಿಮ್ಮ ಮುಂದೆ "ನೋ ಎಂಜಿನ್ಸ್ ಡಿಟೆಕ್ಟೆಡ್ ದಿಸ್ URL" ಎಂಬ ಸಂದೇಶ ಬಂದರೆ ನೀವು ಯಾವುದೇ ಭಯವಿಲ್ಲದೆ ಫೈಲ್ ಅನ್ನು ಡೌನ್ಲೋಡ್ ಮಾಡಿ. ಆಂಟಿವೈರಸ್ ಎಂಜಿನ್ಗಳು ಈ ಫೈಲ್ ನಲ್ಲಿ ಯಾವುದೇ ತೊಂದರೆಗಳನ್ನು ಪತ್ತೆಹಚ್ಚಿಲ್ಲ ಎಂದು ಈ ಸಂದೇಶದ ಅರ್ಥ.

ಒಂದು ವೇಳೆ ಫೈಲ್ ಹಾನಿಕಾರಕವಾಗಿದ್ದಲ್ಲಿ ಎಷ್ಟು ಆಂಟಿವೈರಸ್ ಎಂಜಿನ್ಗಳು ಇದರಲ್ಲಿ ದೋಷವನ್ನು ಪತ್ತೆಹಚ್ಚಿದೆ ಎಂಬ ಮಾಹಿತಿಯನ್ನೊಳಗೊಂಡ ಸಂದೇಶವನ್ನು ನಿಮ್ಮ ಮುಂದಿರಿಸಲಾಗುವುದು.

How to Sharing a Mobile Data Connection with Your PC (KANNADA)
ಸಾರಾಂಶ

ಸಾರಾಂಶ

ವೈರಸ್ಟೋಟಲ್ ನೀವು ಡೌನ್ಲೋಡ್ ಮಾಡಹೊರಟಿರುವ ಫೈಲ್ ಹಾನಿಕಾರಕವೇ ಇಲ್ಲವೇ ಎಂದು ಸೂಚಿಸುತ್ತದಾದರೂ, ಈ ರೀತಿಯ ವಿಶ್ಲೇಷಣೆ ನಡೆಸಲು ಇದು ಸೂಕ್ತ ಸಾಧನವಲ್ಲ. ಯಾವುದಾದರೂ ಉತ್ತಮ ಆಂಟಿವೈರಸ್ ಬಳಸಿ ಫೈಲ್ ಅನ್ನು ಮತ್ತೊಮ್ಮೆ ಸ್ಕ್ಯಾನ್ ಮಾಡುವುದೊಳಿತು. ಅಲ್ಲದೆ ವೈರಸ್ಟೋಟಲ್ ನ ವೆಬ್ ಎಕ್ಸ್ಟೆನ್ಶನ್ ಅನ್ನು ನಿಮ್ಮ ವೆಬ್ ಬ್ರೌಸರ್ನಲ್ಲಿ ಅಳವಡಿಸುವ ಮೂಲಕ ಈ ಸ್ಕ್ಯಾನಿಂಗ್ ಪ್ರಕ್ರಿಯೆಯನ್ನು ನೀವು ಸರಳವಾಗಿಸಬಹುದು.

5 ಇಂಚಿನ ಡಿಸ್‌ಪ್ಲೇ ಹೊಂದಿರುವ ಈ 4G ಸ್ಮಾರ್ಟ್‌ಫೋನ್ ಬೆಲೆ ಕೇವಲ 3,899 ರೂ.!!

Most Read Articles
Best Mobiles in India

English summary
Though a file might appear safe to be downloaded, it might not be safe. And surely, you don't want to end up with a malicious file on your computer. Relying on antivirus is okay but what if it is unable to detect the problem in the file before you download it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more