Subscribe to Gizbot

ನಿಮ್ಮ ಟ್ವಿಟ್ಟರ್ ಹಿಸ್ಟರಿ ಕ್ಲಿಯರ್ ಮಾಡುವುದು ಹೇಗೆ?

Posted By: Tejaswini P G

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬೆಳೆದಿದೆ. ನಿಮ್ಮ ಗೆಳೆಯರು, ಕುಟುಂಬದವರು, ಸಹಪಾಠಿಗಳು , ಆಪ್ತರು ಹೀಗೆ ಎಲ್ಲರೂ ನೀವು ಜೀವನದಲ್ಲಿ ಏನು ಮಾಡುತ್ತಿದ್ದೀರಿ ಎಂದು ತಿಳಿಯುವ ಕುತೂಹಲದಿಂದ ಈ ಜಾಲತಾಣಗಳಲ್ಲಿ ನಿಮ್ಮ ಪ್ರೊಫೈಲ್ ನತ್ತ ಕಣ್ಣು ಹಾಯಿಸಿಯೇ ಇರುತ್ತಾರೆ. ಇಂತಹ ಪ್ರಸಿದ್ಧ ಸಾಮಾಜಿಕ ಜಾಲತಾಣಗಳ ಪೈಕಿ ಟ್ವಿಟ್ಟರ್ ಕೂಡ ಒಂದು.

ನಿಮ್ಮ ಟ್ವಿಟ್ಟರ್ ಹಿಸ್ಟರಿ ಕ್ಲಿಯರ್ ಮಾಡುವುದು ಹೇಗೆ?

ನೀವು ಟ್ವಿಟ್ಟರ್ ನಲ್ಲಿ ಬಹಳ ಸಕ್ರಿಯರಾಗಿದ್ದಲ್ಲಿ, ನಿಮ್ಮ ಟ್ವಿಟ್ಟರ್ ಹಿಸ್ಟರಿ ಕುರಿತು ನೀವು ಕಾಳಜಿವಹಿಸುವುದು ಉತ್ತಮ. ಈ ಲೇಖನದಲ್ಲಿ ನೀವು ನಿಮ್ಮ ಟ್ವಿಟ್ಟರ್ ಹಿಸ್ಟರಿಯನ್ನು ಹೇಗೆ ಡಿಲೀಟ್ ಮಾಡಬಹುದು ಎಂದು ಹಂತ ಹಂತವಾಗಿ ತಿಳಿಸಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ವಿಟ್ಟರ್ ನ ಎಲ್ಲಾ ಮೆಸೇಜ್ ಗಳನ್ನು ಡಿಲೀಟ್ ಮಾಡುವುದು ಹೇಗೆ?

ಟ್ವಿಟ್ಟರ್ ನ ಎಲ್ಲಾ ಮೆಸೇಜ್ ಗಳನ್ನು ಡಿಲೀಟ್ ಮಾಡುವುದು ಹೇಗೆ?

ನೀವು ಟ್ವಿಟ್ಟರ್ ನ ಎಲ್ಲಾ ಡೈರೆಕ್ಟ್ ಮೆಸೇಜ್ಗಳನ್ನು DM ವ್ಯಾಕರ್ ನ ಸಹಾಯದಿಂದ ಡಿಲೀಟ್ ಮಾಡಬಹುದಾಗಿದೆ. ಆದರೆ ಇದಕ್ಕಾಗಿ ನೀವು ನಿಮ್ಮ ಟ್ವಿಟ್ಟರ್ ಅನ್ನು ಅದರ ಹಳೆಯ ಇಂಟರ್ಫೇಸ್ ಗೆ ಬದಲಾಯಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಈ ಕೆಳಗಿನ ಸೂಚನೆಗಳನ್ನು ಅನುಸರಿಸಿ

ಹಂತ 1: ಯಾವುದೇ ಟ್ವಿಟ್ಟರ್ ಪೇಜ್ ಅನ್ನು ತೆರೆದು ಪರದೆಯ ಮೇಲ್ಭಾಗದಲ್ಲಿ ಬಲಬದಿಯಲ್ಲಿ ಕಾಣುವ ನಿಮ್ಮ ಹೆಸರಿನ ಮೇಲೆ ಕ್ಲಿಕ್ ಮಾಡಿ. ನಂತರ "ಸ್ವಿಚ್ ಟು ಓಲ್ಡ್ ಟ್ವಿಟ್ಟರ್" ಅನ್ನು ಆಯ್ಕೆ ಮಾಡಿ.

ಹಂತ 2: DM ವ್ಯಾಕರ್ ನ ಅಧಿಕೃತ ಪೇಜ್ ತೆರೆದು , ಆ ಟೂಲ್ ನ ಬುಕ್ಮಾರ್ಕ್ ಲಿಂಕ್ ಅನ್ನು ನಿಮ್ಮ ವೆಬ್ ಬ್ರೌಸರ್ ನ ಬುಕ್ಮಾರ್ಕ್ ಗೆ ಎಳೆಯಿರಿ

ಹಂತ 3: ಈಗ ಟ್ವಿಟ್ಟರ್ ನ ಡೈರೆಕ್ಟ್ ಮೆಸೇಜ್ ಪುಟವನ್ನು ತೆರೆದು ನಂತರ DM ವ್ಯಾಕರ್ ನ ಬುಕ್ಮಾರ್ಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಡೈರೆಕ್ಟ್ ಮೆಸೇಜ್ಗಳ ಹಿಸ್ಟರಿಯನ್ನು ಡಿಲೀಟ್ ಮಾಡಿ

ಟ್ವಿಟ್ಟರ್ ನಿಂದ ನಿರ್ದಿಷ್ಟ ಟ್ವೀಟ್ ಅಥವಾ ಮೆಸೇಜ್ ಅನ್ನು ಡಿಲೀಟ್ ಮಾಡುವುದು ಹೇಗೆ?

ಟ್ವಿಟ್ಟರ್ ನಿಂದ ನಿರ್ದಿಷ್ಟ ಟ್ವೀಟ್ ಅಥವಾ ಮೆಸೇಜ್ ಅನ್ನು ಡಿಲೀಟ್ ಮಾಡುವುದು ಹೇಗೆ?

ನೀವು ಟ್ವಿಟ್ಟರ್ ನಿಂದ ಕೆಲವು ನಿರ್ದಿಷ್ಟ ಮೆಸೆಜ್ ಅಥವ ಟ್ವೀಟ್ಗಳನ್ನಷ್ಟೇ ಡಿಲೀಟ್ ಮಾಡಬಯಸಿದರೆ ಈ ಕೆಳಗೆ ನೀಡಿದ ಸೂಚನೆಗಳನ್ನು ಅನುಸರಿಸಿ

ಹಂತ 1: ಟ್ವಿಟ್ಟರ್ ಗೆ ಲಾಗಿನ್ ಮಾಡಿ

ಹಂತ 2: ನಿಮ್ಮ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ, ನೀವು ಡಿಲೀಟ್ ಮಾಡಬಯಸುವ ಟ್ವೀಟ್ ಮೇಲೆ ಮೌಸ್ ಪಾಯಿಂಟರ್ ಇರಿಸಿ.

ಹಂತ 3: ಈಗ ನಿಮಗೆ ಕಾಣಸಿಗುವ ಡಿಲೀಟ್ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ನಿರ್ದಿಷ್ಟ ಟ್ವೀಟ್ ಅನ್ನು ಡಿಲೀಟ್ ಮಾಡಿ

ನೀವು ಟ್ವಿಟ್ಟರ್ ನಿಂದ ನಿರ್ದಿಷ್ಟ ಮೆಸೇಜ್ ಅನ್ನು ಡಿಲೀಟ್ ಮಾಡಲು ಇಚ್ಛಿಸಿದರೆ, "ಮೆಸೇಜಸ್" ಮೇಲೆ ಕ್ಲಿಕ್ ಮಾಡಿ ನೀವು ಡಿಲೀಟ್ ಮಾಡಬಯಸುವ ಮೆಸೇಜ್ ಮೇಲೆ ಮೌಸ್ ಪಾಯಿಂಟರ್ ಇರಿಸಿ.ಈಗ ನಿಮಗೆ ಕಾಣಸಿಗುವ ಡಿಲೀಟ್ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ನಿರ್ದಿಷ್ಟ ಮೆಸೇಜ್ ಅನ್ನು ಡಿಲೀಟ್ ಮಾಡಿ

ನಿಮ್ಮ ಈವರೆಗಿನ ಎಲ್ಲಾ ಟ್ವೀಟ್ ಗಳನ್ನು ಡಿಲೀಟ್ ಮಾಡುವುದು ಹೇಗೆ?

ನಿಮ್ಮ ಈವರೆಗಿನ ಎಲ್ಲಾ ಟ್ವೀಟ್ ಗಳನ್ನು ಡಿಲೀಟ್ ಮಾಡುವುದು ಹೇಗೆ?

ಟ್ವಿಟ್ವೈಪ್ ಎಂಬ ಟೂಲ್ ಬಳಸಿ ನೀವು ನಿಮ್ಮ ಸಂಪೂರ್ಣ ಟ್ವೀಟ್ ಹಿಸ್ಟರಿಯನ್ನು ಡಿಲೀಟ್ ಮಾಡಬಹುದು. ಅದಕ್ಕಾಗಿ ನೀವು ಅನುಸರಿಸಬೇಕಾದ ಸೂಚನೆಗಳು ಈ ಕೆಳಗಿನಂತಿದೆ.

ಹಂತ 1: ನಿಮ್ಮ ವೆಬ್ ಬ್ರೌಸರ್ ಮೂಲಕ twitwipe.com ಗೆ ಭೇಟಿ ನೀಡಿ

ಹಂತ 2: "ಸೈನ್-ಇನ್ ವಿತ್ ಟ್ವಿಟ್ಟರ್" ಮೇಲೆ ಕ್ಲಿಕ್ ಮಾಡಿ. ನಿಮ್ಮ ಖಾತೆಯನ್ನು ದೃಢೀಕರಿಸಲು ಅಗತ್ಯ ಮಾಹಿತಿಯನ್ನು ನಮೂದಿಸಿ

ಹಂತ 3: "ಟ್ವಿಟ್ವೈಪ್ ದಿಸ್ ಅಕೌಂಟ್" ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಈಗ ನಿಮ್ಮ ಹಳೆಯ ಟ್ವೀಟ್ಗಳೆಲ್ಲವೂ ತನ್ನಿಂತಾನೆ ಡಿಲೀಟ್ ಆಗುತ್ತದೆ.

ಭೂಮಿ 5 ನಿಮಿಷ ತಿರುಗುವುದನ್ನು ನಿಲ್ಲಿಸಿದರೆ ಏನಾಗುತ್ತದೆ?..ಅಷ್ಟಕ್ಕೂ ಈ ಪ್ರಶ್ನೆ ಬಂದಿದ್ದೇಕೆ ಗೊತ್ತಾ?!

ಸಾರಾಂಶ

ಸಾರಾಂಶ

ಈಗ ನೀವು ನಿಮ್ಮ ಇತ್ತೀಚಿನ ಮತ್ತು ಹಳೆಯ ಟ್ವೀಟ್ಗಳೆಲ್ಲವನ್ನೂ ಯಾವುದೇ ತೊಂದರೆಯಿಲ್ಲದೆ ಡಿಲೀಟ್ ಮಾಡಬಲ್ಲಿರಿ ಎಂದು ನಮ್ಮ ಅನಿಸಿಕೆ.ಇನ್ನು ಹಳೆಯದೆಲ್ಲವನ್ನೂ ಮರೆಯಲು ಸಿದ್ಧರಾಗಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If you are hyperactive on Twitter, you might consider your Twitter history for obvious reasons. In this post, we will guide you through the deletion process of your Twitter history.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot