5 ಅತ್ಯುತ್ತಮ ಫೇಸ್‌ಬುಕ್ ಕಂಟ್ರೋಲ್ ಟ್ರಿಕ್ಸ್ ಇಲ್ಲಿವೆ.!! ಏನಿದು ಕಂಟ್ರೋಲ್ !?

ನೀವು ಹೊಸದಾಗಿ ಫೇಸ್‌ಬುಕ್ ಅಕೌಂಟ್ ಕ್ರಿಯೇಟ್ ಮಾಡಿದಾಗ ಇರುವ ಡಿಫಾಲ್ಟ್ ಆಯ್ಕೆಗಳನ್ನು ನೀವು ಚೇಂಜ್ ಮಾಡದೇ ಬಳಸುತ್ತಿದ್ದರೆ ಆಯ್ಕೆಗಳ ಬದಲಾವಣೆ ಬಗ್ಗೆ ತಿಳಿಯಿರಿ.

|

ನೀವು ಹೊಸದಾಗಿ ಫೇಸ್‌ಬುಕ್ ಅಕೌಂಟ್ ಕ್ರಿಯೇಟ್ ಮಾಡಿದಾಗ ಇರುವ ಡಿಫಾಲ್ಟ್ ಆಯ್ಕೆಗಳನ್ನು ನೀವು ಚೇಂಜ್ ಮಾಡದೇ ಬಳಸುತ್ತಿದ್ದರೆ ಇಂದಿನ ಲೇಖನದಲ್ಲಿ ಆಯ್ಕೆಗಳ ಬದಲಾವಣೆ ಬಗ್ಗೆ ತಿಳಿಯಿರಿ. ಏಕೆಂದರೆ, ತನ್ನ ಬಳಕೆದಾರರಿಗೆ ಫೇಸ್‌ಬುಕ್ ಹಲವು ಕಂಟ್ರೋಲ್ ಆಯ್ಕೆಯನ್ನು ನಿಡಿದೆ.!!

ಹೌದು, ನೀವು ನಿಮ್ಮ ಫೇಸ್‌ಬುಕ್ ಅಕೌಂಟ್‌ ಅನ್ನು ಕಂಟ್ರೋಲ್ ಮಾಡಬಹುದು.! ಸ್ವಯಂಚಾಲಿತ ವೀಡಿಯೊ ಆಫ್, ಫಾಲೊ ಮಾಡದ ಫ್ರೆಂಡ್ ಮತ್ತು ಪೋಸ್ಟ್ ಮರೆಮಾಡುವ ಹಲವು ಉಪಯೋಗ ಆಯ್ಕೆಗಳು ಬಳಕೆದಾರರಿಗೆ ಲಭ್ಯವಿವೆ.!! ಹಾಗಾಗಿ, ಇಂತಹ ಕೆಲವೊಂದು ಆಯ್ಕೆಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೀಡಲಾಗಿದ್ದು, ಅವುಗಳನ್ನು ತಿಳಿಯಿರಿ.

ಮಿಸ್ ಮಾಡಿಕೊಳ್ಳದ ಪ್ರೊಫೈಲ್ ಮತ್ತು ಪೇಜ್!!

ಮಿಸ್ ಮಾಡಿಕೊಳ್ಳದ ಪ್ರೊಫೈಲ್ ಮತ್ತು ಪೇಜ್!!

ಉದಾಹರಣೆಗೆ ನಮ್ಮ ಕನ್ನಡ ಗಿಜ್ಹ್‌ಬಾಟ್ ಪೇಜ್‌ನ ಯಾವುದೇ ಲೇಖನವನ್ನು ಮಿಸ್ ಮಾಡಕೊಳ್ಳಲು ಇಷ್ಟವಿಲ್ಲದಿದ್ದರೆ,' ಸೆಟ್ಟಿಂಗ್ಸ್' ತೆರೆದು 'ಮೋರ್' ಆಯ್ಕೆಯನ್ನು ಕ್ಲಿಕ್ ಮಾಡಿ. "ನ್ಯೂಸ್ ಫೀಡ್ ಪ್ರಾಶಸ್ತ್ಯಗಳು" ಎಂಬ ಆಯ್ಕೆ ಮೂಡುತ್ತದೆ. ನಿಮಗೆ ಬೇಕಾದ ಪ್ರೊಫೈಲ್ ಮತ್ತು ಪೇಜ್‌ಗಳಿಗೆ ಕ್ಲಿಕ್ ಮಾಡಿ. ಅವುಗಳು ನೀಲಿ ನಕ್ಷತ್ರದಲ್ಲಿದ್ದರೆ ನಿಮ್ಮ ಆಯ್ಕೆಯಾಗಿದೆ ಎಂದರ್ಥ.!!

Facebook - ನೀವು ಸತ್ತರೂ ಸಾಯೋಲ್ಲಾ ನಿಮ್ಮ ಫೇಸ್‌ಬುಕ್ ಅಕೌಂಟ್!!
ಸ್ವಯಂಚಾಲಿತ ವೀಡಿಯೊ ಆಫ್ ಮಾಡಿ.!!

ಸ್ವಯಂಚಾಲಿತ ವೀಡಿಯೊ ಆಫ್ ಮಾಡಿ.!!

ನ್ಯೂಸ್ ಫೀಡ್ ಸ್ಕ್ರಾಲ್ ಮಾಡುವಾಗ ಫೇಸ್‌ಬುಕ್ ವೀಡಿಯೊಗಳು ಸ್ವಯಂಚಾಲಿತವಾಗಿ ಆಟೊ ಪ್ಲೇ ಆಗುತ್ತವೆ. ಹಾಗಾಗಿ, ಅದನ್ನು ಆಫ್ ಮಾಡಲು ಸೆಟ್ಟಿಂಗ್ ತೆರೆದು ನಂತರ ಕಾಣುವ "ಖಾತೆ ಸೆಟ್ಟಿಂಗ್ಸ್‌ ತೆರೆದು ಕ್ಲಿಕ್ ಮಾಡಿ ''ವೀಡಿಯೊಗಳು ಮತ್ತು ಫೋಟೋಗಳು" ಆಯ್ಕೆಮಾಡಿ. ನಂತರ ಎಂದಿಗೂ ವೀಡಿಯೊಗಳನ್ನು ಸ್ವಯಂ-ಪ್ಲೇ ಮಾಡಲು ನೀವು ಆಯ್ಕೆ ಮಾಡಬಹುದು.

ಅನಿಮೇಟೆಡ್ GIF ಪ್ರೊಫೈಲ್ ಚಿತ್ರ!!

ಅನಿಮೇಟೆಡ್ GIF ಪ್ರೊಫೈಲ್ ಚಿತ್ರ!!

ಫೇಸ್‌ಬುಕ್‌ನಲ್ಲಿ ನಿಮ್ಮ ಪ್ರೊಫೈಲ್ ಚಿತ್ರವನ್ನು ಆಯ್ಕೆ ಮಾಡಿ ಮತ್ತು ನಂತರ ನಿಮ್ಮ GIF ವೀಡಿಯೊ ಅನ್ನು ಅಪ್ಲೋಡ್ ಮಾಡಲು "ಹೊಸ ಪ್ರೊಫೈಲ್ ವೀಡಿಯೊ". ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ನಿಮ್ಮ ಆನಿಮೇಟೆಡ್ GIF ಚಿತ್ರವು ನಿಮ್ಮ ಪ್ರೋಫೈಲ್ ಚಿತ್ರದಲ್ಲಿ ಮೂಡುತ್ತದೆ.!!

ಫಾಲೊ ಮಾಡದ ಫ್ರೆಂಡ್ ಬೇಕೆ?

ಫಾಲೊ ಮಾಡದ ಫ್ರೆಂಡ್ ಬೇಕೆ?

ನ್ಯೂಸ್ ಫೀಡ್‌ನಲ್ಲಿ ನಿಮ್ಮ ಸ್ನೇಹಿತರೊಬ್ಬರ ಪೋಸ್ಟ್‌ಗಳನ್ನು ನೋಡುವುದನ್ನು ನಿಲ್ಲಿಸಬೇಕೆ? ಹಾಗಾದರೆ, ಅವರ ಪ್ರೊಫೈಲ್ ಚಿತ್ರದ ಅಡಿಯಲ್ಲಿ "unfollow" ಎಂಬುದನ್ನು ಟ್ಯಾಪ್ ಮಾಡಿ ಮತ್ತು ನಂತರ ಅವರ ಪೋಸ್ಟ್‌ಗಳು ನಿಮ್ಮ ನ್ಯೂಸ್‌ಫೀಡ್‌ನಲ್ಲಿ ಕಾಣಿಸುವುದಿಲ್ಲ.!!

ನಿರ್ದಿಷ್ಟ ಜನರಿಂದ ನಿಮ್ಮ ಪೋಸ್ಟ್ ಮರೆಮಾಡಿ.!!

ನಿರ್ದಿಷ್ಟ ಜನರಿಂದ ನಿಮ್ಮ ಪೋಸ್ಟ್ ಮರೆಮಾಡಿ.!!

ನೀವು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಪೋಸ್ಟ್‌ಗಳನ್ನು ಯಾವು ವೀಕ್ಷಿಸಬೇಕು ಎಂಬುದನ್ನು ಸಹ ನೀವು ಆಯ್ಕೆ ಮಾಡಿಕೊಳ್ಳಬಹುದು.!! ಸೆಟ್ಟಿಂಗ್ಸ್ ತೆರೆದು " ಎಡಿಟ್ ಪ್ರೈವೆಸಿ" ಐಕಾನ್ ಅನ್ನು ನೀವು ಆಯ್ಕೆ ಮಾಡಿದರೆ ನೀವು ನಿರ್ದಿಷ್ಟ ಜನರಿಂದ ನಿಮ್ಮ ಪೋಸ್ಟ್ ಮರೆಮಾಡಬಹುದು.!!

ಓದಿರಿ:ಮೊದಲೇ ರೈಲ್ವೆ ಟಿಕೆಟ್ ಬುಕ್ ಮಾಡಿ ನಂತರ ಹಣಪಾವತಿಸಿ!! ಹೊಸ ಆಯ್ಕೆ ಹೇಗೆ ಗೊತ್ತಾ?

Best Mobiles in India

English summary
no doubting the fact that Facebook has become an almost-indispensable part of majority of our lives. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X