Subscribe to Gizbot

ಫೇಸ್‌ಬುಕ್ ಅಕೌಂಟ್ ಡಿಲೀಟ್ ಮಾಡುವುದು ಸುಲಭ ಅಂದುಕೊಂಡಿದ್ದೀರಾ?..ಹಾಗಾದ್ರೆ ಇಲ್ಲಿ ನೋಡಿ!!

Written By:

ತನ್ನ ಬಳಕೆದಾರರ ವೈಯಕ್ತಿಕ ಮಾಹಿತಿಗೆ ಫೇಸ್‌ಬುಕ್ ಕನ್ನಹಾಕಿದ ಹಗರಣದ ಹಿನ್ನಲೆಯಲ್ಲಿ ಅತ್ಯಂತ ದೊಡ್ಡ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಜಾಲತಾಣವನ್ನು ಬಿಡುವ ಪ್ರಮಾಣ ಹೆಚ್ಚಾಗುತ್ತಿದೆ. ಹಲವು ದಿಗ್ಗಜರಿಂದ ಪ್ರಾರಂಭವಾದ ಫೇಸ್‌ಬುಕ್ ಜಾಲತಾಣವನ್ನು ಬಿಡುವ ಚಳವಳಿಗೆ ಬಳಕೆದಾರರಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ.

ಫೇಸ್‌ಬುಕ್ ಅಕೌಂಟ್ ಡಿಲೀಟ್ ಮಾಡುವುದು ಸುಲಭ ಅಂದುಕೊಂಡಿದ್ದೀರಾ?

ಖಾಸಗಿತನದ ಕುರಿತು ಕಾಳಜಿ ವಹಿಸುವ ಸಮಯ ಎಂದು ಫೇಸ್‌ಬುಕ್ ಬಳಕೆದಾರರು ಫೇಸ್‌ಬುಕ್ ಅಕೌಂಟ್ ನಿಷ್ಕ್ರೀಯ ಮಾಡಿ ಆಪ್ ಅನ್ನು ಡಿಲೀಟ್ ಮಾಡುತ್ತಿದ್ದಾರೆ. ಹಾಗಾಗಿ, ಫೇಸ್‌ಬುಕ್‌ನಿಂದ ಹೊರಬರುವುದು ಹೇಗೆ? ಫೇಸ್‌ಬುಕ್‌ನಿಂದ ಹೊರಬರುವ ಪ್ರಕ್ರಿಯೆ ಸುಲಭವೇ? ಅಕೌಂಟ್ ಡಿಲೀಟ್ ಮಾಡುವುದು ಹೇಗೆ? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಾತ್ಕಾಲಿಕವಾಗಿ ಹೊರಗಿರುತ್ತೀರಾ?

ತಾತ್ಕಾಲಿಕವಾಗಿ ಹೊರಗಿರುತ್ತೀರಾ?

ಫೇಸ್‌ಬುಕ್ ಖಾತೆಯನ್ನು ಡಿಲೀಟ್ ಮಾಡುವ ಬದಲು ತಾತ್ಕಾಲಿಕವಾಗಿ ಹೊರಗುಳಿದು, ನಂತರ ಮತ್ತೆ ಮರಳಿ ಫೇಸ್‌ಬುಕ್ ಬಳಸುವ ಆಯ್ಕೆ ಇದೆ. ಬಳಕೆದಾರರು ಸೆಟ್ಟಿಂಗ್ಸ್ ತೆರೆದು ಜನರಲ್-ಮ್ಯಾಜೇಜ್ ಅಕೌಂಟ್- ಡಿ-ಆಕ್ಟಿವೇಟ್ ಆಯ್ಕೆಯನ್ನು ಆಯ್ದುಕೊಂಡರೆ ಫೇಸ್‌ಬುಕ್ ಖಾತೆಯಿಂದ ತಾತ್ಕಾಲಿಕವಾಗಿ ಹೊರಗುಳಿಯಬಹುದು.

ಖಾತೆ ಡಿಲೀಟ್ ಮಾಡುವುದು ಸುಲಭವಲ್ಲ!!

ಖಾತೆ ಡಿಲೀಟ್ ಮಾಡುವುದು ಸುಲಭವಲ್ಲ!!

ಬಳಕೆದಾರರು ತಮ್ಮ ಖಾತೆಯನ್ನು ಡಿ-ಆಕ್ಟಿವೇಟ್ ಮಾಡುವ ಆಯ್ಕೆಯನ್ನು ಫೇಸ್‌ಬುಕ್‌ ಮೊದಲಿನಿಂದಲೂ ಒದಗಿಸಿದ್ದರೂ ಸಹ ಫೇಸ್‌ಬುಕ್ ಖಾತೆಯನ್ನು ಡಿಲೀಟ್ ಮಾಡುವುದು ಸುಲಭವಲ್ಲ. ಫೇಸ್‌ಬುಕ್ ಬಳಕೆದಾರರ ತನ್ನ ಫೇಸ್‌ಬುಕ್ ಖಾತೆ ಡಿಲೀಟ್‌ ಮಾಡಲು 90 ದಿನಗಳವರೆಗೂ ಬೇಕಾಗಬಹುದು ಎಂದು ‘ದಿ ವರ್ಜ್' ವೆಬ್‌ಸೈಟ್‌ ತಿಳಿಸಿದೆ.

ಖಾತೆ ಡಿಲೀಟ್ ಮಾಡುವ ಮುನ್ನ!!

ಖಾತೆ ಡಿಲೀಟ್ ಮಾಡುವ ಮುನ್ನ!!

ಫೇಸ್‌ಬುಕ್ ಬಳಕೆದಾರರು ತಮ್ಮ ಖಾತೆ ಡಿಲೀಟ್‌ ಮಾಡುವ ಮನ್ನ ನಿಮ್ಮ ಪೋಸ್ಟ್‌ಗಳು, ವಿಡಿಯೊಗಳು, ಫೋಟೊಗಳನ್ನು ಒಳಗೊಂಡ ವೈಯಕ್ತಿಕ ಮಾಹಿತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇನ್ನು ಸ್ನೇಹಿತರ ಟೈಮ್‌ಲೈನ್‌ಗೆ ಮಾಡಿದ ಪೋಸ್ಟ್‌ಗಳು ಖಾತೆ ಡಿಲೀಟ್‌ ಮಾಡಿದ ನಂತರವೂ ಉಳಿಯುತ್ತವೆ ಎಂಬುದನ್ನು ತಿಳಿದಿರಿ.

ಇನ್‌ಸ್ಟಾಗ್ರಾಂ, ವಾಟ್ಸ್‌ಆಪ್‌ ಮತ್ತು ಮೆಸೆಂಜರ್?

ಇನ್‌ಸ್ಟಾಗ್ರಾಂ, ವಾಟ್ಸ್‌ಆಪ್‌ ಮತ್ತು ಮೆಸೆಂಜರ್?

ಫೇಸ್‌ಬುಕ್ ಅಕೌಂಟ್ ಡಿಲೀಟ್ ಮಾಡಿದರೆ ಫೇಸ್‌ಬುಕ್‌ ಸ್ವಾಮ್ಯದಲ್ಲಿ ಇರುವ ಇನ್‌ಸ್ಟಾಗ್ರಾಂ, ವಾಟ್ಸ್‌ಆಪ್‌ ಮತ್ತು ಮೆಸೆಂಜರ್ ಖಾತೆಗಳನ್ನು ಏನು ಮಾಡುವುದು ಎಂಬ ಪ್ರಶ್ನೆಯೂ ಹಲವು ಬಳಕೆದಾರರಲ್ಲಿ ಉದ್ಭವಿಸಿದೆ. ಇಷ್ಟು ದಿನ ಬಳಕೆ ಮಾಡುತ್ತಿದ್ದ ಇನ್‌ಸ್ಟಾಗ್ರಾಂ, ವಾಟ್ಸ್‌ಆಪ್‌ ಮತ್ತು ಮೆಸೆಂಜರ್ ಬಳಕೆ ನಿಲ್ಲಿಸುವುದು ಕಷ್ಟವಾಗಲಿದೆ ಅಲ್ಲವೇ?

ಫೇಸ್‌ಬುಕ್ ಖಾತೆಯನ್ನು ಡಿಲೀಟ್ ಮಾಡುವುದು ಹೇಗೆ?

ಫೇಸ್‌ಬುಕ್ ಖಾತೆಯನ್ನು ಡಿಲೀಟ್ ಮಾಡುವುದು ಹೇಗೆ?

ಫೆಸ್‌ಬುಕ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಲು https://www.facebook.com/help/delete_account ಎಂದು ನಿಮ್ಮ URL ನಲ್ಲಿ ಹಾಕಿ ಎಂಟರ್ ನೀಡಿದರೆ ನಿಮ್ಮ ಅಕೌಂಟ್‌ ಶಾಶ್ವತವಾಗಿ ಡಿಲೀಟ್ ಆಗುವ ಹಂತಕ್ಕೆ ಹೋಗುತ್ತದೆ.! ನಂತರ ನಿಮ್ಮ ಪಾಸ್‌ವರ್ಡ್ ನೀಡಿ ಎಂಟರ್ ಆಗಿರಿ. ಕ್ಯಾಪ್ಚಾ ಕೋಡ್ ಕಾಣಿಸುತ್ತದೆ. ಅಲ್ಲಿರುವಂತೆಯೇ ಸರಿಯಾಗಿ ಕ್ಯಾಪ್ಚಾ ಹಾಕಿ 'ಡಿಲೀಟ್ ಅಕೌಂಟ್' ಕ್ಲಿಕ್ ಮಾಡಿದರೆ90 ದಿನಗಳಲ್ಲ ನಂತರ ನಿಮ್ಮ ಫೆಸ್‌ಬುಕ್ ಶಾಶ್ವತವಾಗಿ ಡಿಲೀಟ್ ಆಗುತ್ತದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Facebook lets you deactivate or delete your account, only the latter of which is permanent. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot