ಐಫೋನ್ ನಲ್ಲಿ ಮಲ್ಟಿಪಲ್ ಕಾಂಟ್ಯಾಕ್ಟ್ ಗಳನ್ನು ಡಿಲೀಟ್ ಮಾಡುವುದು ಹೇಗೆ?

|

ಕೆಲವು ವರ್ಷಗಳಿಂದ ಐಫೋನಿನ ಕಾಂಟ್ಯಾಕ್ಸ್ ಆಪ್ ನಲ್ಲಿ ಅಂತಹ ಗುರುತಿಸುವಂತಹ ಯಾವುದೇ ಬದಲಾವಣೆ ಅಥವಾ ಅಪ್ ಡೇಟ್ ಗಳೂ ಕೂಡ ನಡೆದಿಲ್ಲ. ಈ ಇಂಟರ್ ಫೇಸ್ ಈಗಾಗಲೇ ಗ್ರಾಹಕ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ ಎಂಬುದೇನೋ ನಿಜ. ಆದರೆ ಹಲವಾರು ಕಾಂಟ್ಯಾಕ್ಟ್ ಗಳನ್ನು ಅಂದರೆ ಮಲ್ಟಿಪಲ್ ಕಾಂಟ್ಯಾಕ್ಸ್ ನ್ನು ಬಳಕೆದಾರರು ಒಮ್ಮೆಲೆ ಡಿಲೀಟ್ ಮಾಡಬೇಕು ಎಂದರೆ ಅದು ಕಷ್ಟದ ಕೆಲಸವಾಗಿರುತ್ತದೆ.ಆದರೆ ಐಕ್ಲೌಡ್ ಮತ್ತು ನಿಮ್ಮ ಪಿಸಿಯ ಐಟ್ಯೂನ್ಸ್ ಗಳ ಮೂಲಕ ಆಪಲ್ ಈ ಕೆಲಸವನ್ನು ಸಾಧಿಸುವುದಕ್ಕೆ ಅವಕಾಶ ನೀಡುತ್ತದೆ ಎಂದರೆ ನಂಬುತ್ತೀರಾ? ನಂಬಲೇಬೇಕು. ಅದು ಹೇಗೆ ಎಂದು ತಿಳಿದುಕೊಳ್ಳಲು ಈ ಲೇಖನ ಓದಿ.

ಐಫೋನ್ ನಲ್ಲಿ ಮಲ್ಟಿಪಲ್ ಕಾಂಟ್ಯಾಕ್ಟ್ ಗಳನ್ನು ಡಿಲೀಟ್ ಮಾಡುವುದು ಹೇಗೆ?

ಅಗತ್ಯತೆಗಳು:
ನೀವು ನೂತನ ವರ್ಷನ್ ನ ಐಟ್ಯೂನ್ಸ್ ರನ್ ಮಾಡುತ್ತಿರುವಿರೆಂದು ಖಾತ್ರಿ ಪಡಿಸಿಕೊಳ್ಳಿ

ನಿಮ್ಮ ಐಕ್ಲೌಡ್ ಕಾಂಟ್ಯಾಕ್ಟ್ಸ್ ಸಿನ್ಕ್ರೋನೈಸೇಷನ್ ಆನ್ ಆಗಿರಬೇಕು

ಅಂತರ್ಜಾಲ ಸಂಪರ್ಕ ಕೆಲಸ ಮಾಡುತ್ತಿರಬೇಕು


ವಿಧಾನ 1: ಐಕ್ಲೌಡ್ ವೆಬ್ ಸೈಟ್ ಮೂಲಕ

1. ನಿಮ್ಮ ಪಿಸಿ ಅಥವಾ ಮ್ಯಾಕ್ ಮೂಲಕ 'www.icloud.com’ತೆರಳಿ

2. ನಿಮ್ಮ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ

3. ಕಾಂಟ್ಯಾಕ್ಸ್ ಐಕಾನ್ ನ್ನು ಕ್ಲಿಕ್ಕಿಸಿ.

4. ನೀವು ಡಿಲೀಟ್ ಮಾಡಬೇಕು ಎಂದುಕೊಂಡಿರುವ ಎಲ್ಲಾ ಕಾಂಟ್ಯಾಕ್ಸ್ ನ್ನು ಆಯ್ಕೆ ಮಾಡಿ ಮತ್ತು ಕಿಬೋರ್ಡ್ ನಲ್ಲಿ ಡಿಲೀಟ್ ಬಟನ್ ನ್ನು ಹಿಟ್ ಮಾಡಿ

5. ಡಿಲೀಟ್ ಮಾಡುವುದು ಖಚಿತವೇ ಎಂಬ ಪ್ರಾಮ್ಟ್ ಬಂದರೆ ಪುನಃ ಡಿಲೀಟ್ ಬಟನ್ ನ್ನು ಕ್ಲಿಕ್ಕಿಸಿ.

ವಿಧಾನ 2: ಥರ್ಡ್ ಪಾರ್ಟಿ ಆಪ್ ಗಳನ್ನು ಬಳಸಿ

ಈ ವಿಧಾನವನ್ನು ಹೊರತು ಪಡಿಸಿದರೆ,ಆಪ್ ಸ್ಟೋರ್ ಮೂಲಕ ಥರ್ಡ್ ಪಾರ್ಟಿ ಆಪ್ ಗಳನ್ನು ಕೂಡ ಇನ್ಸ್ಟಾಲ್ ಮಾಡಿಕೊಳ್ಳಬಹುದು. ಉದಾಹರಣೆಗೆ AnyTrans, Cleaner Pro, Delete contacts+ ಮತ್ತು ಇನ್ನೂ ಹಲವಾರು ಆಪ್ ಗಳು ಲಭ್ಯವಿದ್ದು ಇವೆಲ್ಲವೂ ಮಲ್ಟಿಪಲ್ ಕಾಂಟ್ಯಾಕ್ಸ್ ಗಳನ್ನು ಒಮ್ಮೆಲೆ ಡಿಲೀಟ್ ಮಾಡುವುದಕ್ಕೆ ಸಹಕರಿಸುತ್ತದೆ.

ವಿಧಾನ 3: ಮ್ಯಾಕ್ ಬಳಸಿ

ಕಾಂಟ್ಯಾಕ್ಟ್ಸ್ ಆಪ್ ನ್ನು ಹೊರತು ಪಡಿಸಿದರೆ ಐಫೋನ್/ಐಪ್ಯಾಡ್ ನಲ್ಲಿನ ಆಪ್ ನ ಮ್ಯಾಕ್ ವರ್ಷನ್ ಬಳಕೆದಾರರಿಗೆ ಹಲವು ಕಾಂಟ್ಯಾಕ್ಟ್ ಗಳನ್ನು ಒಮ್ಮೆಲೆ ಡಿಲೀಟ್ ಮಾಡುವುದಕ್ಕೆ ಅನುವು ಮಾಡುತ್ತದೆ.

1. 'System Preference’ ತೆರಳಿ ಮತ್ತು ಐಕ್ಲೌಡ್ ನ್ನು ಕ್ಲಿಕ್ಕಿಸಿ.

2. ನಿಮ್ಮ ಕ್ರಿಡೆನ್ಶಿಯಲ್ಸ್ ಗಳನ್ನು ಬಳಸಿ ಲಾಗಿನ್ ಆಗಿ ಮತ್ತು ಕಾಂಟ್ಯಾಕ್ಟ್ ಸಿನ್ಕ್ರೋನೈಸೇಷನ್ ಆಯ್ಕೆಗೆ ತೆರಳಿ

3. ನಿಮ್ಮ ಮ್ಯಾಕ್ ನಲ್ಲಿ ಈಗ 'Contacts’ ಆಪ್ ನ್ನು ತೆರೆಯಿರಿ.

4. ಕಮಾಂಡ್ ಬಟನ್ ನ್ನು ಹೋಲ್ಡ್ ಮಾಡಿ ಮತ್ತು ನೀವು ಡಿಲೀಟ್ ಮಾಡಲು ಇಚ್ಛಿಸುವ ಎಲ್ಲಾ ಕಾಂಟ್ಯಾಕ್ಟ್ ಗಳನ್ನು ಸೆಲೆಕ್ಟ್ ಮಾಡಿ

5. ರೈಟ್ ಕ್ಲಿಕ್ ಮಾಡಿ ಮತ್ತು 'Delete Cards’ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

6. ಸೆಲೆಕ್ಟ್ ಮಾಡಿರುವ ಕಾಂಟ್ಯಾಕ್ಟ್ ಗಳು ಡಿಲೀಟ್ ಮಾಡುವುದಕ್ಕೆ ಕನ್ಫರ್ಮ್ ಮಾಡಲು ಇನ್ನೊಮ್ಮೆ ಡಿಲೀಟ್ ಬಟನ್ ಒತ್ತಿ.

7. ಬದಲಾವಣೆ ಮಾಡಿರುವುದು ನಿಮ್ಮ ಐಫೋನ್ ನಲ್ಲಿ ಸಿನ್ಕ್ರನೈಸ್ ಆಗುವವರೆಗೆ ಕಾಯಿರಿ.

Best Mobiles in India

English summary
How to delete multiple contacts on iPhone. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X