ಟ್ವಿಟ್ಟರ್‌ನ ಸ್ವಚ್ಛತಾ ಅಭಿಯಾನ ಹೇಗಿರಬೇಕು..? ಹೀಗೆ ಮಾಡಿ..!

|

ಟ್ವಿಟ್ಟರ್ ಒಂದು ಫೇಮಸ್ ಆಗಿರುವ ಸಾಮಾಜಿಕ ಜಾಲತಾಣ. ಒಮ್ಮೆ ಟ್ವಿಟ್ಟರ್ ಖಾತೆ ತೆಗೆದ ಮೇಲೆ ಅದರ ನಿರ್ವಹಣೆಯನ್ನು ಸರಿಯಾಗಿ ಮಾಡಿಕೊಳ್ಳುವುದು ಬಹಳ ಒಳ್ಳೆಯದು. ಟ್ವಿಟ್ಟರ್ ಅಕೌಂಟ್ ಕ್ಲೀನಿಂಗ್ ಬಗ್ಗೆ ನಿಮಗೆಷ್ಟು ತಿಳಿದಿದೆ? ಅರೆ ಟ್ವಿಟ್ಟರ್ ಕ್ಲೀನಿಂಗ್ ಅಂದರೆ ಏನು ಕೇಳುತ್ತಿದ್ದೀರಾ?

ನಿಮ್ಮ ಟ್ವಿಟ್ಟರ್ ಅಕೌಂಟಿನಲ್ಲಿ ಎಲ್ಲವನ್ನೂ ಕ್ಲೀನ್ ಮಾಡಬೇಕು ಎಂದುಕೊಳ್ಳುವುದಕ್ಕೆ ಹಲವು ಕಾರಣಗಳು ಇರಬಹುದು. ಕೆಲವು ಹಳೆಯ ಟ್ವೀಟ್ ಗಳು ಪದೇ ಪದೇ ನಿಮ್ಮ ಟ್ವಿಟ್ಟರ್ ಅಕೌಂಟಿನಲ್ಲಿ ಕಾಣಿಸುವುದು ನಿಮಗೆ ಇಷ್ಟವಿಲ್ಲದೇ ಇರಬಹುದು. ಟ್ವೀಟ್ ಮಾಡಿರುವ ಹಳೆಯ ಟ್ವೀಟ್ ಗಳನ್ನು ನೀವು ಎಂದಾದರೂ ಸಂಪೂರ್ಣ ಡಿಲೀಟ್ ಮಾಡಬೇಕು ಎಂದು ಇಚ್ಛಿಸಿದರೆ ಏನು ಮಾಡಬೇಕು? ಹೀಗೆ ಹಳೆಯ ಟ್ವೀಟ್ ಗಳನ್ನು ಡಿಲೀಟ್ ಮಾಡುವುದಕ್ಕೆ ನಾವು ಟ್ವಿಟ್ಟರ್ ಕ್ಲೀನಿಂಗ್ ಎಂದು ಕರೆದಿರುವುದು.

ಟ್ವಿಟ್ಟರ್‌ನ ಸ್ವಚ್ಛತಾ ಅಭಿಯಾನ ಹೇಗಿರಬೇಕು..? ಹೀಗೆ ಮಾಡಿ..!

ನೀವು ನಿಮ್ಮ ಸಾಮಾಜಿಕ ಜಾಲತಾಣದಲ್ಲಿ ರೀಬ್ರ್ಯಾಂಡ್ ಮಾಡಬೇಕು ಎಂದು ಇಚ್ಛಿಸುತ್ತಿರಬಹುದು ಅಥವಾ ಟ್ವಿಟ್ಟರ್ ನಿಂದ ಸ್ವಲ್ಪ ದೂರ ಉಳಿಯಬೇಕು ಎಂದು ಬಯಸುತ್ತಿರಬಹುದು. ಒಂದು ಟ್ವಿಟ್ಟರ್ ನಿಂದ ನಿಮಗೆ ಯಾವುದೋ ಕಾರಣಕ್ಕೆ ಬೇಸರವಾಗಿದ್ದು ಟ್ವೀಟ್ ಗಳನ್ನು ಡಿಲೀಟ್ ಮಾಡಬೇಕು ಎಂದು ಬಯಸಿದ್ದಲ್ಲಿ ಕೆಲವು ಟ್ವಿಟ್ಟರ್ ವೈಶಿಷ್ಟ್ಯತೆಗಳು ನಿಮಗೆ ಸಾಕಷ್ಟು ಸಹಾಯವನ್ನು ಮಾಡುತ್ತದೆ.

ಸೂಚನೆ: ನಾವು ಇಲ್ಲಿ ತಿಳಿಸುವ ಎಲ್ಲಾ ವಿಧಾನಗಳು ನಿಮ್ಮ ಸ್ವಂತ ರಿಸ್ಕ್ ಮೇಲೆ ನಡೆಸಬೇಕಾಗುತ್ತದೆ.ಒಂದು ವೇಳೆ ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದಲ್ಲಿ ನಾವು ಜವಾಬ್ದಾರರಲ್ಲ.

ಎಷ್ಟು ಟ್ವೀಟ್ಸ್ ಗಳನ್ನು ಟ್ವಿಟ್ಟರ್ ಸೇವ್ ಮಾಡಿ ಇಟ್ಟುಕೊಳ್ಳುತ್ತದೆ?

ಎಷ್ಟು ಟ್ವೀಟ್ಸ್ ಗಳನ್ನು ಟ್ವಿಟ್ಟರ್ ಸೇವ್ ಮಾಡಿ ಇಟ್ಟುಕೊಳ್ಳುತ್ತದೆ?

ಒಂದು ಲೆಕ್ಕಾಚಾರ ಮತ್ತು ತಿಳುವಳಿಕೆಯ ಪ್ರಕಾರ ಟ್ವಿಟ್ಟರ್ ಖಾತೆಯಲ್ಲಿ ನಿಮ್ಮ ಇತ್ತೀಚೆಗಿನ ಒಟ್ಟು 3200 ಟ್ವೀಟ್ ಗಳು ಸೇವ್ ಆಗಿ ಇರುತ್ತದೆ. ಆದರೆ ಇದು ಸಂಪೂರ್ಣವಾಗಿ ಸತ್ಯವಲ್ಲ. ಹೌದು, ಟ್ವಿಟ್ಟರ್ ನ ಟೈಮ್ ಲೈನ್ ನಲ್ಲಿ ಸುಮಾರು 3200 ಟ್ವೀಟ್ಸ್ ಗಳು ಇರುತ್ತದೆ( ಇವೆಲ್ಲವನ್ನು ಥರ್ಡ್ ಪಾರ್ಟಿ ಆಪ್ ಮೂಲಕ ಡಿಫಾಲ್ಟ್ ಆಗಿ ಆಕ್ಸಿಸ್ ಮಾಡಲು ಸಾಧ್ಯವಿದೆ.. ಹಾಗಂತ ಅದಕ್ಕೂ ಹಳೆಯ ಟ್ವೀಟ್ ಗಳು ಇರುವುದಿಲ್ಲ ಎಂದರ್ಥವಲ್ಲ. ಯಾಕೆಂದರೆ ಇದು ಅಧಿಕೃತ ಮಾಹಿತಿ ಅಲ್ಲ.)
ನೀವು ಡಿಲೀಟ್ ಮಾಡದೇ ಇರುವ ಪ್ರತಿಯೊಂದು ಟ್ವೀಟ್ ನ್ನು ಟ್ವಿಟ್ಟರ್ ನಲ್ಲಿ ಹುಡುಕಾಡಲು ಸಾಧ್ಯವಿದೆ. ಹಾಗಾಗಿ ಕೆಲವು ಹಳೆಯ ಟ್ವೀಟ್ ಗಳು ಅಗತ್ಯವಿಲ್ಲದೇ ಇದ್ದಲ್ಲಿ ಡಿಲೀಟ್ ಮಾಡುವುದಕ್ಕೆ ನೀವು ಮನಸ್ಸು ಮಾಡಿರಬೇಕು.

ನಿಮ್ಮ ಹಳೆಯ ಟ್ವೀಟ್ ಗಳನ್ನು ಮೊದಲು ಬ್ಯಾಕ್ ಅಪ್ ಮಾಡುವುದು

ನಿಮ್ಮ ಹಳೆಯ ಟ್ವೀಟ್ ಗಳನ್ನು ಮೊದಲು ಬ್ಯಾಕ್ ಅಪ್ ಮಾಡುವುದು

ನೆನಪಿನಲ್ಲಿಡಿ- ಒಮ್ಮೆ ಟ್ವಿಟ್ಟರ್ ಖಾತೆಯಲ್ಲಿ ನಿಮ್ಮ ಟ್ವೀಟ್ ಗಳನ್ನು ಡಿಲೀಟ್ ಮಾಡಿದರೆ ಅದನ್ನು ಪುನಃ ಪಡೆಯಲು ಎಂದಿಗೂ ಸಾಧ್ಯವಿಲ್ಲ. ಅದಕ್ಕಾಗಿ ನೀವು ಪಶ್ಚಾತ್ತಾಪ ಪಡಬೇಕಾಗಬಹುದು. ಹಾಗಾಗಿ ಇನ್ನೊಂದು ಆಯ್ಕೆಯಿದೆ. ಅದುವೇ ಟ್ವೀಟ್ ಗಳನ್ನು ಡೌನ್ ಲೋಡ್ ಮಾಡುವುದು. ಹೌದು. ಸಂಪೂರ್ಣ ಟ್ವಿಟ್ಟರ್ ನ್ನು ಡೌನ್ ಲೋಡ್ ಮಾಡಬಹುದು. ಹೀಗೆ ಮಾಡುವುದರಿಂದ ಲಭ್ಯವಾಗುವ ಜಿಫ್ ಫೈಲ್ ನಲ್ಲಿ ನಿಮ್ಮ ಎಲ್ಲಾ ಟ್ವೀಟ್ ಗಳು ಮತ್ತು ರೀಟ್ವೀಟ್ ಗಳು ಲಭ್ಯವಿರುತ್ತದೆ. ನಿಮಗೆ ಇಷ್ಟವಿರುವಲ್ಲಿ ಅದನ್ನು ಸೇವ್ ಮಾಡಿ ಇಟ್ಟುಕೊಳ್ಳಬಹುದು.

ನಿಮ್ಮ ಟ್ವೀಟ್ ಗಳನ್ನು ಡೌನ್ ಲೋಡ್ ಮಾಡುವ ಹಂತಗಳು :

ನಿಮ್ಮ ಟ್ವೀಟ್ ಗಳನ್ನು ಡೌನ್ ಲೋಡ್ ಮಾಡುವ ಹಂತಗಳು :

1. ನಿಮ್ಮ ಫ್ರೊಫೈಲ್ ಪಿಕ್ಚರ್ ನ್ನು ಕ್ಲಿಕ್ಕಿಸಿ, ನಂತರ ಸೆಟ್ಟಿಂಗ್ಸ್ ಎಂಡ್ ಪ್ರೈವೆಸಿ ಯನ್ನು ಕ್ಲಿಕ್ ಮಾಡಿ.
2. ಪೇಜಿನ ಕೆಳಭಾಗಕ್ಕೆ ಸ್ಕ್ರೋಲ್ ಡೌನ್ ಮಾಡಿ ಮತ್ತು Request your archiveನ್ನು ಕ್ಲಿಕ್ಕಿಸಿ.
3. ಡೌನ್ ಲೋಡ್ ಮಾಡಬಹುದಾದ ಜಿಫ್ ಫೈಲ್ ನ್ನು ಒಳಗೊಂಡಿರುವ ಒಂದು ಇಮೇಲ್ ನ್ನು ನೀವು ಪಡೆಯುತ್ತೀರಿ. ಅದನ್ನು ತೆರೆದರೆ ನಿಮ್ಮ ಟ್ವಿಟ್ಟರ್ ಖಾತೆಯ ಸಂಪೂರ್ಣ ಟ್ವೀಟ್ ಗಳು ಸೇವ್ ಮಾಡಿ ಇಟ್ಟುಕೊಳ್ಳಲು ಲಭ್ಯವಾಗುತ್ತದೆ.

ಒಂದು ವೇಳೆ ನಿಮ್ಮ ಬಳಿ 3,200 ಟ್ವೀಟ್ ಗಳಿಗೂ ಅಧಿಕವಿದ್ದರೆ?

ಒಂದು ವೇಳೆ ನಿಮ್ಮ ಬಳಿ 3,200 ಟ್ವೀಟ್ ಗಳಿಗೂ ಅಧಿಕವಿದ್ದರೆ?

TweetDelete ಖಂಡಿತವಾಗಿಯೂ ಟ್ವೀಟ್ ಗಳನ್ನು ಡೀಲೀಟ್ ಮಾಡಲು ಅಧ್ಬುತ ಆಯ್ಕೆ. ಆದರೆ ನಿಮಗೆ ಹಿಂದಿನ ಎಲ್ಲಾ ಟ್ವೀಟ್ ಗಳನ್ನು ಡಿಲೀಟ್ ಮಾಡಲು ಇಷ್ಟವಿಲ್ಲದೇ ಇದ್ದರೆ ಇನ್ನೊಂದು ಆಯ್ಕೆಯೂ ಇದೆ. ನೀವು ಟ್ವೀಟ್ ಗಳು ಇಂತಿಷ್ಟು ದಿನಗೊಳಿಗೊಮ್ಮೆ ಡಿಲೀಟ್ ಆಗುವಂತೆ ಸೆಟ್ ಮಾಡಿ ಇಡಬಹುದು. ನಿಮ್ಮದು 3200 ಕ್ಕಿಂತ ಕಡಿಮೆ ಟ್ವೀಟ್ ಗಳಿದ್ದಲ್ಲಿ ಖಂಡಿತ ಇದು ಬೆಸ್ಟ್ ಆಯ್ಕೆಯಾಗುತ್ತದೆ.
• ಒಂದು ವಾರ
• ಎರಡು ವಾರಗಳು
• ಒಂದು ತಿಂಗಳು
• ಎರಡು ತಿಂಗಳು
• ಮೂರು ತಿಂಗಳು
• ಆರು ತಿಂಗಳು
• ಒಂದು ವರ್ಷ ಹೀಗೆ ಆಯ್ಕೆಗಳಿರುತ್ತದೆ. ಇದನ್ನು ಸೆಟ್ ಮಾಡಿ ಇಟ್ಟರೆ ಅಷ್ಟು ದಿನ ಕಳೆದ ನಂತರ ನಿಮ್ಮ ಹಳೆಯ ಟ್ವೀಟ್ ಗಳೆಲ್ಲವೂ ಸ್ವಯಂಚಾಲಿತವಾಗಿ ಡಿಲೀಟ್ ಆಗುತ್ತದೆ. ಆದರೆ ಹೀಗೆ ಡಿಲೀಟ್ ಆದ ಮೇಲೆ ರಿಟ್ರೀವ್ ಮಾಡಲು ಯಾವುದೇ ಆಯ್ಕೆಗಳಿರುವುದಿಲ್ಲ.

ಒಂದು ವೇಳೆ ನಿಮ್ಮ ಬಳಿ 3,200 ಟ್ವೀಟ್ ಇದ್ದರೆ?

ಒಂದು ವೇಳೆ ನಿಮ್ಮ ಬಳಿ 3,200 ಟ್ವೀಟ್ ಇದ್ದರೆ?

ಟ್ವೀಟ್ ಡಿಲೀಟ್ ಮೂಲಕ ನೀವು ಕೇವಲ 3,200 ಟ್ವೀಟ್ ಗಳನ್ನು ಡಿಲೀಟ್ ಮಾಡಬಹುದು. ಆದರೆ ಟ್ವೀಟ್ ಎರೇಜರ್ (TweetEraser )ಮೂಲಕ ಇದಕ್ಕೂ ಹೆಚ್ಚಿನ ಟ್ವೀಟ್ ಗಳು ವೇಗವಾಗಿ ಡಿಲೀಟ್ ಮಾಡಲು ಸಾಧ್ಯವಾಗುತ್ತದೆ. ಟ್ವೀಟ್ ಎರೇಜರ್ ಪಾವತಿ ಮಾಡಿ ಪಡೆಯಬೇಕಾಗುತ್ತದೆ. ಆದರೆ ಟ್ವೀಟ್ ಡಿಲೀಟ್ ಉಚಿತ ವರ್ಷನ್ ಆಗಿದೆ.

ಡಿಲೀಟೆಡ್ ಟ್ವೀಟ್ಸ್ ಏನಾಗುತ್ತದೆ ?

ಡಿಲೀಟೆಡ್ ಟ್ವೀಟ್ಸ್ ಏನಾಗುತ್ತದೆ ?

ನೀವು ಟ್ವೀಟ್ ಗಳಲ್ಲಿ ಬಲ್ಕ್ ಆಗಿ ಡಿಲೀಟ್ ಮಾಡಿದ ಕೂಡಲೇ ಅದು ನಿಮ್ಮ ಅಕೌಂಟಿನಲ್ಲಿ ಕಾಣಿಸುವುದಕ್ಕೆ ಕೆಲವು ನಿಮಿಷ ಅಥವಾ ಸೆಕೆಂಡ್ ಗಳು ಬೇಕಾಗಬಹುದು. ಯಾಕೆಂದರೆ ಆಪ್ ಗೆ ಎಷ್ಟು ಇಂತಹ ರಿಕ್ವೆಸ್ಟ್ ಗಳು ಬಂದಿವೆ ಎಂಬುದರ ಆಧಾರದಲ್ಲಿ ಇದರ ಸಮಯ ನಿಗದಿಯಾಗುತ್ತದೆ.

ಟ್ವಿಟ್ಟರ್ ತಿಳಿಸುವಂತೆ ಒಮ್ಮೆ ನೀವು ಟ್ವೀಟ್ ಗಳನ್ನು ಡಿಲೀಟ್ ಮಾಡಿದ ನಂತರ:

ಟ್ವಿಟ್ಟರ್ ತಿಳಿಸುವಂತೆ ಒಮ್ಮೆ ನೀವು ಟ್ವೀಟ್ ಗಳನ್ನು ಡಿಲೀಟ್ ಮಾಡಿದ ನಂತರ:

• ನೀವು ಟ್ವೀಟ್ ಗಳನ್ನು ಡಿಲೀಟ್ ಮಾಡಿದ ನಂತರ ಅದು ನಿಮ್ಮ ಅಕೌಂಟಿನಿಂದ ತೆಗೆದುಹಾಕಲಾಗುತ್ತದೆ. ಅದು ಯಾವುದೇ ಟೈಮ್ ಲೈನ್ ಗೆ ಸಂಬಂಧ ಪಟ್ಟಿರಬಹುದು ಮತ್ತು ಯಾವುದರಲ್ಲೇ ಅಂದರೆ ಟ್ವಿಟ್ಟರ್.ಕಾಮ್, ಟ್ವಿಟ್ಟರ್ iOS, ಮತ್ತು ಟ್ವಿಟ್ಟರ್ ಆಂಡ್ರಾಯ್ಡ್ ಎಲ್ಲೇ ಇರಬಹುದು.
• ಅದಕ್ಕೆ ಸಂಬಂಧಿಸಿದ ರಿಟ್ವೀಟ್ ಗಳು ಕೂಡ ಡಿಲೀಟ್ ಆಗುತ್ತದೆ.
• ಒಂದು ವೇಳೆ ಯಾವುದೇ ಇತರ ವ್ಯಕ್ತಿ ನಿಮ್ಮ ಟ್ವೀಟ್ ನ ಸಂಪೂರ್ಣ ಅಥವಾ ಅರ್ಧ ಭಾಗವನ್ನು ಕಾಪಿ ಮಾಡಿಕೊಂಡಿದ್ದರೆ ಆಗ ಅವರ ಟ್ವೀಟ್ ಡಿಲೀಟ್ ಆಗಿರುವುದಿಲ್ಲ.
• ಒಂದು ವೇಳೆ ಇತರೆ ವ್ಯಕ್ತಿಗಳು ನಿಮಗೆ ರಿಟ್ವೀಟ್ ನ್ನು ಅವರ ಸ್ವಂತ ಅಕೌಂಟಿನಲ್ಲಿ ಕಮೆಂಟಿಸಿದ್ದರೆ, ಆಗ ಅವರ ಟ್ವೀಟ್ ಗಳು ಡಿಲೀಟ್ ಆಗುವುದಿಲ್ಲ.
• ಟ್ವಿಟ್ಟರ್ ನಲ್ಲಿ ಹೊರತು ಪಡಿಸಿ ಇತರೆ ವೆಬ್ ಸೈಟ್ ಗಳಲ್ಲಿ, ಅಪ್ಲಿಕೇಷನ್ ಗಳಲ್ಲಿ ಅಥವಾ ಸರ್ಚ್ ಇಂಜಿನ್ ಗಳಲ್ಲಿ ನಿಮ್ಮ ಟ್ವೀಟ್ ಹರಿದಾಡುತ್ತಿದ್ದರೆ ಅದನ್ನು ಡಿಲೀಟ್ ಮಾಡಲು ಟ್ವಿಟ್ಟರ್ ಗೆ ಸಾಧ್ಯವಿಲ್ಲ.

ನಿಮ್ಮ ಟ್ವಿಟ್ಟರ್ ಅಕೌಂಟ್ ಕ್ಲೀನ್ ಮಾಡುವುದು

ನಿಮ್ಮ ಟ್ವಿಟ್ಟರ್ ಅಕೌಂಟ್ ಕ್ಲೀನ್ ಮಾಡುವುದು

ಇದೊಂದು ರೀತಿಯಲ್ಲಿ ನಿಮ್ಮ ಟ್ವಿಟ್ಟರ್ ಖಾತೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಕಾರ್ಯಕ್ರಮ. ಈ ಮೂಲಕ ನೀವು ನಿಮ್ಮ ಫೇಕ್ ಫಾಲೋವರ್ ಗಳನ್ನು ಕೂಡ ಗುರುತಿಸಬಹುದು. ಸಾಮಾಜಿಕ ಜಾಲತಾಣದಲ್ಲಿ ಭದ್ರವಾಗಿರಲು ಇದೊಂದು ರೀತಿಯಲ್ಲಿ ನಿಮಗೆ ಸಹಾಯ ಮಾಡುತ್ತದೆ. ಜನರಲ್ ಪಬ್ಲಿಕ್ ನಿಮ್ಮೆಲ್ಲಾ ಟ್ವೀಟ್ ಗಳನ್ನು ಹುಡುಕಾಡುವುದನ್ನು ಇದರಿಂದ ತಪ್ಪಿಸಿಕೊಳ್ಳಬಹುದು. ಹಳೆಯ ಟ್ವೀಟ್ ಗಳು ನಿಮ್ಮನ್ನು ಯಾವುದೋ ಕಾರಣಕ್ಕೆ ಮತ್ತೆ ಕಾಡುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ.

Best Mobiles in India

English summary
How to Delete All of Your Tweets Immediately. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X