ಫೇಸ್ ಬುಕ್ ಟೈಮ್ ಲೈನ್ ನಿಂದ ಹಳೆಯ ಪೋಸ್ಟ್ ಗಳನ್ನು ಡಿಲೀಟ್ ಮಾಡುವುದು ಹೇಗೆ?

|

ಫೇಸ್ ಬುಕ್ ನಿಮ್ಮ ಹಳೆಯ ಮೆಮೊರಿಗಳನ್ನು ಮೆಲುಕು ಹಾಕಲು ಇರುವ ಒಂದು ಅಧ್ಬುತ ಜಾಗ. ನೀವು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿರುವ ಎಲ್ಲಾ ಫೋಟೋಗಳು, ಮೆಮೊರಿಗಳು ಅದರಲ್ಲಿ ಸರ್ವಕಾಲಕ್ಕೂ ಲಭ್ಯವಾಗಿರುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಕೆಲವೊಮ್ಮೆ ಅಂತಹ ಫೋಟೋಗಳು ಹಾಗೂ ಮೆಮೊರಿಗಳು ನಿಮ್ಮ ಫೇಸ್ ಬುಕ್ ವಾಲ್ ನಲ್ಲಿ ಪಾಪ್ ಅಪ್ ಆಗಿ ನಿಮಗೆ ಮತ್ತೆ ಹಳೆಯ ನೆನಪು ಮರುಕಳುಹಿಸುವಂತೆ ಮಾಡುತ್ತದೆ. ಆದರೆ ಕೆಲವು ಫೋಟೋಗಳಿರಬಹುದು, ಅವುಗಳನ್ನು ಪುನಃ ನಿಮ್ಮ ಸ್ನೇಹಿತರು ನೋಡುವುದು ನಿಮಗೆ ಇಷ್ಟವಿಲ್ಲದೇ ಇರಬಹುದು.

ಫೇಸ್ ಬುಕ್ ಟೈಮ್ ಲೈನ್ ನಿಂದ ಹಳೆಯ ಪೋಸ್ಟ್ ಗಳನ್ನು ಡಿಲೀಟ್ ಮಾಡುವುದು ಹೇಗೆ?


ಈ ಸಮಸ್ಯೆಗೆ ಪರಿಹಾರವಿದೆ. ಚಿಂತಿಸುವ ಅಗತ್ಯವಿಲ್ಲ. ಹಳೆಯ ಪೋಸ್ಟ್ ಗಳನ್ನು ನೀವು ನಿಮ್ಮ ಫೇಸ್ ಬುಕ್ ಟೈಮ್ ಲೈನ್ ನಿಂದ ಡಿಲೀಟ್ ಮಾಡಬಹುದು.

ಇದನ್ನು ಆರಂಭಿಸುವುದಕ್ಕೂ ಮುನ್ನ ನೀವು ನಿಮ್ಮ ಫ್ರೆಂಡ್ ಲಿಸ್ಟ್ ನಲ್ಲಿ ಇಲ್ಲದ ಫೇಸ್ ಬುಕ್ ಬಳಕೆದಾರರಿಗೆ ನಿಮ್ಮ ಟೈಮ್ ಲೈನ್ ಹೇಗೆ ಕಾಣುತ್ತದೆ ಎಂಬುದನ್ನು ತಿಳಿದುಕೊಂಡಿರಬೇಕು. ಅದನ್ನು ಚೆಕ್ ಮಾಡಲು ಆಕ್ಟಿವಿಟಿ ಲಾಗ್ ಬಟನ್ ನ ಬಲಭಾಗದಲ್ಲಿರುವ ಮೂರು ಚುಕ್ಕಿಗಳನ್ನು ಕ್ಲಿಕ್ಕಿಸಿ ಮತ್ತು 'View as’ ನ್ನು ಸೆಲೆಕ್ಟ್ ಮಾಡಿ.

ಒಂದು ವೇಳೆ ನೀವು ಯಾವುದನ್ನೋ ಇಷ್ಟ ಪಡದೇ ಇದ್ದಲ್ಲಿ, ಅಲ್ಲಿರುವ ಗ್ಲೋಬ್ ಐಕಾನ್ ನ್ನು ಕ್ಲಿಕ್ಕಿಸಿ ಮತ್ತು 'Public’ಆಯ್ಕೆಯನ್ನು 'Friends,’ 'Only Me’ ಅಥವಾ 'Custom’ ಎಂದು ಬದಲಾಯಿಸಿ. ನೀವು 'X’ ಬಟನ್ ಕ್ಲಿಕ್ಕಿಸುವ ಮೂಲಕ ಪೋಸ್ಟ್ ನ್ನು ಡಿಲೀಟ್ ಕೂಡ ಮಾಡಬಹುದು.

ಇಲ್ಲಿ ನಿಮ್ಮ ಫೇಸ್ ಬುಕ್ ಟೈಮ್ ಲೈನ್ ನಲ್ಲಿರುವ ಹಳೆಯ ಪೋಸ್ಟ್ ಗಳನ್ನು ಡಿಲೀಟ್ ಮಾಡಲು ಕೆಲವು ದಾರಿಗಳನ್ನು ಹೇಳಲಾಗಿದೆ. ಗಮನಿಸಿ.

ಹಳೆಯ ಪೋಸ್ಟ್ ಗಳನ್ನು ಹೈಡ್ ಮಾಡುವುದು
ಒಂದು ವೇಳಎ ಮಲ್ಟಿಪಲ್ ಪಬ್ಲಿಕ್ ಪೋಸ್ಟ್ ಗಳನ್ನು ನೀವು ಹೈಡ್ ಮಾಡಲು ಇಚ್ಛಿಸುತ್ತಿದ್ದರೆ, ಅದನ್ನು ನೀವು ಫೇಸ್ ಬುಕ್ ಬಿಲ್ಟ್ ಇನ್ ಸಲ್ಯೂಷನ್ ಮೂಲಕ ಸಾಧಿಸಬಹುದು. ಫೇಸ್ ಬುಕ್ ನ ಬಲಭಾಗದಲ್ಲಿ ಮೇಲಿರುವ ಸೆಕ್ಯುರಿಟಿ ಲಾಕ್ ಐಕಾನ್ ನ್ನು ಕ್ಲಿಕ್ಕಿಸಿ ಮತ್ತು ನಂತರ 'See more settings’ ಆಯ್ಕೆಯನ್ನು ಸೆಲೆಕ್ಟ್ ಮಾಡಿ.ಈಗ 'Limit Old Posts’ ನ್ನು ಆಯ್ಕೆ ಮಾಡಿ..ಈಗ ನೀವು ಹಳೆಯ ಫೇಸ್ ಬುಕ್ ಪೋಸ್ಟ್ ಗಳ ವಿಸಿಬಿಲಿಟಿಯನ್ನು 'Just Friends’ಗೆ ಬದಲಾಯಿಸಿದರೆ ಆಯ್ತು.

ಟೈಮ್ ಲೈನ್ ಸೆಟ್ಟಿಂಗ್ಸ್ ನ್ನು ಫಿಕ್ಸ್ ಮಾಡುವುದು
ಪೋಸ್ಟ್ ಗಳನ್ನು ಮ್ಯಾನೇಜ್ ಮಾಡಲು ನೀವು ನಿಮ್ಮ ಟೈಮ್ ಲೈನ್ ಸೆಟ್ಟಿಂಗ್ಸ್ ನ್ನು ಚೆಕ್ ಮಾಡಬಹುದು.ಲಾಕ್ ಐಕಾನ್ ನ್ನು ಪುನಃ ಕ್ಲಿಕ್ಕಿಸಿ. ಈಗ 'Timeline and Tagging Settings’ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಇದು ಪನೆಲ್ ನ ಎಡಭಾಗದಲ್ಲಿರುತ್ತದೆ. ಈಗ ನೀವು ಮೊದಲ, ನಾಲ್ಕನೆ. ಐದನೆಯ ಮಚ್ಚು ಏಳನೆಯ ಆಯ್ಕೆಯನ್ನು ಲಿಸ್ಟ್ ನಲ್ಲಿ 'Friends,’ ಅಥವಾ ನಿಮಗೆ ಇಷ್ಟವಿರುವಂತೆ ಆಯ್ಕೆ ಮಾಡಿ ಬದಲಾಯಿಸಬೇಕು.

ಫೇಸ್ ಬುಕ್ ಕ್ಲೀನಿಂಗ್
ಮೇಲಿನ ಎರಡು ಮೆಥೆಡ್ ಗಳನ್ನು ಹೊರತು ಪಡಿಸಿ, ಫೇಸ್ ಬುಕ್ ನ ಹಳೆಯ ಪೋಸ್ಟ್ ನ ಮೆಮೊರಿಯನ್ನು ತೆಗೆಯಲು ಇನ್ನೊಂದು ಮಾರ್ಗವಿದೆ. ದೊಡ್ಡ ಮಟ್ಟದಲ್ಲಿ ಫೇಸ್ ಬುಕ್ ಪೋಸ್ಟ್ ಗಳನ್ನು ಡಿಲೀಟ್ ಮಾಡಲು ನೀವು ಫೇಸ್ ಬುಕ್ ಪೋಸ್ಟ್ ಮ್ಯಾನೇಜರ್ ಕ್ರೋಮ್ ಎಕ್ಸ್ ಟೆಷನ್ ನ್ನು ಬಳಕೆ ಮಾಡಬಹುದು.ಆದರೆ ಇದು ಗೂಗಲ್ ಕ್ರೋಮ್ 7 ನಲ್ಲಿ ಮಾತ್ರ ಕೆಲಸ ಮಾಡುತ್ತದೆ.

Best Mobiles in India

English summary
How to delete old posts from your Facebook Timeline. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X