ಫೇಸ್‌ಬುಕ್ ಅಕೌಂಟ್ ಡೀಆಕ್ಟಿವೇಟ್ ಮಾಡುವುದು ಹೇಗೆ?

|

ನೀವು ಫೇಸ್‌ಬುಕ್‌ನಿಂದ ದೂರಾಗಬೇಕು ಎಂದಾದರೆ ಎರಡು ಮಾರ್ಗಗಳಿದೆ. ಒಂದು ನೀವು ಫೇಸ್ ಬುಕ್ ನಿಂದ ಡೀಆಕ್ಟಿವೇಟ್ ಆಗುವುದು ಅಥವಾ ಶಾಶ್ವತವಾಗಿ ಫೇಸ್ ಬುಕ್ ಖಾತೆಯನ್ನು ತೊರೆಯುವುದು. ಇವುಗಳಲ್ಲಿ ಮೊದಲು ಫೇಸ್ ಬುಕ್ ನಿಂದ ಡೀಆಕ್ಟಿವೇಟ್ ಆಗುವುದು ಹೇಗೆ ಕೆಲಸ ಮಾಡುತ್ತದೆ ನೋಡಿದ ನಂತರ, ನೀವು ಫೇಸ್ ಬುಕ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವ ನಿರ್ಧಾರ ಕೈಗೊಳ್ಳಬಹುದು. ಹಾಗಾಗಿ, ಇಂದಿನ ಲೇಖನದಲ್ಲಿ ಫೇಸ್‌ಬುಕ್ ಅಕೌಂಟ್ ಅನ್ನು ಡೀಆಕ್ಟಿವೇಟ್ ಮಾಡುವುದು ಹೇಗೆ ಎಂಬುದನ್ನು ನಾವು ತಿಳಿಸಿಕೊಡುತ್ತಿದ್ದೇವೆ.

ಫೇಸ್ ಬುಕ್

ನಿಮ್ಮ ಫೇಸ್ ಬುಕ್ ಖಾತೆಯನ್ನು ಡೀಆಕ್ಟಿವೇಟ್ ಮಾಡುವುದು ಎಂದರೆ ನೀವು ಫೇಸ್ ಬುಕ್ ಖಾತೆಯನ್ನು ಯಾರೂ ಕೂಡ ಆಕ್ಸಿಸ್ ಮಾಡುವುದಕ್ಕೆ ಸಾಧ್ಯವಾಗದೇ ಇರುವಂತೆ ಮಾಡುವುದು. ಅಂದರೆ, ನಿಮ್ಮ ಫೇಸ್ ಬುಕ್ ಖಾತೆಯನ್ನು ಬೇರೆ ಯಾರೂ ನೋಡಲು ಸಾಧ್ಯವಿಲ್ಲ. ಆದರೆ, ನಿಮ್ಮ ಡಾಟಾ ಯಾವತ್ತೂ ಕೂಡ ಫೇಸ್ ಬುಕ್ ಸರ್ವರ್ ನಿಂದ ಡಿಲೀಟ್ ಆಗದೇ ಇರುತ್ತದೆ. ಇದು ನಿಮಗೆ ಫೇಸ್ ಬುಕ್ ತೊರೆದು ಇರುವುದಕ್ಕೆ ಸಾಧ್ಯವೇ ಅಥವಾ ಇಲ್ಲವೇ ಎಂಬುದನ್ನು ತಿಳಿಸುತ್ತದೆ ಮತ್ತು ಅದೇ ಖಾತೆಯಲ್ಲಿ ಫೇಸ್‌ಬುಕ್ ಬೇಕು ಎಂದರೆ ಪುನಃ ಪಡೆಯಬಹುದಾಗಿದೆ.

 ಫೇಸ್‌ಬುಕ್

• ನಿಮ್ಮ ಫೇಸ್‌ಬುಕ್ ಪೇಜಿನ ಮೇಲ್ಬಾಗದ ಬಲಗಡೆಮೆನುವಿನ ಕೆಳಭಾಗದ ಬಾಣದ ಗುರುತನ್ನು ಕ್ಲಿಕ್ಕಿಸಿ ಅಥವಾ https://www.facebook.com/deactivate/ ಗೆ ತೆರಳಿ.• ಸೆಟ್ಟಿಂಗ್ಸ್ ಸೆಲೆಕ್ಟ್ ಮಾಡಿ..• ಜನರಲ್ ಅನ್ನು ಆಯ್ಕೆ ಮಾಡಿ.• ‘Manage your account'ನ್ನು ನೇವಿಗೇಟ್ ಮಾಡಿ, • ಇದೀಗ ನೀವು ‘Deactivate your account."ಆಯ್ಕೆಯನ್ನು ನೋಡುತ್ತೀರಿ. ಹೀಗೆ ಫೇಸ್‌ಬುಕ್ ಖಾತೆಯನ್ನು ಡೀಆಕ್ಟಿವೇಟ್ ಮಾಡಿದರೂ ಮೆಸೇಂಜರ್ ಮತ್ತು ಫೇಸ್ಬುಕ್ ಲಾಗಿನ್ ಅನ್ನು ಯಾವಾಗ ಬೇಕಿದ್ದರೂ ಬಳಕೆ ಮಾಡುವುದಕ್ಕೆ ಅವಕಾಶವಿರುತ್ತದೆ.

ಫೇಸ್ ಬುಕ್

ಒಂದು ವೇಳೆ ನೀವು ಫೇಸ್ ಬುಕ್ ಇಲ್ಲದೆ ಇರುವುದಕ್ಕೆ ಸಾಧ್ಯವಿಲ್ಲ ಅನ್ನಿಸಿದರೆ, ನೀವು ಪುನಃ ನಿಮ್ಮ ಖಾತೆಯನ್ನು ರೀಆಕ್ಟಿವೇಟ್ ಮಾಡುವುದಕ್ಕೆ ಸಾಧ್ಯವಿದೆ. ನಿಮ್ಮ ಅಕೌಂಟ್ ಅನ್ನು ಮತ್ತೊಮ್ಮೆ ಸಕ್ರೀಯ ಮಾಡಿ ನೀವು ಪುನಃ ಸಾಮಾಜಿಕ ಜಾಲತಾಣಕ್ಕೆ ಬರಬಹುದು. ಆದರೆ ಒಂದು ಸೂಚನೆ ಇರುತ್ತದೆ.ನಿಮ್ಮ ಖಾತೆಯನ್ನು ಡೀಆಕ್ಟಿವೇಟ್ ಮಾಡುವುದು ಸುಲಭವಾಗಿರುತ್ತದೆ. ಆದರೆ ಫೇಸ್ ಬುಕ್ ಸರ್ವರ್ ನಿಂದ ಇದು ನಿಮ್ಮ ಡಾಟಾವನ್ನು ಡಿಲೀಟ್ ಮಾಡಿರುವುದಿಲ್ಲ. ಅದನ್ನು ನೀವು ಯಾವತ್ತೂ ಕೂಡ ಮನಸ್ಸಿನಲ್ಲಿ ಇಟ್ಟುಕೊಂಡಿರಬೇಕು.

 ಡಿಲೀಟ್

ಇನ್ನು ಫೇಸ್ ಬುಕ್ ಖಾತೆಯನ್ನು ಡಿಲೀಟ್ ಮಾಡಬೇಕು ಎಂದುಕೊಳ್ಳುವುದು ಒಂದು ದೊಡ್ಡ ನಿರ್ಧಾರ. ಫೇಸ್ ಬುಕ್ ನಿಂದ ಸಂಪೂರ್ಣವಾಗಿ ಹಿಂದೆ ಸರಿಯುವ ಮುನ್ನ ನಿಮ್ಮ ನಿರ್ಧಾರ ಗಟ್ಟಿಯಾಗಿರಲಿ. ಇದು ಕೇವಲ ನಿಮ್ಮ ಫೇಸ್ ಬುಕ್ ಪ್ರೊಫೈಲ್ ಮಾತ್ರವೇ ರಿಮೂವ್ ಮಾಡುವುದಿಲ್ಲ ಬದಲಾಗಿ ಪಿಕ್ಚರ್ ಗಳು, ವೀಡಿಯೋಗಳು, ಸ್ಟೇಟಸ್ ಅಪ್ ಡೇಟ್ ಗಳು, ಫ್ರೆಂಡ್ಸ್ ಲಿಸ್ಟ್, ಮೆಸೇಜ್ ಗಳು ಹೀಗೆ ಎಲ್ಲವನ್ನು ಡಿಲೀಟ್ ಮಾಡುತ್ತದೆ. ಈ ಖಾತೆಯನ್ನು ಡಿಲೀಟ್ ಮಾಡುವ ಮುಖಾಂತರ ಫೇಸ್ ಬುಕ್ ಮೆಸೇಂಜರ್ ಅನ್ನು ಬಳಕೆ ಮಾಡುವುದಕ್ಕೆ ಅವಕಾಶವಿರುವುದಿಲ್ಲ.

Best Mobiles in India

English summary
To deactivate your account: Tap in the top right. Scroll down and tap Settings. Scroll down and tap Account Ownership and Control under Your Facebook Information.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X