ನೀವು ಯಾವುದೇ ಆಪ್ ಬಳಕೆ ಮಾಡಿದರೂ ಅದರಲ್ಲಿ ಜಾಹಿರಾತು ಕಾಣಿಸಿಕೊಳ್ಳುತ್ತವೆ. ಒಂದು ವೇಳೆ ನೀವು ಡೌನ್‌ಲೋಡ್ ಮಾಡಿದ ಆಪ್‌ನಲ್ಲಿ ಜಾಹಿರಾತು ಕಾಣಿಸದಿದ್ದರೂ ಕೂಡ ಅದು ನಿಮ್ಮಿಂದ ಹಣ ಪಡೆಯಲು ಪ್ರಯತ್ನಿಸುತ್ತದೆ ಎಂದರೆ, ಇದು ಆ ಆಪ್ ನಿರ್ಮಾತೃಗಳ ಸಹಜ ಆದಾಯದ ಮೂಲ ಎಂಬುದನ್ನು ನಾವೇನು ನಿಮಗೆ ತಿಳಿಸಿಕೊಡಬೇಕಿಲ್ಲ.!
ನಿಮಗೆಲ್ಲಾ ತಿಳಿದಿರುವಂತೆ, ಯಾವುದೇ ಸೇವೆಗೆ ಹಣ ಪಡೆಯುವಂತೆ ಆಪ್ ನಿರ್ಮಾಣ ಮಾಡಿದವರು ಸಹ ತಮ್ಮ ಸೇವೆಗೆ ಹಣ ಪಡೆಯುತ್ತಾರೆ ಎಂಬುದು ನಿಜ. ಆದರೆ, ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಬಳಕೆದಾರರನ್ನು ಹೊಂದಿರುವ 'ವಾಟ್ಸ್ಆಪ್' ಯಾವುದೇ ಜಾಹಿರಾತು ನೀಡದೇ, ಉಚಿತವಾಗಿ ಸೇವೆ ನೀಡಿ ಹಣ ಗಳಿಸುವುದು ಹೇಗೆ ಎಂಬುದು ನಿಮಗೆ ಗೊತ್ತಾ?!

ಹೌದು, ಕೇವಲ 150 ಕೋಟಿ ಡಾಲರ್ ಬೆಲೆಯನ್ನು ಹೊಂದಿದ್ದ ವಾಟ್ಸ್‌ಆಪ್ ಅನ್ನು ಫೇಸ್‌ಬುಕ್ ಕಂಪೆನಿ ಬರೋಬ್ಬರಿ 1,900 ಕೋಟಿ ಡಾಲರ್ ಕೊಟ್ಟು ಖರೀದಿಸಿ ನಂತರ ಉಚಿತವಾಗಿ ಸೇವೆ ನೀಡುತ್ತದೆ ಎಂದರೆ ಎಲ್ಲರಿಗೂ ಆಶ್ಚರ್ಯವಾಗುತ್ತದೆ ಅಲ್ಲವೇ.? ಹಾಗಾದರೆ. ಉಚಿತ ಸೇವೆಯನ್ನು ನಿಡುತ್ತಿರುವ ವಾಟ್ಸ್‌ಆಪ್ ಹೇಗೆ ಹಣಗಳಿಸುತ್ತದೆ ಎಂಬುದನ್ನು ನಾವು ತಿಳಿಯೋಣ!
ವಾಟ್ಸ್ಆಪ್ ಆದಾಯವನ್ನು ಬಿಟ್ಟುಕೊಟ್ಟಿಲ್ಲ.!!
ಫೇಸ್‌ಬುಕ್ ಕಂಪೆನಿ ವಾಟ್ಸ್ಆಪ್ ಅನ್ನು ಖರಿದಿಸಿ ಉಚಿತ ಸೇವೆಯನ್ನು ನಿಡಿದ ನಂತರ, ಇಲ್ಲಿಯವರೆಗೂ ವಾಟ್ಸ್ಆಪ್ ಆದಾಯ ಎಷ್ಟು ಮತ್ತು ಯಾವ ಮೂಲದಿಂದ ಆದಾಯ ಪಡೆಯುತ್ತಿದೆ ಎಂದು ಯಾರಿಗೂ ತಿಳಿದಿಲ್ಲ. ಫೇಸ್‌ಬುಕ್ ಕಂಪೆನಿ ಕೂಡ ಈ ಬಗ್ಗೆ ಮಾಹಿತಿ ನೀಡದೇ ಇರುವುದರಿಂದ ಯಾರಿಗೂ ವಾಟ್ಸ್‌ಆಪ್ ಹೇಗೆ ಹಣಗಳಿಸುತ್ತಿದೆ ಎಂಬ ಸ್ಪಷ್ಟ ಮಾಹಿತಿ ಇಲ್ಲ.!
ವಾಟ್ಸ್ಆಪ್‌ಗೆ ನೇರ ಆದಾಯವಿಲ್ಲ!!
ಮೊದಲೇ ಹೇಳಿದಂತೆ ವಾಟ್ಸ್ಆಪ್ ಉಚಿತ ಸೇವೆಯನ್ನು ನೀಡುತ್ತಿರುವುದರಿಂದ ಅದಕ್ಕೆ ನೇರ ಆದಾಯವಿಲ್ಲ. ಜಾಹಿರಾತುಗಳನ್ನು ನಿಡದೇ, ಬಳಕೆದಾರರಿಂದ ಹಣ ಸಂಗ್ರಹಿಸದೇ ವಾಟ್ಸ್‌ಆಪ್ ನೇರವಾಗಿ ಹಣ ಗಳಿಸಲು ಸಾಧ್ಯವಿಲ್ಲ. ಅಂದರೆ. ವಾಟ್ಸ್ಆಪ್ ಒಂದು ಉಚಿತವಾಗಿಯೇ ಸೇವೆ ನೀಡಬೇಕು ಅಥವಾ ಇತರೆ ಮೂಲಗಳಿಂದ ಹಣ ಗಳಿಸಬೇಕು.!
ಡೇಟಾ ಮಾರಿಕೊಳ್ಳುತ್ತಿದೆಯೇ?
ಜಾಹಿರಾತುಗಳನ್ನು ನಿಡದೇ, ಬಳಕೆದಾರರಿಂದ ಹಣ ಸಂಗ್ರಹಿಸದೇ ವಾಟ್ಸ್ಆಪ್ ಹಣಗಳಿಸಲು ಡೇಟಾ ಮಾರಿಕೊಳ್ಳುತ್ತಿದೆಯೇ ಎಂಬ ಅನುಮಾನ ಬಹುತೇಕರಿಗೆ ಕಾಡಿದೆ. ಆದರೆ, ವಾಟ್ಸ್ಆಪ್‌ನಲ್ಲಿರುವ ಬಳೆಕೆದಾರರ ಸ್ನೇಹಿಯಾದ ಅಂಶ 'ಎನ್‌ಕ್ರಿಪ್ಷನ್' ಬಳಕೆದಾರರ ಮೆಸೇಜ್‌ಗಳನ್ನು ಗೌಪ್ಯವಾಗಿಡುವ ಹೊಣೆ ಹೊತ್ತಿರುವುದರಿಂದ ಇದರಿಮದ ಸಹ ಹಣ ಗಳಿಸಲು ಸಾಧ್ಯವಿಲ್ಲ.!
ಹಾಗಾದರೆ, ವಾಟ್ಸ್‌ಆಪ್ ಹೇಗೆ ಹಣಗಳಿಸುತ್ತಿದೆ?
ಮೇಲಿನ ಎಲ್ಲಾ ಕಾರಣಗಳಿಂದ ನಮಗೆ ತಿಳಿಯುವ ಅಂಶವೇನೆಂದರೆ ವಾಟ್ಸ್‌ಆಪ್‌ಗೆ ಯಾವುದೇ ಆದಾಯವಿಲ್ಲ. ವಾಟ್ಸ್ಆಪ್ ಇಂದು ಕಾರ್ಯನಿರ್ವಹಿಸುತ್ತಿರುವ ರೂಪದಲ್ಲಿ ವಾಟ್ಸ್ಆಪ್ ಹಣಗಳಿಕೆಯನ್ನೇ ಮಾಡುತ್ತಿಲ್ಲ. ಆದರೆ, ಭವಿಷ್ಯದಲ್ಲಿ ಭಾರೀ ಲಾಭದ ನಿರೀಕ್ಷೆಯನ್ನು ವಾಟ್ಸ್ಆಪ್ ಹೊಂದಿದೆ.!!
ವಾಟ್ಸ್ಆಪ್‌ನಿಂದ ಈಗ ಹಣ ಬೇಕಿಲ್ಲ!!
ಈಗಲೇ ಹಣಗಳಿಸುವ ಬಗ್ಗೆ ವಾಟ್ಸ್ಆಪ್ ಮಾಲಿಕ ಜುಕರ್‌ಬರ್ಗ್ ಚಿಂತಿಸುತ್ತಿಲ್ಲ ಎನ್ನಲಾಗಿದೆ. ಬಳಕೆದಾರರಿಗೆ ವಾಟ್ಸ್ಆಪ್ ಮೂಲಕ ಕಿರಿಕಿರಿಯಾಗದಂತೆ ಸೇವೆಯನ್ನು ನಿಡಿ ಬಳಕೆದಾರರನ್ನು ಹೆಚ್ಚಿಸಿಕೊಳ್ಳುವ ಗುರಿ ಮಾತ್ರ ಇದ್ದು, ಭವಿಷ್ಯದಲ್ಲಿ ಇನ್ನಿತರ ಸೇವೆಗಳ ಮೂಲಕ ವಾಟ್ಸ್‌ಆಪ್‌ಗೆ ಹಣವನ್ನು ತುಂಬಿಕೊಳ್ಳುವ ಪ್ಲಾನ್ ಜುಕರ್‌ಬರ್ಗ್ ಅವರಿಗಿದೆಯಂತೆ.!
ಭವಿಷ್ಯದಲ್ಲಿದೆ ಹಣ!!
ಜಾಹಿರಾತು ನೀಡದೇ, ಗ್ರಾಹಕರಿಂದ ಹಣವನ್ನು ಪಡೆಯದೇ ಹಣಗಳಿಸಲು ವಾಟ್ಸ್‌ಆಪ್‌ಗೆ ಭವಿಷ್ಯದಲ್ಲಿ ಸಾಧ್ಯವಾಗಲಿದೆಯಂತೆ. ಗ್ರಾಹಕರಿಗೆ ಕಿರಿಕಿಯಾಗದಂತಹ ಸೇವೆಗಳನ್ನು ನೀಡುತ್ತಾ. ಬ್ಯುಸಿನೆಸ್ ಜೊತೆಗಾರರ ಜೊತೆ ಸೇರಿ ಕಮಿಷನ್ ಲೆಕ್ಕದಲ್ಲಿ ಹಣಗಳಿಸುವ ಲೆಕ್ಕಾಚಾರವನ್ನು ವಾಟ್ಸ್‌ಆಪ್ ಹೊಂದಿದೆ. ಉದಾಹರಣೆಗೆ ವಾಟ್ಸ್‌ಆಪ್ ಪೇಮೆಂಟ್.!!
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.