ಆಪಲ್ ಬಳಕೆದಾರರು ಬಹುದಿನಗಳಿಂದ ಕಾಯುತ್ತಿದ್ದ iOS 11 ಲಭ್ಯ ವಾಗಿದ್ದು, ಅನೇಕ ಮಂದಿ ಈಗಾಗಲೇ ತಮ್ಮ ಐಫೋನ್ ಗಳಲ್ಲಿ ಹೊಸ iOS 11 ಅನ್ನು ಇನ್ ಸ್ಟಾಲ್ ಮಾಡಿಕೊಂಡಿದ್ದಾರೆ. ಆದರೆ ಐಫೋನ್ 6 ಹೊಂದಿರುವ ಗ್ರಾಹಕರು iOS 11 ನಿಂದ ಭಾರೀ ತೊಂದರೆಯನ್ನು ಅನುಭವಿಸುತ್ತಿದ್ದು, ಇದಕ್ಕಿದ್ದ ಹಾಗೇ ಮೊಬೈಲ್ ಆಫ್ ಆಗುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಐಫೋನ್ 6 ಬಳಕೆದಾರರು ತಮ್ಮ ಫೋನ್ ಅನ್ನು iOS 11 ನಿಂದ iOS 10ಗೆ ಡೌನ್ ಗ್ರೇಡ್ ಮಾಡಿಕೊಳ್ಳುವುದು ಹೇಗೆ ಮತ್ತು ತಾವು ಎದುರಿಸುತ್ತಿರುವ ಸಮಸ್ಯೆಯಿಂದ ಹೊರಬರುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.
ಹಂತ 01: ನಿಮ್ಮ ಹೊಸ ಆವೃತ್ತಿಯ ಟ್ಯೂನ್ಸ್ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ, ಇಲ್ಲವಾದರೆ ಐಟ್ಯೂನ್ಸ್ ಆಕೌಂಟ್ ನಲ್ಲಿ ಅವೆಲಬಲ್ ಡೌನ್ ಲೋಡ್ ಮೇಲೆ ಕ್ಲಿಕ್ ಮಾಡಿ.
ಹಂತ 02: ನಿಮ್ಮ ಲ್ಯಾಪ್ ಟಾಪ್ /ಡೆಸ್ಕ್ ಟಾಪ್ ನಲ್ಲಿ ನಿಮ್ಮ ಫೋನ್ ಗಾಗಿ iOS 10.3.3 IPSW file (http://osxdaily.com/2017/07/19/ios-10-3-3-download-update-ipsw/) ಫೈಲ್ ಡೌನ್ ಲೋಡ್ ಮಾಡಿಕೊಳ್ಳಿ.
ಹಂತ 03: ನಂತರ ಫೈಂಡ್ ಮೈ ಫೋನ್ ಆಯ್ಕೆಯನ್ನು ಆಫ್ ಮಾಡಿ. ಇದಕ್ಕಾಗಿ ಸೆಟ್ಟಿಂಗ್> ನಿಮ್ಮ ಹೆಸರು> ಐಕ್ಲೌವ್ಡ್, ಫೈಂಡ್ ಮೈ ಫೋನ್>ಗೆ ಹೋಗಿ ಅಲ್ಲಿ ಫೈಂಡ್ ಮೈ ಫೋನ್ ಆಯ್ಕೆಯನ್ನು ಆಫ್ ಮಾಡಿ, ನಿಮ್ಮ ಫೋನ್ ಅನ್ನು ಲ್ಯಾಪ್ ಟಾಪ್ ಇಲ್ಲವೇ, ಡೆಸ್ಕ್ ಟಾಪ್ ಗೆ ಕನೆಕ್ಟ್ ಮಾಡಿ.
ಹಂತ 04: ನಂತರ ನಿಮ್ಮ ಫೋನ್ ಅನ್ನು DFU ಮೋಡ್ ಗೆ ಹಾಕಿ ಇದಕ್ಕಾಗಿ ನೀವು ಪವರ್ ಬಟನ್ ಮತ್ತು ಹೋಮ್ ಬಟನ್ ಅನ್ನು ಒತ್ತಿ ಹಿಡಿಯಿರಿ. ನಿಮ್ಮ ಕಂಪ್ಯೂರ್ ಸ್ಕ್ರಿನ್ ನಲ್ಲಿ ನಿಮ್ಮ ಫೋನ್ ರಿಕವರಿ ಮೋಡ್ ನಲ್ಲಿ ಬರಲಿದೆ. '
ಹಂತ 05: ಈ ಸಂದರ್ಭದಲ್ಲಿ ರಿಸ್ಟೋರ್ ಐಫೋನ್ ಆಯ್ಕೆಯನ್ನು ಕ್ಲಿಕ್ ಮಾಡಿ, ನೀವು ಡೌನ್ ಲೋಡ್ ಮಾಡಿರುವ ಫೈಲ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಿ. ಇದರಿಂದ ನಿಮ್ಮಪೋನ್ iOS 10ನಲ್ಲಿ ಕಾರ್ಯನಿರ್ವಹಿಸಲಿದೆ.
ಮೊಬೈಲ್ ನಂಬರ್ ಫೋರ್ಟ್ ಮಾಡಿಸುವ ಮುನ್ನ ಇಲ್ಲೋಮ್ಮೆ ನೋಡಿ..!
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.