ಫೇಸ್ ಬುಕ್ ವೀಡಿಯೋಗಳನ್ನು ಡೌನ್ ಲೋಡ್ ಮಾಡಬಹುದು...ಹೇಗೆ ಗೊತ್ತಾ..?

By GizBot Bureau
|

ಫೇಸ್ ಬುಕ್ ಒಂದು ಪ್ರಸಿದ್ಧ ಸಾಮಾಜಿಕ ಜಾಲತಾಣವಾಗಿದ್ದು, ಈ ವೇದಿಕೆಯಲ್ಲಿ ವಿಶ್ವದಾದ್ಯಂತ ಸುಮಾರು ಎರಡು ಬಿಲಿಯನ್ ಬಳಕೆದಾರರಿದ್ದಾರೆ ಮತ್ತು ಪ್ರತಿದಿನ ಸಾವಿರಕ್ಕೂ ಅಧಿಕ ಮಂದಿ ಸೇರ್ಪಡೆಗೊಂಡು ಸೈನ್ ಅಪ್ ಆಗುತ್ತಾರೆ. ಫೇಸ್ ಬುಕ್ ನ್ನು ಪ್ರಮುಖವಾಗಿ ಹೊಸ ಸ್ನೇಹಿತರನ್ನು ಗಳಿಸಲು, ಈಗಿರುವ ಸ್ನೇಹಿತರ ಜೊತೆ ಯಾವಾಗಲೂ ಸಂಪರ್ಕದಲ್ಲಿರಲು, ಮೇಸೇಜ್ ಗಳನ್ನು ಹಂಚಿಕೊಳ್ಳಲು, ವೀಡಿಯೋ, ಚಿತ್ರಗಳು ಮತ್ತು ಇತರೆ ಹಲವು ಮಾಹಿತಿಗಳನ್ನು ಹಂಚಿಕೊಳ್ಳಲು ಬಳಸಲಾಗುತ್ತೆ.

ಬಳಕೆದಾರರಿಗೆ ಅವರು ಸಾಮಾಜಿಕ ನೆಟ್ವರ್ಕ್ ನ್ನು ದಿನದಿಂದ ದಿನಕ್ಕೆ ಇನ್ನಷ್ಟು ವಿಸ್ತರಿಸಿಕೊಳ್ಳಲು ಈ ವೇದಿಕೆ ಹಲವು ರೀತಿಯಲ್ಲಿ ನೆರವು ನೀಡುತ್ತದೆ. ಇದಿಷ್ಟೇ ಅಲ್ಲದೆ, ಬ್ಯುಸಿನೆಸ್ ಮಾಡುವವರಿಗೆ ಅವರ ಗ್ರಾಹಕರನ್ನು ತಲುಪಲೂ ಕೂಡ ಈ ವೇದಿಕೆ ಸಹಾಯ ಮಾಡುತ್ತೆ.

ಫೇಸ್ ಬುಕ್ ವೀಡಿಯೋಗಳನ್ನು ಡೌನ್ ಲೋಡ್ ಮಾಡಬಹುದು...ಹೇಗೆ ಗೊತ್ತಾ..?

ಫೇಸ್ ಬುಕ್ ನ ತುಂಬಾ ಕುತೂಹಲಕಾರಿ ವೈಶಿಷ್ಟ್ಯವೆಂದರೆ,ಆನ್ ಲೈನ್ ಲ್ಲಿರುವ ಕುತೂಹಲಕಾರಿ ಫೋಟೋಗಳು, ವೀಡಿಯೋಗಳು ಮತ್ತು ಸಂದೇಶಗಳು ಕಾಣಿಸುವುದು. ಹಾಗೆ ಕಾಣಿಸುವ ಫೋಟೋಗಳನ್ನು ಡೌನ್ ಲೋಡ್ ಮಾಡುವುದು ತುಂಬಾ ಸುಲಭ. ಆದರೆ ವಿಡಿಯೋಗಳನ್ನು ಡೌನ್ ಲೋಡ್ ಮಾಡುವುದು ಸ್ವಲ್ಪ ಮಟ್ಟಿಗೆ ಪ್ರಯಾಸದಾಯಕವಾಗಿರುತ್ತದೆ. ಒಂದು ವೇಳೆ ನೀವು ಯಾವುದಾದರೂ ವೀಡಿಯೋವನ್ನು ಕುತೂಹಲಕಾರಿ ಎಂದು ಪರಿಗಣಿಸಿದರೆ ಮತ್ತು ಅದನ್ನು ಡೌನ್ ಲೋಡ್ ಮಾಡಲು ಪ್ರಯತ್ನಿಸಿದಾಗ ಆಗದೇ ಇದ್ದರೆ, ಈ ಕೆಳಗೆ ನಾವು ಸೂಚಿಸುವ ಹಂತಗಳನ್ನು ಅನುಸರಿಸಿ ಮತ್ತು ಫೇಸ್ ಬುಕ್ ವೀಡಿಯೋಗಳನ್ನು ಸುಲಭದಲ್ಲಿ ನಿಮ್ಮ ಕಂಪ್ಯೂಟರ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ

ಅಗತ್ಯತೆಗಳು – ನಿಮ್ಮ ಡೆಸ್ಕ್ ಟಾಪ್ ಕಂಪ್ಯೂಟರ್ ನಲ್ಲಿ ಸ್ಟೇಬಲ್ ಇಂಟರ್ ನೆಟ್ ಕನೆಕ್ಷನ್ ಇರಬೇಕು ಮತ್ತು ಕ್ರೋಮ್ ಇನ್ಸ್ಟಾಲ್ ಆಗಿರಬೇಕು.

ಫೇಸ್ ಬುಕ್ ವೀಡಿಯೋಗಳನ್ನು ಡೌನ್ ಲೋಡ್ ಮಾಡಬಹುದು...ಹೇಗೆ ಗೊತ್ತಾ..?

ಹಂತ 1 – ನಿಮ್ಮ ಗೂಗಲ್ ಕ್ರೋಮ್ ಓಪನ್ ಮಾಡಿ ಮತ್ತು ಆಪ್ ಸ್ಟೋರ್ ಗೆ ತೆರಳಿ

ಹಂತ 2 – ಇಲ್ಲಿ ನೀವು Facebook Video Downloader ನ್ನು ಹುಡುಕಾಡಬೇಕು ಮತ್ತು Add to Chrome ಬಟನ್ ಒತ್ತಿ ಎಕ್ಸ್ ಟೆಷನ್ ನ್ನು ನಿಮ್ಮ ಕ್ರೋಮಿಗೆ ಇನ್ಸ್ಟಾಲ್ ಮಾಡಿ.

ಹಂತ 3 – ನೀವು ಒಂದು ಪ್ರಾಂಪ್ಟ್ ನ್ನು ಪಡೆಯುತ್ತೀರಿ ಅದು ನೀವು ಇನ್ಸ್ಟಾಲೇಷನ್ ನ್ನು ಕನ್ಫರ್ಟ್ ಮಾಡಲು ಕೇಳುತ್ತದೆ. ಅಲ್ಲಿರುವ ADD ಬಟನ್ ನ್ನು ಒತ್ತಿ.

ಹಂತ 4 – ಒಮ್ಮೆ ಇನ್ಸ್ಟಾಲೇಷನ್ ಮುಗಿದರೆ, ನೀವು ಫೇಸ್ ಬುಕ್ ಐಕಾನ್ ನ್ನು ನಿಮ್ಮ ಬ್ರೌಸರ್ ಸ್ಕ್ರೀನಿನ ಮೇಲ್ಬಾಗದ ಬಲಬದಿಯಲ್ಲಿ ಕಾಣಲು ಸಾಧ್ಯವಾಗುತ್ತೆ.

ಹಂತ 5 – ಈಗ ಫೇಸ್ ಬುಕ್ ಅಕೌಂಟಿಗೆ ಲಾಗ್ ಆನ್ ಆಗಿ ಮತ್ತು ನೀವು ಡೌನ್ ಲೋಡ್ ಮಾಡಬೇಕೆಂದಿರುವ ವಿಡಿಯೋವನ್ನು ಹುಡುಕಾಡಿ.

ಹಂತ 6 – ವಿಡಿಯೋವನ್ನು ಪ್ಲೇ ಮಾಡಿ ಮತ್ತು ಅದು ಪ್ಲೇ ಆಗುತ್ತಿರುವಾಗ ನಿಮ್ಮ ಬ್ರೌಸರ್ ನಲ್ಲಿರುವ ಫೇಸ್ ಬುಕ್ ಐಕಾನನ್ನು ಕ್ಲಿಕ್ಕಿಸಿ.

ಹಂತ 7- ಇದು ಒಂದು ಚಿಕ್ಕ ಪರದೆಯನ್ನು ತೆರೆಯುತ್ತೆ. ಅಲ್ಲಿ ನೀವು ವೀಡಿಯೋ ಕ್ವಾಲಿಟಿಯನ್ನು ಆಯ್ಕೆ ಮಾಡಬೇಕು.. SD ಅಥವಾ HD ಯಾಗಿ ಡೌನ್ ಲೋಡ್ ಮಾಡಬಹುದು ಮತ್ತು ನೀವು ಡೌನ್ ಲೋಡ್ ಆದ ಫೈಲನ್ನು ನಿಮ್ಮ ಸಿಸ್ಟಮ್ ನಲ್ಲಿ ಎಲ್ಲಿ ಸೇವ್ ಮಾಡಬೇಕು ಅಂದುಕೊಂಡಿದ್ದೀರಿ ಎಂಬ ಸ್ಥಳವನ್ನು ಆಯ್ಕೆ ಮಾಡಿ.

ಹಂತ 8 – ವಿಡಿಯೋ ನಿಮ್ಮ ಪಿಸಿಯಲ್ಲಿ ಡೌನ್ ಲೋಡ್ ಆಗಿರುತ್ತದೆ. ಮತ್ತು ನೀವು ಇಂಟರ್ ನೆಟ್ ಕನೆಕ್ಷನ್ ಇಲ್ಲದೇ ಇದ್ದಾಗಲೂ, ಯಾವಾಗ ಬೇಕಾದರೂ ಆ ವೀಡಿಯೋವನ್ನು ನೋಡಲು ಸಾಧ್ಯವಿದೆ.

ನೆನಪಿರಲಿ, ಫೇಸ್ ಬುಕ್ ನಲ್ಲಿರುವ ಎಲ್ಲಾ ವೀಡಿಯೋಗಳನ್ನು ಡೌನ್ ಲೋಡ್ ಮಾಡಲು ಸಾಧ್ಯವಿರುತ್ತದೆ. ಇದು ವೀಡಿಯೋದ ಮಾಲೀಕ ಅದಕ್ಕೆ ಅವಕಾಶ ನೀಡಿರಬೇಕು ಅಷ್ಟೇ.,.. ಒಂದು ವೇಳೆ ಆ ವೀಡಿಯೋ ಡೌನ್ ಲೋಡ್ ಗೆ ಮಾಲೀಕ ಪರ್ಮಿಷನ್ ಕೊಟ್ಟಿದ್ದರೆ, ನೀವು ಒಂದು ಗ್ಲೋಬ್ ಐಕಾನ್ ನ್ನು ಪೇಜಿನ ಮೇಲ್ಬಾಗದಲ್ಲಿ ಗಮನಿಸುತ್ತೀರಿ ಒಂದು ವೇಳೆ ಪರ್ಮಿಷನ್ ಇಲ್ಲದೇ ಇದ್ದರೆ “ಲಾಕ್” ಐಕಾನ್ ಇರುತ್ತದೆ. ಇಂತಹ ವೀಡಿಯೋಗಳನ್ನು ನೀವು ಡೌನ್ ಲೋಡ್ ಮಾಡಲು ಅವಕಾಶವಿರುವುದಿಲ್ಲ.

Best Mobiles in India

English summary
How to download Facebook videos.To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X