ಪೆನ್ ಡ್ರೈವ್ ಸುರಕ್ಷತೆಗಾಗಿ ಪಾಸ್ ವರ್ಡ್ ಅಳವಡಿಸಿಕೊಳ್ಳುವುದು ಹೇಗೆ..?

ಶರವೇಗದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದಲ್ಲಿ ಎಷ್ಟು ಪ್ರಯೋಜನವಿದೆಯೋ ಅಷ್ಟೇ ಅಪಾಯಕಾರಿ ಎಂಬುದರಲ್ಲಿ ಎರಡು ಮಾತಿಲ್ಲ.

By Prathap T
|

ಶರವೇಗದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದಲ್ಲಿ ಎಷ್ಟು ಪ್ರಯೋಜನವಿದೆಯೋ ಅಷ್ಟೇ ಅಪಾಯಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ವೃತ್ತಿ ಹಾಗೂ ವೈಯಕ್ತಿಕ ಜೀವನದ ಕೆಲವು ಗೌಪ್ಯತೆಯ ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಪೆನ್ ಡ್ರೈವ್, ಯುಎಸ್ ಬಿ ಫ್ಲಾಶ್ ಡ್ರೈವ್, ಎಕ್ಸ್ಟ್ರನಲ್ ಡ್ರೈವ್ ಎಂಬಿತ್ಯಾದಿ ಉಪಕರಣಗಳನ್ನು ನಾವು ಬಳಸುತ್ತಿದ್ದೇವೆ,

ಪೆನ್ ಡ್ರೈವ್ ಸುರಕ್ಷತೆಗಾಗಿ ಪಾಸ್ ವರ್ಡ್ ಅಳವಡಿಸಿಕೊಳ್ಳುವುದು ಹೇಗೆ..?

ಆದರೆ, ಅವುಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಕೆಲವೊಮ್ಮೆ ಗೌಪ್ಯ ಮಾಹಿತಿಗಳು ಶೇಖರಿಸಿಟ್ಟಿರುವ ಪೆನ್ ಡ್ರೈವ್, ಯುಎಸ್ ಬಿ ಫ್ಲಾಶ್ ಡ್ರೈವ್, ಎಕ್ಸ್ಟ್ರನಲ್ ಡ್ರೈವ್ ಗಳನ್ನು ಕಳುವು ಆಗಿ ಬೇರೊಬ್ಬರು ಅದನ್ನು ಕಂಪ್ಯೂಟರ್ ನಲ್ಲಿ ಹಾಕಿ ಮಾಹಿತಿ ಸೋರಿಕೆ ಮಾಡುವ ಅಪಾಯದ ಸನ್ನಿವೇಶಗಳು ಎದುರಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಯುಎಸ್ ಬಿ ಡ್ರೈವ್ ಗಳಲ್ಲಿ ಮಾಹಿತಿಗಳನ್ನು ಸಂಗ್ರಹಿಸಿಟ್ಟರೂ ಎಷ್ಟು ಸುರಕ್ಷಿತ ಎಂಬ ಆತಂಕ ನಮ್ಮನ್ನು ಆವರಿಸಿರುವುದು ಸುಳ್ಳಲ್ಲ.

ಇಂತಹ ಆತಂಕ, ದುಗುಡವನ್ನು ದೂರು ಮಾಡುವ ಸಲುವಾಗಿ ಪೆನ್ ಡ್ರೈವ್, ಇಂಟರ್ನಲ್ ಹಾಗೂ ಎಕ್ಸ್ಟ್ರನಲ್ ಡ್ರೈವ್ ಗಳನ್ನು ಸುರಕ್ಷಿತವಾಗಿ ಇಡುವ ಸಲುವಾಗಿ ಇನ್ನು ಮುಂದೆ ಅವುಗಳಿಗೆ ಪಾಸ್ ವರ್ಡ್ ಅಳವಡಿಕೆ ಮಾಡಿ ಸುರಕ್ಷಿತವಾಗಿ ಇಡಬಹುದಾಗಿದೆ.

ಹೌದು, storagecrypt ಆಪ್ ಮೂಲಕ ನಿಮ್ಮ ಎಲ್ಲಾ ಯುಎಸ್ ಬಿ ಡ್ರೈವ್ ಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬಹುದಾಗಿದೆ. ಪಾಸ್ ವರ್ಡ್ ಹಾಕಿದರೆ ನಾವು ಬಿಟ್ಟರೆ ಬೇರೆ ಯಾರ ಕೂಡ ಅದನ್ನು ಓಪನ್ ಮಾಡಿ ನೋಡಲು ಸಾಧ್ಯವಿಲ್ಲ. ಒಂದು ವೇಳೆ ಯುಎಸ್ ಬಿ ಡ್ರೈವ್ ಗಳು ಕಳೆದ ಹೋದರೂ ಮಾಹಿತಿ ಸೋರಿಕೆಯಾಗುತ್ತದೆ ಎಂಬ ಚಿಂತೆಯಿಂದ ಇನ್ನು ಮುಂದೆ ಮುಕ್ತಿ ಹೊಂದಬಹುದಾಗಿದೆ.

ಸೋನಿ, ಡಬ್ಲ್ಯೂಡಿ ಅಥವಾ ಸ್ಯಾನ್ ಡಿಸ್ಕ್ ನಂತಹ ಕೆಲವು ಯುಎಸ್ಬಿ ಡ್ರೈವ್ ತಯಾರಕರು ಕೆಲವೊಮ್ಮೆ ತಮ್ಮ ಉತ್ಪನ್ನಗಳೊಂದಿಗೆ ಲಾಕರ್ ಸಾಫ್ಟ್ವೇರ್ ಅನ್ನು ಒದಗಿಸುತ್ತಾರೆ. ಇದು ಡ್ರೈವ್ ಗೆ ಪ್ರವೇಶವನ್ನು ನಿರ್ಬಂಧಿಸಲು ಪ್ರೋಗ್ರಾಂ ಪಾಸ್ವರ್ಡ್ ದೃಢೀಕರಣವನ್ನು ಬಳಸಲು ಸಹಾಯ ಮಾಡುತ್ತದೆ. ಉಳಿದ ಇನ್ನಿತರ ಡ್ರೈವ್ ಗಳಿಗೆ ಇಂತಹ ಸೌಕರ್ಯಗಳು ಇರುವುದಿಲ್ಲ.

storagecrypt ಬಳಸುವ ಬಗೆ ಹೇಗೆ?

ಹಂತ 1: StorageCrypt ಅನ್ನು ಡೌನ್ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.

ಹೆಜ್ಜೆ 2: ನಿಮ್ಮ ಯುಎಸ್ಬಿ ಸಾಧನವನ್ನು ಪ್ಲಗ್ ಮಾಡಿ (ಪೆನ್ ಡ್ರೈವ್, ಯುಎಸ್ ಬಿ ಫ್ಲಾಶ್ ಡ್ರೈವ್, ಎಕ್ಸ್ಟ್ರನಲ್ ಡ್ರೈವ್ ಇತ್ಯಾದಿ) ಮತ್ತು StorageCrypt ಅನ್ನು ರನ್ ಮಾಡಿ.

ಹೆಜ್ಜೆ 3:
ಈಗ ಆಯ್ಕೆ ಡಿಸ್ಕ್ ಡ್ರೈವ್ ವಿಭಾಗದಿಂದ ನಿಮ್ಮ ಸಾಧನವನ್ನು ಆಯ್ಕೆ ಮಾಡಿ.

ಹಂತ 4: ಕೂಡಲೇ encryption under Encryption Mode ಆಯ್ಕೆ ಮಾಡಿಕೊಳ್ಳಿ.

ಹಂತ5: under Portable Use section ಅನ್ನು ಸಂಪೂರ್ಣ ಆಯ್ಕೆ ಮಾಡಿ.

ಹಂತ 6: ನಿಮ್ಮ ಪಾಸ್ ವರ್ಡ್ ಅನ್ನು ಎರಡು ಬಾರಿ ನಮೂದಿಸಿ ಮತ್ತು ನಿಮ್ಮ ಡ್ರೈವ್ ಅನ್ನು ಲಾಕ್ ಮಾಡಲು Encrypt ಬಟನ್ ಒತ್ತಿರಿ.

ಅನ್ ಲಾಕ್ ಮಾಡುವುದು ಹೇಗೆ?

ಹಂತ 1: ನಿಮ್ಮ Encrypt ಮಾಡಲಾದ ಡ್ರೈವ್ ಅನ್ನು ಪ್ಲಗ್ ಇನ್ ಮಾಡಿ ಮತ್ತು ತೆರೆಯಿರಿ. ನೀವು ಫೋಲ್ಡರ್ನಲ್ಲಿ SClite.exe ಎಂಬ ಫೈಲ್ ಅನ್ನು ನೋಡುತ್ತೀರಿ - SClite. SClite.exe ಫೈಲ್ ಅನ್ನು ರನ್ ಮಾಡಿ.

ಹೆಜ್ಜೆ 2: ಪಾಸ್ ವರ್ಡ್ ಅನ್ನು ಹಾಕಿ ಮತ್ತು ನಿಮ್ಮ ಡ್ರೈವ್ ಅನ್ಲಾಕ್ ಮಾಡಲು Decrypt ಮೇಲೆ ಕ್ಲಿಕ್ ಮಾಡಿ.

Best Mobiles in India

English summary
With the fast growing technology, devices like USB flash drive, external hard drive, pen drive and much more helps us transporting information easily.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X