ಈಗಲೇ ಹುಡುಕಿ ನಿಮ್ಮ ಆಧಾರ್ ಎಲ್ಲಿ ಬಳಕೆಯಾಗಿದೆ: ಕಾರಣ ಆಧಾರ್ ಇನ್ನು ಕಡ್ಡಾಯವಲ್ಲ.!
ದೇಶದಲ್ಲಿ ಇನ್ನು ಮುಂದೆ ಸರಕಾರಿ ಯೋಜನೆಗಳಿಗೆ ಮಾತ್ರವೇ ಆಧಾರ್ ಕಡ್ಡಾಯ, ಇದನ್ನು ಬಿಟ್ಟರೆ ಬೇರೆ ಯಾವುದೇ ಸೇವೆಗಳನ್ನು ಪಡೆದುಕೊಳ್ಳಲು ಆಧಾರ್ ಅನ್ನು ಕಡ್ಡಾಯವಿಲ್ಲ ಎಂದು ಆಧಾರ್ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಇದರೊಂದಿಗೆ ಆಧಾರ್ ಕಾರ್ಡಗೆ ನೀಡಿರುವ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿ ಹಿಡಿದಿದೆ. ಆದರೆ ಎಲ್ಲಿಯೂ ಅದರ ಬಳಕೆಯನ್ನು ಕಡ್ಡಾಯ ಮಾಡುವಂತಿಲ್ಲ ಎಂದಿದೆ.

ಈ ಹಿನ್ನಲೆಯಲ್ಲಿ ಈಗಾಗಲೇ ಟೆಲಿಕಾಂ ಕಂಪನಿಗಳು SIM ಕಾರ್ಡ್ ಪಡೆಯಲು ಮತ್ತು ಬ್ಯಾಂಕ್ ಆಕೌಂಟ್ ಪಡೆದುಕೊಳ್ಳಲು ಆಧಾರ್ ಕಾರ್ಡ್ ಅನ್ನು ಬಳಕೆ ಮಾಡಿಕೊಳ್ಳಲಾಗಿದೆ. ಆದರೆ ಇನ್ನು ಮುಂದೆ ಬಳಸಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶವನ್ನು ನೀಡಿದೆ. ಈ ಹಿನ್ನಲೆಯಲ್ಲಿ ನಿಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ಎಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ ಮತ್ತು ಏಕೆ ಬಳಕೆಯಾಗಿದೆ ಎಂಬದರ ಬಗ್ಗೆ ನೀವು ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಈ ಕುರಿತ ಮಾಹಿತಿಯೂ ಮುಂದಿದೆ.

ಆಧಾರ್ ಅಪ್ಡೇಟ್ ಹಿಸ್ಟರಿ:
ಭಾರತೀಯ ವಿಶಿಷ್ಠ ಗುರುತಿನ ಪ್ರಾಧಿಕಾರವು ನಿಮ್ಮ ಆಧಾರ್ ಬಳಕೆ ಕುರಿತು ಮಾಹಿತಿಯನ್ನು ನೀವೆ ತಿಳಿದುಕೊಳ್ಳುವ ಸಲುವಾಗಿ ತನ್ನ ಜಾಲತಾಣ uidai.gov.in ನಲ್ಲಿ ಆಧಾರ್ ಕಾರ್ಡ್ ಮಾಹಿತಿ ನೀಡುವ ಆಧಾರ್ ಅಪ್ಡೇಟ್ ಹಿಸ್ಟರಿ ಎಂಬ ಹೊಸ ಆಯ್ಕೆಯನ್ನು ನೀಡಿದೆ. ಇದರಲ್ಲಿ ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ, ಯಾವ ಕಾರಣಕ್ಕೆ ಬಳಕೆಯಾಗಿದೆ ಎಂಬುದನ್ನು ತಿಳಿಯಬಹುದಾಗಿದೆ. ಇದು ಹೇಗೆ ಎಂಬುದನ್ನು ಮುಂದೆ ಹಂತ-ಹಂತವಾಗಿ ತಿಳಿದುಕೊಳ್ಳಿ.

ಹಂತ 01:
ಮೊದಲಿಗೆ www.uidai.gov.in ವೆಬ್ಸೈಟ್ಗೆ ಹೋಗಿ, ನಂತರದಲ್ಲಿ ಅದರಲ್ಲಿ ಆಧಾರ್ ಅಪ್ಟೇಟ್ ಹಿಸ್ಟರಿ ಎಂಬ ಆಯ್ಕೆ ಕಾಣಿಸಿಕೊಳ್ಳಲಿದೆ. ಅದರ ಮೇಲೆ ಕ್ಲಿಕ್ ಮಾಡಿ.

ಹಂತ 02:
ನಂತರದಲ್ಲಿ ಅಲ್ಲಿ ನಿಮ್ಮ ಆಧಾರ್ ನಂಬರ್ ಹಾಗೂ ವರ್ಚುವಲ್ ಐಡಿ ಎಂಟರ್ ಮಾಡಿ, ನಂತರದಲ್ಲಿ ಕ್ಯಾಪ್ಚಾ ಎಂಟ್ರಿ ಮಾಡಿ. ಹೀಗೆ ಮಾಡಿದಲ್ಲಿ ನಿಮ್ಮ ಮೊಬೈಲ್‌ಗೆ OTP ಬರಲಿದೆ.

ಹಂತ 04:
ನೀವು ಆಧಾರ್ ನೊಂದಿಗೆ ಲಿಂಕ್ ಮಾಡಿದ ಮೊಬೈಲ್ ನಂಬರ್‌ಗೆ OTP ಬರಲಿದೆ, ಅದನ್ನು ನಮೂದಿಸಿದ ಬಳಿಕ ನಿಮ್ಮ ಆಧಾರ್ ಎಷ್ಟು ಬಾರಿ ಅಪ್ಡೇಟ್ ಆಗಿದೆ ಸಂಪೂರ್ಣ ಮಾಹಿತಿ ದೊರೆಯಲಿದೆ. ಈ ಮಾಹಿತಿಯನ್ನು ನೀವು ಪ್ರಿಂಟ್ ಸಹ ತೆಗೆದುಕೊಳ್ಳಬಹುದಾಗಿದೆ.

ದೂರು ನೀಡಬಹುದು:
ಒಮ್ಮೆ ನಿಮಗೆ ದೊರೆಯುವ ಮಾಹಿತಿಯಲ್ಲಿ ಯಾವುದಾರರು ವ್ಯತ್ಯಾಸವಾಗಿರುವುದು ನಿಮ್ಮ ಗಮನಕ್ಕೆ ಬಂದರೆ ನೀವು ಆ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದಾಗಿದೆ. ಅಲ್ಲದೇ ನೀವು ನಿಮ್ಮ ಆಧಾರ್ ಮಾಹಿತಿಯನ್ನು ಆನ್ಲೈನ್ನಲ್ಲೂ ಲಾಕ್ ಮಾಡಿಕೊಳ್ಳಬಹುದಾಗಿದೆ.


Click it and Unblock the Notifications








