ಗೂಗಲ್ ಡ್ರೈವ್ ನಲ್ಲಿ ಫೈಲ್ ಡಿಲೀಟ್ ಆದರೆ ಚಿಂತೆ ಬೇಡ..!
ತಪ್ಪಿನಿಂದಾಗಿ ಗೂಗಲ್ ಡ್ರೈವ್ ನಲ್ಲಿ ಡೀಲಿಟ್ ಮಾಡಿದ ಫೈಲ್ ಗಳನ್ನು ಹುಡಕಬಹುದಾಗಿದ್ದು, ಮತ್ತೆ ಅದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಯಾವುದೋ ಧಾವಂತದಲ್ಲಿ ತಿಳಿಯದೆ ಡೀಲಿಟ್ ಆಗಿರುವ ಫೈಲ್ ಗಳನ್ನು ರಿಕವರಿ ಮಾಡಿಕೊಳ್ಳುವ ಅವಕಾಶವು ಗೂಗಲ್ ಡ್ರೈವ್ ನಲ್ಲಿ ಲಭ್ಯವಿದೆ.

ಗೂಗಲ್ ಡ್ರೈವ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಹಲವಾರು ಹೊಸ ಆಯ್ಕೆಗಳು ಬಳಕೆದಾರರಿಗೆ ಲಭ್ಯವಿದೆ. ಈ ಹಿನ್ನಲೆಯಲ್ಲಿ ಗೂಗಲ್ ಡ್ರೈವ್ ನಲ್ಲಿ ತಪ್ಪಿನಿಂದ ಡಿಲೀಟ್ ಆದಂತಹ ಫೈಲ್ ಗಳನ್ನು ಹುಡುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ಗೂಗಲ್ ಡ್ರೈವ್ ನಿಂದ ರಿಕವರಿ:
ಗೂಗಲ್ ಡ್ರೈವ್ ನಿಂದ ಡಿಲೀಟ್ ಆದ ಫೈಲ್ ಗಳನ್ನು ಹುಡುಕಬಹುದಾಗಿದೆ.
ಹಂತ 01: drive.google.com/drive/trash ಗೆ ಭೇಟಿ ನೀಡಿ.
ಹಂತ 02: ಇದಲ್ಲದೇ ರಿಕವರಿ ಫೈಲ್ ಮೇಲೆ ನಂತರ ರೈಟ್ ಕ್ಲಿಕ್ ಮಾಡಿ
ಹಂತ 03: ರಿಸ್ಟೋರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಗೂಗಲ್ ಡ್ರೈವ್ ನಲ್ಲಿ ಫೈಲ್ ಗಳನ್ನು ಹುಡುಕುವುದು:
ನೀವು ಗೂಗಲ್ ಡ್ರೈವ್ ನಲ್ಲಿ ಫೈಲ್ ಗಳನ್ನು ಹುಡುಕುತ್ತಿರುವ ಸಂದರ್ಭದಲ್ಲಿ ಸಿಗಲಿಲ್ಲವಾದರೆ ನೀವು ಅದನ್ನು ಹುಡುಕುವುದು ಹೇಗೆ ಎಂದು ತಿಳಿಸಿಕೊಡಲಿದ್ದೇವೆ.

ಹಂತ 01:
drive.google.com ಗೆ ಭೇಟಿ ನೀಡಿ.
ಹಂತ 02: ಎಡಭಾಗದಲ್ಲಿರುವ ಮೈ ಡ್ರೈವ್ ಮೇಲೆ ಕ್ಲಿಕ್ ಮಾಡಿ.
ಹಂತ 03: ಬಲಭಾಗದ ಮೇಲ್ಭಾಗದಲ್ಲಿ ಇನ್ ಫೋ ಮೇಲೆ ಕ್ಲಿಕ್ ಮಾಡಿ.
ಹಂತ 04: ನೀವು ಹುಡುಕುತ್ತಿರುವ ಫೈನ್ ಹೆಸರು ನೆನಪಿದ್ದರೇ ಅದು ಕಾಣುವ ವರೆಗೂ ಸ್ಕ್ರಾಲ್ ಡೌನ್ ಮಾಡಿ.
ಹಂತ 05: ಅಲ್ಲಿ ಸಿಗಲಿಲ್ಲ ದರೆ ಸರ್ಚ್ ಬಾರಿಗೆ ಹೋಗಿ.
ಹಂತ 06: ಅಲ್ಲಿ ‘Type:Spreadsheets" ಎಂದು ಟೈಪ್ ಮಾಡಿ.
ಹಂತ 07: ಇಲ್ಲಿಯೂ ನಿಮಗೆ ಡಾಕ್ಯುಮೆಂಟ್ ದೊರೆಯಲಿಲ್ಲ ಎಂದರೆ ಗೂಗಲ್ ಕಾಂಟೆಕ್ಟ್ ಮಾಡಿದರೆ ಸಿಮಿತ ಅವಧಿಯಲ್ಲಿ ನಿಮ್ಮ ಡಾಕ್ಯುಮೆಂಟ್ ಅನ್ನು ರಿಕವರಿ ಮಾಡಿಕೊಡಲಾಗುತ್ತದೆ.


Click it and Unblock the Notifications








