ವಾಟ್ಸ್‌ಆಪ್ ಪೇಮೆಂಟ್ ಇನ್ನು ಸಿಕ್ಕಿಲ್ವಾ..? ಹೀಗೆ ಮಾಡಿ..!

|
WhatsApp ಪೇಮೆಂಟ್ ಬಳಸಲು ಗೆಳೆಯರನ್ನು ಆಹ್ವಾನಿಸುವುದು ಹೇಗೆ? - GIZBOT KANNADA

ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಪೇಮೆಂಟ್ ಆಪ್‌ಗಳಿಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ಫೇಸ್‌ಬುಕ್ ಮಾಲೀಕತ್ವದ ವಾಟ್ಸ್‌ಆಪ್, ತನ್ನದೇ ಪೇಮೆಂಟ್ ಸೇವೆಯನ್ನು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಆರಂಭಮಾಡಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಕಾರ್ಯಚರಣೆಯನ್ನು ಆರಂಭಿಸಿಲ್ಲ ಎನ್ನಲಾಗಿದೆ.

ವಾಟ್ಸ್‌ಆಪ್ ಪೇಮೆಂಟ್ ಇನ್ನು ಸಿಕ್ಕಿಲ್ವಾ..? ಹೀಗೆ ಮಾಡಿ..!

ದೇಶದಲ್ಲಿ ಸುಮಾರು 200 ಮಿಲಿಯನ್ ಮಂದಿ ವಾಟ್ಸ್‌ಆಪ್ ಬಳಕೆ ಮಾಡಿಕೊಳ್ಳುತ್ತಿದ್ದು, ಇದರಲ್ಲಿ ಸಾಕಷ್ಟು ಮಂದಿಗೆ ವಾಟ್ಸ್ಆಪ್ ಪೇಮೆಂಟ್ ಸೇವೆಯೂ ಲಭ್ಯವಿದ್ದು, ಕೆಲವೇ ಕೆಲವು ಮಂದಿಗೆ ಮಾತ್ರವೇ ಇನ್ನು ಲಭ್ಯವಾಗಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ನಿಮ್ಮ ಸ್ಮಾರ್ಟ್‌ಫೋನಿನಲ್ಲಿಯೂ ವಾಟ್ಸ್‌ಆಪ್ ಪೇಮೆಂಟ್ ಸೇವೆಯನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಸುಲಭ:

ಸುಲಭ:

ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ವಾಟ್ಸ್‌ಆಪ್ ನಲ್ಲಿ ಪೆಮೇಂಟ್ ಸೇವೆಯನ್ನು ಪಡೆದುಕೊಳ್ಳುವುದು ತೀರಾ ಸುಲಭವಾಗಿದೆ. ಇದಕ್ಕಾಗಿ ನೀವು ಯಾವುದೇ ಹಣವನ್ನು ಖರ್ಚು ಮಾಡಬೇಕಾದ ಅವಶ್ಯಕತೆ ಇಲ್ಲ ಎನ್ನಲಾಗಿದೆ. ಅದನ್ನು ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಮೊದಲು ಆಪ್‌ಡೇಟ್ ಮಾಡಿ:

ಮೊದಲು ಆಪ್‌ಡೇಟ್ ಮಾಡಿ:

ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಪ್ಲೇ ಸ್ಟೋರ್ ಅನ್ನು ಓಪನ್ ಮಾಡಿರಿ, ಮಾಡಿದ ನಂತರದಲ್ಲಿ ಮೈಆಪ್ಸ್ ಅಂಡ್ ಗೇಮ್ ಆಯ್ಕೆಯಲ್ಲಿ ವಾಟ್ಸ್‌ಆಪ್ ಅನ್ನು ಹುಡುಕಿ ಆಪ್‌ಡೇಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ.

ಆಪ್‌ಡೇಟ್ ನಂತರ:

ಆಪ್‌ಡೇಟ್ ನಂತರ:

ನಿಮ್ಮ ಆಪ್ ಆಪ್‌ಡೇಟ್ ಆದ ನಂತರದಲ್ಲಿ ನೀವು ವಾಟ್ಸ್‌ಆಪ್ ಅನ್ನು ಒಮ್ಮೆ ತೆರೆದು ನೋಡಿ, ಚಾಟ್ ಮಾಡುವ ವಿಂಡೋದಲ್ಲಿ ಅಟ್ಯಾಚ್ ಮೆಂಟ್ ಲೋಗೊ ಮೇಲೆ ಕ್ಲಿಕ್ ಮಾಡಿದ ಸಂದರ್ಭದಲ್ಲಿ ಪೇಮೆಂಟ್ ಸೇವೆಯೂ ಕಾಣಿಸಿಕೊಳ್ಳಿದೆ. ಒಂದು ವೇಳೆ ಕಾಣಿಸಿಕೊಂಡಿಲ್ಲವಾದರೆ ಕೆಳಗಿನಂತೆ ಮಾಡಿ.

ಇನ್ವೆಟ್:

ಇನ್ವೆಟ್:

ವಾಟ್ಸ್‌ಆಪ್ ಆಪ್ಡೇಟ್ ಮಾಡಿದ ಸಂದರ್ಭದಲ್ಲಿಯೂ ನಿಮಗೆ ವಾಟ್ಸ್‌ಆಪ್ ಪೇಮೆಂಟ್ ಸೇವೆಯೂ ದೊರೆಯಲಿಲ್ಲವಾದರೆ ನಿಮ್ಮ ಸ್ನೇಹಿತರಿಂದ ಇನ್ವೆಟ್ ಪಡೆದುಕೊಳ್ಳಬಹುದಾಗಿದೆ. ಅದನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲಿದೆ.

ಸ್ನೇಹಿತರಿಂದ:

ಸ್ನೇಹಿತರಿಂದ:

ನಿಮ್ಮ ಸ್ನೇಹಿತರು ಈಗಾಗಲೇ ವಾಟ್ಸ್‌ಆಪ್ ಪೇಮೆಂಟ್ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನುವುದಾದರೆ ಅವರಿಂದ ನೀವು ಇನ್ವೆಟ್ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಚಾಟ್ ವಿಂಡೊಸಲ್ಲಿ ಆಟ್ಯಾಚ್ ಲೋಗೋ ಮೇಲೆ ಕ್ಲಿಕ್ ಮಾಡಿದರೆ ಇನ್ವೆಟ್ ಕಳುಹಿಸಬಹುದು.

ಸೆಟಪ್ ಮಾಡಿಕೊಳ್ಳಿ:

ಸೆಟಪ್ ಮಾಡಿಕೊಳ್ಳಿ:

ಇನ್ವೆಟ್ ಸ್ವೀಕರಿಸಿದ ನಂತರದಲ್ಲಿ ನೀವು ನಿಮ್ಮ ಆಕೌಂಟ್ ಸೆಟಪ್ ಮಾಡಿಕೊಳ್ಳಬೇಕಾಗಿದೆ. ನಿಮ್ಮ ಆಕೌಂಟ್ ಇರುವ ಬ್ಯಾಂಕ್ ಅನ್ನು ಸೆಲೆಕ್ಟ್ ಮಾಡಿಕೊಂಡರೆ ಸಾಕು ಮಿಕ್ಕಿದೆಲ್ಲವೂ ತಾನಾಗಿಯೇ ಸೆಟಪ್ ಆಗಲಿದೆ. ನಂತರದಲ್ಲಿ ಆರಾಮಾವಾಗಿ ನೀವು ಹಣ ಕಳುಹಿಸಬಹುದಾಗಿದೆ.

Best Mobiles in India

English summary
how to get whatsapp payment. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X