Subscribe to Gizbot

ಫೇಸ್‌ಬುಕ್‌ನಲ್ಲಿ ಅನ್‌ಫ್ರೆಂಡ್ ಮಾಡದೇ ಅವರ ಪೋಸ್ಟ್ ಹೈಡ್ ಮಾಡುವುದು ಹೇಗೆ?

Written By:

ಒಬ್ಬೊಬ್ಬರ ಫೇಸ್‌ಬುಕ್ ಪೋಸ್ಟ್‌ಗಳನ್ನು ಕಂಡರೆ ನನಗೆ ಆಗುವುದಿಲ್ಲ. ಆದರೆ, ಅವರನ್ನು ಅನ್‌ಫ್ರೆಂಡ್ ಮಾಡಲು ಸಾಧ್ಯವಿಲ್ಲ ಎಂಬುವವರಿಗೆ ಫೇಸ್‌ಬುಕ್‌ನ Snooze ಸೆಟ್ಟಿಂಗ್ಸ್ ವರವಾಗಬಹುದು.! ಅವರ ಪೋಸ್ಟ್ ಇಷ್ಟವಾಗಿಲ್ಲ ಎಂದರೆ ಅವರ ಪೋಸ್ಟ್‌ಗಳು ನಮಗೆ ಕಾಣಿಸದಂತೆ ಸೆಟ್ಟಿಂಗ್ಸ್ ಮಾಡಬಹುದು.!!

ಫೇಸ್‌ಬುಕ್‌ನಲ್ಲಿ ಅನ್‌ಫ್ರೆಂಡ್ ಮಾಡದೇ ಅವರ ಪೋಸ್ಟ್ ಹೈಡ್ ಮಾಡುವುದು ಹೇಗೆ?

ನಮಗೆ ಇಷ್ಟವಾದ ಪೋಸ್ಟ್‌ಗಳನ್ನು ಲೈಕ್, ಕಾಮೆಂಟ್ ಮಾಡಲು ಫೇಸ್‍ಬುಕ್‌ನಲ್ಲಿ ಅವಕಾಶವಿರುವಂತೆಯೇ ಇಷ್ಟವಿಲ್ಲದ ಪೋಸ್ಟ್‌ಗಳನ್ನು ಮರೆಮಾಡಬಹುದು. ನಮ್ಮ ಫ್ರೆಂಡ್ ಲಿಸ್ಟ್‌ನಲ್ಲಿರುವವರು ಪೋಸ್ಟ್ ಮಾಡಿದ ಫೋಟೊ ಅಥವಾ ಬರಹಗಳು ಇಷ್ಟವಾಗದಿದ್ದರೆ ಅವುಗಳಿಗೆ ಫುಲ್‌ಸ್ಟಾಪ್ ಹಾಕಬಹುದು.! ಹಾಗಾದರೆ, ಕೆಲವರು ಪೋಸ್ಟ್ ಮಾಡಿದ ಫೋಟೊ ಅಥವಾ ಬರಹಗಳು ಬೇಡವೆಂದರೆ ಏನು ಮಾಡಬೇಕು ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮತ್ತೆ ಕಾಣದಂತೆಯೇ ಹೈಡ್ ಮಾಡಿ!!

ಮತ್ತೆ ಕಾಣದಂತೆಯೇ ಹೈಡ್ ಮಾಡಿ!!

ನಮ್ಮ ಸ್ನೇಹಿತರೇ ಆಗಿದ್ದರೂ ಅವರ ಪೋಸ್ಟ್‌ಗಳಿಂದ ದೂರವೇ ಇರೋಣ ಎಂದೆನಿಸಿದರೆ ಅವರ ಯಾವುದೇ ಪೋಸ್ಟ್‌ಗಳು ನಮಗೆ ಕಾಣಿಸದಂತೆ ಮಾಡಬಹುದು.! ಇದಕ್ಕೆ ನ್ಯೂಸ್‌ಫೀಡ್‌ನಲ್ಲಿಯೇ ಕಾಣಸಿಗುವ Hide post ಎಂಬ ಆಪ್ಶನ್ ಕ್ಲಿಕ್ ಮಾಡಿದರೆ ಸಾಕು ಕ್ಷಣಾರ್ಧದಲ್ಲಿ ಅವರ ಪೋಸ್ಟ್‌ಗಳು ನಿಮಗೆ ಕಾಣಿಸದಾಗುತ್ತವೆ.!!

ಹೈಡ್ ಪೋಸ್ಟ್ (Hide Post) ಆಯ್ಕೆ ಹೇಗೆ!!

ಹೈಡ್ ಪೋಸ್ಟ್ (Hide Post) ಆಯ್ಕೆ ಹೇಗೆ!!

ಹೈಡ್ ಮಾಡಬೇಕಿರುವವರ ಫೇಸ್‍ಬುಕ್ ಪೋಸ್ಟ್‌ನ ಬಲಭಾಗದಲ್ಲಿ ಮೂರು ಚುಕ್ಕಿಗಳಾಗಿ ಕಾಣಿಸುವ ಡ್ರಾಪ್ ಡೌನ್ ಮೆನುವಿದೆ. ಅಲ್ಲಿ ಕ್ಲಿಕ್ ಮಾಡಿದರೆ ಹಲವಾರು ಆಯ್ಕೆ ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಹೈಡ್ ಪೋಸ್ಟ್ (Hide Post)ಎಂಬ ಆಪ್ಶನ್ ಇದೆ.ಅದನ್ನು ಕ್ಲಿಕ್ ಮಾಡದರೆ, ನಿಮ್ಮ ಸ್ನೇಹಿತರ ಪೋಸ್ಟ್ ನಿಮ್ಮ ಟೈಮ್‌ಲೈನ್‌ನಿಂದ ಮರೆಯಾಗುತ್ತದೆ.!!

ಸ್ನೂಜ್ (Snooze) ಮಾಡಬಹದು!!

ಸ್ನೂಜ್ (Snooze) ಮಾಡಬಹದು!!

ಕೆಲಕಾಲ ಮಾತ್ರ ಫ್ರೆಂಡ್ಸ್ ನೋಡಲು ಇಷ್ಟವಿಲ್ಲದಿದ್ದರೆ Hide Post ಆಪ್ಶನ್ ಕೆಳಗೆ Snooze ಎಂಬ ಆಪ್ಶನ್ ಒತ್ತಿದರೆ ಸಾಕು. ಇದನ್ನು ಕ್ಲಿಕ್ ಮಾಡಿದರೆ 30 ದಿನಗಳವರೆಗೆ ನಿಮ್ಮ ಸ್ನೇಹಿತನ ಯಾವುದೇ ಪೋಸ್ಟ್ ನಿಮ್ಮ ನ್ಯೂಸ್ ಫೀಡ್‌ನಲ್ಲಿ ಕಾಣಿಸುವುದಿಲ್ಲ. 30 ದಿನಗಳ ನಂತರ ಎಂದಿನಂತೆ ಆ ಸ್ನೇಹಿತರ ಪೋಸ್ಟ್ ನಿಮ್ಮ ನ್ಯೂಸ್ ಫೀಡ್‌ನಲ್ಲಿ ಕಾಣಿಸಿಕೊಳ್ಳುತ್ತದೆ.!!

How to view all photos, pages, comments and posts you liked on Facebook (KANNADA)
ಅಶ್ಲೀಲತೆ ಸಮಸ್ಯೆಗೆ ಮುಕ್ತಿ!!

ಅಶ್ಲೀಲತೆ ಸಮಸ್ಯೆಗೆ ಮುಕ್ತಿ!!

ಕೆಲವೊಮ್ಮೆ ಯಾವುದೋ ಗ್ರೂಪಿಗೆ ನೀವು ಸೇರಿ ಅಲ್ಲಿ ಅಶ್ಲೀಲತೆಯಂತಹ ಸಮಸ್ಯೆ ಎದುರಿಸುವವರೆಗೂ ಈ ಆಯ್ಕೆ ಅತ್ಯುತ್ತಮವಾಗಿದೆ.! ಒಮ್ಮೆ ಅಂತಹ ಪೋಸ್ಟ್ ಮಾಡಿದವರನ್ನು ಇದೇ ಸೆಟ್ಟಿಂಗ್ಸ್ ಮೂಲಕ ಬ್ಲಾಕ್ ಮಾಡಿದರೆ, ಅಂತಹ ತೊಂದರೆಯಿಂದ ನೀವು ಪಾರಾಗಬಹುದು.!!

ಓದಿರಿ:ಈ ವರ್ಷದಲ್ಲಿ ವಿಶ್ವದ ಗಮನ ಸೆಳೆದ ರೋಬೊಟ್‌ಗಳಿವು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
You can also hide posts and other information from certain people on your friend list.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot