ವಾಟ್ಸ್ ಆಪ್ ಪ್ರೊಫೈಲ್ ಪಿಕ್ಚರ್ ಯಾರಿಗೂ ಕಾಣಿಸಬಾರದಾ?- ಹಾಗಾದ್ರೆ ಹೀಗೆ ಮಾಡಿ

|

ಫೇಸ್ ಬುಕ್ ಮಾಲೀಕತ್ವದ ಇನ್ಸೆಂಟ್ ಮೆಸೇಜಿಂಗ್ ಫ್ಲ್ಯಾಟ್ ಫಾರ್ಮ್ ವಾಟ್ಸ್ ಆಪ್ ಸದ್ಯ ಅತೀ ಹೆಚ್ಚು ಮಂದಿ ಬಳಕೆ ಮಾಡುವ ಮೆಸೇಜಿಂಗ್ ಆಪ್ ಆಗಿದೆ.ಕಳೆದ ಕೆಲವು ತಿಂಗಳುಗಳಿಂದ ವಾಟ್ಸ್ ಆಪ್ ನಲ್ಲಿ ಹಲವು ಫೀಚರ್ ಗಳನ್ನು ಸೇರಿಸಲಾಗುತ್ತಿದೆ ಅದರಲ್ಲಿ ಕೆಲವುಗಳು ಟು-ಸ್ಟೆಪ್ ವೆರಿಫಿಕೇಷನ್, ಹೈಡಿಂಗ್ ಸ್ಟೇಟಸ್, ಹೈಡಿಂಗ್ ಪ್ರೊಫೈಲ್ ಪಿಕ್ಚರ್ ಇತ್ಯಾದಿ.

ವಾಟ್ಸ್ ಆಪ್ ಪ್ರೊಫೈಲ್ ಪಿಕ್ಚರ್ ಯಾರಿಗೂ ಕಾಣಿಸಬಾರದಾ?- ಹಾಗಾದ್ರೆ ಹೀಗೆ ಮಾಡಿ

ಆದರೆ ವಾಟ್ಸ್ ಆಪ್ ನೇರವಾಗಿ ಬಳಕೆದಾರರಿಗೆ ತಮ್ಮ ಪ್ರೊಫೈಲ್ ಪಿಕ್ಚರ್ ಸೆಟ್ಟಿಂಗ್ಸ್ ನ್ನು ನಿರ್ಧಿಷ್ಟ ಕಾಂಟ್ಯಾಕ್ಟ್ ಗಳಿಗೆ ಕಸ್ಟಮೈಜ್ ಮಾಡುವುದಕ್ಕೆ ನೇರವಾದ ಆಯ್ಕೆಗಳನ್ನು ನೀಡಿಲ್ಲ.ಆದರೆ ಕೆಲವೊಮ್ಮೆ ನಾವು ನಮ್ಮ ಪ್ರೊಫೈಲ್ ಪಿಕ್ಚರ್ ಮತ್ತು ಸ್ಟೇಟಸ್ ನ್ನು ಕೆಲವರೊಂದಿಗೆ ಹಂಚಿಕೊಳ್ಳುವುದಕ್ಕೆ ಇಚ್ಛಿಸುವುದಿಲ್ಲ. ಹಾಗಂತ ಅವರನ್ನು ಸಂಪೂರ್ಣವಾಗಿ ವಾಟ್ಸ್ ಆಪ್ ನಿಂದ ಬ್ಲಾಕ್ ಮಾಡಬೇಕು ಎಂದೇನಲ್ಲ ಆದರೆ ಅವರಿಗೆ ಸ್ಟೇಟಸ್ ಮತ್ತು ಫೋಟೋ ಗಳು ಗೊತ್ತಾಗಬಾರದು ಎಂಬುದಷ್ಟೇ ಉದ್ದೇಶವಾಗಿರುತ್ತದೆ.

ಒಂದು ವೇಳೆ ನೀವು ಕೂಡ ಇಂತಹ ಆಯ್ಕೆಯ ಬಗ್ಗೆ ಆಲೋಚಿಸುತ್ತಿದ್ದರೆ ಖಂಡಿತ ಆಯ್ಕೆ ಇಲ್ಲಿದೆ. ಅದಕ್ಕಾಗಿ ನೀವು ಸಣ್ಣದೊಂದು ಕೆಲಸವನ್ನು ಮಾಡಬೇಕಾಗುತ್ತದೆ.ಕೆಲವು ಮಂದಿಯ ಜೊತೆಗೆ ಅಥವಾ ಯಾವುದೋ ಒಬ್ಬ ವ್ಯಕ್ತಿಗೆ ನಿಮ್ಮ ಪ್ರೊಫೈಲ್ ಪಿಕ್ಚರ್ ಕಾಣದಂತೆ ಮಾಡಲು ನೀವೇನು ಮಾಡಬೇಕು ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.

ಇಲ್ಲಿ ನಾವು ಎರಡು ಭಾಗಗಳಾಗಿ ಹಂತಗಳನ್ನು ವಿಂಗಡಿಸಿ ವಿವರಿಸಿದ್ದೇವೆ. ನಿಮ್ಮ ಸ್ಮಾರ್ಟ್ ಫೋನ್ ನಿಂದ ಕಾಂಟ್ಯಾಕ್ಟ್ ನ್ನು ಡಿಲೀಟ್ ಮಾಡುವುದು ಮತ್ತು ವಾಟ್ಸ್ ಆಪ್ ಪ್ರೈವೆಸಿ ಸೆಟ್ಟಿಂಗ್ಸ್ ನ್ನು ಬದಲಾಯಿಸಿವುದು.

ಪ್ರಮುಖ ಅಗತ್ಯತೆಗಳು:

ಪ್ರಮುಖ ಅಗತ್ಯತೆಗಳು:

. ಮೊದಲಿಗೆ ವಾಟ್ಸ್ ಆಪ್ ನ ನೂತನ ವರ್ಷನ್ (2.18) ನ್ನು ನಿಮ್ಮ ನಿಗದಿತ ಆಪ್ ಸ್ಟೋರ್ ನಿಂದ ಇನ್ಸ್ಟಾಲ್ ಮಾಡಿಕೊಳ್ಳಿ.

. ಕಾರ್ಯ ನಿರ್ವಹಿಸುತ್ತಿರುವ ಅಂತರ್ಜಾಲ ಸಂಪರ್ಕವಿರಬೇಕು.

1.

ಭಾಗ 1: ಕಾಂಟ್ಯಾಕ್ಟ್ ನ್ನು ಡಿಲೀಟ್ ಮಾಡುವಿಕೆ

- ನಿಮ್ಮ ಸ್ಮಾರ್ಟ್ ಫೋನಿನ ಆಪ್ ನಲ್ಲಿರುವ ಕಾಂಟ್ಯಾಕ್ಸ್ ನ್ನು ತೆರೆಯಿರಿ

- ನೀವು ಹೈಡ್ ಮಾಡಬೇಕು ಎಂದುಕೊಂಡಿರುವ ಕಾಂಟ್ಯಾಕ್ಟ್ ನಂಬರ್ ನ್ನು ಹುಡುಕಾಡಿ. - ಇದೀಗ ನಿಮ್ಮ ಫೋನಿನಿಂದ ಆ ಕಾಂಟ್ಯಾಕ್ಟ್ ನಂಬರ್ ನ್ನು ಡಿಲೀಟ್ ಮಾಡಿ.

ಭಾಗ 2: ನಿಮ್ಮ ವಾಟ್ಸ್ ಆಪ್ ನ ಪ್ರೈವೆಸಿ ಸೆಟ್ಟಿಂಗ್ಸ್ ನ್ನು ಬದಲಾವಣೆ ಮಾಡಿ

ಭಾಗ 2: ನಿಮ್ಮ ವಾಟ್ಸ್ ಆಪ್ ನ ಪ್ರೈವೆಸಿ ಸೆಟ್ಟಿಂಗ್ಸ್ ನ್ನು ಬದಲಾವಣೆ ಮಾಡಿ

- ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ವಾಟ್ಸ್ ಆಪ್ ನ್ನು ತೆರೆಯಿರಿ

-ಬಲಭಾಗದಲ್ಲಿರುವ ಮೂರು ಚುಕ್ಕಿಗಳನ್ನು ಟ್ಯಾಪ್ ಮಾಡಿ.

- ಸೆಟ್ಟಿಂಗ್ಸ್ ನ್ನು ಆಯ್ಕೆ ಮಾಡಿ ಮತ್ತು ಅಕೌಂಟ್ ಆಯ್ಕೆಗೆ ತೆರಳಿ.

- ಇದೀಗ ಪ್ರೈವೆಸಿ ಸೆಟ್ಟಿಂಗ್ಸ್ ಗೆ ತೆರಳಿ

- ಪ್ರೊಫೈಲ್ ಫೋಟೋ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ಮೈ ಕಾಂಟ್ಯಾಕ್ಟ್ಸ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಭಾಗ 1 ಮತ್ತು ಭಾಗ 2 ರಲ್ಲಿರುವ ಹಂತಗಳನ್ನು ಪುನರಾವರ್ತಿಸಿ ಮತ್ತು ಮತ್ತೊಂದು ಕಾಂಟ್ಯಾಕ್ಟ್ ನ್ನು ಹೈ ಮಾಡಲು ಸಾಧ್ಯವಾಗುತ್ತದೆ.

ಸೂಚನೆ:

ಸೂಚನೆ:

ಒಂದು ವೇಳೆ ನೀವು ಯಾವುದೇ ಕಾಂಟ್ಯಾಕ್ಟ್ ನ್ನು ನಿಮ್ಮ ಸ್ಮಾರ್ಟ್ ಫೋನ್ ನಿಂದ ಡಿಲೀಟ್ ಮಾಡಲು ಇಚ್ಛಿಸುವುದಿಲ್ಲವಾದರೆ ಮತ್ತು ಕೇವಲ ನಿಮ್ಮ ಪ್ರೊಫೈಲ್ ಪಿಕ್ಚರ್ ನ್ನು ಹೈಡ್ ಮಾಡಲು ಬಯಸುತ್ತೀರಾದರೆ ನೀವು ನಿಮ್ಮ ಪ್ರೊಫೈಲ್ ಪಿಕ್ಚರ್ ಪ್ರೈವೆಸಿ ಸೆಟ್ಟಿಂಗ್ಸ್ ನ್ನು "Nobody" ಎಂದು ಬದಲಾಯಿಸಿ. ಆದರೆ ಇದು ನಿಮ್ಮ ವಾಟ್ಸ್ ಆಪ್ ಕಾಂಟ್ಯಾಕ್ಟ್ ನ ಎಲ್ಲರಿಗೂ ಕೂಡ ನಿಮ್ಮ ಪ್ರೊಫೈಲ್ ಪಿಕ್ಚರ್ ಕಾಣದಂತೆ ಮಾಡುತ್ತದೆ.

Most Read Articles
Best Mobiles in India

English summary
How to hide WhatsApp profile picture from specific contacts

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X