ಇನ್‌ಸ್ಟಾಗ್ರಮ್ ಸ್ಟೋರಿಗಳನ್ನು ಹೈಡ್ ಮಾಡುವುದು ಹೇಗೆ?

By Tejaswini P G
|

ಇನ್ಸ್ಟಾಗ್ರಾಮ್ ತನ್ನ ಆಪ್ ನಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದಿದ್ದು ಹೊಸ ಹೊಸ ಫೀಚರ್ಗಳನ್ನು ನೀಡುತ್ತಿದೆ. ಹೀಗೆ ಇತ್ತೀಚೆಗೆ ನೀಡಿರುವ ಫೀಚರ್ಗಳಲ್ಲಿ ಬಹಳ ಪ್ರಸಿದ್ಧಿಯನ್ನು ಪಡೆದ ಫೀಚರ್ ಎಂದರೆ ಅದು ಸ್ನ್ಯಾಪ್ಚ್ಯಾಟ್ ಮಾದರಿಯ "ಸ್ಟೋರೀಸ್". ಈ ಹೊಸ ಫೀಚರ್ ಬಳಕೆದಾರರಿಗೆ ದಿನವಿಡೀ ಹೊಸ ಹೊಸ ವೀಡಿಯೋಗಳನ್ನು ಸೆರೆಹಿಡಿದು ಶೇರ್ ಮಾಡಲು ಅನುವುಮಾಡಿಕೊಡುತ್ತದಲ್ಲದೆ, ಶೇರ್ ಮಾಡಿದ 24 ಘಂಟೆಗಳ ನಂತರ ಇದು ತನ್ನಿಂತಾನೆ ಡಿಲೀಟ್ ಆಗುತ್ತದೆ ಮತ್ತು ನಿಮ್ಮ ಪ್ರೊಫೈಲ್ ಗ್ರಿಡ್ ಅಥವಾ ಫೀಡ್ನಲ್ಲಿ ಕಾಣಸಿಗುವುದಿಲ್ಲ.

ಇನ್‌ಸ್ಟಾಗ್ರಮ್ ಸ್ಟೋರಿಗಳನ್ನು ಹೈಡ್ ಮಾಡುವುದು ಹೇಗೆ?


ಸ್ಟೋರೀಸ್ ಅನ್ನು ಬಳಸಲು ಬಳಕೆದಾರರು ಮಾಡಬೇಕಾಗಿರುವುದು ಇಷ್ಟೇ. ತಮ್ಮ ದೈನಂದಿನ ಬದುಕನ್ನು ಬಿಂಬಿಸುವ ಫೋಟೋ ಹಾಗೂ ವೀಡಿಯೋಗಳನ್ನು ಸೆರೆಹಿಡಿದು ಸ್ಟೋರೀಸ್ ಮೂಲಕ ಅದನ್ನು ಶೇರ್ ಮಾಡಬಹುದು. ಈ ಲೇಖನದಲ್ಲಿ ನಾವು ನಿಮ್ಮ ಸ್ಟೋರಿಗಳನ್ನು ಆಯ್ದ ಫಾಲೋವರ್ಗಳಿಂದ ಹೈಡ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಿದ್ದೇವೆ. ಇಲ್ಲಿ ಹೈಡ್ ಮಾಡುವುದು ಬ್ಲಾಕ್ ಮಾಡುವುದಕ್ಕೆ ಸಮಾನವಲ್ಲ. ಏಕೆಂದರೆ ನೀವು ಯಾರಿಂದ ಸ್ಟೋರಿಗಳನ್ನು ಹೈಡ್ ಮಾಡುತ್ತಿರೋ, ಅವರು ನಿಮ್ಮ ಪ್ರೊಫೈಲ್ ಮತ್ತು ಇತರ ಪೋಸ್ಟ್ಗಳನ್ನು ನೋಡಬಹುದಾಗಿದೆ.

ಹಂತ 1: ಇನ್ಸ್ಟಾಗ್ರಾಮ್ ಆಪ್ ನ ಕೆಳಭಾಗದಲ್ಲಿ ಬಲಬದಿಯಲ್ಲಿರುವ ಪ್ರೊಫೈಲ್ ಐಕಾನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಪ್ರೊಫೈಲ್ ಗೆ ಹೋಗಿ.

ಹಂತ 2: ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದಲ್ಲಿ ಪರದೆಯ ಮೇಲ್ಭಾಗದಲ್ಲಿ ಬಲಬದಿಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ. ನೀವು iOS ಬಳಕೆದಾರರಾಗಿದ್ದಲ್ಲಿ ಸೆಟ್ಟಿಂಗ್ಸ್ ಗೆ ಹೋಗಿ.

ಹಂತ 3:
ನಂತರ 'ಅಕೌಂಟ್ಸ್' ನ ಕೆಳಗಿರುವ "ಸ್ಟೋರಿ ಸೆಟ್ಟಿಂಗ್ಸ್" ಮೇಲೆ ಕ್ಲಿಕ್ ಮಾಡಿ

ಹಂತ 4: ಈಗ 'ಹೈಡ್ ಸ್ಟೋರಿ ಫ್ರಮ್' ಅನ್ನು ಆಯ್ಕೆ ಮಾಡಿ

ಹಂತ 5: ಈಗ ನೀವು ನಿಮ್ಮ ಸ್ಟೋರಿಗಳನ್ನು ಯಾರಿಂದ ಹೈಡ್ ಮಾಡಬಯಸುತ್ತೀರೋ ಅವರ ಪ್ರೊಫೈಲ್ ಗಳನ್ನು ಆಯ್ಕೆ ಮಾಡಿ 'ಡನ್' ಒತ್ತಿರಿ. ನೀವು ಯಾರಿಂದಾದರೂ ಭವಿಷ್ಯದಲ್ಲಿ ಸ್ಟೋರಿಗಳನ್ನು ಹೈಡ್ ಮಾಡದೇ ಇರಲು ನಿರ್ಧರಿಸಿದರೆ ಅವರ ಪ್ರೊಫೈಲ್ ಅನ್ನು ಅನ್ಚೆಕ್ ಮಾಡಿ.

ನೀವು ನಿಮ್ಮ ಸ್ಟೋರಿಗಳು 24 ಘಂಟೆಗಳ ನಂತರ ಡೀಲೀಟ್ ಆಗದೇ ಇರಲು ಬಯಸಿದರೆ, ನೀವು ಅದನ್ನು ಖಾಸಗಿಯಾಗಿ ನೋಡುವ ಸಲುವಾಗಿ ಆರ್ಖೈವ್ ಮಾಡಬಹುದು ಅಥವಾ 'ಹೈಲೈಟ್' ಸೃಷ್ಟಿಸುವ ಮೂಲಕ ನಿಮ್ಮ ಪ್ರೊಫೈಲ್ ನಲ್ಲಿ ನೀವು ಬಯಸಿದಷ್ಟು ಕಾಲ ಅದನ್ನು ಇರಿಸಬಹುದು. ಇತ್ತೀಚೆಗೆ ಇನ್ಸ್ಟಾಗ್ರಾಮ್ 'ಟೈಪ್ ಮೋಡ್' ಎಂಬ ಹೊಸತೊಂದು ಫೀಚರ್ ಪಡೆದಿದ್ದು, ಈ ಮೂಲಕ ಬಳಕೆದಾರರು ತಮ್ಮ ಸ್ಟೋರಿಗಳಲ್ಲಿ ಯಾವುದೇ ಚಿತ್ರಗಳನ್ನು ಬಳಸದೇ ಟೆಕ್ಸ್ಟ್ ಅನ್ನು ಟೈಪ್ ಮಾಡಬಹುದಾಗಿದೆ.

ಆಂಡ್ರಾಯ್ಡ್‌ನಲ್ಲಿ Facebook Instagram ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ..?

ಇತರ ಸ್ಟೋರಿಗಳಂತೆ ಇದೂ ಕೂಡ 24 ಘಂಟೆಗಳ ನಂತರ ಮರೆಯಾಗಲಿದ್ದು, ಆಂಡ್ರಾಯ್ಡ್ ಮತ್ತು iOS ಗಳೆರಡರಲ್ಲೂ ಈ ಫೀಚರ್ ಲಭ್ಯವಿದೆ. ಅಲ್ಲದೆ ಇನ್ಸ್ಟಾಗ್ರಾಮ್ ಜಿಫಿ ಯ ಸಹಯೋಗದಲ್ಲಿ ಮತ್ತೊಂದು ಹೊಸ ಫೀಚರ್ ನೀಡದ್ದು, ಬಳಕೆದಾರರು ಈಗ ಸಾವಿರಾರು ಜಿಫಿ ಸ್ಟಿಕರ್ಗಳನ್ನು ಆಕ್ಸೆಸ್ ಮಾಡಬಹುದಾಗಿದ್ದು, ಅದನ್ನು ತಮ್ಮ ಸೋರಿಯಲ್ಲಿ ಯಾವುದೇ ಫೋಟೋ ಅಥವಾ ವೀಡಿಯೋ ಮೇಲೆ ಬಳಸಬಹುದಾಗಿದೆ. ಇಲ್ಲಿ ನೀವು ಜಿಫ್ ಗಳನ್ನು ಕೀವರ್ಡ್ ಮೂಲಕ ಹುಡುಕಬಹುದು ಅಥವಾ ಟ್ರೆಂಡಿಂಗ್ ಸ್ಟಿಕರ್ಗಳನ್ನು ಬ್ರೌಸ್ ಮಾಡುವ ಮೂಲಕ ನಿಮ್ಮ ಮೂಡ್ ಗೆ ತಕ್ಕುದಾದ ಜಿಫ್ ಸ್ಟಿಕರ್ಗಳನ್ನು ಹುಡುಕಬಹುದು!

ಹೀಗೆ ಮಾಡಿದರೆ 15 ನಿಮಿಷಗಳಲ್ಲಿ ನಿಮ್ಮ ಫೋನ್ ಫುಲ್ ಚಾರ್ಜ್ ಆಗುತ್ತೆ!!ಹೀಗೆ ಮಾಡಿದರೆ 15 ನಿಮಿಷಗಳಲ್ಲಿ ನಿಮ್ಮ ಫೋನ್ ಫುಲ್ ಚಾರ್ಜ್ ಆಗುತ್ತೆ!!

Best Mobiles in India

English summary
Instagram has started revamping its app with lots of features and the latest and famous one to tag along is the Snapchat-like

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X