ಆಂಡ್ರಾಯ್ಡ್‌ನಲ್ಲಿ ಆಡಿಯೋ ಗುಣಮಟ್ಟ ಹೆಚ್ಚಿಸುವುದು ಹೇಗೆ..?

  By GizBot Bureau
  |

  ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ದಿನದಿಂದ ದಿನಕ್ಕೆ ಪ್ರಸಿದ್ಧಿಯಾಗುತ್ತಲೇ ಇದೆ. ಇದಕ್ಕೆ ಕಾರಣ ಬಳಕೆದಾರ ಸ್ನೇಹಿಯಾಗಿ ಆಂಡ್ರಾಯ್ಡ್ ಕೆಲಸ ಮಾಡುತ್ತದೆ ಮತ್ತು ಸುಲಭದಲ್ಲೇ ಸಿಸ್ಟಮ್ ನ್ನು ಕಂಟ್ರೋಲ್ ಗೆ ತೆಗೆದುಕೊಳ್ಳಬಹುದಾದ ಸಾಮರ್ಥ್ಯವು ಈ ಆಪರೇಟಿಂಗ್ ಸಿಸ್ಟಮ್ ನಲ್ಲಿ ಬಳಕೆದಾರರಿಗೆ ಲಭ್ಯವಾಗುತ್ತದೆ.

  ಪ್ರತಿ ದಿನವೂ ಬಳಕೆದಾರರು ತಮ್ಮ ಕೆಲಸವನ್ನು ಸುಲಭಗೊಳಿಸಿಕೊಳ್ಳಲು ಮತ್ತು ಅತ್ಯುತ್ತಮಗೊಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಮತ್ತು ಆ ನಿಟ್ಟಿನಲ್ಲಿ ಸ್ಮಾರ್ಟ್ ಫೋನ್ ಗಳಲ್ಲಿನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆ ನೆರವನ್ನು ಬಳಕೆದಾರರಿಗೆ ಕರುಣಿಸುತ್ತದೆ.

  ಆಂಡ್ರಾಯ್ಡ್‌ನಲ್ಲಿ ಆಡಿಯೋ ಗುಣಮಟ್ಟ ಹೆಚ್ಚಿಸುವುದು ಹೇಗೆ..?

  ಅದರಲ್ಲೂ ಪ್ರಮುಖವಾಗಿ ಪ್ರತಿಯೊಬ್ಬ ಬಳಕೆದಾರರು ಮ್ಯೂಸಿಕ್ ನ್ನು ಆಲಂದಿಸಲು ಬಯಸುತ್ತಾನೆ ಮತ್ತು ಹಾಡುಗಳು ಅತ್ಯುತ್ತಮ ವಾಗಿ ಕೇಳಬೇಕು ಎಂದು ಇಚ್ಛಿಸುತ್ತಾನೆ. ಆದರೆ ಸ್ಪೀಕರ್ ಗಳಲ್ಲಿ ಮತ್ತು ಇಯರ್ ಫೋನ್ ಗಳಲ್ಲಿ ಅದರ ಗುಣಮಟ್ಟವು ಅಧಿಕವಾಗಿ ಇಲ್ಲದೇ ಇರುವುದರಿಂದಾಗಿ ಯಾವಾಗಲೂ ಆಂಡ್ರಾಯ್ಡ್ ಬಳಕೆದಾರರು ಅನ್ಯ ಮಾರ್ಗಕ್ಕಾಗಿ ಚಿಂತಿಸುತ್ತಲೇ ಇರುತ್ತಾರೆ.

  ಅದೃಷ್ಟವಶಾತ್ ಆ ಅವಕಾಶವು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದ್ದು, ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದಾಗಿ ತಮ್ಮ ಫೋನಿನ ಆಡಿಯೋ ಗುಣಮಟ್ಟವನ್ನು ಬಳಕೆದಾರರು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. 

  ಇದು ಸಾಧ್ಯವಾಗುವುದು ಯಾಕೆಂದರೆ ಆಂಡ್ರಾಯ್ಡ್ ಓಎಸ್ ನ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಲು ಸಾಧ್ಯವಾಗುವುದರಿಂದಾಗಿಯೇ ಆಗಿದೆ. ಈ ಲೇಖನದಲ್ಲಿ ನಾವು ಸುಲಭವಾದ ಮತ್ತು ಅತ್ಯುತ್ತಮವಾದ ಒಂದು ಆಡಿಯೋ ಕ್ವಾಲಿಟಿ ಅಧಿಕಗೊಳಿಸುವ ಮಾರ್ಗವನ್ನು ಇಲ್ಲಿ ಸೂಚಿಸಿದ್ದೇವೆ. ನಿಮ್ಮ ಔಟ್ ಪುಟ್ ಡಿವೈಸ್ ನಲ್ಲಿ ಆಡಿಯೋ ಕ್ವಾಲಿಟಿ ಅತ್ಯುತ್ತಮವಾಗಿರಬೇಕು ಎಂದರೆ ಏನು ಮಾಡಬೇಕು ಎಂಬ ಸಿಂಪಲ್ ವಿಧಾನವನ್ನು ನೀವು ಈ ಲೇಖನದಿಂದ ತಿಳಿದುಕೊಳ್ಳಬಹುದು.

  ಇದಕ್ಕಾಗಿ ಮೊದಲಿಗೆ ನೀವು ನಿಮ್ಮ ಆಂಡ್ರಾಯ್ಡ್ ಡಿವೈಸ್ ಗೆ ರೂಟ್ ಆಕ್ಸಿಸ್ ನ್ನು ನೀಡಬೇಕು ಇಲ್ಲದೇ ಇದ್ದರೆ ಇದು ಕೆಲಸ ಮಾಡುವುದಿಲ್ಲ ಎಂಬುದು ನಿಮ್ಮ ಗಮನದಲ್ಲಿ ಇರಲಿ. ಒಂದು ವೇಳೆ ನಿಮ್ಮ ಡಿವೈಸ್ ಈಗಾಗಲೇ ರೂಟೆಡ್ ಡಿವೈಸ್ ಆಗಿದ್ದಲ್ಲಿ TWRP ರಿಕವರಿ ಟೂಲ್ ನ್ನು ನೀವು ಇನ್ಸ್ಟಾಲ್ ಮಾಡಿದ್ದೀರಾ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಯಾಕೆಂದರೆ ಪ್ರೊಸೀಜರ್ 4 ರಲ್ಲಿ ಇದರ ಅಗತ್ಯವಿರುತ್ತದೆ.

  ಯಾವುದೇ ಆಂಡ್ರಾಯ್ಡ್ ಡಿವೈಸ್ ನ ಆಡಿಯೋ ಗುಣಮಟ್ಟವನ್ನು ಹೆಚ್ಚಿಸುವುದು ಹೇಗೆ?

  ಈ ಕೆಳಗೆ ತಿಳಿಸಲಾಗಿರುವ ಹಂತಹಂತವಾಗಿರುವ ಮಾಹಿತಿಯನ್ನು ನೀವು ಅನುಸರಿಸಿದರೆ ಖಂಡಿತ ಇದನ್ನು ಸುಲಭದಲ್ಲಿ ಸಾಧಿಸಿಕೊಳ್ಳಬಹುದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ನಿಮ್ಮ ಆಂಡ್ರಾಯ್ಡ್ ಸೆಟ್ಟಿಂಗ್ಸ್ ನ್ನು ಪರೀಕ್ಷಿಸಿಕೊಳ್ಳಿ 

  ಇತ್ತೀಚೆಗೆ ಬರುವ ಪ್ರತಿಯೊಂದು ಆಂಡ್ರಾಯ್ಡ್ ಡಿವೈಸ್ ಕೂಡ ಆಡಿಯೋ ಕ್ವಾಲಿಟಿ ಹೆಚ್ಚಿಸಿಕೊಳ್ಳುವುದಕ್ಕೆ ನೆರವು ನೀಡುವಂತೆಯೇ ಡಿಸೈನ್ ಮಾಡಲಾಗಿರುತ್ತದೆ. ಬಳಕೆದಾರರು ಮೊದಲು ಹೀಗೆ ಮಾಡಿ ಸೆಟ್ಟಿಂಗ್ಸ್> ಸೌಂಡ್ಸ್ ಎಂಡ್ ವೈಬ್ರೇಷನ್ ಗೆ ತೆರಳಿ. ಅಲ್ಲಿ ಎನಾನ್ಸ್ ದಿ ಆಡಿಯೋ ಕ್ವಾಲಿಟಿ ಅನ್ನೋ ಆಯ್ಕೆ ಇರುತ್ತದೆ. ಇದೊಂದೇ ಅಲ್ಲ, ಆಡಿಯೋ ಇಕ್ವಿಲೈಸರ್ ಕೂಡ ಇರುತ್ತದೆ. ಇದು ಇಯರ್ ಫೋನ್ ಇಲ್ಲದೆಯೂ ಕೆಲಸ ಮಾಡುತ್ತದೆ. ಇದರ ಸೆಟ್ಟಿಂಗ್ಸ್ ಮಾಡಿಕೊಳ್ಳಬೇಕು.

  ಮ್ಯೂಸಿಕ್ ಆಪ್ ಡೌನ್ ಲೋಡ್ ಮಾಡಿ 

  ಆಂಡ್ರಾಯ್ಡ್ ನ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಅನೇಕರ ಥರ್ಡ್ ಪಾರ್ಟಿ ಮ್ಯೂಸಿಕ್ ಆಪ್ ಗಳಿವೆ. ಇವು ನಿಮ್ಮ ಮ್ಯೂಸಿಕ್ ಮತ್ತು ಆಡಿಯೋ ಅನುಭವವನ್ನು ಹೆಚ್ಚಿಸುವ ಭರವಸೆ ನೀಡುತ್ತದೆ. ನಿಮ್ಮ ಆಂಡ್ರಾಯ್ಡ್ ಆಡಿಯೋ ಹೆಚ್ಚಿಸಲು ನೀವು Poweramp ಅಥವಾ Playerpro ನ್ನು ಬಳಸಬಹುದು. ನೀವು ಈ ಆಪ್ ಗಳನ್ನು ಬಳಸಿ ಕಸ್ಟಮ್ ಪ್ರೀಸೆಟ್ ಮತ್ತು ಬಾಸ್ ಬೂಸ್ಟ್ ಮತ್ತು ಇತ್ಯಾದಿಗಳನ್ನು ಕೂಡ ಇದರಲ್ಲಿ ಸಾಧಿಸಬಹುದು.

  Ainur Nero ಬಳಸಿ

  ಆಂಡ್ರಾಯ್ಡ್ ಸಾಧನದಲ್ಲಿನ ಆಡಿಯೊ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುವ ವಿಧಾನವು Ainur NERO mod ಅನ್ನು ಬಳಸಿಕೊಳ್ಳುವ ಮೂಲಕ ನಡೆಸಲಾಗುತ್ತದೆ. ಇದು ನೂತನ ಆಡಿಯೋ ಗುಣಮಟ್ಟ ಹೆಚ್ಚಿಸುವ ವಿಧಾನವಾಗಿದ್ದು UltraM8s ಡೆವಲಪರ್ ಗಳು ಇದನ್ನು ಮಾಡಿದ್ದಾರೆ. ಈ ಮೋಡ್ ನಿಜಕ್ಕೂ ವಿಶೇಷವಾದದ್ದು ಯಾಕೆಂದರೆ ಇತರೆ ಆಡಿಯೋ ಟ್ವೀಕಿಂಗ್ ಆಪ್ ಮತ್ತು ಮೋಡ್ ಗಳಿಗಿಂತ ಇದು ವಿಭಿನ್ನವಾಗಿ ಕೆಲಸ ಮಾಡುತ್ತದೆ.

  ಇತರೆ ಆಪ್ ಗಳಂತಲ್ಲ ಯಾಕೆಂದರೆ ಇದು ಆಡಿಯೋ ಎಪಿಐ ನ್ನು ಇದು ಸಂಪೂರ್ಣವಾಗಿ ಡಿಲೀಟ್ ಮಾಡುತ್ತದೆ ಮತ್ತು ಹೊಸ ಕಸ್ಟಮ್ ಎಪಿಐ ನ್ನು ರಿಪ್ಲೇಸ್ ಡುತ್ತದೆ. ಅದು ಸಂಪೂರ್ಣ ಕಸ್ಟಮೈಸ್ ಆಗಿರುತ್ತದೆ ಮತ್ತು ಹೆಚ್ಚಿನ ಆಡಿಯೋ ಗುಣಮಟ್ಟದ ಔಟ್ ಪುಟ್ ನೀಡಲು ಸಹಕಾರಿಯಾಗಿರುತ್ತದೆ. ಹಾಗಾದ್ರೆ ಮೊದಲು ನೀವು Ainur NERO mod ಮೊದಲು ಡೌನ್ ಲೋಡ್ ಮಾಡಿಕೊಳ್ಳಿ.

  ಹಂತ 1. ಈ ರೀತಿ ಡೌನ್ ಲೋಡ್ ಮಾಡಿದ ಮೋಡ್ ನ್ನು ನಿಮ್ಮ ಸ್ಟೋರೇಜ್ ನಲ್ಲಿ ಒಂದು ನಿರ್ಧಿಷ್ಟ ಫೋಲ್ಡರ್ ನಲ್ಲಿ ಸೇವ್ ಮಾಡಿ ಇಡಬೇಕು. ಇದು ನಂತರ ನಿಮಗೆ ಫೈಲ್ ಗಳನ್ನು ಲೊಕೇಟ್ ಮಾಡಲು ಸಹಕಾರಿಯಾಗಿರುತ್ತದೆ.

  ಹಂತ 2. ಈ ಹಂತದಲ್ಲಿ ಅಗತ್ಯತೆಯ ಅನುಸಾರವಾಗಿ ನೀವು ಈಗಾಗಲೇ ಇನ್ಸ್ಟಾಲ್ ಮಾಡಿರುವ TWRP ಕಸ್ಟರ್ ರಿಕವರಿ ಟೂಲ್ ನ ಬಳಕೆಯನ್ನು ಮಾಡುತ್ತೇವೆ. ಒಂದು ವೇಳೆ ನೀವು ಇನ್ಸ್ಟಾಲ್ ಮಾಡಿಲ್ಲದೇ ಇದ್ದಲ್ಲಿ ಗೂಗಲ್ ಪ್ಲೇ ಸ್ಟೋರ್ ಗೆ ತೆರಳಿ ಇದನ್ನು ಇನ್ಸ್ಟಾಲ್ ಮಾಡಿಕೊಳ್ಳಿ. ಎರಡು ವರ್ಷನ್ ನ ಆಪ್ ಗಳು ಇಲ್ಲಿ ಲಭ್ಯವಿರುತ್ತದೆ.

  ಒಂದು ಉಚಿತವಾಗಿರುತ್ತದೆ ಆದರೆ ಕೆಲವೇ ಕೆಲವು ವೈಶಿಷ್ಟ್ಯತೆಗಳು ಮಾತ್ರ ಇದರಲ್ಲಿ ಲಭ್ಯವಿರುತ್ತದೆ. ಮತ್ತೊಂದು ಹಣ ಪಾವತಿಸಿ ಪಡೆಯಬೇಕು ಇದರಲ್ಲಿ ಹೆಚ್ಚಿನ ವೈಶಿಷ್ಟ್ಯತೆಗಳನ್ನು ನೀವು ಪಡೆದುಕೊಳ್ಳಬಹುದು. ನೀವು ಯಾವುದನ್ನು ಬೇಕಿದ್ದರೂ ಆಯ್ಕೆ ಮಾಡಿಕೊಳ್ಳಬಹುದು. ಉಚಿತ ವರ್ಷನ್ ಕೂಡ ಉತ್ತಮವಾಗಿಯೇ ಇರುತ್ತದೆ.

  ಹಂತ 3. TWRP ಟೂಲ್ ನ್ನು ತೆರೆಯಿರಿ ಮತ್ತು ನಂತರ ಡೌನ್ ಲೋಡೆಡ್ ಮೋಡ್ ಫಲೈ ನ ಫ್ಲ್ಯಾಶ್ ನ್ನು ಬಳಕೆ ಮಾಡಿ. ಅದನ್ನು ಲೊಕೇಟ್ ಮಾಡಿ.

  ಹಂತ 4. ಫ್ಲ್ಯಾಶ್ ಪ್ರೊಸೆಸ್ ತುಂಬಾ ಸರಳವಾಗಿರುತ್ತದೆ. TWRP tool ಗೆ ನೀವು ಲಾಗಿನ್ ಆಗಬೇಕು ಮತ್ತು ಇನ್ಸ್ಟಾಲ್ ಬಟನ್ ನ್ನು ಕ್ಲಿಕ್ಕಿಸಿ. ಇದು ನಂತರ ನಿಮಗೆ ಫೈಲ್ ಲೋಕೇಷನ್ ನ್ನು ಕೇಳುತ್ತದೆ. ಪೈಲ್ ಲೋಕೇಷನ್ ಆಯ್ಕೆ ಮಾಡಿದ ನಂತರ ಇನ್ಸ್ಟಾಲ್ ಮಾಡಿ. ಇದನ್ನು ಮಾಡಿದ ನಂತರ ಕೂಡಲೇ ನಿಮ್ಮ ಆಡಿಯೋ ಗುಣಮಟ್ಟವು ಅಧಿಕವಾಗುತ್ತದೆ. ಇದು ನಿಮ್ಮ ಡಿವೈಸ್ ನ ಎಪಿಐ ನ್ನು ರಿಮೂವ್ ಮಾಡಿರುತ್ತದೆ. ಸಂಪೂರ್ಣ ಆಡಿಯೋ ಫೈಲ್ ಗಳು ಡೈನಾಮಿಕ್ ಆಗಿರುತ್ತದೆ.

  Dolby Atmos surround

  ಇದರಲ್ಲಿ ನೀವು Dolby Atmos surround ಸೌಂಡ್ ತಂತ್ರಜ್ಞಾನವನ್ನು ಕೂಡ ನಿಮ್ಮ ಆಂಡ್ರಾಯ್ಡ್ ಡಿವೈಸ್ ನಲ್ಲಿ ಪಡೆಯಬಹುದು. ಇದಕ್ಕಾಗಿ ನಿಮಗೆ ರೂಟೆಡ್ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಬೇಕಾಗುತ್ತದೆ. ಹಾಗಾದ್ರೆ ಅದರ ಇನ್ಸ್ಟಾಲೇಷನ್ ಮಾಹಿತಿಯನ್ನು ಪಡೆದುಕೊಳ್ಳೋಣ.

  ಹಂತ 1. ಮೊದಲನೆಯದಾಗಿ, Dolby Atmos Surround ZIP fileನ್ನು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ ಇನ್ಸ್ಟಾಲ್ ಮಾಡಿ ಮತ್ತು ಡೌನ್ ಲೋಡ್ ಮಾಡಿಕೊಳ್ಳಿ.

  ಹಂತ 2. ಈಗ, ನೀವು ರಿಕವರಿ ಮೋಡ್ ನ್ನು ಎಂಟರ್ ಮಾಡಬೇಕು. ಅದಕ್ಕಾಗಿ, ನೀವು ನಿಮ್ಮ ಆಂಡ್ರಾಯ್ಡ್ ನಲ್ಲಿ Power + Volume Up + Home Button ಪ್ರೆಸ್ ಮಾಡಿ ಹೋಲ್ಡ್ ಮಾಡಿ.

  ಹಂತ 3. ರಿಕವರಿ ಮೋಡ್ ಆನ್ ಆದ ನಂತರ, ಸ್ಕ್ರೀನ್ ಶಾಟ್ ನಲ್ಲಿ ತೋರಿಸಿರುವಂತೆ ಇನ್ಸ್ಟಾಲ್ ಬಟನ್ ನ್ನು ಟ್ಯಾಪ್ ಮಾಡಬೇಕು

  ಹಂತ 4. ಈಗ ನಿಮ್ಮ ಆಂಡ್ರಾಯ್ಡ್ ಡಿವೈಸ್ ನಲ್ಲಿ Dolby Atmos Surround ZIP ಫೈಲ್ ನ್ನು ಲೊಕೇಟ್ ಮಾಡಬೇಕು.

  ಹಂತ 5. Zip ಫೈಲ್ ನ್ನು ಫ್ಲ್ಯಾಶ್ ಮಾಡಿ. ಕೆಲವು ಸೆಕೆಂಡ್ ಕಾಯಿರಿ. ಒಮ್ಮೆ ಮುಗಿದ ನಂತರ, ಒಮ್ಮೆ ಮುಗಿದ ನಂತರ ಸಿಸ್ಟಮ್ ನ್ನು ರಿಬೂಟ್ ಮಾಡಿ.

  ಈ ಸಿಂಪಲ್ ವಿಧಾನದಿಂದ ನಿಮ್ಮ ಆಂಡ್ರಾಯ್ಡ್ ಸಿಸ್ಟಮ್ ನ ಆಡಿಯೋ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಾಧ್ಯವಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  How to Increase Audio Quality on Any Android Device. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more