ನಿಮ್ಮ ಜಿಯೋ ನೆಟ್ ಸ್ಪೀಡ್ ಕಡಿಮೆ ಆಗಿದ್ರೆ ಈ ಟ್ರಿಕ್ ಉಪಯೋಗಿಸಿ...!

ಡೇಟಾ ಹಸಿವು ಹೆಚ್ಚಿದ್ದ ದೇಶದಲ್ಲಿ ಉಚಿತ 4G ಡೇಟಾ ಕೊಟ್ಟು, ಜನರ ಡೇಟಾ ಬಳಸುವ ಶೈಲಿಯನ್ನೇ ಬದಲಾಯಿಸಿತು.

|

ಒಂದು GB ವೇಗದ ಡೇಟಾ ಪಡೆಯಲು 300 ರೂ.ನೀಡಬೇಕಾಗಿದ್ದ ಸಂದರ್ಭದಲ್ಲಿ ಭಾರತೀಯ ಟೆಲಿಕಾಮ್ ವಲಯದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟುಹಾಕಿದ ರಿಲಯನ್ಸ್ ಮಾಲೀಕತ್ವದ ಜಿಯೋ, ತನ್ನ ಆರಂಭವಾದ ನಂತರ ಹೊಸದೊಂದು ಶಕೆಯನ್ನೇ ಹುಟ್ಟಿ ಹಾಕಿತು. ಡೇಟಾ ಹಸಿವು ಹೆಚ್ಚಿದ್ದ ದೇಶದಲ್ಲಿ ಉಚಿತ 4G ಡೇಟಾ ಕೊಟ್ಟು, ಜನರ ಡೇಟಾ ಬಳಸುವ ಶೈಲಿಯನ್ನೇ ಬದಲಾಯಿಸಿತು.

ನಿಮ್ಮ ಜಿಯೋ ನೆಟ್ ಸ್ಪೀಡ್ ಕಡಿಮೆ ಆಗಿದ್ರೆ ಈ ಟ್ರಿಕ್ ಉಪಯೋಗಿಸಿ...!

ಓದಿರಿ: ಖರ್ಚಿಲ್ಲದೇ ಒಂದೇ ದಿನದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಸಾಧ್ಯವೇ..? ಯಾಕಿಲ್ಲ ಇಲ್ಲಿದೇ ಸಂಪೂರ್ಣ ಮಾಹಿತಿ

ಆರಂಭದಲ್ಲಿ ಜಿಯೋ ವೇಗಕ್ಕೆ ಮಾರು ಹೋದ ಜನರು ನಂತರ ದಿನ ಕಳೆದಂತೆ ಜಿಯೋ ವೇಗ ಕಡಿಮೆಯಾಗಿದೆ ಎಂದು ದೂರ ತೊಡಗಿದರು. ಆನಂತರ ಬಿಡು ಉಚಿತ ತಾನೆ ಎಂದು ಸಮ್ಮನಾದರು. ಆದರೆ ಈಗ ಜಿಯೋ ತನ್ನ ಸೇವೆಗೆ ಶುಲ್ಕ ವಿಧಿಸಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಜಿಯೋ ವೇಗವನ್ನು ನೀವೇ ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಸಣ್ಣ ಬದಲಾವಣೆ ಅಗತ್ಯ:

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಸಣ್ಣ ಬದಲಾವಣೆ ಅಗತ್ಯ:

ನೀವು ಜಿಯೋ ಸಿಮ್ ಬಳಸುತ್ತಿರುವ ಸ್ಮಾರ್ಟ್‌ಫೋನಿನಲ್ಲಿ ಸಣ್ಣ ಬದಲಾವಣೆಯನ್ನು ಮಾಡಿಕೊಂಡರೆ ಜಿಯೋ ವೇಗ ತಾನಾಗಿಯೇ ಹೆಚ್ಚಾಗಲಿದೆ. ಇದಕ್ಕಾಗಿ ಜಿಯೋ ಸಿಮ್‌ನ APN ನಂಬರ್ ಬದಲಾವಣೆ ಮಾಡಬೇಕಾಗಿದೆ. ಅದು ಹೇಗೆ..?

ಸ್ಪೀಡ್ ಹೆಚ್ಚಿಸಿಕೊಳ್ಳುವುದು ಹೇಗೆ..?

ಸ್ಪೀಡ್ ಹೆಚ್ಚಿಸಿಕೊಳ್ಳುವುದು ಹೇಗೆ..?

ಜಿಯೋ ವೇಗ ಹೆಚ್ಚಿಸಿಕೊಳ್ಳುವ ಸಲುವಾಗಿ ಮೊದಲು ನಿಮ್ಮ ಫೋನಿನಲ್ಲಿ ಮೊದಲು ನಿಮ್ಮ ಪೋನಿನಲ್ಲಿ setting ಓಪನ್ ಮಾಡಿರಿ, ನಂತರ ಅದರಲ್ಲಿ ಇರುವಂತಹ Mobile Networks ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ.

access point ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ:

access point ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ:

ಅಲ್ಲಿ access point ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ. ಅಲ್ಲಿ reliance Jio Sim ಎಂದು ಟೈಪ್ ಮಾಡಿರಿ. ನಂತರ ಸಿಮ್ ಸ್ಲಾಟ್ ಅನ್ನು Jio Sim ಸೆಲೆಕ್ಟ್ ಮಾಡಿ. ಇದಾದ ಮೇಲೆ ಬಲಭಾಗದ ಮೇಲ್ತುದಿಯಲ್ಲಿರುವ Menu ಸೆಲೆಕ್ಟ್ ಮಾಡಿ. ಅಲ್ಲಿ ಹೊಸ APN ಆಯ್ಕೆ ಮಾಡಿಕೊಂಡು Save ಮೇಲೆ ಕ್ಲಿಕ್ ಮಾಡಿ.

ನಂತರ APN Network ಬದಲಾಯಿಸಿರಿ:

ನಂತರ APN Network ಬದಲಾಯಿಸಿರಿ:

ಮೇಲಿನ ಹಂತಗಳನ್ನು ಮಾಡಿದ ನಂತರದಲ್ಲಿ APN Network ಬದಲಾಯಿಸ ಬೇಕಾಗಿದೆ. ಇದಕ್ಕಾಗಿ ಈ ಕೆಳಗಿನ ಅಂಶಗಳನ್ನು ಕಾಪಿ ಮಾಡಿರಿ.

  • Name - Jio.com
  • APN - jionet
  • APN Type - Default
  • Proxy - Not Set
  • Port - Not Set
  • Username - Not Set
  • Password - Not Set
  • ಸರ್ವರ್ ಆಯ್ಕೆ ಮಾಡಿಕೊಳ್ಳಿರಿ:

    ಸರ್ವರ್ ಆಯ್ಕೆ ಮಾಡಿಕೊಳ್ಳಿರಿ:

    ಈ ಮೇಲಿನ ಆಯ್ಕೆಗಳನ್ನು ಹಾಗೆಯೇ ಬದಲಾಯಿಸಿದ ನಂತರದಲ್ಲಿ ಕೆಳಗೆ ಸಿಗುವ ಸರ್ವರ್ ಆಯ್ಕೆಯನ್ನು ತುಂಬಿರಿ.

    • Server - www.google.com
    • MMSC - Not Set
    • MMS proxy - Not Set
    • MMS port - Not Set
    • MCC - 405
    • MNC - 857, 863 or 874
    • Authentication type - Not Set
    • APN Protocol - IPv4/IPv6
    • ಆನಂತರ ಪೋನ್ ಆಫ್ ಮಾಡಿ ಆನ್‌ ಮಾಡಿರಿ:

      ಆನಂತರ ಪೋನ್ ಆಫ್ ಮಾಡಿ ಆನ್‌ ಮಾಡಿರಿ:

      ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಈ ಮೇಲಿನ ಆಯ್ಕೆಗಳನ್ನು ಬದಲಾವಣೆ ಮಾಡಿ ಓಕೆ ಮಾಡಿದ ನಂತರದಲ್ಲಿ ಫೋನನ್ನು ಒಮ್ಮೆ ಆಫ್‌ ಮಾಡಿ ಆನ್‌ ಮಾಡಿರಿ. ಇದಾದ ನಂತರದಲ್ಲಿ ಒಮ್ಮೆ ಬ್ರೌಸ್ ಮಾಡಿ ನೋಡಿರಿ ಈ ಹಿಂದಿಗಿಂತಲೂ ಅತ್ಯಂತ ವೇಗವಾಗಿ ನಿಮ್ಮ ಜಿಯೋ ಕಾರ್ಯನಿರ್ವಹಿಸಲಿದೆ.

      ಜಿಯೋ ವೇಗ ಈ ಹಿಂದಿಗಿಂತಲೂ ಹೆಚ್ಚಾಗಲಿದೆ:

      ಜಿಯೋ ವೇಗ ಈ ಹಿಂದಿಗಿಂತಲೂ ಹೆಚ್ಚಾಗಲಿದೆ:

      ಈ ರೀತಿಯಲ್ಲಿ ಸಣ್ಣ ಬದಲಾವಣೆಯನ್ನು ಮಾಡಿದರೆ ಜಿಯೋ ಸೇವೆಯ ವೇಗವು ನೀವೆಂದು ಕೊಂಡಿದಕ್ಕಿಂತಲೂ ಹೆಚ್ಚಾಗಲಿದೆ. ಅಲ್ಲದೇ ನೆಟ್‌ವರ್ಕ್ ಬಲಶಾಲಿಯಾಗಲಿದೆ. ನೀವು ಯಶಸ್ವಿಯಾದ ಮೇಲೆ ಜಿಯೋ ಬಳಸುತ್ತಿರುವ ನಿಮ್ಮ ಸ್ನೇಹಿತರಿಗೂ ಈ ವಿಷಯ ಹಂಚಿಕೊಳ್ಳಿ.

      ಮೊಬೈಲ್ ಬ್ಯಾಟರಿಯನ್ನು ಹೇಗೆ ಚಾರ್ಜ್ ಮಾಡಬೇಕು? ಖಂಡಿತ ಇದು ನಿಮಗೆ ಗೊತ್ತಿಲ್ಲಾ!!ಮೊಬೈಲ್ ಬ್ಯಾಟರಿಯನ್ನು ಹೇಗೆ ಚಾರ್ಜ್ ಮಾಡಬೇಕು? ಖಂಡಿತ ಇದು ನಿಮಗೆ ಗೊತ್ತಿಲ್ಲಾ!!

Best Mobiles in India

English summary
Steps to increase Jio 4G speed. First visit setting option on your phone. Then visit the Mobile Networks option from settings. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X