Subscribe to Gizbot

ಫೋನ್‌ನಲ್ಲಿ ಇಂಟರ್‌ನೆಟ್ ವೇಗ ಕಡಿಮೆಯಾಗಲು ಕಾರಣವೇನು?..ಇಲ್ಲಿದೆ ಉತ್ತರ!!

Written By:

ಇಂಟರ್‌ನೆಟ್‌ ಬಳಕೆ ಸ್ಲೋ ಆದರೆ ಆಗುವ ಕಿರಿಕಿರಿ ಎಷ್ಟು ಎಂಬುದು ನಿಮಗೆ ಗೊತ್ತಿರುತ್ತದೆ.! ಅದರಲ್ಲಿಯೂ ನಿಮ್ಮ ಬ್ರೌಸಿಂಗ್ ವೇಗ ಕಡಿಮೆಯಾಗಲು ನಿಮ್ಮ ಸ್ಮಾರ್ಟ್‌ಫೋನ್ ಕಾರಣ ಆಗಿರುತ್ತದೆ ಎಂದು ತಿಳಿದರೆ.!!? ಹೌದು, ಬ್ರೌಸಿಂಗ್ ವೇಗ ಕಡಿಮೆಯಾಗಲು ಸ್ಮಾರ್ಟ್‌ಫೋನ್‌ ಕೂಡ ಕಾರಣವಾಗಿರುತ್ತದೆ.!!

ನಮಗೆ ತಿಳಿಯದಿರುವ ಕೆಲವು ಸ್ಮಾರ್ಟ್‌ಫೋನ್ ತಂತ್ರಗಳು ನಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್‌ನೆಟ್ ಕಾರ್ಯವಿಧಾನವನ್ನು ಬಾರಿ ಕಡಿಮೆಗೊಳಿಸಿರುತ್ತವೆ.!! ಹಾಗಾಗಿ, ಇಂದಿನ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್‌ನೆಟ್ ವೇಗ ಕಡಿಮೆಯಾಗಲು ಕಾರಣವೇನು? ಮತ್ತು ಹೆಚ್ಚಿಸುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ರೌಸಿಂಗ್ ಹಿಸ್ಟರಿ ಕ್ಲಿಯರ್ ಮಾಡಿ

ಬ್ರೌಸಿಂಗ್ ಹಿಸ್ಟರಿ ಕ್ಲಿಯರ್ ಮಾಡಿ

ಬಹುತೇಕ ಎಲ್ಲರೂ ಹೆಚ್ಚಾಗಿ ಉಪಯೋಗಿಸುತ್ತಿರುವ ಗೂಗಲ್‌ ಕ್ರೋಮ್‌ ಮೂಲಕ ಬ್ರೌಸ್‌ ಮಾಡುವಾಗ ಬ್ರೌಸಿಂಗ್‌ ವೇಗ ತಗ್ಗುತ್ತದೆ. ಇದಕ್ಕೆ ಕಾರಣ ನೀವು ಬ್ರೌಸಿಂಗ್‌ ವೇಳೆ ಬಳಸುವ ಪಾಸ್‌ವರ್ಡ್‌, ಬುಕ್‌ಮಾರ್ಕ್‌ ಹಾಗೂ ಹಿಸ್ಟರಿಯನ್ನು ಕ್ರೋಮ್‌ ನೆನಪಿಟ್ಟುಕೊಳ್ಳುವುದು. ಹಾಗಾಗಿ, ನೀವು ಕ್ರೋಮ್‌ನಲ್ಲಿ ಬ್ರೌಸಿಂಗ್ ಹಿಸ್ಟರಿ ಕ್ಲಿಯರ್ ಮಾಡಿ ನಂತರ ಉಪಯೋಗಿಸಿ.!!

ಕ್ಯಾಚೆ ಕ್ಲಿಯರ್ ಮಾಡಿ.!

ಕ್ಯಾಚೆ ಕ್ಲಿಯರ್ ಮಾಡಿ.!

ಮೊಬೈಲ್‌ನ ಸೆಟ್ಟಿಂಗ್ ತೆರೆದು ಸ್ಟೋರೇಜ್ ಐಕಾನ್ ಕ್ಲಿಕ್ ಮಾಡಿ ನಂತರ ಕಾಣುವ ಹಲವು ಆಯ್ಕೆಗೆಳಲ್ಲಿ ಕ್ಯಾಚ್‌(catch) ಎಂಬ ಆಯ್ಕೆಯನ್ನು ಒತ್ತಿದರೆ ನಿಮ್ಮ ಸ್ಮಾರ್ಟ್‌ಫೋನ್‌ನ ಎಲ್ಲಾ ಕ್ಯಾಚ್‌ ಕ್ಲಿಯರ್‌ ಆಗುತ್ತದೆ. ನಂತರ ಸ್ಮಾರ್ಟ್ಫೋನ್ ಬ್ರೌಸಿಂಗ್ ವೇಗ ಸಹ ಹೆಚ್ಚುತ್ತದೆ.!!

ಉಪಯೋಗವಿಲ್ಲದ ಆಪ್‌ ಡಿಲೀಟ್ ಮಾಡಿ.!!

ಉಪಯೋಗವಿಲ್ಲದ ಆಪ್‌ ಡಿಲೀಟ್ ಮಾಡಿ.!!

ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚು ಸ್ಪೇಸ್‌ ತೆಗೆದುಕೊಳ್ಳುವ ಉಪಯೋಗವಿಲ್ಲದ ಆಪ್‌ಗಳಿದ್ದರೆ ಅವುಗಳನ್ನು ಅನ್‌ಇನ್‌ಸ್ಟಾಲ್ ಮಾಡಿ. ಹೆಚ್ಚು ಆಪ್‌ಗಳಿದ್ದರೆ ಸ್ಮಾರ್ಟ್‌ಫೋನ್ ಇನ್‌ಬಿಲ್ಟ್‌ ಸ್ಟೋರೇಜ್‌ ಸಾಮರ್ಥ್ಯ ಕಡಿಮೆ ಇದ್ದರೂ ಇಂಟರ್‌ನೆಟ್ ವೇಗ ಬಹಳ ಕಡಿಮೆಯಾಗುತ್ತದೆ.!!

ಒಮ್ಮೆ ಮೊಬೈಲ್ ರೀಬೂಟ್ ಮಾಡಿ!!

ಒಮ್ಮೆ ಮೊಬೈಲ್ ರೀಬೂಟ್ ಮಾಡಿ!!

ಮೇಲಿನ ಮೂರು ತಂತ್ರಗಳ ಮೂಲಕ ನೀವು ಸ್ಮಾರ್ಟ್‌ಫೋನ್‌ ವೇಗವನ್ನು ಹೆಚ್ಚಿಸಬಹುದು. ಈ ಎಲ್ಲಾ ತ್ಂತ್ರಗಳಿಂದಲೂ ನಿಮ್ಮ ಸ್ಮಾರ್ಟ್‌ಫೋನ್ ವೇಗ ಹೆಚ್ಚದಿದ್ದರೆ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಒಮ್ಮೆ ರೀಬೂಟ್ ಮಾಡಿದರೆ ಎಲ್ಲಾ ತೊಂದರೆಗಳು ಪರಿಹಾರವಾಗುತ್ತವೆ.!!

ಓದಿರಿ:ಜಿಯೋ ಎಫೆಕ್ಟ್..299 ರೂ.ಗೆ ಕರೆ ಮಾತ್ರವಲ್ಲಾ ಡೇಟಾ ಕೂಡ ಅನ್‌ಲಿಮಿಟೆಡ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
here is a tutorial on Increasing Your Internet Speed onAndroid.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot