ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫೋರ್ಟ್‌ನೈಟ್ ಗೇಮ್‌ ಇನ್‌ಸ್ಟಾಲ್‌ ಮಾಡಬಹುದು..! ಹೇಗೆ ಗೊತ್ತಾ?

|

ಸ್ಯಾಮ್ ಸಂಗ್ ನ ಅನ್ ಪ್ಯಾಕ್ಡ್ ಕಾರ್ಯಕ್ರಮವೊಂದರಲ್ಲಿ ಎಪಿಕ್ ಗೇಮ್ ಗಳು ತನ್ನ ಪ್ರಸಿದ್ಧ ಬ್ಯಾಟಲ್ ರಾಯಲ್ ಗೇಮ್ ಫೋರ್ಟ್ ನೈಟ್ ನ್ನು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಿಗಾಗಿ ಪ್ರಕಟಿಸಿತ್ತು ಮತ್ತು ಇದರ ಬಿಡುಗಡೆಯ ಸಂದರ್ಬದಲ್ಲಿ ಈ ಗೇಮ್ ಎಕ್ಸ್ ಕ್ಲೂಸೀವ್ ಆಗಿ ಕೆಲವು ಸ್ಯಾಮ್ ಸಂಗ್ ಫ್ಲಾಗ್ ಶಿಪ್ ಫೋನ್ ಗಳಲ್ಲಿ ಲಭ್ಯವಿರುತ್ತಿತ್ತು.

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫೋರ್ಟ್‌ನೈಟ್ ಗೇಮ್‌ ಇನ್‌ಸ್ಟಾಲ್‌ ಮಾಡಬಹುದು..!


ಆದರೆ ಇದೀಗ ಈ ಎಕ್ಸ್ ಕ್ಲೂಸೀವ್ ಸಮಯ ಮುಕ್ತಾಯವಾಗಿದೆ. ಇದೀಗ ಗೇಮಿಂಗ್ ಕಂಪೆನಿಯು ಇತರೆ ಕಂಪ್ಯಾಟಿಬಲ್ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಾದ ಗೂಗಲ್ ಪಿಕ್ಸಲ್ 2, ಎಕ್ಸ್ ಎಲ್ ಗಳಲ್ಲಿ ಈ ಆಟವನ್ನು ನೀಡುತ್ತಿದೆ. ಆದರೆ ಗೇಮಿಂಗ್ ಕಂಪೆನಿಯು ತನ್ನದೆ ಕೆಲವು ಡಿಸ್ಟ್ರಿಬ್ಯೂಷನ್ ನಿಯಮಗಳನ್ನು ಹೊಂದಿರುವುದರ ಪರಿಣಾಮವಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಆಟವು ಲಭ್ಯವಿರುವುದಿಲ್ಲ.

ಸ್ಯಾಮ್ ಸಂಗ್ ಆಪ್ ಸ್ಟೋರ್ ನಲ್ಲಿ ಲಭ್ಯ

ಸ್ಯಾಮ್ ಸಂಗ್ ಆಪ್ ಸ್ಟೋರ್ ನಲ್ಲಿ ಲಭ್ಯ

ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಫೋರ್ಟ್ ನೈಟ್ ಇನ್ಸ್ಟಾಲರ್ ಅವರ ಸ್ಯಾಮ್ ಸಂಗ್ ಆಪ್ ಸ್ಟೋರ್ ನಲ್ಲಿ ಲಭ್ಯವಾಗುತ್ತದೆ. ಇತರರು ಫೋರ್ಟ್ ನೈಟ್ ಇನ್ಸ್ಟಾಲೇಷನ್ ಹಂಚಿಕೆ ಕಾರ್ಯಕ್ಕಾಗಿ ಅವರ ಅಧಿಕೃತ ವೆಬ್ ಸೈಟ್ ನ ಮೊರೆ ಹೋಗಬೇಕಾಗುತ್ತದೆ.

ಈ ಎಲ್ಲಾ ಕಠಿಣ ಸವಾಲುಗಳ ನಡುವೆಯೂ ಹೇಗೆ ಈ ಆಟವನ್ನು ನಿಮ್ಮ ಸ್ಮಾರ್ಟ್ ಫೋನ್ ಗೆ ಇನ್ಸ್ಟಾಲ್ ಮಾಡಿಕೊಳ್ಳಬಹುದು ಎಂಬ ಸುಲಭ ವಿಧಾನದ ಹಂತಹಂತವಾದ ಮಾಹಿತಿಯನ್ನು ನಾವು ನಿಮಗೆ ನೀಡಲಿದ್ದೇವೆ. ಹಂತಗಳನ್ನು ಅನುಸರಿಸುವ ಮುನ್ನ ಒಂದು ವಿಚಾರವನ್ನು ನೀವು ಚೆನ್ನಾಗಿ ಅರ್ಥೈಸಿಕೊಂಡಿರಬೇಕು.

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿಲ್ಲ:

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿಲ್ಲ:

ಈ ಆಟವು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವುದಿಲ್ಲ. ಅಲ್ಲಿ ಹುಡುಕಾಟ ನಡೆಸುವುದು ಸಮಯ ವ್ಯರ್ಥ ಮಾಡುವುದು ಅಷ್ಟೇ. ಕಂಪೆನಿಯು ಈಗಾಗಲೇ ಪ್ರಕಟಿಸಿರುವಂತೆ ಅವರು ಆಟವನ್ನು ತಮ್ಮ ಕಂಪೆನಿಯ ಅಧಿಕೃತ ವೆಬ್ ಸೈಟ್ ಮೂಲಕ ಮಾತ್ರ ಹಂಚಿಕೆ ಮಾಡುತ್ತಾರೆ. ಹಾಗಾಗಿ ಯಾವುದೇ ಫೋರ್ಟ್ ನೈಟ್ ಹೆಸರಿನ ಫೇಕ್ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳುವುದು ವ್ಯರ್ಥ ಪ್ರಯತ್ನವಾಗಿರುತ್ತದೆ. ಅಂತಿಮವಾಗಿ ನಿಮಗೆ ಗೂಗಲ್ ಪ್ಲೇ ಸ್ಟೋರ್ ನಿಂದ ಈ ಮೆಸೇಜ್ ಲಭ್ಯವಾಗುತ್ತದೆ. "Fortnite Battle Royale by Epic Games, Inc is not available on Google Play." ಅಂದರೆ ಎಪಿಕ್ ಗೇಮ್ ಆಗಿರುವ ಫೋರ್ಟ್ ನೈಟ್ ರಾಯಲ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿಲ್ಲ.

ಡಿವೈಸ್ ಕಂಪ್ಯಾಟಿಬಿಲಿಯನ್ನು ಪರೀಕ್ಷಿಸಿ :

ಡಿವೈಸ್ ಕಂಪ್ಯಾಟಿಬಿಲಿಯನ್ನು ಪರೀಕ್ಷಿಸಿ :

ಗೇಮ್ ಇನ್ಸ್ಟಾಲೇಷನ್ ಪ್ರೊಸೆಸ್ ನಲ್ಲಿ, 'https://www.epicgames.com/fortnite/en-US/mobile/android/sign-up' ಗೆ ತೆರಳಿ ನಿಮ್ಮ ಸ್ಮಾರ್ಟ್ ಫೋನ್ ನ ಕಂಪ್ಯಾಟಿಬಿಲಿಯನ್ನು ಪರೀಕ್ಷಿಸಿಕೊಳ್ಳಿ.

ಇನ್ವೈಟ್ ಗೆ ಸೈನ್ ಅಪ್ ಆಗುವುದು:

ಇನ್ವೈಟ್ ಗೆ ಸೈನ್ ಅಪ್ ಆಗುವುದು:

1. ' https://www.epicgames.com/fortnite/en-US/mobile/android/sign-up' ನ್ನು ನಿಮ್ಮ ಪಿಸಿ ಅಥವಾ ಸ್ಮಾರ್ಟ್ ಫೋನ್ ನಲ್ಲಿ ತೆರೆಯಿರಿ .

2. 'Sign up for email invite' ಬಟನ್ ನ್ನು ಕ್ಲಿಕ್ಕಿಸಿ

3. ಇದು ನಿಮ್ಮನ್ನು ಎಪಿಕ್ ಗೇಮ್ಸ್ ಲಾಗಿನ್ ಪೋರ್ಟಲ್ ಗೆ ರೀಡೈರೆಕ್ಟ್ ಮಾಡುತ್ತದೆ.ಒಂದು ವೇಳೆ ಈಗಾಗಲೇ ನಿಮ್ಮ ಬಳಿ ಎಪಿಕ್ ಅಕೌಂಟ್ ಇದ್ದಲ್ಲಿ ಅದೇ ಲಾಗಿನ್ ನ್ನು ಬಳಸಿ ಅಥವಾ ನೀವು ಪ್ಲೇಸ್ಟೇಷನ್, ಎಕ್ಸ್ ಬಾಕ್ಸ್, ನಿಂಟೆಂಡೋ, ಫೇಸ್ ಬುಕ್ ಅಥವಾ ಗೂಗಲ್ ಲಾಗಿನ್ ಕ್ರಿಡೆನ್ಶಿಯಲ್ಸ್ ಗಳನ್ನು ಹೊಸದಾಗಿ ಕ್ರಿಯೇಟ್ ಮಾಡಲು ಬಳಕೆ ಮಾಡಬಹುದು.

4. ಒಮ್ಮೆ ಮುಗಿದ ನಂತರ ನೀವು ಲಿಸ್ಟ್ ನಲ್ಲಿ ನಿಮ್ಮ ಡಿವೈಸ್ ನ್ನು ಆಯ್ಕೆ ಮಾಡಿಕೊಳ್ಳಬಹುದು.

ಇದೀಗ ನೀವು ವೈಟಿಂಗ್ ಲಿಸ್ಟ್ ನಲ್ಲಿರುತ್ತೀರಿ. ನಂತರ ಇಮೇಲ್ ಇನ್ವೈಟ್ ಗಾಗಿ ನೀವು ಕಾಯಬೇಕು.

ಇನ್ಸ್ಟಾಲರ್ ಮತ್ತು ಗೇಮ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ:

ಇನ್ಸ್ಟಾಲರ್ ಮತ್ತು ಗೇಮ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ:

ಇನ್ವೈಟ್ ರಿಸೀವ್ ಮಾಡಿದ ನಂತರ, ಎರಡು ಆಪ್ ಗಳನ್ನು ನೀವು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬೇಕು-ಫೋರ್ಟ್ ನೈಟ್ ಇನ್ಸ್ಟಾಲರ್ ಮತ್ತು ಗೇಮ್.ಇಮೇಲ್ ಇನ್ವೈಟ್ ನಿಂದ ಇನ್ಸ್ಟಾಲರ್ ಎಪಿಕೆಯನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ. Make sure to turn on the ಇನ್ಸ್ಟಾಲರ್ ನ್ನು ಇನ್ಸ್ಟಾಲ್ ಮಾಡುವುದಕ್ಕೆ 'Unknown sources' ನ್ನು ಟರ್ನ್ ಆನ್ ಮಾಡಿರುವುದನ್ನು ಮರೆಯಬೇಡಿ.

ಈಗ ಇನ್ಸ್ಟಾಲರ್ ನ್ನು ತೆರೆಯಿರಿ ಮತ್ತು ಸ್ವಯಂಚಾಲಿತವಾಗಿ ಇದು ಫೋರ್ಟ್ ನೈಟ್ ಗೇಮ್ ನ್ನು ಡೌನ್ ಲೋಡ್ ಮಾಡುವುದಕ್ಕೆ ಆರಂಭಿಸುತ್ತದೆ. ಒಮ್ಮೆ ಡೌನ್ ಲೋಡ್ ಮುಗಿದ ನಂತರ ನೀವು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಈ ಗೇಮ್ ಆಡಲು ಸಾಧ್ಯವಾಗುತ್ತದೆ.

Best Mobiles in India

English summary
How to install Fortnite on Android smartphones. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X