TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಡೆಸ್ಕ್ ಟಾಪ್ ನಲ್ಲಿ ಆಗುವ ಕೆಲಸ ಮೊಬೈಲ್ ನಲ್ಲೇ ಆದ್ರೆ ಎಷ್ಟು ಚೆನ್ನಾಗಿರುತ್ತೆ ಅಂತ ಅದೆಷ್ಟೊ ಸಲ ಅನ್ನಿಸುತ್ತೆ ಅಲ್ವಾ? ಆದರೆ ಕೆಲವು ಸಂಗತಿಗಳು ಡೆಸ್ಕ್ ಟಾಪ್ ನಲ್ಲಿ ಮಾತ್ರ ಆಗುತ್ತದೆ ಎಂದು ನಾವು ಭಾವಿಸಿರುತ್ತದೆ. ಒಂದು ವಿಚಾರ ನೆನಪಿಡಿ. ಆ ಕಾಲ ಹೋಯ್ತು.
ನಮ್ಮ ತಂತ್ರಜ್ಞಾನ ದುನಿಯಾ ದಿನದಿಂದ ದಿನಕ್ಕೆ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ. ಎಲ್ಲಾ ಕೆಲಸಗಳು ಬೆರಳ ತುದಿಯಲ್ಲೇ ಆಗಬೇಕು ಎಂದು ಬಯಸುವ ಜನರಿಗೆ ತಂತ್ರಜ್ಞಾನವೂ ಸಹಕಾರ ನೀಡುತ್ತಿದೆ. ಅದರಲ್ಲೊಂದು ನಾವು ಇವತ್ತು ಈ ಲೇಖನದಲ್ಲಿ ತಿಳಿಸುವ ವಿಚಾರವೂ ಹೌದು.
ಹೆಚ್ಚಿನ ಆಂಡ್ರಾಯ್ಡ್ ಬಳಕೆದಾರರಿಗೆ ಅಸಾಧ್ಯವಾಗಿರುವ ಕೆಲಸ ಅಂದರೆ ಅದು ಆಂಡ್ರಾಯ್ಡ್ ನಲ್ಲಿ ಕ್ರೋಮ್ ಆಪ್ ಮತ್ತು ಎಕ್ಸ್ ಟೆಷನ್ ಗಳನ್ನು ಹೇಗೆ ಇನ್ಸ್ಟಾಲ್ ಮಾಡುವುದು ಎಂಬ ವಿಚಾರ. ಆದರೆ ಈಗ ಅದು ಸಾಧ್ಯವಿದೆ. ಕೆಲವು ಸರಳ ಹಂತಗಳನ್ನು ಅನುಸರಿಸಿ ಕ್ರೋಮ್ ನ ಫಂಕ್ಷನಾಲಿಟಿ ಮತ್ತು ಎಕ್ಸ್ ಟೆಷನ್ ಗಳನ್ನು ಆಂಡ್ರಾಯ್ಡ್ ನಲ್ಲೇ ಬಳಸಬಹುದು. ಹಾಗಾದ್ರೆ ಹೇಗೆ ಇದನ್ನು ಸಾಧಿಸುವುದು ಎಂಬ ಬಗೆಗಿನ ಸಂಪೂರ್ಣ ವಿವರವನ್ನು ಈ ಕೆಳಗೆ ಬರೆದಿದ್ದೇವೆ. ದಯವಿಟ್ಟು ಗಮನಿಸಿ.
ಗೂಗಲ್ ಕ್ರೋಮ್ ಅಥವಾ ಸರಳವಾಗಿ ಕ್ರೋಮ್ ಒಂದು ಪ್ರಸಿದ್ಧವಾದ ವೆಬ್ ಬ್ರೌಸರ್ ಆಗಿದೆ ಮತ್ತು ಅಡ್ವಾನ್ಸ್ಡ್ ವೆಬ್ ಬ್ರೌಸರ್ ಗಳು ಡೆಸ್ಕ್ ಟಾಪ್ , ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಗಳಿಗೆ ಲಭ್ಯವಿದೆ. ಕೆಲವು ಫ್ಲಾಟ್ ಫಾರ್ಮ್ ಗಳು ಅಥವಾ ಡಿವೈಸ್ ಗಳಿಗೆ ಮೇಲ್ದರ್ಜೆಯ ಫೋನ್ ಡಿವೈಸ್ ಗೆ ಹೋಲಿಸಿದರೆ ಕೆಲವು ಮಿತಿಗಳು ಅಥವಾ ನಿರ್ಬಂಧಗಳಿರುತ್ತವೆ. ಅದೇ ರೀತಿ ಕ್ರೋಮ್ ಕೂಡ ಅಷ್ಟೇ.. ಡೆಸ್ಕ್ ಟಾಪ್ ನಲ್ಲಿರುವ ಕ್ರೋಮ್ ನಿಂದ ಎಕ್ಸ್ ಟೆಷನ್ ಮತ್ತು ಬ್ರೌಸರ್ ನ ಒಳಗಿರುವ ಆಪ್ ಗಳನ್ನು ಸುಲಭದಲ್ಲಿ ಇನ್ಸ್ಟಾಲ್ ಮಾಡಬಹುದು ಆದರೆ ಅದು ಸ್ಮಾರ್ಟ್ ಫೋನ್ ಗಳಲ್ಲಿ ಸಾಧ್ಯವಿಲ್ಲ.
ಆಂಡ್ರಾಯ್ಡ್ ನಲ್ಲಿ, ಇದು ಸಾಧ್ಯವಿಲ್ಲ ಎಂದೇ ಭಾವಿಸಲಾಗಿತ್ತು, ಆದರೆ ಕೆಲವು ಮಾರ್ಗಗಳಿವೆ ಆ ಮೂಲಕ ಈ ಕೆಲಸವನ್ನು ಸಾಧಿಸಿಕೊಳ್ಳಬಹುದು. ಈ ಲೇಖನದಲ್ಲಿ ನಾವು ಆಂಡ್ರಾಯ್ಡ್ ನಲ್ಲಿರುವ ಕ್ರೋಮ್ ಮೂಲಕ ಹೇಗೆ ಕ್ರೋಮ್ ಆಪ್ ಮತ್ತು ಎಕ್ಸ್ ಟೆಷನ್ ಗಳನ್ನು ಇನ್ಸ್ಟಾಲ್ ಮಾಡಿ ರನ್ ಮಾಡಬಹುದು ಎಂಬ ಬಗ್ಗೆ ತಿಳಿಸಲಿದ್ದೇವೆ.
ನಿಮಗೂ ಕೂಡ ಈ ವಿಚಾರದ ಬಗ್ಗೆ ಆಸಕ್ತಿಯಿದ್ದರೆ ಲೇಖನದ ಮುಂದಿನ ಭಾಗವನ್ನು ಓದಿ ನಾವು ತಿಳಿಸಿರುವ ಹಂತಗಳನ್ನು ಅನುಸರಿಸಿ. ಲೇಖನದ ಅಂತ್ಯದ ವರೆಗೂ ಓದಿದರೆ ಮಾತ್ರ ನಿಮಗೆ ಸಂಪೂರ್ಣ ಮಾಹಿತಿ ಲಭ್ಯವಾಗಲು ಸಾಧ್ಯವಿದೆ. ಹಾಗಾದ್ರೆ ಹೇಗೆ ಈ ಕೆಲಸವನ್ನು ಸಾಧಿಸುವುದು ಎಂಬ ಬಗ್ಗೆ ತಿಳಿಯೋಣ ಬನ್ನಿ..
ಆಂಡ್ರಾಯ್ಡ್ ನಲ್ಲಿ ಕ್ರೋಮ್ ಆಪ್ ಮತ್ತು ಎಕ್ಸ್ ಟೆಷನ್ ರನ್ ಮಾಡಲು ಅನುಸರಿಸಬೇಕಾದ ಹಂತಗಳು
#1 Yandex ಅನ್ನುವುದು ಒಂದು ಬ್ರೌಸರ್ ಆಗಿದ್ದು ಅದನ್ನು ಆಂಡ್ರಾಯ್ಡ್ ಗಾಗಿಯೇ ಮಾಡಲಾಗಿದೆ ಮತ್ತು ಇದು ಕ್ರೋಮ್ ಬ್ರೌಸರ್ ನ ಕೋಡ್ ಗಳನ್ನೋ ಒಳಗೊಂಡಿದೆ. ಈ ಬ್ರೌಸರ್ ನ್ನು ಗೂಗಲ್ ಪ್ಲೋ ಸ್ಟೋರ್ ನಲ್ಲಿ ಸುಲಭದಲ್ಲಿ ಗುರುತಿಸಬಹುದು.ಈ ಬ್ರೌಸರ್ ನ್ನು ನಿಮ್ಮ ಆಂಡ್ರಾಯ್ಡ್ ಡಿವೈಸ್ ನಲ್ಲಿ ಇನ್ಸ್ಟಾಲ್ ಮಾಡಿ. ಆ ಮೂಲಕ ಮುಂದಿನ ಹಂತಕ್ಕೆ ತೆರಳಬಹುದು ಮತ್ತು ಕ್ರೋಮ್ ಆಪ್ ಮತ್ತು ಎಕ್ಸ್ ಟೆಷನ್ ಗಳನ್ನು ಇನ್ಸ್ಟಾಲ್ ಮಾಡಬಹುದು.
#2 ಒಮ್ಮೆ Yandex ಬ್ರೌಸರ್ ನಿಮ್ಮ ಡಿವೈಸ್ ನಲ್ಲಿ ಇನ್ಸ್ಟಾಲ್ ಆದ ನಂತರ, ಬ್ರೌಸರ್ ನ್ನು ಫಾಲೋ ಮಾಡಿ ಈ ಕೆಳಗೆ ತಿಳಿಸುವ ಅಡ್ರೆಸ್ ಬಾರ್ ನ್ನು ಹೆಡ್ ಮಾಡಿ.ಇದನ್ನು ಬರೆಯಿರಿ. https://chrome.google.com/webstore/ inside there
ಮತ್ತು ನಂತರ ನೀವು ಇಚ್ಛಿಸುವ ಎಕ್ಸ್ ಟೆಷನ್ ಅಥವಾ ಕ್ರೋಮ್ ಆಪ್ ನ್ನು ಹುಡುಕಾಡಿ.ನೀವು ಯಾವುದೇ ಒಂದು ಇನ್ಸ್ಟಾಲೇಷನ್ ಹುಡುಕಿದರೂ ಮುಂದಿನ ಹಂತಕ್ಕೆ ತೆರಳಿ.ನಿಮ್ಮ ಡೆಸ್ಕ್ ಟಾಪ್ ವರ್ಷನ್ ನ ಗೂಗಲ್ ಕ್ರೋಮ್ ನಲ್ಲಿ ಗುರುತಿಸಬಹುದಾದ ಸಾಕಷ್ಟು ಎಕ್ಸ್ ಟೆಷನ್ ಗಳು ಇಲ್ಲಿ ಲಭ್ಯವಿರುತ್ತದೆ.
#3 ಕ್ರೋಮ್ ನ ಎಕ್ಸ್ ಟೆಷನ್ ಗಾಗಿ ಕೇವಲ ಒಂದು ಇನ್ಸ್ಟಾಲ್ ಬಟನ್ ಪೇಜ್ ನಲ್ಲಿ ಬಳಕೆ ಮಾಡಿ ಮತ್ತು ಕ್ಲಿಕ್ಕಿಸಿ. ನಂತರ Yandex ಬ್ರೌಸರ್ ನಲ್ಲಿ ಇನ್ಸ್ಟಲೇಷನ್ ಪ್ರಾರಂಭವಾಗುತ್ತದೆ. ಅಲ್ಲಿ ನಿಮಗೆ ಒಂದು ಪಾಪ್ ಅಪ್ ಕಾಣಿಸುತ್ತದೆ ಅದು ಆಡ್ ಆನ್ ಇನ್ಸ್ಟಲೇಷನ್ ಮತ್ತು ನೀವು ಆ ಇನ್ಸ್ಟಲೇಷನ್ ನ್ನು ಸ್ವೀಕರಿಸಬೇಕು.
#4 ಯಶಸ್ವಿ ಇನ್ಸ್ಟಲೇಷನ್ ಬಗ್ಗೆ ಎಕ್ಸ್ ಟೆಷನ್ ನ್ನು ಪರೀಕ್ಷಿಸಿ, ಮೆನು ಆಯ್ಕೆಯಲ್ಲಿರುವ ಮೂರು ಚುಕ್ಕಿಗಳನ್ನು ಟ್ಯಾಪ್ ಮಾಡಿ ಮತ್ತು ಎಕ್ಸ್ ಟೆಷನ್ ಗೆ ತೆರಳಿ. ನೀವು ಆಡ್ ಮಾಡಿದ ಎಕ್ಸ್ ಟೆಷನ್ ನ್ನು ಅಲ್ಲಿ ಕಾಣಬಹುದು. ಇದು ನೀವು ಡೆಸ್ಕ್ ಟಾಪ್ ವರ್ಷನ್ ನಲ್ಲಿ ಬಳಸುವ ಸೇಮ್ ಫಂಕ್ಷನಾಲಿಟಿ ಆಗಿರುತ್ತದೆ. ಅಷ್ಟೇ ಅಲ್ಲ ನೀವು ಈ ಎಕ್ಸ್ ಟೆಷನ್ ಗಳನ್ನು ಮ್ಯಾನೇಜ್ ಕೂಡ ಮಾಡಬಹುದು ಮತ್ತು ಅವುಗಳನ್ನು ಪ್ರೈವೇಟ್ ಬ್ರೌಸಿಂಗ್ ಟ್ಯಾಬ್ ನಲ್ಲಿ ಸೇರಿಸಬಹುದು.
#5 ಈ ವಿಧದಲ್ಲಿ ನೀವು ಎಷ್ಟು ಬೇಕಾದರೂ ಎಕ್ಸ್ ಟೆಷನ್ ಗಳನ್ನು ಸೇರಿಸಬಹುದು. ಇವತ್ತಿನಿಂದಲೇ ನಿಮ್ಮ ಮೊಬೈಲ್ ನಲ್ಲಿ ಇದರ ಬಳಕೆಯನ್ನು ನೀವು ಮಾಡಬಹುದು. ಇದು ನಿಮ್ಮ ಹಲವು ಸಮಯವನ್ನು ಉಳಿಸುತ್ತದೆ ಮತ್ತು ನಿಮ್ಮ ಫೇವರೆಟ್ ಡೆಸ್ಕ್ ಟಾಪ್ ಕ್ರೋಮ್ ನ ಸೆಟ್ ಅಪ್ ಅನ್ನು ನಿಮ್ಮ ಕೈಯಲ್ಲಿರುವ ಫೋನಿನಲ್ಲೇ ಹೊಂದಬಹುದು.
ಎಸ್.. ಇಲ್ಲಿಗೆ ನಿಮ್ಮ ಕೆಲಸ ಮುಗಿದಂತೆ. ಕೆಲವು ಸಿಂಪಲ್ ಎಕ್ಸ್ ಟೆಷನ್ ಫೈಲ್ ಗಳ ಕೆಲಸಕ್ಕಾಗಿ ಗಂಟೆಗಟ್ಟಲೆ ಆಫೀಸಿನಲ್ಲೇ ಕೂರಬೇಕಾಗಿಲ್ಲ. ಅಥವಾ ಡೆಸ್ಕ್ ಟಾಪ್ ಮುಂದೆ ಕುಳಿತಿರಬೇಕಾದ ಪ್ರಮೇಯವೂ ಇಲ್ಲ. ನಿಮ್ಮ ಕೆಲಸವನ್ನು ಆಂಡ್ರಾಯ್ಡ್ ಫೋನ್ ಒಂದಿದ್ದರೆ ಬಸ್ಸಲ್ಲಿ ಟ್ರಾವೆಲ್ ಮಾಡುತ್ತಲೂ ಮಾಡಬಹುದು. ಬಾತ್ ರೂಮ್ ನಲ್ಲಿ ಕುಳಿತೂ ಮಾಡಬಹುದು. ಒಟ್ಟಾರೆ ನಿಮಗೂ ಈ ವೈಶಿಷ್ಟ್ಯದ ಅಗತ್ಯತೆ ಇದ್ದರೆ ಕೂಡಲೇ ಟ್ರೈ ಮಾಡಬಹುದು.