PUBG ಗೇಮ್‌ನಲ್ಲಿ ನಿಮ್ಮ ಆರೋಗ್ಯ ವೃದ್ಧಿಸುವುದು ಹೇಗೆ..?

|

ಪಿಯುಬಿಜಿ ಅಥವಾ ಪ್ಲೇಯರ್ ಅನ್ ನೋನ್ ಬ್ಯಾಟಲ್ ಗ್ರೌಂಡ್ ಆಟವು ಒಂದು ಬ್ಯಾಟಲ್ ರಾಯಲ್ ಕಾನ್ಸೆಪ್ಟ್ ಆಗಿದ್ದು 100 ಆಟಗಾರರು ಒಂದು ಐಲ್ಯಾಂಡ್ ನಲ್ಲಿ ಪ್ಯಾರಾಚೂಟ್ ಮೂಲಕ ಲ್ಯಾಂಡ್ ಆಗುತ್ತಾರೆ ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಾರೆ ಮತ್ತು ಆಟದ ಅಂತ್ಯದವರೆಗೆ ಉಳಿಯುವಿಕೆಗಾಗಿ ಹೋರಾಡುತ್ತಾರೆ.

PUBG ಗೇಮ್‌ನಲ್ಲಿ ನಿಮ್ಮ ಆರೋಗ್ಯ ವೃದ್ಧಿಸುವುದು ಹೇಗೆ..?

ಈ ಆಟದ ಪ್ರಮುಖ ಅಂಶವೆಂದರೆ ಬದುಕುಳಿಯುವುದು ಮತ್ತು 99 ಇತರ ಆಟಗಾರರು ನಿಮ್ಮನ್ನು ಕೊಲ್ಲಲು ಪ್ರಯತ್ನಿಸುವುದರಿಂದಾಗಿ ನೀವು ಆಟದಲ್ಲಾಗುವ ಗಾಯವನ್ನು ವಾಸಿ ಮಾಡಿಕೊಳ್ಳುವುದು ಆಟದ ಪ್ರಮುಖ ಅಂಶವಾಗಿದೆ. ಆದರೆ ಉತ್ತಮ ತಂತ್ರ ಮತ್ತು ಪ್ರತಿತಂತ್ರದ ಮೂಲಕ ನೀವು ಆಟದಲ್ಲಿ ಬದುಕುಳಿಯಲು ಸಾಧ್ಯವಿದೆ. ಇದನ್ನು ಸಾಧಿಸುವುದಕ್ಕಾಗಿ ಇರುವ ಒಂದು ಅಂಶವೆಂದರೆ ಅದು ನಿಮ್ಮ ಆರೋಗ್ಯ.

ಶೇ.75ರಷ್ಟು ಆರೋಗ್ಯ ಹೆಚ್ಚಳ

ಶೇ.75ರಷ್ಟು ಆರೋಗ್ಯ ಹೆಚ್ಚಳ

ಈ ಆಟದಲ್ಲಿನ ಆರೋಗ್ಯವು ಸ್ವಯಂಚಾಲಿತವಾಗಿ ಪುನಃ ನಿರ್ಮಾಣವಾಗುವುದಿಲ್ಲ. ಆಟದ ಸಮಯದಲ್ಲಿ ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸಲು ಕೆಲವು ಮಾರ್ಗಸೂಚಿಗಳಿವೆ. ಅವುಗಳಲ್ಲಿ ಕೆಲವು ಶೇಕಡಾ 75 ರ ವರೆಗೆ ನಿಮ್ಮ ಆರೋಗ್ಯವನ್ನು ಹೆಚ್ಚಿಸಲು ನೆರವು ನೀಡುತ್ತದೆ. ಇಲ್ಲಿರುವ ಬಹುದೊಡ್ಡ ಪ್ರಶ್ನೆಯೆಂದರೆ ಈ ಆರೋಗ್ಯವನ್ನು ಶೇಕಡಾ 100 ರಷ್ಟು ಹೆಚ್ಚಿಸಿಕೊಳ್ಳುವುದು ಹೇಗೆ? ಒಂದು ವೇಳೆ ನೀವು ಈ ವಿಚಾರದಲ್ಲಿ ಆಸಕ್ತರಾಗಿದ್ದರೆ ಮತ್ತು ತಿಳಿದುಕೊಳ್ಳುವ ಕುತೂಹಲವಿದ್ದರೆ ಇದನ್ನು ಸಾಧಿಸುವುದು ಹೇಗೆ ಎಂಬ ಬಗ್ಗೆ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ. ಮಾಹಿತಿಗಳ ಆರಂಭಕ್ಕೂ ಮುನ್ನ ನೀವು ತಿಳಿದುಕೊಳ್ಳಬೇಕಾಗಿರುವ ಅಂಶವೆಂದರೆ ಆಟದಲ್ಲಿರುವ ಗುಣಪಡಿಸುವ ವಸ್ತುಗಳು ಯಾವುವು ಎಂಬ ಬಗ್ಗೆ.

ಆರೋಗ್ಯ ವಸ್ತುಗಳು: ಆರೋಗ್ಯವನ್ನು ತಕ್ಷಣವೇ ಪುನರ್ ಸ್ಥಾಪಿಸುತ್ತದೆ

ಆರೋಗ್ಯ ವಸ್ತುಗಳು: ಆರೋಗ್ಯವನ್ನು ತಕ್ಷಣವೇ ಪುನರ್ ಸ್ಥಾಪಿಸುತ್ತದೆ

1. ಮೆಡ್ ಕಿಟ್: ಇದನ್ನು ಹುಡುಕುವುದು ಭಾರೀ ಕಷ್ಟ ಆದರೆ ಆಟದಲ್ಲಿರುವ ವಾಸಿ ಮಾಡುವ ಬೆಸ್ಟ್ ವಸ್ತು ಎಂದರೆ ಇದೇ. ಇದು ಹೆಚ್ಚು ಕಡಿಮೆ 8 ಸೆಕೆಂಡ್ ಗಳನ್ನು ಗಾಯ ವಾಸಿ ಮಾಡಲು ತೆಗೆದುಕೊಳ್ಳುತ್ತದೆ ಮತ್ತು ಶೇಕಡಾ 100 ರಷ್ಟು ನಿಮ್ಮ ಆರೋಗ್ಯವನ್ನು ಚೇತರಿಸುತ್ತದೆ.

2. ಫಸ್ಟ್ ಏಡ್ ಕಿಟ್: ಇದು ಎರಡನೇ ಅತ್ಯುತ್ತಮ ಆಯ್ಕೆ. ಇದು ಶೇಕಡಾ 75 ರ ವರೆಗೆ ನಿಮ್ಮ ಆರೋಗ್ಯವನ್ನು ಚೇತರಿಸುತ್ತದೆ. ಆದರೆ ಇದನ್ನು ಹುಡುಕುವುದು ಸ್ವಲ್ಪ ಸುಲಭವೇ ಆಗಿದೆ.

3. ಬ್ಯಾಂಡೇಜ್: ಇದು ಸಾಮಾನ್ಯವಾಗಿ ದೊರೆಯುತ್ತದೆ ಮತ್ತು ಆಟದ ಯಾವುದೇ ಭಾಗದಲ್ಲಿಯಾದರೂ ಸುಲಭದಲ್ಲಿ ದೊರೆಯುವ ಆರೋಗ್ಯದ ವಸ್ತು ಇದಾಗಿದೆ. ಇದು ಐದೈದು ಗುಂಪಿನೊಂದಿಗೆ ಲಭ್ಯವಾಗುತ್ತದೆ ಮತ್ತು ದುರ್ಬಲವಾಗಿರುವ ಒಂದು ವಸ್ತುವಾಗಿದೆ. 7 ಸೆಕೆಂಡ್ ಗಳಲ್ಲಿ ಆರೋಗ್ಯವನ್ನು ಶೇಕಡಾ 75 ರಷ್ಟು ಸುಧಾರಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ಬೂಸ್ಟರ್ ಐಟಂಗಳು: ಕೆಲವು ಸಮಯದಲ್ಲಿ ಆರೋಗ್ಯವನ್ನು ಪುನಃಶ್ಚೇತನಗೊಳಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ

ಬೂಸ್ಟರ್ ಐಟಂಗಳು: ಕೆಲವು ಸಮಯದಲ್ಲಿ ಆರೋಗ್ಯವನ್ನು ಪುನಃಶ್ಚೇತನಗೊಳಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ

1. ನೋವು ನಿವಾರಕಗಳು: ನೋವು ನಿವಾರಕಗಳು (ಪೈಯನ್ ಕಿಲ್ಲರ್ ಗಳು) ನಿಮ್ಮ ಬೂಸ್ಟರ್ ಬಾರ್ ನಲ್ಲಿ ಶೇಕಡಾ 60 ರಷ್ಟು ಫಿಲ್ ಅಪ್ ಆಗುತ್ತದೆ ಮತ್ತು 7 ಸೆಕೆಂಡ್ ಗಳನ್ನು ಇದು ತೆಗೆದುಕೊಳ್ಳುತ್ತದೆ.

2. ಶಕ್ತಿವರ್ಧಕ ಪಾನೀಯಗಳು(ಎನರ್ಜಿ ಡ್ರಿಂಕ್):ಇದು ಅತೀ ಕಡಿಮೆ ಶಕ್ತಿಯನ್ನು ಹೊಂದಿರುವ ಬೂಸ್ಟರ್ ಆಗಿದೆ.ಸುಲಭದಲ್ಲಿ ದೊರಕುತ್ತದೆ. ಬೂಸ್ಟರ್ ಬಾರ್ ನ್ನು ಶೇಕಡಾ 40 ರಷ್ಟು ತುಂಬಿಸಲು ಇದು 4 ಸೆಕೆಂಡ್ ಗಳನ್ನು ತೆಗೆದುಕೊಳ್ಳುತ್ತದೆ.

3. ಅಡ್ರಿನಾಲಿನ್ ಸಿರಿಂಜ್:- ಮೇಲಿನವುಗಳಲ್ಲಿ ಇದು ಅತೀ ಕಡಿಮೆ ಲಭ್ಯತೆಯನ್ನು ಹೊಂದಿರುತ್ತದೆ. ಸಪ್ಲೈ ಕ್ರೇಟ್ಸ್ ಗಳಲ್ಲಿ ಲಭ್ಯವಾಗುತ್ತದೆ. ಇದನ್ನು ಬಳಸಲು 10 ಸೆಕೆಂಡ್ ಗಳ ಕಾಲಾವಧಿ ಇರುತ್ತದೆ ಮತ್ತು ಬೂಸ್ಟರ್ ಬಾರ್ ಗೆ ಅತೀ ಹೆಚ್ಚಿನ ಶಕ್ತಿಯನ್ನು ಇದು ನೀಡುತ್ತದೆ.

ಬಳಕೆ ಹೇಗೆ..?

ಬಳಕೆ ಹೇಗೆ..?

ಈಗ ನೀವು ವಸ್ತುಗಳು ಮತ್ತು ಅವುಗಳ ಬಳಕೆಯ ಬಗ್ಗೆ ತಿಳಿದುಕೊಂಡಿದ್ದೀರಿ. ಇದಕ್ಕೆ ಸಂಬಂಧಿಸಿದಂತೆ ಕೆಲವು ಸಲಹೆಗಳನ್ನು ಈ ಕೆಳಗೆ ಗಮನಿಸೋಣ.

ನೀವು ಮುಂದಿನ ಬ್ಯಾಟಲ್ ಅಥವಾ ಯುದ್ಧಕ್ಕೆ ಸಿದ್ಧ ಎಂಬುದನ್ನು ಸೂಚಿಸುವುದೇ ಆಟದ ಕ್ಷಣದಲ್ಲಿನ ನಿಮ್ಮ ಆರೋಗ್ಯ. ಹಾಗಾಗಿ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳುವುದು ಬಹಳ ಮುಖ್ಯ.

- ನಿಮ್ಮ ಬ್ಯಾಗ್ ಗೆ ಕಡಿಮೆ ಜಾಗವಿರುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ಮತ್ತು ಬೂಸ್ಟ್ ಐಟಂಗಳ ಜೊತೆಗೆ ನೀವು ಇತರೆ ವಸ್ತುಗಳನ್ನು ಕೂಡ ಬ್ಯಾಗ್ ನಲ್ಲಿ ತುಂಬಿಸಿಕೊಂಡು ತೆಗೆದುಕೊಂಡು ಹೋಗಬೇಕಾಗುತ್ತದೆ. ಹಾಗಾಗಿ ಮೇಲೆ ತಿಳಿಸಿದ ಎಲ್ಲಾ ವಸ್ತುಗಳಿಗೆ ಬೇಕಾಗುವ ಬ್ಯಾಗಿನ ಸ್ಥಳಾವಕಾಶದ ಬಗ್ಗೆ ನಿಮಗೆ ಅರಿವಿರಬೇಕು. ಮೆಡ್ ಕಿಟ್ ಮತ್ತು ಫಸ್ಟ್ ಏಡ್ ಕಿಟ್ ಇತರೆ ವಸ್ತುಗಳಿಗಿಂತ ಹೆಚ್ಚು ಜಾಗವನ್ನು ಅವಲಂಬಿಸಿರುತ್ತದೆ. ಹಾಗಾಗಿ ಎರಡು ಅಥವಾ 3 ಈ ವಸ್ತುಗಳನ್ನು ಕ್ಯಾರಿ ಮಾಡಲು ಸೂಚಿಸಲಾಗುತ್ತದೆ . ಉಳಿದವುಗಳನ್ನು ನೀವು ಬೂಸ್ಟರ್ ಮೂಲಕ ಮ್ಯಾನೇಜ್ ಮಾಡಬಹುದು.

- ಸಣ್ಣ ಪುಟ್ಟ ಡ್ಯಾಮೇಜ್ ಗಳಲ್ಲಿ ಬ್ಯಾಂಡೇಜ್ ಗಳನ್ನು ಬಳಸಬಹುದು ಯಾಕೆಂದರೆ ಅದು ವೇಗವಾಗಿ ಲಭ್ಯವಾಗುತ್ತದೆ ಮತ್ತು ಇತರೆ ಎರಡಕ್ಕಿಂತ ಕಡಿಮೆ ಜಾಗವನ್ನು ಇದು ಬಳಸುತ್ತದೆ.

- ಮಾರುವೇಷಕ್ಕೆ ಆಶಿರ್ವಾದ ನೀಡುವಂತಹ ವಸ್ತುವೆಂದರೆ ನಿಮ್ಮಲ್ಲಿ ಅಧಿಕವಾಗಿ ಸ್ಟಾಕ್ ಮಾಡಿಕೊಂಡಿರುವ ಬೂಸ್ಟರ್ ಗಳು ಎಂದೇ ಹೇಳಬಹುದು. ಹೋರಾಟದಲ್ಲಾಗುವ ಸಣ್ಣ ಡ್ಯಾಮೇಜ್ ಗಳ ಸಂದರ್ಬದಲ್ಲಿ ಅವುಗಳನ್ನು ಬಳಕೆ ಮಾಡಬಹುದು. ಅಥವಾ ನೀವು ನೀಲಿ ವೃತ್ತದ ಒಳಗೆ ಸಿಲುಕಿಕೊಂಡಿದ್ದಾಗಲೂ ಬಳಸಬಹುದು. ಕಡಿಮೆ ಅವಧಿಯಲ್ಲೇ ಈ ಬೂಸ್ಟರ್ ಗಳು ನಿಮ್ಮ ಆರೋಗ್ಯವನ್ನು ಪುನರ್ ಸ್ಥಾಪಿಸುತ್ತದೆ.

Best Mobiles in India

English summary
How to keep your health full during a gameplay in PUBG. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X