Subscribe to Gizbot

ನಿಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಸುರಕ್ಷಿತವಾಗಿರಿಸುವುದು ಹೇಗೆ?

Posted By: Tejaswini P G

ಸದಾ ನಮ್ಮ ಮಾಹಿತಿಯನ್ನು ಕದಿಯಲು ಹವಣಿಸುತ್ತಿರುವ ಹ್ಯಾಕರ್ಗಳಿಂದ ನಮ್ಮ ಸಾಮಾಜಿಕ ಜಾಲತಾಣದ ಖಾತೆಯನ್ನು ಸುರಕ್ಷಿತವಾಗಿರಿಸುವುದರಲ್ಲಿ ಫ್ರೈವೆಸಿ ಸೆಟ್ಟಿಂಗ್ ಗಳ ಪಾತ್ರ ದೊಡ್ಡದು.ಹಾಗೆಯೇ ಇನ್ಸ್ಟಾಗ್ರಾಮ್ ನ ಪ್ರೈವೆಸಿ ಸೆಟ್ಟಿಂಗ್ ಗಳು ಕೂಡ ಅನಾಮಧೇಯ ಸೈಬರ್ ಖದೀಮರಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಸಹಾಯಕವಾಗಿದೆ. ಆನ್ಲೈನ್ ಸಮುದಾಯದ ಜವಾಬ್ದಾರಿಯುತ ಸದಸ್ಯರಾಗಿ ನಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಮಾತ್ರವಲ್ಲದೇ ಇತರರಿಗೆ ಇದರ ಪ್ರೈವೆಸಿ ಮತ್ತು ಸೆಕ್ಯೂರಿಟಿ ಸೆಟ್ಟಿಂಗ್ ಗಳನ್ನು ಹೇಗೆ ಸರಿಯಾಗಿ ಬಳಸಬೇಕೆಂದು ತಿಳಿಸುವುದು ನಮ್ಮ ಕರ್ತವ್ಯವಾಗುತ್ತದೆ.

ನಿಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಸುರಕ್ಷಿತವಾಗಿರಿಸುವುದು ಹೇಗೆ?

ಈ ಲೇಖನದಲ್ಲಿ ನಾವು ನಿಮ್ಮ ಇನ್ಸ್ಟಾಗ್ರಾಮ್ ಖಾತೆಯ ರಕ್ಷಣೆಯ ಕುರಿತು ಮಾಹಿತಿ ನೀಡಲಿದ್ದೇವೆ. ಇನ್ಸ್ಟಾಗ್ರಾಮ್ ಖಾತೆಯನ್ನು ಸುರಕ್ಷಿತವಾಗಿರಿಸಲು ಸ್ವತಃ ಇನ್ಸ್ಟಾಗ್ರಾಮ್ ಸಂಸ್ಥೆಯು ಹೆಚ್ಚುವರಿ ಅಕೌಂಟ್ ಸೆಕ್ಯೂರಿಟಿ ಮತ್ತು ಗ್ರಾಫಿಕ್ ಕಂಟೆಂಟ್ ಹೊಂದಿರುವ ಕೆಲವು ಪೋಸ್ಟ್ಗಳ ಮೇಲೆ ಸೆನ್ಸಿಟಿವ್-ಕಂಟೆಂಟ್ ಸ್ಕ್ರೀನ್ ಅನ್ನು ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟೂ-ಫ್ಯಾಕ್ಟರ್ ಆಥೆಂಟಿಕೇಶನ್

ಟೂ-ಫ್ಯಾಕ್ಟರ್ ಆಥೆಂಟಿಕೇಶನ್

ಇದು ದೃಢೀಕರಣ ಪ್ರಕ್ರಿಯೆಯಲ್ಲಿ ಬಳಸಲಾಗುವ ಅತ್ಯಂತ ಸುರಕ್ಷಿತ ವಿಧಾನವಾಗಿದ್ದು, ನೀವು ಯಾವುದೋ ಅಜ್ಞಾತ ಸಾಧನದಿಂದ ನಿಮ್ಮ ಇನ್ಸ್ಟಾಗ್ರಾಮ್ ಖಾತೆಗೆ ಲಾಗಿನ್ ಆಗಲು ಪ್ರಯತ್ನಿಸಿದಾಗ ಯೂಸರ್ ನೇಮ್ ಮತ್ತು ಪಾಸ್ವರ್ಡ್ ನ ಜೊತೆಗೆ ಹೆಚ್ಚುವರಿ ಸೆಕ್ಯೂರಿಟಿ ಕೋಡ್ ಒಂದನ್ನು ನಮೂದಿಸುವಂತೆ ನಿಮ್ಮನ್ನು ಕೇಳಲಾಗುತ್ತದೆ. ಈ ಫೀಚರ್ ಅನ್ನು ಸಕ್ರಿಯಗೊಳಿಸಲು ಈ ಕೆಳಗಿನ ಸೂಚನೆಗಳನ್ನು ಅನುಸರಿಸಿ

ಹಂತ 1: ನಿಮ್ಮ ಪ್ರೊಫೈಲ್ ಗೆ ಹೋಗಿ ಮೇಲ್ಭಾಗದಲ್ಲಿ ಬಲಬದಿಯ ಮೂಲೆಯಲ್ಲಿ ಟ್ಯಾಪ್ ಮಾಡಿ

ಹಂತ 2: ಅಲ್ಲಿ ಬರುವ ಆಯ್ಕೆಗಳನ್ನು ಕೆಳಗೆ ಸ್ಕ್ರೋಲ್ ಮಾಡುತ್ತಾ 'ಟೂ-ಫ್ಯಾಕ್ಟರ್ ಆಥೆಂಟಿಕೇಶನ್' ಆಯ್ಕೆಯನ್ನು ಹುಡುಕಿ

ಹಂತ 3: ಇಲ್ಲಿ 'ರಿಕ್ವೈರ್ ಸೆಕ್ಯೂರಿಟಿ ಕೋಡ್' ಎಂಬ ಟಾಗಲ್ ಬಟನ್ ಅನ್ನು 'ಆನ್' ಮಾಡಿ

ನೀವು ಈಗಾಗಲೇ ನಿಮ್ಮ ಫೋನ್ ನಂಬರ್ ಅನ್ನು ಇದರೊಂದಿಗೆ ನೋಂದಾಯಿಸಿಕೊಳ್ಳದಿದ್ದಲ್ಲಿ ಈಗ ಅದನ್ನು ನೋಂದಾಯಿಸಿಕೊಳ್ಳಿ. ಈಗ ಸೆಕ್ಯೂರಿಟಿ ಕೋಡ್ ಅನ್ನು ನಿಮಗೆ ಕಳುಹಿಸಲಾಗುವುದು. ಆ ಕೋಡ್ ಅನ್ನು ನಮೂದಿಸಿ 'ನೆಕ್ಸ್ಟ್' ಮೇಲೆ ಕ್ಲಿಕ್ ಮಾಡಿ.

ಈ ಫೀಚರ್ ಅನ್ನು ನಿಷ್ಕ್ರಿಯಗೊಳಿಸಲು ಹೀಗೆ ಮಾಡಿ

ಈ ಫೀಚರ್ ಅನ್ನು ನಿಷ್ಕ್ರಿಯಗೊಳಿಸಲು ಹೀಗೆ ಮಾಡಿ

ಹಂತ 1: ನಿಮ್ಮ ಪ್ರೊಫೈಲ್ ಗೆ ಹೋಗಿ ಮೇಲ್ಭಾಗದಲ್ಲಿ ಬಲಬದಿಯ ಮೂಲೆಯಲ್ಲಿ ಟ್ಯಾಪ್ ಮಾಡಿ

ಹಂತ 2: ಅಲ್ಲಿ ಬರುವ ಆಯ್ಕೆಗಳನ್ನು ಕೆಳಗೆ ಸ್ಕ್ರೋಲ್ ಮಾಡುತ್ತಾ 'ಟೂ-ಫ್ಯಾಕ್ಟರ್ ಆಥೆಂಟಿಕೇಶನ್' ಆಯ್ಕೆಯನ್ನು ಹುಡುಕಿ

ಹಂತ 3: ಇಲ್ಲಿ 'ರಿಕ್ವೈರ್ ಸೆಕ್ಯೂರಿಟಿ ಕೋಡ್' ಎಂಬ ಟಾಗಲ್ ಬಟನ್ ಅನ್ನು 'ಆಫ್' ಮಾಡಿ

ಭಾರತದಲ್ಲಿ ಗೂಗಲ್‌ ಕಂಪೆನಿಗೆ 135.86 ಕೋಟಿ ರೂ.ದಂಡ!!..ಏಕೆ ಗೊತ್ತಾ?

ಬ್ಯಾಕಪ್ ಕೋಡ್

ಬ್ಯಾಕಪ್ ಕೋಡ್

ಟೂ-ಫ್ಯಾಕ್ಟರ್ ಆಥೆಂಟಿಕೇಶನ್ ಸಕ್ರಿಯವಾಗಿರುವಾಗ, ನೀವು ಅಜ್ಞಾತ ಸಾಧನದಿಂದ ಲಾಗಿನ್ ಮಾಡಿದಾಗಲೆಲ್ಲಾ ಮೇಲೆ ಹೇಳಿದಂತೆ ಅದು ನಿಮ್ಮನ್ನು ಬ್ಯಾಕಪ್ ಕೋಡ್ ಅಥವಾ SMS ಮೂಲಕ ಬಂದ ಸೆಕ್ಯೂರಿಟಿ ಕೋಡ್ ಅನ್ನು ನಮೂದಿಸುವಂತೆ ಕೇಳಿಕೊಳ್ಳುತ್ತದೆ. ಒಂದು ವೇಳೆ ಕನೆಕ್ಟಿವಿಟಿ ತೊಂದರೆಗಳಿಂದಾಗಿ ನಿಮಗೆ SMS ಸಿಗದಿರುವ ಸಂದರ್ಭಗಳಲ್ಲಿ ನೀವು ಬ್ಯಾಕಪ್ ಕೋಡ್ ಬಳಸಿ ನಿಮ್ಮ ಇನ್ಸ್ಟಾಗ್ರಾಮ್ ಖಾತೆಗೆ ಲಾಗಿನ್ ಆಗಬಹುದಾಗಿದೆ. ಬ್ಯಾಕಪ್ ಕೋಡ್ ಪಡೆಯಲು ಈ ಕೆಳಗಿನ ಸೂಚನೆಗಳನ್ನು ಅನುಸರಿಸಿ.

ಹಂತ 1: ನಿಮ್ಮ ಪ್ರೊಫೈಲ್ ಗೆ ಹೋಗಿ ಮೇಲ್ಭಾಗದಲ್ಲಿ ಬಲಬದಿಯ ಮೂಲೆಯಲ್ಲಿ ಟ್ಯಾಪ್ ಮಾಡಿ

ಹಂತ 2: ಅಲ್ಲಿ ಬರುವ ಆಯ್ಕೆಗಳನ್ನು ಕೆಳಗೆ ಸ್ಕ್ರೋಲ್ ಮಾಡುತ್ತಾ 'ಟೂ-ಫ್ಯಾಕ್ಟರ್ ಆಥೆಂಟಿಕೇಶನ್' ಆಯ್ಕೆಯನ್ನು ಹುಡುಕಿ

ಹಂತ 3: 'ಗೆಟ್ ಬ್ಯಾಕಪ್ ಕೋಡ್' ಮೇಲೆ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Privacy settings are important for our social media accounts to keep ourselves safe from hackers who are everywhere just waiting to poach things up. When it comes to Instagram, the privacy settings will help to keep ourselves safe from the anonymous cyber thief.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot