ಇತರರು ನಿಮ್ಮ ವೈಫೈ ಕದ್ದು ಬಳಸುತ್ತಿದ್ದಾರಾ?..ತಿಳಿಯೋದು ಹೇಗೆ?

|

ಇಂಟರ್ನೆಟ್ ಅಂದರೆ ಒಂದು ಕಾಲದಲ್ಲಿ ಏನೋ ವಿಚಿತ್ರ ಸಂಶೋಧನೆ ಆಗಿತ್ತು. ಆದರೆ ಈಗ ಪ್ರಪಂಚ ಬದಲಾಗಿದೆ. ಪ್ರತಿಯೊಬ್ಬರ ಜೋಬಿನಲ್ಲೂ ಇಂಟರ್ನೆಟ್ ಇರುತ್ತದೆ. ಪ್ರತಿ ಮನೆಯಲ್ಲೂ ಅಂತರ್ಜಾಲ ಸೇವೆ ಇರುತ್ತದೆ. ಆಫೀಸ್, ಸಾರ್ವಜನಿಕ ಸ್ಥಳಗಳಲ್ಲಿ, ಕೆಫೆ, ಹೋಟೆಲ್ ಗಳಲ್ಲೂ ಕೂಡ ವೈ-ಫೈ ಕನೆಕ್ಷನ್ ಇರುತ್ತದೆ. ಹೀಗಿರುವಾಗ ನಿಮ್ಮ ವೈಫೈ ಕನೆಕ್ಷನ್ ನ್ನು ಸುರಕ್ಷಿತವಾಗಿ ಇಟ್ಟುಕೊಳ್ಳದೇ ಇದ್ದಲ್ಲಿ ಖಂಡಿತ ಅದನ್ನು ಇತರರು ಬಳಕೆ ಮಾಡಿ ನಿಮ್ಮ ಇಂಟರ್ನೆಟ್ ಖಾಲಿ ಮಾಡಬಹುದು. ಹಾಗಾದ್ರೆ ಇತರರು ನಿಮ್ಮ ವೈಫೈ ಕದ್ದು ಬಳಸುತ್ತಿದ್ದಾರಾ? ತಿಳಿಯೋದು ಹೇಗೆ ಮತ್ತು ಅದನ್ನು ಸೆಕ್ಯೂರ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಇತರರು ನಿಮ್ಮ ವೈಫೈ ಕದ್ದು ಬಳಸುತ್ತಿದ್ದಾರಾ?..ತಿಳಿಯೋದು ಹೇಗೆ?

1.ನಿಧಾನಗತಿಯ ಅಂತರ್ಜಾಲ ಸಂಪರ್ಕ .
ನಿಮ್ಮ ವೈ-ಫೈ ಕನೆಕ್ಷನ್ ನಿಧಾನವಾಗುತ್ತಿದೆಯಾ? ಕೆಲವು ದಿನಗಳಿಂದ ನಿಮ್ಮ ಅಂತರ್ಜಾಲ ಸೇವೆಯ ವೇಗವು ಅತಿಯಾಗಿ ಕಡಿಮೆಯಾಗುತ್ತಿದೆಯಾ? ಹಾಗಾದ್ರೆ ಹೀಗೆ ನಿಮ್ಮ ಇಂಟರ್ನೆಟ್ ಸ್ಪೀಡ್ ಕಡಿಮೆಯಾಗುವುದಕ್ಕೆ ಹಲವು ಕಾರಣಗಳಿರಬಹುದು. ಸರ್ವರ್ ಸಮಸ್ಯೆ, ನೆಟ್ ವರ್ಕ್ ತಡೆಯುತ್ತಿರುವ ಸಾಧನಗಳು ಅಥವಾ ಯಾರೋ ನಿಮ್ಮ ಅಂತರ್ಜಾಲವನ್ನು ಕದ್ದು ಬಳಕೆ ಮಾಡುತ್ತಲೂ ಇರಬಹುದು.

2.ಕನೆಕ್ಟ್ ಆಗಿರುವ ಒಟ್ಟು ಡಿವೈಸ್ ಗಳ ಪಟ್ಟಿಯಲ್ಲಿ ಅಪರಿಚಿತ ಅನಾಹುತಕಾರಿ ಕನೆಕ್ಷನ್ ಗುರುತಿಸಿಕೊಳ್ಳಿ.
ಪ್ರತಿ ಡಿವೈಸ್ ಅಥವಾ ಪ್ರೈವೇಟ್ ನೆಟ್ ವರ್ಕ್ ಗೆ ಒಂದು unique IP ಮತ್ತು MAC ಅಡ್ರೆಸ್ ಇರುತ್ತದೆ. (ಅದರ ಹೆಸರುಗಳು 'ABC’s PC’ ಎಂದು ರ್ಯಾಂಡಮ್ ಆಗಿ ಇರಲೂ ಬಹುದು ಮತ್ತು ಓನರ್ ನೀಡಿದ ಹೆಸರೂ ಆಗಿರಬಹುದು) ಮತ್ತು ಕನೆಕ್ಟ್ ಆಗಿರುವ ಡಿವೈಸ್ ಗಳ ಲಿಸ್ಟ್ ನ್ನು ರೂಟರ್ ಸೆಟ್ಟಿಂಗ್ಸ್ ಮೂಲಕ ನೋಡಬಹುದು. ಹಾಗಾಗಿ, ಒಂದು ವೇಳೆ ನೀವು ಗುರುತಿಸಲು ಅಸಾಧ್ಯವಾಗುವ ಯಾವುದೇ ರ್ಯಾಂಡಮ್ ಹೆಸರನ್ನು ನಿಮ್ಮ ನೆಟ್ ವರ್ಕ್ ನಲ್ಲಿ ಗಮನಿಸಿದರೆ,ಅದು ಅಪರಿಚಿತರ ಅನಾಹುತಕಾರಿ ಕನೆಕ್ಷನ್ ಆಗಿರುವ ಸಾಧ್ಯತೆಗಳು ಅಧಿಕವಾಗಿದೆ ಎಂದರ್ಥ. ಒಂದು ವೇಳೆ ಈ ರೀತಿ ಹೆಸರು ಗಮನಿಸದೆ ಕೇವಲ ಒಟ್ಟು ಕನೆಕ್ಟ್ ಆಗಿರುವ ಡಿವೈಸ್ ಗಳ ಸಂಖ್ಯೆಯನ್ನು ಗಮನಿಸಿ ಹೇಳುವುದು ಸಾಧ್ಯವಿದ್ದರೂ ಕೂಡ ಅಪರಿಚಿತ ಕನೆಕ್ಷನ್ ಬಗ್ಗೆ ಅರಿಯಲು ಸಾಧ್ಯವಾಗುತ್ತದೆ.

ನಿಮ್ಮ ವೈ-ಫೈ ನೆಟ್ ವರ್ಕ್ ನ್ನು ಸೇಫ್ ಮಾಡಿಕೊಳ್ಳುವುದಕ್ಕೆ ಇರುವ ಕೆಲವು ಮಾರ್ಗಸೂಚಿಗಳು :

1.ಉದ್ದನೆಯ ಮತ್ತು ಕಠಿಣವಾಗಿರುವ WPA2 ಪಾಸ್ ವರ್ಡ್ ಇಟ್ಟುಕೊಳ್ಳುವುದು.
WPA2 ಒಂದು ಎನ್ಕ್ರಿಪ್ಟ್ ಆಗಿರುವ ಪ್ರೋಟೋಕಾಲ್ ಆಗಿರುತ್ತದೆ ಮತ್ತು ಇದು ವೈ-ಫೈ ಪ್ರೊಟೆಕ್ಟೆಟ್ ಆಕ್ಸಿಸ್ ಆಗಿರುತ್ತದೆ. WPA2 ಸದ್ಯದ ಹೊಸ ಮತ್ತು ಹಳೆಯದ್ದು ಅಂದರೆ WPA, WEP ಪ್ರೋಟೋಕಾಲ್ ಗಳಿಗಿಂತ ಹೆಚ್ಚು ಭದ್ರತೆ ನೀಡುತ್ತದೆ.ಒಬ್ಬ ಬಳಕೆದಾರರಾಗಿ ನೀವು ವೈ-ಫೈ ರೂಟರ್ ಮೂಲಕ WPA2 ಪಾಸ್ ವರ್ಡ್ ನ್ನು ಭದ್ರತೆಯಿಂದ ಸೆಟ್ ಮಾಡಬೇಕು ಮತ್ತು ಕಠಿಣ ಪಾಸ್ ವರ್ಡ್ ನಿಂದ ರಕ್ಷಣೆ ಮಾಡಿಕೊಳ್ಳಬೇಕು. ಉದ್ದನೆಯ ಮತ್ತು ಯಾರಿಂದಲೂ ಊಹಿಸಲು ಅಸಾಧ್ಯವಾಗಿರುವ ಪಾಸ್ ವರ್ ಇಟ್ಟುಕೊಳ್ಳುವುದು ಸೂಕ್ತ.

2.ರೂಟರ್ ಲಾಗಿನ್ ಮಾಹಿತಿಗಳನ್ನು ಬದಲಾಯಿಸುವುದು.
ಹೆಚ್ಚಿನ ವೈಫೈ ರೂಟರ್ ಗಳು ಈ ಎರಡು ಐಪಿ ಅಡ್ರೆಸ್ ನಿಂದ ಬರುತ್ತದೆ. 192.168.1.1 ಅಥವಾ 192.168.2.1 ಮತ್ತು ಇವುಗಳನ್ನು ಯಾವುದೇ ಬ್ರೌಸರ್ ನಿಂದ ಕೂಡ ಆಕ್ಸಿಸ್ ಮಾಡಬಹುದು. ಹೆಚ್ಚಿನ ರೂಟರ್ ತಯಾರಕರು 'root’ ಅಥವಾ 'admin’ ಪದಗಳನ್ನು ಲಾಗಿನ್ ಮತ್ತು ಪಾಸ್ ವರ್ಡ್ ಆಗಿ ಬಳಕೆ ಮಾಡುತ್ತಾರೆ ಮತ್ತು ಲಾಗಿನ್ ಆಗಿ ರೂಟರ್ ಸೆಟ್ಟಿಂಗ್ಸ್ ಗಳನ್ನು ಆಕ್ಸಿಸ್ ಮಾಡಬಹುದು. ಲಾಗಿನ್ ಸುಲಭವಾಗಿರುವುದರಿಂದಾಗಿ ಯಾರು ಬೇಕಿದ್ದರೂ ನಿಮ್ಮ ರೂಟರ್ ಸೆಟ್ಟಿಂಗ್ಸ್ ಗೆ ಲಾಗಿನ್ ಆಗಲು ಸಾಧ್ಯವಾಗುತ್ತದೆ. ಇದನ್ನು ತಡೆಯಲು ನೀವು ರೂಟರ್ ಲಾಗಿನ್ ನ್ನು “ಲಾಗಿನ್” ಅನ್ನೋ ಪದದ ಬದಲಾಗಿ ಬೇರೆ ಏನನ್ನಾದರೂ ಇಟ್ಟುಕೊಳ್ಳಬೇಕು.

3.ರೂಟರ್ ನ SSID ಯನ್ನು ಹೈಡ್ ಮಾಡುವುದು .
ತುಂಬಾ ಪರಿಣಾಮಕಾರಿಯಾಗಿರುವ ಭದ್ರತಾ ವಿಧಾನ ಎಂದರೆ ಅದು ರೂಟರ್ ನ SSIDಯನ್ನು ಹೈಡ್ ಮಾಡಿಟ್ಟುಕೊಳ್ಳುವುದು.. ಕನೆಕ್ಟ್ ಆಗಿರುವ ನೆಟ್ ವರ್ಕ್ ಗಳನ್ನು ಮಾತ್ರ ಇದು ತೋರಿಸುತ್ತಿದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ನೀವು ಈ ಅಡ್ರೆಸ್ ಗೆ ಮ್ಯಾನುವಲ್ ಆಗಿ ತೆರಳಬೇಕು.

4.ಇಂಟರ್ನೆಟ್ ಮಾನಿಟರಿಂಗ್ ಸಾಫ್ಟ್ ವೇರ್ ಬಳಕೆ ಮಾಡುವುದು .
ಕೆಲವು ಸಾಫ್ಟ್ ವೇರ್ ಗಳಿವೆ ಉದಾಹರಣೆಗೆ AirSnare. ಇದನ್ನು ನೀವು ಬಳಕೆ ಮಾಡಬಹುದು. ಇದು ನಿಮಗೆ ಅಪರಿಚಿತ ಡಿವೈಸ್ ಗಳು ನೆಟ್ ವರ್ಕ್ ಗೆ ಪ್ರವೇಶಿಸಿದರೆ ನಿಮಗೆ ಅಲರ್ಟ್ ಮಾಡುತ್ತದೆ.

Best Mobiles in India

English summary
Here we tell you how to detect if someone is piggybacking your WiFi connection i.e. using it without permission and the steps you need to take. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X