Subscribe to Gizbot

ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ಕೂಡಲೆ ಲಿಂಕ್ ಮಾಡಿ!!..ಇಲ್ಲದಿದ್ದರೆ?

Written By:

ಬಹುತೇಕ ಎಲ್ಲಾ ಟೆಲಿಕಾಂ ಕಂಪೆನಿಗಳು ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ಕೂಡಲೆ ಲಿಂಕ್ ಮಾಡಿ. ಇಲ್ಲವಾದರೆ ನಿಮ್ಮ ಮೊಬೈಲ್ ಸಂಖ್ಯೆ ನಿಷ್ಕ್ರೀಯಗೊಳ್ಳುತ್ತದೆ ಎಂದು ಸಂದೇಶವನ್ನು ಕಳುಹಿಸುತ್ತಿವೆ.!! ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಈ ಕಾರ್ಯ ನಡೆಯುತ್ತಿದ್ದರೂ, ಟೆಲಿಕಾಂ ಕಂಪೆನಿಗಳು ಸಹ ಇದರಲ್ಲಿ ಹೆಚ್ಚು ಮುತುವರ್ಜಿ ವಹಿಸಿವೆ.!!

ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲು ಸರ್ಕಾರಕ್ಕೆ ಸುಪ್ರೀಂಕೋರ್ಟ್ 2017 ರ ಡಿಸೆಂಬರ್ ವರೆಗೂ ಸಮಯ ನೀಡಿದೆ. ಆದರೆ, ಸರ್ಕಾರ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲು ಈಗಲೇ ಕೊನೆಯ ದಿನಾಂಕವನ್ನು ಪ್ರಕಟಿಸುವ ಸಾಧ್ಯತೆ ಇದೆ. ಹಾಗಾಗಿ, ಟೆಲಿಕಾಂ ಕಂಪೆನಿಗಳು ಹೆಚ್ಚು ಆತುರ ಪಡುತ್ತಿವೆ.!!

ಹಾಗಾದರೆ, ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡುವುದು ಹೇಗೆ? ಟೆಲಿಕಾಂ ಕಂಪೆನಿಗಳ ಮುತುವರ್ಜಿ ಏಕೆ? ಲಿಂಕ್ ಮಾಡದಿದ್ದರೆ ಏನಾಗುತ್ತದೆ ಎಂಬ ಹಲವು ಪ್ರಶ್ನೆಗಳಿಗೆ ಕೆಳಗಿನ ಸ್ಲೈಡರ್‌ಗಳಲ್ಲಿ ಉತ್ತರವಿದ್ದು, ಅವುಗಳು ಯಾವುವು ಎಂಬುದನ್ನು ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಧಾರ್-ಮೊಬೈಲ್ ಸಂಖ್ಯೆ ಲಿಂಕ್ ಹೇಗೆ?

ಆಧಾರ್-ಮೊಬೈಲ್ ಸಂಖ್ಯೆ ಲಿಂಕ್ ಹೇಗೆ?

ಬಹುತೇಕ ಎಲ್ಲ ಸೇವೆಗಳಂತೆ ಆನ್ಲೈನ್‌ನಲ್ಲಿಯೇ ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡುವುದು ಸಾಧ್ಯವಿಲ್ಲಾ.! ಹಾಗಾಗಿ, ನೀವು ಯಾವ ಟೆಲಿಕಾಂ ಚಂದಾದಾರರಾಗಿದ್ದರೂ ಅದೇ ಕಂಪೆನಿಯ ಸ್ಟೋರ್‌ಗಳಲ್ಲಿ ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಬೇಕು.!!

ಲಿಂಕ್ ಮಾಡದಿದ್ದರೆ ಏನಾಗುತ್ತದೆ

ಲಿಂಕ್ ಮಾಡದಿದ್ದರೆ ಏನಾಗುತ್ತದೆ

ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡದೇ ಇದ್ದರೆ ನಿಮ್ಮ ಮೊಬೈಲ್ ನಂಬರ್ ನಿಷ್ಕ್ರಿಯವಾಗಿಬಿಡ್ಡುತ್ತದೆ. ಆದರೆ, ಇದಕ್ಕೆ ಸರ್ಕಾರ ಕೊನೆಯ ದಿನಾಂಕವನ್ನು ಸರಿಯಾಗಿ ಪ್ರಕಟಿಸಿಲ್ಲ.!! ಹಾಗಾಗಿ, ನೀವು ಕೂಡಲೇ ಆಧಾರ್‌ ಕಾರ್ಡ್‌ಗೆ ಮೊಬೈಲ್‌ ಸಂಖ್ಯೆಯನ್ನು ಲಿಂಕ್ ಮಾಡುವುದು ಒಳ್ಳೆಯದು.!!

ಟೆಲಿಕಾಂ ಕಂಪೆನಿಗಳ ಮುತುವರ್ಜಿ ಏಕೆ?

ಟೆಲಿಕಾಂ ಕಂಪೆನಿಗಳ ಮುತುವರ್ಜಿ ಏಕೆ?

ಬಹುತೇಕ ಹಳೆಯ ಚಂದಾದಾರರನ್ನೆ ಹೊಂದಿರುವ ಟೆಲಿಕಾಂ ಕಂಪೆನಿಗಳ ಗ್ರಾಹಕರು ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡದೇ ಇದ್ದರೆ ಅವರು ಗ್ರಾಹಕರನ್ನು ಕಳೆದುಕೊಳ್ಳುವ ಸಂಭವ ಹೆಚ್ಚು. ಹಾಗಾಗಿಯೇ ಟೆಲಿಕಾಂ ಕಂಪೆನಿಗಳು ಹೆಚ್ಚು ಮುತುವರ್ಜಿ ವಹಿಸುತ್ತಿವೆ. ಜಿಯೋಗೆ ಈ ತಾಪತ್ರಯ ಇಲ್ಲ.!!

ಕಂಪೆನಿಯ ಸ್ಟೋರ್‌ ಹುಡುಕುವುದು ಹೇಗೆ?

ಕಂಪೆನಿಯ ಸ್ಟೋರ್‌ ಹುಡುಕುವುದು ಹೇಗೆ?

ಈಗಾಗಲೆ ಬಹುತೇಕ ಎಲ್ಲಾ ಟೆಲಿಕಾಂ ಕಂಪೆನಿಗಳು ತಮ್ಮ ತಮ್ಮ ಸ್ಟೋರ್‌ ಬಗ್ಗೆ ಮಾಹಿತಿ ನೀಡುತ್ತಿವೆ. ನಿಮಗೆ ಈ ಮಾಹಿತಿ ಸಿಕ್ಕಿಲ್ಲ ಎಂದಾದರೆ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಕಂಪೆನಿಯ ಸ್ಟೋರ್‌ ಎಲ್ಲಿದೆ ಎಂದು ತಿಳಿಯಬಹುದು. ಇನ್ನು ಆನ್‌ಲೈನ್‌ನಲ್ಲಿ ಎಲ್ಲಾ ಸ್ಟೋರ್‌ಗಳ ಮಾಹಿತಿ ಲಭ್ಯವಿದೆ.!!

ಮತ್ತೆ ನಂಬರ್ ತಗೊಳೊಕಾಗೊಲ್ಲಾ!!

ಮತ್ತೆ ನಂಬರ್ ತಗೊಳೊಕಾಗೊಲ್ಲಾ!!

ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡದೇ ಇದ್ದರೆ ಅದು ನಿಷ್ಕ್ರೀಯವಾಗಿಬಿಡುತ್ತದೆ. ಒಮ್ಮೆ ನಿಷ್ಕ್ರೀಯವಾದ ಮೊಬೈಲ್ ನಂಬರ್ ಅನ್ನು ಮತ್ತೆ ವಾಪಸ್ ಪಡೆಯಲು ಅಸಾಧ್ಯ. ಹಾಗಾಗಿ, ಕೂಡಲೇ ಎರಡನ್ನು ಲಿಂಕ್ ಮಾಡಿಸಿ. ಅಥವಾ ಆಧಾರ್ ನೀಡಿ ಬೇರೆ ಟೆಲಿಕಾಂಗೆ ಪೊರ್ಟ್ ಆಗಿರಿ.! ಅದಕ್ಕೂ ಮುನ್ನ ಈ ಮಾಹಿತಿ ಶೇರ್ ಮಾಡಿ!!

ಓದಿರಿ:ವೂಟರ್ ಐಡಿಗೆ ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಸುವುದು ಹೇಗೆ? ಮನೆಗೆ ಡೆಲಿವರಿ ಪಡೆಯಿರಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
adhaar-based e-KYC was made mandatory for new mobile phone connections . to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot